‘ನೀವು ಅನೇಕರಿಗೆ ಸಂತೋಷ ನೀಡಿದ್ದೀರಿ’; ಶಾರುಖ್​ಗೆ ಧನ್ಯವಾದ ಹೇಳಿದ ಜಾನ್ ಸೀನಾ

ಶಾರುಖ್ ಖಾನ್ ಅವರ ‘ದಿಲ್ ತೋ ಪಾಗಲ್ ಹೇ’ ಚಿತ್ರದ ‘ಬೋಲಿ ಸಿ ಸೂರತ್..’ ಹಾಡನ್ನು ಜಾನ್ ಸೀನಾ ಹಾಡಲು ಪ್ರಯತ್ನಿಸಿದ್ದರು. ಜಾನ್ ಸೀನಾಗೆ ಭಾರತ ಮೂಲದ ವ್ರೆಸ್ಲರ್ ಒಬ್ಬರು ಈ ಹಾಡನ್ನು ಹೇಳಿಕೊಟ್ಟಿದ್ದರು. ಈ ವಿಡಿಯೋ ನೋಡಿ ಶಾರುಖ್ ಖಾನ್ ಅವರು ಸಖತ್ ಖುಷಿಪಟ್ಟಿದ್ದರು.

‘ನೀವು ಅನೇಕರಿಗೆ ಸಂತೋಷ ನೀಡಿದ್ದೀರಿ’; ಶಾರುಖ್​ಗೆ ಧನ್ಯವಾದ ಹೇಳಿದ ಜಾನ್ ಸೀನಾ
ಶಾರುಖ್-ಜಾನ್ ಸೀನಾ
Follow us
ರಾಜೇಶ್ ದುಗ್ಗುಮನೆ
|

Updated on: Feb 27, 2024 | 11:11 AM

ಅಮೆರಿಕದ ವ್ರೆಸ್ಲರ್ ಹಾಗೂ ನಟ ಜಾನ್ ಸೀನಾಗೆ (John Cena) ಭಾರತದ ಮೇಲೆ ವಿಶೇಷ ಪ್ರೀತಿ ಇದೆ. ಅವರು ಆಗಾಗ ಭಾರತದವರ ಬಗ್ಗೆ, ಭಾರತದ ಸಿನಿಮಾಗಳ ಬಗ್ಗೆ ಪೋಸ್ಟ್ ಮಾಡುತ್ತಾ ಇರುತ್ತಾರೆ. ಇತ್ತೀಚೆಗೆ ಅವರು ಶಾರುಖ್ ಖಾನ್ ಅವರ ಹಾಡನ್ನು ಹಾಡಿದ್ದರು. ಈ ವಿಡಿಯೋ ನೋಡಿದ ಶಾರುಖ್ ಖಾನ್ ಅವರು ಜಾನ್ ಸೀನಾಗೆ ಧನ್ಯವಾದ ಹೇಳಿದ್ದರು. ಈ ಟ್ವೀಟ್​ಗೆ ಜಾನ್​ ಸೀನಾ ಪ್ರತಿಕ್ರಿಯೆ ನೀಡಿದ್ದಾರೆ. ‘ನೀವು ಅನೇಕರಿಗೆ ಸಂತೋಷ್ ನೀಡಿದ್ದೀರಿ’ ಎಂದು ಶಾರುಖ್ ಖಾನ್ ಅವರನ್ನು ಬಾಯ್ತುಂಬ ಹೊಗಳಿದ್ದಾರೆ.

ಇತ್ತೀಚೆಗೆ ಜಾನ್ ಸೀನಾ ಅವರು ಜಿಮ್​​ನಲ್ಲಿ ಶಾರುಖ್ ಖಾನ್ ಅವರ ‘ದಿಲ್ ತೋ ಪಾಗಲ್ ಹೇ’ ಚಿತ್ರದ ‘ಬೋಲಿ ಸಿ ಸೂರತ್..’ ಹಾಡಲು ಪ್ರಯತ್ನಿಸಿದ್ದರು. ಜಾನ್ ಸೀನಾಗೆ ಭಾರತ ಮೂಲದ ವ್ರೆಸ್ಲರ್ ಹಾಡನ್ನು ಹೇಳಿಕೊಟ್ಟಿದ್ದರು. ಈ ವಿಡಿಯೋ ನೋಡಿ ಶಾರುಖ್ ಖಾನ್ ಅವರು ಸಖತ್ ಖುಷಿಪಟ್ಟಿದ್ದರು. ಈ ವಿಡಿಯೋಗೆ ಶಾರುಖ್ ಖಾನ್ ಅವರು ಪ್ರತಿಕ್ರಿಯೆ ನೀಡಿದ್ದರು.

‘ಇಬ್ಬರಿಗೂ ಧನ್ಯವಾದ. ನನಗೆ ಇಷ್ಟವಾಯಿತು. ಲವ್ ಯೂ ಜಾನ್​ ಸೀನಾ. ನಾನು ನನ್ನ ಇತ್ತೀಚಿನ ಹಾಡನ್ನು ಕಳುಹಿಸುತ್ತೇನೆ. ಅದನ್ನು ನೀವಿಬ್ಬರೂ ಹಾಡಬೇಕು’ ಎಂದು ಕೋರಿಕೊಂಡಿದ್ದಾರೆ ಶಾರುಖ್. ಈ ಟ್ವೀಟ್​ಗೆ ಜಾನ್​ ಸೀನಾ ಅವರು ಉತ್ತರ ನೀಡಿದ್ದಾರೆ. ‘ನೀವು ಜಗತ್ತಿನ ಅನೇಕರಿಗೆ ಖುಷಿ ನೀಡಿದ್ದೀರಿ. ನಿಮ್ಮ ಕೆಲಸಕ್ಕೆ ಧನ್ಯವಾದ’ ಎಂದಿದ್ದಾರೆ. ಜಾನ್ ಸೀನಾ ಅವರ ಟ್ವೀಟ್​ಗೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ: ತಂದೆ ಶಾರುಖ್ ಜೊತೆ ಸುಹಾನಾ ಸಿನಿಮಾ; ಇರಲಿದೆ ಭರ್ಜರಿ ಆ್ಯಕ್ಷನ್

ವಿಡಿಯೋದಲ್ಲಿ ಏನಿದೆ?

ವ್ರೆಸ್ಲರ್ ಗುರ್ವಿಂದರ್ ಸಿಹ್ರಾ ಅವರು ಪಂಜಾಬ್ ಮೂಲದವರು. ಅವರು ವ್ರೆಸ್ಲಿಂಗ್​ನಲ್ಲಿ ಗುರುತಿಸಿಕೊಂಡಿದ್ದಾರೆ. ಜಿಮ್​ನಲ್ಲಿ ಇಬ್ಬರೂ ಒಟ್ಟಿಗೆ ಇದ್ದರು. ಜಾನ್​ ಸೀನಾ ಅವರು ಶಾರುಖ್ ಖಾನ್​ನ ದೊಡ್ಡ ಅಭಿಮಾನಿ ಎಂದು ಪರಿಚಯಿಸಿದರು ಗುರ್ವಿಂದರ್. ಇದಕ್ಕೆ ಜಾನ್ ಸೀನಾ ಉತ್ತರಿಸಿದರು. ‘ನೀವು ಬೆಳವಣಿಗೆಯ ಮಾರ್ಗವನ್ನು ಆರಿಸಿದಾಗ ನೀವು ಏನು ಕಲಿಯಬಹುದು ಎಂದು ನಿಮಗೆ ತಿಳಿದಿರುವುದಿಲ್ಲ. ನಾವು ಜಿಮ್‌ನಲ್ಲಿದ್ದೇವೆ. ನಾವು ಬೆಳೆಯಲು ಪ್ರಯತ್ನಿಸುತ್ತಿದ್ದೇವೆ. ಬೆಳವಣಿಗೆಗೆ ಹಲವು ಮಾರ್ಗಗಳಿವೆ. ನಾನು ಹಾಡನ್ನು ಕಲಿಯಲು ನನ್ನ ಕೈಲಾದ ಪ್ರಯತ್ನ ಮಾಡಲಿದ್ದೇನೆ’ ಎಂದಿದ್ದರು ಜಾನ್ ಸೀನಾ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ