Golden Globes 2024: 81ನೇ ಸಾಲಿನ ‘ಗೋಲ್ಡನ್​ ಗ್ಲೋಬ್ಸ್’ ಅವಾರ್ಡ್​; ಇಲ್ಲಿದೆ ವಿಜೇತರ ಪಟ್ಟಿ

| Updated By: ರಾಜೇಶ್ ದುಗ್ಗುಮನೆ

Updated on: Jan 08, 2024 | 9:56 AM

ಕಳೆದ ವರ್ಷ ಭಾರತೀಯರ ಪಾಲಿಗೆ ‘ಗೋಲ್ಡನ್ ಗ್ಲೋಬ್ಸ್’ ಅವಾರ್ಡ್ ವಿಶೇಷ ಎನಿಸಿಕೊಂಡಿತ್ತು. ‘ಆರ್​ಆರ್​ಆರ್’ ಸಿನಿಮಾ ಕೂಡ ಕೆಲವು ವಿಭಾಗಗಳಲ್ಲಿ ನಾಮಿನೇಟ್ ಆಗಿ ಅವಾರ್ಡ್ ಪಡೆದಿತ್ತು.

Golden Globes 2024: 81ನೇ ಸಾಲಿನ ‘ಗೋಲ್ಡನ್​ ಗ್ಲೋಬ್ಸ್’ ಅವಾರ್ಡ್​; ಇಲ್ಲಿದೆ ವಿಜೇತರ ಪಟ್ಟಿ
ಆಪನ್​ಹೈಮರ್
Follow us on

81ನೇ ಸಾಲಿನ ಗೋಲ್ಡನ್ ಗ್ಲೋಬ್ಸ್ ಅವಾರ್ಡ್ (Golden Globes Awards) ಕಾರ್ಯಕ್ರಮ ಭಾನುವಾರ ಸಂಜೆ (ಭಾರತೀಯ ಕಾಲಮಾನದಲ್ಲಿ ಸೋಮವಾರ ಬೆಳಿಗ್ಗೆ) ನಡೆಯುತ್ತಿದೆ. ಅಮೆರಿಕದ ಲಾಸ್ ಏಂಜಲೀಸ್​ನಲ್ಲಿ ಈ ಅವಾರ್ಡ್ ಫಂಕ್ಷನ್ ನಡೆಯುತ್ತಿದೆ. ಬಾರ್ಬಿ ಸಿನಿಮಾ 9 ವಿಭಾಗಗಳಲ್ಲಿ ನಾಮಿನೇಟ್ ಆಗಿತ್ತು. ‘ಆಪನ್​​ಹೈಮರ್’ ಸಿನಿಮಾ 8 ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿತ್ತು. ಎರಡೂ ಸಿನಿಮಾಗಳು ಹಲವು ಪ್ರಶಸ್ತಿ ಗೆದ್ದಿವೆ. ಎರಡೂ ಚಿತ್ರಗಳು ಒಟ್ಟಿಗೆ ರಿಲೀಸ್ ಆಗಿ ಸದ್ದು ಮಾಡಿದ್ದವು.

ಕ್ರಿಸ್ಟೋಫರ್​ ನೋಲನ್​ ನಿರ್ದೇಶನದ ‘ಆಪನ್​ಹೈಮರ್​’ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಈ ಚಿತ್ರದ ನಿರ್ದೇಶನಕ್ಕಾಗಿ ಕ್ರಿಸ್ಟೋಫರ್​ ನೋಲನ್ ಅವರಿಗೆ ‘ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿ ಸಿಕ್ಕಿದೆ. ‘ಅತ್ಯುತ್ತಮ ಸಿನಿಮ್ಯಾಟಿಕ್ ಹಾಗೂ ಬಾಕ್ಸ್ ಆಫೀಸ್ ಅಚೀವ್​ಮೆಂಟ್’ ಅವಾರ್ಡ್​ ‘ಬಾರ್ಬಿ’ ಪಡೆದಿದೆ. ಈ ರೇಸ್​ನಲ್ಲಿ ‘ಆಪನ್​ಹೈಮರ್’ ಸಿನಿಮಾ ಕೂಡ ಇತ್ತು.

‘ಅತ್ಯುತ್ತಮ ಸಿನಿಮಾ’ (ಆಂಗ್ಲೇತರ ಭಾಷೆ) ಪ್ರಶಸ್ತಿ ಫ್ರಾನ್ಸ್​ನ ‘ಆ್ಯನಟಮಿ ಆಫ್ ಫಾಲ್’ ಚಿತ್ರಕ್ಕೆ ಸಿಕ್ಕಿದೆ. ಅತ್ಯುತ್ತಮ ಮೋಷನ್ ಸಿನಿಮಾ ಅವಾರ್ಡ್ (ಡ್ರಾಮಾ) ‘ಆಪನ್​ಹೈಮರ್’ ಚಿತ್ರಕ್ಕೆ ಸಿಕ್ಕಿದೆ. ಅತ್ಯುತ್ತಮ ಪರ್ಫಾರ್ಮೆನ್ಸ್ ಅವಾರ್ಡ್​ ಕಿಲಿಯನ್ ಮರ್ಫಿಗೆ ಸಿಕ್ಕಿದೆ. ಅವರು ಆಪನ್​ಹೈಮರ್ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಸಿನಿಮಾ ಮಾತ್ರವಲ್ಲದೆ ಟಿವಿ ಸೀರಿಸ್​​ಗಳಿಗೂ ಇಲ್ಲಿ ಅವಾರ್ಡ್ ನೀಡಲಾಗಿದೆ.

ಇದನ್ನೂ ಓದಿ: ‘ಗೋಲ್ಡನ್ ಗ್ಲೋಬ್’: ವೃತ್ತಿಜೀವನದ ಆರಂಭದಲ್ಲಿ ಚಾನ್ಸ್​ ನೀಡಿದ ಅರ್ಜುನ್ ಸರ್ಜಾಗೆ ಕೀರವಾಣಿ ಧನ್ಯವಾದ

ಕಳೆದ ವರ್ಷ ಭಾರತೀಯರ ಪಾಲಿಗೆ ‘ಗೋಲ್ಡನ್ ಗ್ಲೋಬ್ಸ್’ ಅವಾರ್ಡ್ ವಿಶೇಷ ಎನಿಸಿಕೊಂಡಿತ್ತು. ‘ಆರ್​ಆರ್​ಆರ್’ ಸಿನಿಮಾ ಕೂಡ ಕೆಲವು ವಿಭಾಗಗಳಲ್ಲಿ ನಾಮಿನೇಟ್ ಆಗಿ ಅವಾರ್ಡ್ ಪಡೆದಿತ್ತು. ಇದನ್ನು ತಂಡ ಸಂಭ್ರಮಿಸಿತ್ತು. ಈ ವರ್ಷ ಭಾರತದ ಯಾವುದೇ ಸಿನಿಮಾಗಳು ನಾಮಿನೇಟ್ ಆಗಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ