AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸದ್ದಿಲ್ಲದೆ ಹಾಲಿವುಡ್​ಗೆ ಹಾರಿದ ಜಾಕ್ವೆಲಿನ್ ಫರ್ನಾಂಡೀಸ್

Jacqueline Fernandez: ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದಲ್ಲಿಯೂ ನಟಿಸಿರುವ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡೀಸ್, ಬಾಲಿವುಡ್ ದಾಟಿ ಈಗ ಹಾಲಿವುಡ್​ಗೆ ಹಾರಿದ್ದಾರೆ. ಅವರ ನಟನೆಯ ಮೊದಲ ಹಾಲಿವುಡ್ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದೆ.

ಸದ್ದಿಲ್ಲದೆ ಹಾಲಿವುಡ್​ಗೆ ಹಾರಿದ ಜಾಕ್ವೆಲಿನ್ ಫರ್ನಾಂಡೀಸ್
ಕಿಲ್ ದೆಲ್ ಆಲ್ 2
ಮಂಜುನಾಥ ಸಿ.
|

Updated on: Sep 19, 2024 | 7:43 PM

Share

ಪರದೇಶದಿಂದ ಭಾರತಕ್ಕೆ ಬಂದು ಬಾಲಿವುಡ್​ನಲ್ಲಿ ನೆಲೆ ನಿಲ್ಲಲು ನಾನಾ ಪ್ರಯತ್ನಗಳನ್ನು ಈಗಲೂ ಮಾಡುತ್ತಿರುವ ಜಾಕ್ವೆಲಿನ್ ಫರ್ನಾಂಡೀಸ್ ಹಠಾತ್ತನೆ ಹಾಲಿವುಡ್​ಗೆ ಹಾರಿದ್ದಾರೆ. ಬಾಲಿವುಡ್​ನಲ್ಲಿ ಇನ್ನೇನು ಸೆಟಲ್ ಆಗಿಬಿಟ್ಟರು ಎಂದುಕೊಳ್ಳುತ್ತಿರುವಾಗಲೇ ಸುಖೇಶ್ ಚಂದ್ರಶೇಖರ್ ವಿವಾದ ಹೊರಬಿದ್ದು ಬರಬೇಕಿದ್ದ ಅವಕಾಶಗಳಿಗೆ ಕಲ್ಲು ಹಾಕಿದ ಬಳಿಕ ಜಾಕ್ವೆಲಿನ್ ಹಾಲಿವುಡ್​ ಕಡೆ ಮುಖ ಮಾಡಿದ್ದು, ತಮ್ಮ ಮೊದಲ ಹಾಲಿವುಡ್ ಸಿನಿಮಾದಲ್ಲಿ ನಟಿಸಿದ್ದಾರೆ. ಜಾಕ್ವೆಲಿನ್ ನಟಿಸಿರುವ ಮೊದಲ ಹಾಲಿವುಡ್ ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದೆ.

ಹಾಲಿವುಡ್​ನ ಜನಪ್ರಿಯ ಆಕ್ಷನ್ ಸಿನಿಮಾ ಸರಣಿ ‘ಕಿಲ್ ದೆಮ್ ಆಲ್’ನ ಎರಡನೇ ಭಾಗದ ಪ್ರಮುಖ ಪಾತ್ರದಲ್ಲಿ ಜಾಕ್ವಲಿನ್ ಫರ್ನಾಂಡೀಸ್ ನಟಿಸಿದ್ದಾರೆ. ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಜಾಕ್ವೆಲಿನ್, ತಮ್ಮ ಮೊದಲ ಹಾಲಿವುಡ್ ಸಿನಿಮಾದಲ್ಲಿ ಆತ್ಮವಿಶ್ವಾಸದಿಂದ ನಟಿಸಿರುವುದು ಗೊತ್ತಾಗುತ್ತಿದೆ. ನಾಯಕ ಪ್ರಧಾನ ಸಿನಿಮಾ ‘ಕಿಲ್ ದೆಮ್ ಆಲ್ 2​’ನಲ್ಲಿ ನಾಯಕನ ಗರ್ಲ್​ಫ್ರೆಂಡ್ ಪಾತ್ರದಲ್ಲಿ ಜಾಕ್ವೆಲಿನ್ ನಟಿಸಿದ್ದಾರೆ. ಸಿನಿಮಾದಲ್ಲಿ ಜಾಕ್ವೆಲಿನ್ ಆಕ್ಷನ್ ದೃಶ್ಯಗಳಲ್ಲಿ ಸಹ ಪಾಲ್ಗೊಂಡಿದ್ದಾರೆ.

ಇದನ್ನೂ ಓದಿ:ಜಾಕ್ವೆಲಿನ್ ಫರ್ನಾಂಡೀಸ್ ವಿರುದ್ಧ ನೋರಾ ಫತೇಹಿ ಮೊಕದ್ದಮೆ, ಹೇಳಿಕೆ ಬಿಡುಗಡೆ ಮಾಡಿದ ಜಾಕ್ವೆಲಿನ್

ಜಾಕ್ವೆಲಿನ್, ಬೆಲ್ಜಿಯಂ ನಟ ಜೀನ್ ಕ್ಲೌಡ್ ವ್ಯಾನ್ ಡೆಮೆ ಎದುರು ನಾಯಕಿಯಾಗಿ ನಟಿಸಿದ್ದಾರೆ. ಜೀನ್ ಕ್ಲೌಡ್, ಹಾಲಿವುಡ್​ನ ಹಲವು ಸೂಪರ್ ಹಿಟ್ ಆಕ್ಷನ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಕಿಲ್ ದೆಮ್ ಆಲ್’ ಈ ಮೊದಲು 2017 ರಲ್ಲಿ ಬಿಡುಗಡೆ ಆಗಿತ್ತು. ಮಾಫಿಯಾ ಗ್ಯಾಂಗ್ ಹಾಗೂ ವ್ಯಕ್ತಿಯೊಬ್ಬ ನಡುವೆ ನಡೆಯುವ ಹೋರಾಟದ ಕತೆ ಅದು. ಆ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಇದೀಗ ಅದೇ ಸಿನಿಮಾದ ಮುಂದುವರೆದ ಭಾಗ ‘ಕಿಲ್ ದೆಮ್ ಆಲ್ 2’ ಸಿನಿಮಾ ನಿರ್ಮಾಣ ಮಾಡಲಾಗಿದೆ. ಸಿನಿಮಾದಲ್ಲಿ ಜಾಕ್ವೆಲಿನ್​ಗೆ ಪ್ರಮುಖ ಪಾತ್ರವೇ ದೊರೆತಿದೆ.

ಜಾಕ್ವೆಲಿನ್​, ಬಾಲಿವುಡ್​ನಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದ್ದ ಸಮಯದಲ್ಲಿಯೇ ಮಹಾನ್ ವಂಚಕ ಸುಖೇಶ್ ಜೊತೆ ಅವರ ಪ್ರೇಮ ಪ್ರಸಂಗ ಹೊರಬಿತ್ತು. ಜಾಕ್ವೆಲಿನ್ ವಿರುದ್ಧ ಸಿಬಿಐ ಮತ್ತು ಇಡಿ ಆರೋಪ ಪಟ್ಟಿಯನ್ನು ಸಹ ದಾಖಲಿಸಿತ್ತು. ಆದರೆ ಹೇಗೋ ಏನೋ ಜಾಕ್ವೆಲಿನ್ ಬಂಧನದಿಂದ ಪಾರಾಗುತ್ತಲೇ ಬಂದಿದ್ದಾರೆ. ಪ್ರಕರಣದ ಬಳಿಕ ಬಹು ಸಮಯ ಮೌನವಾಗಿದ್ದ ಜಾಕ್ವೆಲಿನ್, ಮತ್ತೆ ಸಿನಿಮಾಗಳಲ್ಲಿ ನಟಿಸಲು ಪ್ರಾರಂಭಿಸಿದ್ದು, ಪ್ರಸ್ತುತ ‘ವೆಲ್ ಕಮ್ ಟು ಜಂಗಲ್’ ಹಾಗೂ ‘ಫತೇಹ್’ ಹೆಸರಿನ ಹಿಂದಿ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಇನ್ನು ಕಿಲ್ ದೆಮ್ ಆಲ್ 2 ಕೆಲವೇ ತಿಂಗಳಲ್ಲಿ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ