AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಷೇಧಕ್ಕೊಳಗಾಗಿದ್ದ ಸಿನಿಮಾಕ್ಕೆ ಇಲಾನ್ ಮಸ್ಕ್ ಬೆಂಬಲ

Elon Musk: ನಿಷೇಧಕ್ಕೆ ಒಳಗಾದ ಸಿನಿಮಾಕ್ಕೆ ಇಲಾನ್ ಸ್ಪೇಸ್ ಬೆಂಬಲ ಸೂಚಿಸಿದ್ದು, ಮಾತ್ರವೇ ಅಲ್ಲದೆ, ಆ ಸಿನಿಮಾವನ್ನು ತಮ್ಮದೇ ಮಾಲೀಕತ್ವದ ಟ್ವಿಟ್ಟರ್​​ನಲ್ಲಿ ಉಚಿತವಾಗಿ ಪ್ರದರ್ಶನ ಸಹ ಮಾಡಿಸಿದರು. ಇದರಿಂದಾಗಿ ಸಿನಿಮಾಕ್ಕೆ ಭರ್ಜರಿ ಪ್ರಚಾರ ಸಿಕ್ಕು, ಇದೀಗ ಒಟಿಟಿಗಳು ಭಾರಿ ದೊಡ್ಡ ಮೊತ್ತಕ್ಕೆ ಸಿನಿಮಾ ಖರೀದಿ ಮಾಡಿ ಬಿಡುಗಡೆ ಮಾಡುತ್ತಿವೆ. ಆದರೆ ಇಲಾನ್ ಮಸ್ಕ್, ಈ ಸಿನಿಮಾಕ್ಕೆ ಬೆಂಬಲ ಸೂಚಿಸಿರುವುದಕ್ಕೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಅಷ್ಟಕ್ಕೂ ಆ ಸಿನಿಮಾ ಯಾವುದು? ಸಿನಿಮಾದ ಕತೆ ಏನು?

ನಿಷೇಧಕ್ಕೊಳಗಾಗಿದ್ದ ಸಿನಿಮಾಕ್ಕೆ ಇಲಾನ್ ಮಸ್ಕ್ ಬೆಂಬಲ
Citizen Vigilante
ಮಂಜುನಾಥ ಸಿ.
|

Updated on: Jul 03, 2026 | 2:46 PM

Share

ಸ್ಪೇಸ್ ಎಕ್ಸ್, ಟೆಸ್ಲಾ ಇನ್ನೂ ಕೆಲವು ದೈತ್ಯ ಸಂಸ್ಥೆಗಳ ಸಂಸ್ಥಾಪಕ ಇಲಾನ್ ಮಸ್ಕ್ (Elon Musk) ಇತ್ತೀಚೆಗಷ್ಟೆ ಸಿನಿಮಾ ಒಂದಕ್ಕೆ ಬೆಂಬಲ ನೀಡಿದ್ದರು. ಜರ್ಮನಿಯಲ್ಲಿ ನಿಷೇಧಕ್ಕೆ ಒಳಗಾದ ಸಿನಿಮಾಕ್ಕೆ ಇಲಾನ್ ಸ್ಪೇಸ್ ಬೆಂಬಲ ಸೂಚಿಸಿದ್ದು, ಮಾತ್ರವೇ ಅಲ್ಲದೆ, ಆ ಸಿನಿಮಾವನ್ನು ತಮ್ಮದೇ ಮಾಲೀಕತ್ವದ ಟ್ವಿಟ್ಟರ್​​ನಲ್ಲಿ ಉಚಿತವಾಗಿ ಪ್ರದರ್ಶನ ಸಹ ಮಾಡಿಸಿದರು. ಇದರಿಂದಾಗಿ ಸಿನಿಮಾಕ್ಕೆ ಭರ್ಜರಿ ಪ್ರಚಾರ ಸಿಕ್ಕು, ಇದೀಗ ಒಟಿಟಿಗಳು ಭಾರಿ ದೊಡ್ಡ ಮೊತ್ತಕ್ಕೆ ಸಿನಿಮಾ ಖರೀದಿ ಮಾಡಿ ಬಿಡುಗಡೆ ಮಾಡುತ್ತಿವೆ. ಆದರೆ ಇಲಾನ್ ಮಸ್ಕ್, ಈ ಸಿನಿಮಾಕ್ಕೆ ಬೆಂಬಲ ಸೂಚಿಸಿರುವುದಕ್ಕೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಅಷ್ಟಕ್ಕೂ ಆ ಸಿನಿಮಾ ಯಾವುದು? ಸಿನಿಮಾದ ಕತೆ ಏನು?

ಜರ್ಮನಿಯ ಸಿನಿಮಾ ಕರ್ಮಿ ವೆ ಬುಲ್ ನಿರ್ದೇಶನ ಮಾಡಿರುವ ‘ಸಿಟಿಜನ್ ವಿಜಲಾಂಟಿ’ ಈಗ ವಿವಾದಕ್ಕೆ ಕಾರಣವಾಗಿರುವ ಸಿನಿಮಾ. ಸಿನಿಮಾದ ಕತೆ, ಸಾಮಾನ್ಯ ನಾಗರೀಕನೊಬ್ಬ ಕೊಲೆ, ಅತ್ಯಾಚಾರಿಗಳು, ಭಯೋತ್ಪಾದಕರ ವಿರುದ್ಧ ಒಂಟಿಯಾಗಿ ಹೋರಾಡಿ ಅವರನ್ನು ನಿರ್ದಯಿಯಾಗಿ ಕೊಲ್ಲುವ ಕತೆಯನ್ನು ಒಳಗೊಂಡಿವೆ. ಇಷ್ಟೇ ಆಗಿದ್ದಿದ್ದರೆ ಸಿನಿಮಾ ವಿವಾದಾತ್ಮಕ ಎನಿಸಿಕೊಳ್ಳುತ್ತಿರಲಿಲ್ಲ, ಆದರೆ ಸಿನಿಮಾನಲ್ಲಿ ಆ ನಾಯಕ ಕೊಲ್ಲುವ ಅಷ್ಟೂ ಮಂದಿ ಮುಸ್ಲಿಂ ವಲಸಿಗರು ಹಾಗೂ ಅವರನ್ನು ಬೆಂಬಲಿಸುವ ಅಧಿಕಾರಿಗಳು. ಸಿನಿಮಾನಲ್ಲಿ ಅವರ ವಿರುದ್ಧ ಸಾಕಷ್ಟು ಸಂಭಾಷಣೆಗಳು ಸಹ ಇವೆಯಂತೆ. ಇದೇ ಕಾರಣಕ್ಕೆ ಈ ಸಿನಿಮಾ ಈಗ ವಿವಾದಕ್ಕೆ ಸಿಲುಕಿದೆ.

ಈ ಸಿನಿಮಾ, ಯುವಕರ ದಿಕ್ಕು ತಪ್ಪಿಸುತ್ತದೆ ಹಾಗೂ ಧರ್ಮ ಆಧಾರಿತ ದ್ವೇಷವನ್ನು ಹೆಚ್ಚು ಮಾಡುತ್ತದೆ ಎಂಬ ಕಾರಣಕ್ಕೆ ಜರ್ಮನಿಯಲ್ಲಿ ಸಿನಿಮಾಕ್ಕೆ ಪ್ರಮಾಣ ಪತ್ರವನ್ನೇ ನೀಡಲಾಗಿಲ್ಲ. ಹಾಗಾಗಿ ಈ ಸಿನಿಮಾ ಅಲ್ಲಿ ಬಿಡುಗಡೆ ಆಗಿಲ್ಲ. ಆದರೆ ಉತ್ತರ ಅಮೆರಿಕದ ಕೆಲ ಆಯ್ದ ಚಿತ್ರಮಂದಿರಗಳಲ್ಲಿ ಮಾತ್ರ ಸಿನಿಮಾವನ್ನು ಬಿಡುಗಡೆ ಮಾಡಲಾಗಿತ್ತು. ಆಗಲೂ ಸಹ ಸಿನಿಮಾದ ಬಗ್ಗೆ ಬಹುತೇಕ ಋಣಾತ್ಮಕ ಅಭಿಪ್ರಾಯಗಳೇ ವ್ಯಕ್ತವಾಗಿದ್ದವು. ಆದರೆ ಕೆಲವು ಅಮೆರಿಕ ಬಲಪಂಥೀಯರು ಸಿನಿಮಾದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದರು.

ಇದನ್ನೂ ಓದಿ:ಮಾನವ ಇತಿಹಾಸದಲ್ಲೇ ಮೊದಲ ಟ್ರಿಲಿಯನೇರ್, ಇದು ಇಲಾನ್ ಮಸ್ಕ್ ಮ್ಯಾಜಿಕ್; ಇವರಿಗಿರುವ ಸಂಪತ್ತು ಎಷ್ಟು ಅಗಾಧ ಗೊತ್ತಾ?

‘ಸಿಟಿಜನ್ ವಿಜಲಾಂಟಿ’ ಸಿನಿಮಾವನ್ನು 2016 ರಲ್ಲಿ ಜರ್ಮಿಯ ಹಮ್​​ಬರ್ಗ್​​ನಲ್ಲಿ ನಡೆದ ಘಟನೆಯೊಂದರಿಂದ ಸ್ಪೂರ್ತಿ ಪಡೆದು ನಿರ್ಮಿಸಲಾಗಿದೆ. 2016ರಲ್ಲಿ ಹಮ್​​ಬರ್ಗ್​​ ನಗರದಲ್ಲಿ 16 ವರ್ಷದ ಯುವತಿಯೊಬ್ಬಾಕೆಯ ಅತ್ಯಾಚಾರ ಮತ್ತು ಕೊಲೆ ನಡೆದಿತ್ತು. ಆ ಪ್ರಕರಣದ ವಿಚಾರಣೆ ನಡೆದು, ಎಲ್ಲ ಆರೋಪಿಗಳು ಖುಲಾಸೆಯಾದರು. ಆ ಘಟನೆ ತೀವ್ರ ಚರ್ಚೆ ಎಬ್ಬಿಸಿತ್ತು. ಅದೇ ಘಟನೆಯಿಂದ ಸ್ಪೂರ್ತಿ ಪಡೆದು ಈ ಸಿನಿಮಾ ನಿರ್ಮಿಸಲಾಗಿದ್ದು, ಸಿನಿಮಾದ ಅಂತ್ಯದಲ್ಲಿ, ‘ಯೂರೋಪಿನ ನ್ಯಾಯ ವ್ಯವಸ್ಥೆಯಿಂದ ಮೋಸಕ್ಕೆ ಒಳಗಾದ ಎಲ್ಲ ಅತ್ಯಾಚಾರಿ ಸಂತ್ರಸ್ತ ಮಹಿಳೆಯರಿಗೆ ಅರ್ಪಣೆ’ ಎಂಬ ಸಾಲನ್ನು ಸಹ ಸೇರಿಸಲಾಗಿದೆ.

ಬಳಿಕ ಜೂನ್ 25ರಂದು ಇಲಾನ್ ಮಸ್ಕ್ ‘ಸಿಟಿಜನ್ ವಿಜಲಾಂಟಿ’ ಸಿನಿಮಾವನ್ನು ಟ್ವಿಟ್ಟರ್​​ನಲ್ಲಿ ತಮ್ಮ ಖಾತೆಯಲ್ಲೇ ಅಪ್​​ಲೋಡ್ ಮಾಡಿ ಉಚಿತವಾಗಿ ಜನ ನೋಡುವಂತೆ ಮಾಡಿದರು. ಎರಡು ದಿನಗಳ ಕಾಲ, ಈ ಸಿನಿಮಾ ಟ್ವಿಟ್ಟರ್​​ನಲ್ಲಿ ಉಚಿತವಾಗಿ ಲಭ್ಯವಾಗಿತ್ತು. ಇಲಾನ್ ಮಸ್ಕ್ ಬೆಂಬಲ ನೀಡಿದ ಬಳಿಕ ಇದೀಗ ಆಪಲ್ ಟಿವಿ ಮತ್ತು ಅಮೆಜಾನ್ ಪ್ರೈಂ ವಿಡಿಯೋ ಒಟಿಟಿಗಳು ಭಾರಿ ಮೊತ್ತಕ್ಕೆ ಸಿನಿಮಾವನ್ನು ಖರೀದಿ ಮಾಡಿದ್ದು, ಸ್ಟ್ರೀಮಿಂಗ್ ಆರಂಭಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮೈಸೂರು ದಸರಾ: ಗಜಪಡೆಗೆ ಮಜ್ಜನದೊಂದಿಗೆ ಸಂಭ್ರಮದ ಸಿದ್ಧತೆಗಳಿಗೆ ಚಾಲನೆ
ಮೈಸೂರು ದಸರಾ: ಗಜಪಡೆಗೆ ಮಜ್ಜನದೊಂದಿಗೆ ಸಂಭ್ರಮದ ಸಿದ್ಧತೆಗಳಿಗೆ ಚಾಲನೆ
ಮೈಸೂರು ದಸರಾ: ಅರಮನೆ ಆವರಣದಲ್ಲಿ ದಸರಾ ಗಜಪಡೆಗೆ ಮಜ್ಜನ
ಮೈಸೂರು ದಸರಾ: ಅರಮನೆ ಆವರಣದಲ್ಲಿ ದಸರಾ ಗಜಪಡೆಗೆ ಮಜ್ಜನ
ಬಿಗ್ ಬಾಸ್ ಮನೆಯಿಂದ ಮಂಜ ಔಟ್: ಅಶ್ಲೀಲವಾಗಿ ಮಾತಾಡಿದ್ದಕ್ಕೆ ಶಿಕ್ಷೆ
ಬಿಗ್ ಬಾಸ್ ಮನೆಯಿಂದ ಮಂಜ ಔಟ್: ಅಶ್ಲೀಲವಾಗಿ ಮಾತಾಡಿದ್ದಕ್ಕೆ ಶಿಕ್ಷೆ
ಮೈಸೂರಿನಲ್ಲಿ ಈ ಬಾರಿ ದಸರಾ ಸಡಗರ ಹೇಗಿದೆ ನೋಡಿ!
ಮೈಸೂರಿನಲ್ಲಿ ಈ ಬಾರಿ ದಸರಾ ಸಡಗರ ಹೇಗಿದೆ ನೋಡಿ!
ಪ್ರತಿಭಟನೆಗೆ ಸುಪ್ರೀಂ ಆದೇಶ ಪಾಲಿಸದ ಆರೋಪದ ಮೇಲೆ ನ್ಯಾಯಾಂಗ ನಿಂದನೆ ಅರ್ಜಿ
ಪ್ರತಿಭಟನೆಗೆ ಸುಪ್ರೀಂ ಆದೇಶ ಪಾಲಿಸದ ಆರೋಪದ ಮೇಲೆ ನ್ಯಾಯಾಂಗ ನಿಂದನೆ ಅರ್ಜಿ
ಬೆಳಗಾವಿಯ ಪ್ರಭಾವಿ ರಾಜಕಾರಣಿಗಳ ಒಡೆತನದ ಕ್ಲಬ್, ಹೋಟೆಲ್​ಗಳ ಮೇಲೆ ದಾಳಿ
ಬೆಳಗಾವಿಯ ಪ್ರಭಾವಿ ರಾಜಕಾರಣಿಗಳ ಒಡೆತನದ ಕ್ಲಬ್, ಹೋಟೆಲ್​ಗಳ ಮೇಲೆ ದಾಳಿ
ಇಂದಿನಿಂದ ನವರಾತ್ರಿ ಆರಂಭ; ಹೊಸ ಕೆಲಸ ಆರಂಭಿಸಲು ಒಳ್ಳೆಯ ದಿನ
ಇಂದಿನಿಂದ ನವರಾತ್ರಿ ಆರಂಭ; ಹೊಸ ಕೆಲಸ ಆರಂಭಿಸಲು ಒಳ್ಳೆಯ ದಿನ
ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ: ಇಡಿಯಿಂದ ವರದಿ ಸಲ್ಲಿಕೆ
ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ: ಇಡಿಯಿಂದ ವರದಿ ಸಲ್ಲಿಕೆ
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ