ತಂದೆ ಶಾರುಖ್ ಜೊತೆ ಸುಹಾನಾ ಸಿನಿಮಾ; ಇರಲಿದೆ ಭರ್ಜರಿ ಆ್ಯಕ್ಷನ್
‘ಕಿಂಗ್’ ಸಿನಿಮಾನ ಸುಜಯ್ ಘೋಷ್ ನಿರ್ದೇಶನ ಮಾಡುತ್ತಿದ್ದಾರೆ. ಅಕ್ಟೋಬರ್ 2023ರಿಂದ ಇಲ್ಲಿಯವರೆಗೆ ಸುಹಾನಾ ಖಾನ್ ಹಾಗೂ ಶಾರುಖ್ ಜೊತೆ ನಿರ್ದೇಶಕ ಸುಜಯ್ ಅವರು ಮಾತುಕತೆ ನಡೆಸಿದ್ದಾರೆ. ಈ ಚಿತ್ರದ ಸ್ಕ್ರಿಪ್ಟ್ ಕೆಲಸದಲ್ಲಿ ಅವರು ತೊಡಗಿಕೊಂಡಿದ್ದಾರೆ. ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ ಎನ್ನಲಾಗಿದೆ.
ಶಾರುಖ್ ಖಾನ್ ಮಗಳು ಸುಹಾನಾ ಖಾನ್ (Suhana Khan) ಚಿತ್ರರಂಗದಲ್ಲಿ ಮಿಂಚಲು ರೆಡಿ ಆಗಿದ್ದಾರೆ. ಅವರ ನಟನೆಯ ‘ದಿ ಆರ್ಚೀಸ್’ ಸಿನಿಮಾ ಒಟಿಟಿ ಮೂಲಕ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಅವರ ನಟನೆಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗ ಸುಹಾನಾ ಖಾನ್ ಅವರು ಮತ್ತೊಂದು ಸಿನಿಮಾದಲ್ಲಿ ನಟಿಸಲು ರೆಡಿ ಆಗಿದ್ದಾರೆ. ಅದೂ ತಂದೆ ಶಾರುಖ್ ಖಾನ್ ಜೊತೆ ಅನ್ನೋದು ವಿಶೇಷ. ಈ ಚಿತ್ರಕ್ಕೆ ‘ಕಿಂಗ್’ ಎನ್ನುವ ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದ ಶೂಟಿಂಗ್ ಮೇದಲ್ಲಿ ಪ್ರಾರಂಭ ಆಗಲಿದೆ ಎಂದು ವರದಿ ಆಗಿದೆ.
ಸುಹಾನಾ ಖಾನ್ ಅವರು ವಿದೇಶದಲ್ಲಿ ನಟನೆ ಕಲಿತು ಬಂದಿದ್ದಾರೆ. ಅವರು ‘ದಿ ಆರ್ಚೀಸ್’ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದ್ದಾರೆ. ಈ ಸಿನಿಮಾಗೆ ಜೋಯಾ ಅಖ್ತರ್ ನಿರ್ದೇಶನ ಮಾಡಿದ್ದಾರೆ. ಆದರೆ, ಅವರ ನಟನೆಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಆದಾಗ್ಯೂ ಸುಹಾನಾ ಖಾನ್ ಅವರನ್ನು ದೊಡ್ಡ ದೊಡ್ಡ ನಿರ್ದೇಶಕರು ಸಂಪರ್ಕಿಸುತ್ತಿದ್ದಾರೆ. ಈಗ ಅವರ ಗಮನ ಸಂಪೂರ್ಣವಾಗಿ ‘ಕಿಂಗ್’ ಚಿತ್ರದ ಮೇಲೆ ಇದೆ ಎಂದು ಹೇಳಲಾಗುತ್ತಿದೆ.
ಕಿಂಗ್ ಚಿತ್ರವನ್ನು ಸುಜಯ್ ಘೋಷ್ ನಿರ್ದೇಶನ ಮಾಡುತ್ತಿದ್ದಾರೆ. ಅಕ್ಟೋಬರ್ 2023ರಿಂದ ಇಲ್ಲಿಯವರೆಗೆ ಸುಹಾನಾ ಹಾಗೂ ಶಾರುಖ್ ಖಾನ್ ಜೊತೆ ಸುಜಯ್ ಅವರು ಮಾತುಕತೆ ನಡೆಸಿದ್ದಾರೆ. ಈ ಚಿತ್ರದ ಸ್ಕ್ರಿಪ್ಟ್ ಕೆಲಸದಲ್ಲಿ ಅವರು ತೊಡಗಿಕೊಂಡಿದ್ದಾರೆ. ಈ ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ.
‘ಕಿಂಗ್’ ಚಿತ್ರದಲ್ಲಿ ಆ್ಯಕ್ಷನ್ ಇರುವುದರಿಂದ ಸುಹಾನಾ ಖಾನ್ ಅವರು ಇದಕ್ಕಾಗಿ ಭರ್ಜರಿಯಾಗಿ ರೆಡಿ ಆಗುತ್ತಿದ್ದಾರೆ. ಮನ್ನತ್ನಲ್ಲಿ ಇದಕ್ಕೆ ಸಿದ್ಧತೆ ನಡೆಯುತ್ತಿದೆ. ಅವರಿಗೆ ಟ್ರೇನಿಂಗ್ ನೀಡುವ ಕೆಲಸ ಆಗುತ್ತಿದೆ. ಈ ಚಿತ್ರ 2025ರ ಆರಂಭದಲ್ಲಿ ರಿಲೀಸ್ ಆಗೋ ಸಾಧ್ಯತೆ ಇದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಈ ಮೊದಲು ಸಿನಿಮಾ ಸೆಟ್ಟೇರುವುದಿಲ್ಲ ಎಂದು ಹೇಳಲಾಗಿತ್ತು.
ಸುಹಾನಾ ಖಾನ್ ಅವರು ಈಗತಾನೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಶಾರುಖ್ ಖಾನ್ ಜೊತೆ ಅವರು ತೆರೆ ಹಂಚಿಕೊಂಡರೆ ಎಲ್ಲರೂ ಅವರ ನಟನೆಯನ್ನು ಶಾರುಖ್ ಖಾನ್ ಜೊತೆ ಹೋಲಿಕೆ ಮಾಡುತ್ತಾರೆ ಎನ್ನುವ ಭಯ ಶಾರುಖ್ ಅವರನ್ನು ಕಾಡಿತ್ತು. ಹೀಗಾಗಿ ಸಿನಿಮಾ ಕೈಬಿಡುವಂತೆ ಅವರು ಸೂಚನೆ ನೀಡಿದ್ದರು. ಆದರೆ, ಈಗ ಕಥೆಯಲ್ಲಿ ಬದಲಾವಣೆ ಮಾಡಿ ಸುಹಾನಾ ಪಾತ್ರವನ್ನು ಹೈಲೈಟ್ ಮಾಡಿರುವುದರಿಂದ ಶಾರುಖ್ ಖಾನ್ ಅವರು ಈ ಸಿನಿಮಾ ಮಾಡಲು ಒಪ್ಪಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: 10 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಖರೀದಿಸಿದ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್
ಈ ಚಿತ್ರವನ್ನು ಶಾರುಖ್ ಖಾನ್ ಹಾಗೂ ಸಿದ್ದಾರ್ಥ್ ಆನಂದ್ ನಿರ್ಮಾಣ ಮಾಡುತ್ತಿದ್ದಾರೆ. ಸಿದ್ದಾರ್ಥ್ ಆನಂದ್ ಅವರು ಶಾರುಖ್ ಖಾನ್ ನಟನೆಯ ‘ಪಠಾಣ್’ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಕಾರಣಕ್ಕೆ ಶಾರುಖ್ ಖಾನ್ ಜೊತೆ ಅವರಿಗೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ‘ಡಂಕಿ’ ರಿಲೀಸ್ ಆದ ಬಳಿಕ ಶಾರುಖ್ ಖಾನ್ ಅವರ ಯಾವುದೇ ಹೊಸ ಸಿನಿಮಾ ಘೋಷಣೆ ಆಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ