ಆಸ್ಕರ್ ವೇದಿಕೆಗೆ ಸಂಪೂರ್ಣ ಬೆತ್ತಲಾಗಿ ಬಂದ ಜಾನ್ ಸೀನಾ; ಫೋಟೋ ವೈರಲ್
Oscar Award 2024: ಸಾಮಾನ್ಯವಾಗಿ ಆಸ್ಕರ್ ರೀತಿಯ ಕಾರ್ಯಕ್ರಮಕ್ಕೆ ಬರೋವಾಗ ಅತ್ಯುತ್ತಮ ಬಟ್ಟೆ ಧರಿಸಿ ಆಗಮಿಸುತ್ತಾರೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಆದರೆ ಜಾನ್ ಸೀನಾ ಮಾತ್ರ ಬೆತ್ತಲಾಗಿ ಬಂದಿದ್ದಾರೆ. ಅದಕ್ಕೂ ಒಂದು ಕಾರಣ ಇದೆ.
96ನೇ ಸಾಲಿನ ಆಸ್ಕರ್ ಅವಾರ್ಡ್ (Oscar Award 2024) ಕಾರ್ಯಕ್ರಮ ಭಾರತೀಯ ಕಾಲಮಾನ ಮಾರ್ಚ್ 11ರ ಮುಂಜಾನೆ ಆರಂಭ ಆಗಿದೆ. ಅಮೆರಿಕದ ಲಾಸ್ ಏಂಜಲೀಸ್ನ ಡಾಲ್ಬಿ ಥಿಯೇಟರ್ನಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಜಿಮ್ಮಿ ಕಿಮ್ಮೆಲ್ ಅವರು ಈ ಕಾರ್ಯಕ್ರಮವನ್ನು ಹೋಸ್ಟ್ ಮಾಡುತ್ತಿದ್ದಾರೆ. ಪ್ರತಿ ಬಾರಿಯೂ ಆಸ್ಕರ್ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿ ಆಗುತ್ತದೆ. ಈ ಬಾರಿಯೂ ಆಸ್ಕರ್ ಅವಾರ್ಡ್ ಕಾರ್ಯಕ್ರಮ ಸಾಕಷ್ಟು ಸುದ್ದಿ ಆಗಿದೆ. ಇದಕ್ಕೆ ಕಾರಣ ಆಗಿದ್ದು ಜಾನ್ ಸೀನಾ.
ವ್ರೆಸ್ಲರ್ ಹಾಗೂ ಹಾಲಿವುಡ್ ನಟ ಜಾನ್ ಸೀನಾ ಅವರು ಆಗಾಗ ಚರ್ಚೆಯಲ್ಲಿ ಇರುತ್ತಾರೆ. ಅವರು ಫೈಟಿಂಗ್ ಜೊತೆ ನಟನೆಯಲ್ಲೂ ಮಿಂಚಿದ್ದಾರೆ. ಈಗ ಅವರು ಆಸ್ಕರ್ ವೇದಿಕೆ ಏರಿ ಸುದ್ದಿ ಆಗಿದ್ದಾರೆ. ಸಾಮಾನ್ಯವಾಗಿ ಈ ರೀತಿ ಕಾರ್ಯಕ್ರಮಕ್ಕೆ ಬರೋವಾಗ ಅತ್ಯುತ್ತಮ ಬಟ್ಟೆ ಧರಿಸಿ ಆಗಮಿಸುತ್ತಾರೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಆದರೆ ಜಾನ್ ಸೀನಾ ಮಾತ್ರ ಬೆತ್ತಲಾಗಿ ಬಂದಿದ್ದಾರೆ. ಅದಕ್ಕೂ ಒಂದು ಕಾರಣ ಇದೆ. ಇದನ್ನೂ ಓದಿ: ‘ನೀವು ಅನೇಕರಿಗೆ ಸಂತೋಷ ನೀಡಿದ್ದೀರಿ’; ಶಾರುಖ್ಗೆ ಧನ್ಯವಾದ ಹೇಳಿದ ಜಾನ್ ಸೀನಾ
ಜಾನ್ ಸೀನಾ ಅವರು ಸಂಪೂರ್ಣ ಬೆತ್ತಲಾಗಿದ್ದರು. ಗುಪ್ತಾಂಗಕ್ಕೆ ಮಾತ್ರ ಒಂದು ಪ್ಲೇಟ್ ರೀತಿಯ ವಸ್ತುವನ್ನು ಹಿಡಿದುಕೊಂಡಿದ್ದರು. ಅವರು ಈ ರೀತಿ ವೇದಿಕೆ ಏರಿದ್ದು ‘ಅತ್ಯುತ್ತಮ ಕಾಸ್ಟ್ಯೂಮ್ ಅವಾರ್ಡ್’ ಪ್ರೆಸೆಂಟ್ ಮಾಡಲು. ಆ್ಯಂಕರ್ ಜಿಮ್ಮಿ ಕಿಮ್ಮೆಲ್ ಅವರು ಈ ರೀತಿ ಮಾಡುವಂತೆ ಜಾನ್ ಸೀನಾಗೆ ಸ್ಫೂರ್ತಿ ನೀಡಿದ್ದರು ಎನ್ನಲಾಗಿದೆ. ಸದ್ಯ ಈ ಫೋಟೋ ವೈರಲ್ ಆಗುತ್ತಿದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಇದಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಜಾನ್ ಸೀನಾ ಅವತಾರ
#JohnCena presented the #Oscar for Best Costume Design NAKED 😂🥵 https://t.co/r7WoNDVle4 (🎥: ABC) pic.twitter.com/BO4coRLTFA
— TMZ (@TMZ) March 11, 2024
‘ಪೂರ್ ಥಿಂಗ್ಸ್’ ಸಿನಿಮಾಗೆ ಬೆಸ್ಟ್ ಕಾಸ್ಟ್ಯೂಮ್ ಡಿಸೈನ್ ಅವಾರ್ಡ್ ಸಿಕ್ಕಿದೆ. ಈ ಸಿನಿಮಾ ಜೊತೆ ‘ಆಪನ್ ಹೈಮರ್ ಕೂಡ ಹಲವು ಅವಾರ್ಡ್ ಗೆಲ್ಲುವ ನಿರೀಕ್ಷೆ ಇದೆ. ಕಳೆದ ವರ್ಷ ಭಾರತಕ್ಕೆ ಆಸ್ಕರ್ ಅವಾರ್ಡ ಸಾಕಷ್ಟು ವಿಶೇಷ ಎನಿಸಿಕೊಂಡಿತ್ತು. ಭಾರತದ ‘ಆರ್ಆರ್ಆರ್’ ಚಿತ್ರದ ‘ನಾಟು ನಾಟು..’ ಹಾಡು ಆಸ್ಕರ್ ಗೆದ್ದು ಬೀಗಿತ್ತು. ಅದೇ ರೀತಿ, ‘ದಿ ಎಲಿಫಂಟ್ ವಿಸ್ಪರರ್ಸ್’ ಕೂಡ ಆಸ್ಕರ್ ಅವಾರ್ಡ್ ಗೆದ್ದಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ