AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MM Keeravani: ‘ಗೋಲ್ಡನ್ ಗ್ಲೋಬ್’: ವೃತ್ತಿಜೀವನದ ಆರಂಭದಲ್ಲಿ ಚಾನ್ಸ್​ ನೀಡಿದ ಅರ್ಜುನ್ ಸರ್ಜಾಗೆ ಕೀರವಾಣಿ ಧನ್ಯವಾದ

RRR Movie | Naatu Naatu Song: ಪ್ರತಿಷ್ಠಿತ ‘ಗೋಲ್ಡನ್​ ಗ್ಲೋಬ್​’ ಪ್ರಶಸ್ತಿ ಪಡೆದ ಖುಷಿಯಲ್ಲಿ ಎಂಎಂ ಕೀರವಾಣಿ ಟ್ವೀಟ್​ ಮಾಡಿದ್ದಾರೆ. ಆರಂಭದ ದಿನಗಳಲ್ಲಿ ತಮಗೆ ಅವಕಾಶ ನೀಡಿದವರಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ.

MM Keeravani: ‘ಗೋಲ್ಡನ್ ಗ್ಲೋಬ್’: ವೃತ್ತಿಜೀವನದ ಆರಂಭದಲ್ಲಿ ಚಾನ್ಸ್​ ನೀಡಿದ ಅರ್ಜುನ್ ಸರ್ಜಾಗೆ ಕೀರವಾಣಿ ಧನ್ಯವಾದ
ಎಂಎಂ ಕೀರವಾಣಿ, ಅರ್ಜುನ್ ಸರ್ಜಾ
TV9 Web
| Edited By: |

Updated on: Jan 19, 2023 | 7:05 PM

Share

ಖ್ಯಾತ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ (MM Keeravani) ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಈವರೆಗೂ ಅನೇಕ ಬ್ಲಾಕ್​ ಬಸ್ಟರ್​ ಚಿತ್ರಗಳಿಗೆ ಸಂಗೀತ ನೀಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ‘ಆರ್​​ಆರ್​ಆರ್​’ ಚಿತ್ರದ ‘ನಾಟು ನಾಟು..’ ಹಾಡಿಗೆ ಅವರು ಪ್ರತಿಷ್ಠಿತ ‘ಗೋಲ್ಡನ್​ ಗ್ಲೋಬ್​ ಅವಾರ್ಡ್​’ (Golden Globe Awards) ಪಡೆದಿದ್ದಾರೆ. ಈ ಸಾಧನೆ ಮಾಡಿದ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಅಭಿನಂದನೆ ಸಲ್ಲಿಸಿದರು. ಇಷ್ಟೆಲ್ಲ ಜನಪ್ರಿಯತೆ ಪಡೆದರೂ ಕೂಡ ತಮಗೆ ಆರಂಭದ ದಿನಗಳಲ್ಲಿ ಅವಕಾಶ ನೀಡಿದವರನ್ನು ಎಂಎಂ ಕೀರವಾಣಿ ಮರೆತಿಲ್ಲ. ‘ಗೋಲ್ಡನ್​ ಗ್ಲೋಬ್’ ಪ್ರಶಸ್ತಿ ಪಡೆದ ಬಳಿಕ ಹಲವರನ್ನು ಅವರು ಸ್ಮರಿಸಿದ್ದಾರೆ. 90ರ ದಶಕದಲ್ಲಿ ತಮಗೆ ಚಾನ್ಸ್​ ಕೊಟ್ಟ ನಟ ಅರ್ಜುನ್​ ಸರ್ಜಾ (Arjun Sarja) ಅವರಿಗೆ ಕೀರವಾಣಿ ಧನ್ಯವಾದ ಅರ್ಪಿಸಿದ್ದಾರೆ.

2023ರ ಗೋಲ್ಡನ್​ ಗ್ಲೋಬ್​ ಅವಾರ್ಡ್ಸ್​ನಲ್ಲಿ ‘ನಾಟು ನಾಟು..’ ಹಾಡಿಗೆ ‘ಅತ್ಯುತ್ತಮ ಒರಿಜಿನಲ್​ ಸಾಂಗ್​’ ಪ್ರಶಸ್ತಿ ಸಿಕ್ಕಿದೆ. ಈ ಖುಷಿಯಲ್ಲಿ ಎಂಎಂ ಕೀರವಾಣಿ ಟ್ವೀಟ್​ ಮಾಡಿದ್ದಾರೆ. ‘ಗೋಲ್ಡನ್​ ಗ್ಲೋಬ್​ ಸೇರಿದಂತೆ 4 ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದು ಮರಳಿದ್ದೇವೆ. ತೆಲುಗು ಗಡಿ ದಾಡಿ ನನ್ನ ಸಂಗೀತ ಬೆಳೆಯುವಂತೆ ಮಾಡಿದ ರಾಮೋಜಿ ರಾವ್​​ ಹಾಗೂ ಎಲ್ಲ ಮೆಂಟರ್​ಗಳಿಗೆ ಕೃತಜ್ಞತೆಗಳು. ಬಾಲಚಂದರ್​ ಸರ್​, ಭರತನ್​ ಸರ್​, ಅರ್ಜುನ್ ಸರ್ಜಾ ಮತ್ತು ಭಟ್​ ಸಾಬ್​ ಅವರಿಗೆ ಧನ್ಯವಾಗಳು’ ಎಂದು ಎಂಎಂ ಕೀರವಾಣಿ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ
Image
MM Keeravani: ಕನ್ನಡದ ಚಿತ್ರಗಳಿಗೂ ಸಂಗೀತ ನೀಡಿರುವ ಗೋಲ್ಡನ್​ ಗ್ಲೋಬ್​ ವಿನ್ನರ್​ ಎಂಎಂ ಕೀರವಾಣಿ ಸಂಭಾವನೆ ಬಹುಕೋಟಿ
Image
Golden Globe Awards: ‘RRR​’ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಜತೆ ‘ಗೋಲ್ಡನ್​ ಗ್ಲೋಬ್​’ ಪಡೆದವರ ಪೂರ್ತಿ ಲಿಸ್ಟ್​ ಇಲ್ಲಿದೆ
Image
MM Keeravani: ಗೋಲ್ಡನ್​ ಗ್ಲೋಬ್ ಪ್ರಶಸ್ತಿ ಪಡೆದ ‘ಆ​ರ್​ಆರ್​ಆರ್​’ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ
Image
Golden Globes 2023: ಅತ್ಯುತ್ತಮ ಒರಿಜಿನಲ್ ಸಾಂಗ್ ಪ್ರಶಸ್ತಿ ಬಾಚಿಕೊಂಡ ಆರ್​ಆರ್​ಆರ್​ನ ನಾಟು ನಾಟು ಹಾಡು

ಇದನ್ನೂ ಓದಿ: MM Keeravani: ಕನ್ನಡದ ಚಿತ್ರಗಳಿಗೂ ಸಂಗೀತ ನೀಡಿರುವ ಗೋಲ್ಡನ್​ ಗ್ಲೋಬ್​ ವಿನ್ನರ್​ ಎಂಎಂ ಕೀರವಾಣಿ ಸಂಭಾವನೆ ಬಹುಕೋಟಿ

ಎಂಎಂ ಕೀರವಾಣಿ ಅವರ ಆರಂಭದ ದಿನಗಳಲ್ಲಿ ಅರ್ಜುನ್​ ಸರ್ಜಾ ಅವಕಾಶ ನೀಡಿದ್ದರು. ಅವರು ಮೊಟ್ಟ ಮೊದಲ ಬಾರಿಗೆ ನಿರ್ದೇಶನ ಮಾಡಿದ ‘ಸೇವಗನ್’ ಚಿತ್ರಕ್ಕೆ ಸಂಗೀತ ನೀಡುವ ಅವಕಾಶವನ್ನು ಕೀರವಾಣಿ ಅವರಿಗೆ ನೀಡಲಾಗಿತ್ತು. ನಂತರ ಅರ್ಜುನ್​ ಸರ್ಜಾ ನಟನೆಯ ‘ಅಳಿಮಯ್ಯ’ ಮುಂತಾದ ಸಿನಿಮಾಗಳಿಗೂ ಎಂ.ಎಂ. ಕೀರವಾಣಿ ಸಂಗೀತ ಸಂಯೋಜಿಸಿದರು. ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ಪುತ್ರಿ ಐಶ್ವರ್ಯಾ ಅರ್ಜುನ್ ನಟಿಸಿದ ‘ಪ್ರೇಮಬರಹ’ ಚಿತ್ರದ ಹಾಡೊಂದಕ್ಕೂ ಕೀರವಾಣಿ ದನಿಯಾದರು.

ಲಾಸ್​ ಏಂಜಲಿಸ್​ನಲ್ಲಿ ‘ಗೋಲ್ಡನ್​ ಗ್ಲೋಬ್​’ ಪ್ರಶಸ್ತಿ ಸ್ವೀಕರಿಸಿದ ಎಂಎಂ ಕೀರವಾಣಿ:

‘ಗೋಲ್ಡನ್​ ಗ್ಲೋಬ್​’ ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚೆಗೆ ಲಾಸ್​ ಏಂಜಲಿಸ್​ನಲ್ಲಿ ನಡೆಯಿತು. ಎಂಎಂ ಕೀರವಾಣಿ ಅವರು ಪ್ರತಿಷ್ಠಿತ ಟ್ರೋಫಿ ಪಡೆದರು. ನಿರ್ದೇಶಕ ಎಸ್​.ಎಸ್. ರಾಜಮೌಳಿ, ನಟರಾದ ರಾಮ್​ ಚರಣ್​, ಜೂನಿಯರ್​ ಎನ್​ಟಿಆರ್​​ ಮುಂತಾದವರು ಈ ವೇಳೆ ಹಾಜರಿದ್ದರು. ಈ ಪ್ರಶಸ್ತಿ ಪಡೆದ ಬಳಿಕ ಎಂಎಂ ಕೀರವಾಣಿ ಅವರ ಡಿಮ್ಯಾಂಡ್​ ಹೆಚ್ಚಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಈ ಸರ್ಕಾರಿ ಬಸ್​​ಗಳಿಗೆ ದೇವರೇ ಗತಿ
ಈ ಸರ್ಕಾರಿ ಬಸ್​​ಗಳಿಗೆ ದೇವರೇ ಗತಿ
ಶಾಮನೂರು ಕ್ಷೇತ್ರದಲ್ಲಿ ಬೈ ಎಲೆಕ್ಷನ್​: ಕಾಂಗ್ರೆಸ್​​ ಟಿಕೆಟ್​​ ಯಾರಿಗೆ?
ಶಾಮನೂರು ಕ್ಷೇತ್ರದಲ್ಲಿ ಬೈ ಎಲೆಕ್ಷನ್​: ಕಾಂಗ್ರೆಸ್​​ ಟಿಕೆಟ್​​ ಯಾರಿಗೆ?
ವಿಮಾನ ನಿಲ್ದಾಣದ ವಿರುದ್ಧ ರಾಮಲಿಂಗಾರೆಡ್ಡಿ ಗರಂ
ವಿಮಾನ ನಿಲ್ದಾಣದ ವಿರುದ್ಧ ರಾಮಲಿಂಗಾರೆಡ್ಡಿ ಗರಂ