ಹಾಲಿವುಡ್ ಸ್ಟಾರ್ ನಟನಿಗೆ ‘ಧುರಂಧರ್’ ನೋಡುವಾಸೆ

Dhurandhar movie: ರಣ್ವೀರ್ ಸಿಂಗ್ ನಟಿಸಿರುವ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳು ಭಾರತದಲ್ಲಿ ಮಾತ್ರವಲ್ಲ, ಜಾಗತಿಕವಾಗಿಯೂ ದೊಡ್ಡ ಹಿಟ್ ಆಗಿದೆ. ಎರಡೂ ಸಿನಿಮಾಗಳ ಒಟ್ಟು ಗಳಿಕೆ 4000 ಕೋಟಿಗಳ ಹತ್ತಿರಕ್ಕಿದೆ. ‘ಧುರಂಧರ್’ ಸರಣಿ ಭಾರತೀಯ ಪ್ರೇಕ್ಷಕರನ್ನು ಮಾತ್ರವಲ್ಲ, ವಿದೇಶಿ ಸಿನಿಮಾ ಪ್ರೇಮಿಗಳನ್ನೂ ಸೆಳೆದಿದೆ. ಇದೀಗ ಹಾಲಿವುಡ್​ನ ಸ್ಟಾರ್ ನಟರೊಬ್ಬರು ‘ಧುರಂಧರ್’ ಸಿನಿಮಾ ನೋಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಹಾಲಿವುಡ್ ಸ್ಟಾರ್ ನಟನಿಗೆ ‘ಧುರಂಧರ್’ ನೋಡುವಾಸೆ
Jack Ryan Dhurandhar

Updated on: May 20, 2026 | 12:57 PM

ರಣ್ವೀರ್ ಸಿಂಗ್ (Ranveer Singh) ನಟಿಸಿರುವ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳು ಭಾರತದಲ್ಲಿ ಮಾತ್ರವಲ್ಲ, ಜಾಗತಿಕವಾಗಿಯೂ ದೊಡ್ಡ ಹಿಟ್ ಆಗಿದೆ. ಎರಡೂ ಸಿನಿಮಾಗಳ ಒಟ್ಟು ಗಳಿಕೆ 4000 ಕೋಟಿಗಳ ಹತ್ತಿರಕ್ಕಿದೆ. ‘ಧುರಂಧರ್’ ಸರಣಿ ಭಾರತೀಯ ಪ್ರೇಕ್ಷಕರನ್ನು ಮಾತ್ರವಲ್ಲ, ವಿದೇಶಿ ಸಿನಿಮಾ ಪ್ರೇಮಿಗಳನ್ನೂ ಸೆಳೆದಿದೆ. ಇದೀಗ ಹಾಲಿವುಡ್​ನ ಸ್ಟಾರ್ ನಟರೊಬ್ಬರು ‘ಧುರಂಧರ್’ ಸಿನಿಮಾ ನೋಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಹಾಲಿವುಡ್​ನ ಸೂಪರ್ ಹಿಟ್ ಸಿನಿಮಾಗಳಾದ ‘13 ಹವರ್ಸ್’, ‘ಡಾಕ್ಟರ್ ಸ್ಟ್ರೇಂಜ್’, ‘ಕ್ವೈಟ್ ಪ್ಲೇಸ್’ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿರುವ ಮತ್ತು ವಿಶ್ವದಾದ್ಯಂತ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ವೆಬ್ ಸರಣಿ ‘ಜಾಕ್ ರಯಾನ್’ನ ನಾಯಕ ಜಾನ್ ಕ್ರಾಸಿನ್​ಸ್ಕಿ ತಮ್ಮ ಹೊಸ ಸಿನಿಮಾ ‘ಜಾಕ್ ರಯಾನ್’ ಪ್ರಚಾರದಲ್ಲಿದ್ದು, ಇತ್ತೀಚೆಗಷ್ಟೆ ಅವರು ಭಾರತದ ಟಿವಿ ವಾಹಿನಿಯೊಟ್ಟಿಗೆ ಮಾತನಾಡುತ್ತಾ, ‘ಧುರಂಧರ್’ ಸಿನಿಮಾ ನೋಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ನಿಮಗೆ ‘ಧುರಂಧರ್’ ಚಿತ್ರದ ಬಗ್ಗೆ ತಿಳಿದಿದೆಯೇ ಮತ್ತು ಒಟ್ಟಾರೆಯಾಗಿ ಭಾರತೀಯ ಚಿತ್ರರಂಗದ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಜಾನ್, ‘ನಾನು ಇನ್ನೂ ಆ (ಧುರಂಧರ್) ಚಿತ್ರವನ್ನು ನೋಡಿಲ್ಲ. ಆದರೆ ಭಾರತೀಯ ಚಿತ್ರರಂಗದ ಬಗ್ಗೆ ಹೇಳುವುದಾದರೆ, ಅಲ್ಲಿ ಅತ್ಯಂತ ಅತ್ಯಾಧುನಿಕ ಮತ್ತು ತಾಂತ್ರಿಕವಾಗಿ ಗುಣಮಟ್ಟದ ಸಿನಿಮಾಗಳು ತಯಾರಾಗುತ್ತಿವೆ. ಸಿನಿಮಾ ನಿರ್ದೇಶಿಸಲು ಪ್ರಯತ್ನಿಸುತ್ತಿರುವ ನನ್ನ ಅನೇಕ ನಿರ್ದೇಶಕ ಸ್ನೇಹಿತರು, ಅಲ್ಲಿಂದ ಬರುತ್ತಿರುವ ಚಿತ್ರಗಳನ್ನು ನೋಡಿ ನಿರಂತರವಾಗಿ ಆಶ್ಚರ್ಯ ಚಕಿತರಾಗುತ್ತಿರುತ್ತಾರೆ’ ಎಂದಿದ್ದಾರೆ.

ಇದನ್ನೂ ಓದಿ:ಪಾಕಿಸ್ತಾನದಲ್ಲಿ ‘ಧುರಂಧರ್ 2’ ಅಬ್ಬರ: ಮುಗಿಬಿದ್ದು ನೋಡಿದ ಜನ, ಸರ್ವರ್ ಕ್ರ್ಯಾಶ್

‘ಅವಕಾಶ ಸಿಕ್ಕರೆ ಖಂಡಿತವಾಗಿಯೂ ‘ಧುರಂಧರ್’ ಸಿನಿಮಾವನ್ನು ನೋಡಬಯಸುತ್ತೇನೆ ಎಂದು ಹೇಳಿದ ಅವರು, ‘ಖಂಡಿತವಾಗಿ, ನನಗೆ ಯಾವುದೇ ಸಿನಿಮಾ ನೋಡಲು ಇಷ್ಟ. ಬೇರೆಯವರು ಏನು ಮಾಡುತ್ತಿದ್ದಾರೆ ಎಂಬುದನ್ನು ನೋಡುವುದು ಯಾವಾಗಲೂ ನಮಗೆ ಸ್ಫೂರ್ತಿ ನೀಡುತ್ತದೆ. ‘ಧುರಂಧರ್’ ಸಿನಿಮಾ ಸಹ ನನಗೆ ಸ್ಪೂರ್ತಿ ನೀಡುವ ವಿಶ್ವಾಸವಿದೆ’ ಎಂದಿದ್ದಾರೆ ಜಾನ್.

‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳು ಬಾಕ್ಸ್ ಆಫೀಸ್​​ನಲ್ಲಿ ಭಾರಿ ಯಶಸ್ಸು ಗಳಿಸಿದ್ದು, ಇತ್ತೀಚೆಗಷ್ಟೆ ‘ಧುರಂಧರ್ 2’ ಸಿನಿಮಾ ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆಗಿದೆ. ಆದರೆ ಭಾರತದ ಹೊರಗೆ ಮಾತ್ರ. ಸಿನಿಮಾ ನೆಟ್​​ಫ್ಲಿಕ್ಸ್​​ನಲ್ಲಿ ಬಿಡುಗಡೆ ಆದ ಕೂಡಲೇ ಪಾಕಿಸ್ತಾನ ಸೇರಿದಂತೆ ಇನ್ನೂ ಕೆಲ ದೇಶಗಳಲ್ಲಿ ಟಾಪ್ ಟ್ರೆಂಡಿಂಗ್​​ನಲ್ಲಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us