Matthew Perry: ‘ಫ್ರೆಂಡ್ಸ್’ ಖ್ಯಾತಿಯ ಮ್ಯಾಥ್ಯು ಪೆರ್ರಿ ಸಾವಿಗೆ ತಿಳಿಯಿತು ಅಸಲಿ ಕಾರಣ..
ಮ್ಯಾಥ್ಯು ಪೆರ್ರಿ ಅವರು ಬಾತ್ಟಬ್ನಲ್ಲಿ ಮುಳುಗಿ ಸತ್ತಿದ್ದರಿಂದ ಅನೇಕರು ಇವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಇದಕ್ಕೆ ಉತ್ತರ ಸಿಕ್ಕಿದೆ.
ಜನಪ್ರಿಯ ಟಿವಿ ಶೋ ‘ಫ್ರೆಂಡ್ಸ್’ (Friends Series) ನಟ ಮ್ಯಾಥ್ಯು ಪೆರ್ರಿ ಅಕ್ಟೋಬರ್ 28ರಂದು ಮೃತಪಟ್ಟಿದ್ದರು. ಅವರ ಸಾವು ಸಾಕಷ್ಟು ಅನುಮಾನ ಹುಟ್ಟುಹಾಕಿತ್ತು. ಹಾಟ್ ಟಬ್ನಲ್ಲಿ ಮ್ಯಾಥ್ಯೂ ಮೃತದೇಹ ಪತ್ತೆ ಆಗಿತ್ತು. ಹೀಗಾಗಿ, ಅನೇಕರು ಅವರ ಸಾವಿನ ಬಗ್ಗೆ ತನಿಖೆ ನಡೆಯಬೇಕು ಎಂದು ಅನೇಕರು ಆಗ್ರಹಿಸಿದ್ದರು. ಈಗ ಅವರ ಮರಣೋತ್ತರ ಪರೀಕ್ಷೆಯ ಸಂಪೂರ್ಣ ರಿಪೋರ್ಟ್ ಸಿಕ್ಕಿದೆ. ಕೆಟಮೈನ್ನಿಂದ ಅವರು ಮೃತಪಟ್ಟಿದ್ದಾರೆ ಎಂದು ವರದಿ ಹೇಳಿದೆ.
ಮ್ಯಾಥ್ಯು ಪೆರ್ರಿ ಅವರ ಜೀವನ ಅಂದುಕೊಂಡಂತೆ ನಡೆಯುತ್ತಿರಲಿಲ್ಲ. ಅವರು ಅತಿಯಾಗಿ ಪೇನ್ಕಿಲ್ಲರ್ ತಿನ್ನುತ್ತಿದ್ದರು ಮತ್ತು ಮದ್ಯಪಾನ ಸೇವನೆ ಮಾಡುತ್ತಿದ್ದರು. ಇದರಿಂದ ಅವರು ಸಾಕಷ್ಟು ತೊಂದರೆ ಅನುಭವಿಸಿದರು. ಅನೇಕ ಬಾರಿ ಅವರಿಗೆ ಆರೋಗ್ಯದ ಸಮಸ್ಯೆ ಉಂಟಾಗಿತ್ತು. ಚಿಕಿತ್ಸೆಗಾಗಿ ಅವರು ಸಾಕಷ್ಟು ಹಣ ಖರ್ಚು ಮಾಡಿದ್ದರು. ಹಲವು ಬಾರಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬೇಕಾಯಿತು. ಅವರು ಬಾತ್ಟಬ್ನಲ್ಲಿ ಮುಳುಗಿ ಸತ್ತಿದ್ದರಿಂದ ಅನೇಕರು ಇವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಇದಕ್ಕೆ ಉತ್ತರ ಸಿಕ್ಕಿದೆ.
ಮ್ಯಾಥ್ಯೂ ಅವರು ಖಿನ್ನತೆಗೆ ಒಳಗಾಗಿದ್ದರು. ಹೀಗಾಗಿ ಅವರು ವಿಶೇಷ ಥೆರೆಪಿಗೆ ಒಳಗಾಗಿದ್ದರು. ಥೆರೆಪಿಯಲ್ಲಿ ಕೆಟಮೈನ್ನ ತೆಗೆದುಕೊಳ್ಳುವ ಥೆರಪಿ ಇದಾಗಿತ್ತು. ಖಿನ್ನತೆಗೆ ಒಳಗಾದ ವ್ಯಕ್ತಿಗಳನ್ನು ಟ್ರೀಟ್ ಮಾಡಲು ಇದನ್ನು ಬಳಕೆ ಮಾಡಲಾಗಿತ್ತು. ಆದರೆ, ಮ್ಯಾಥ್ಯೂ ಸಾಯುವ ಸಂದರ್ಭದಲ್ಲಿ ಕೆಟಮೈನ್ ಪ್ರಮಾಣ ಅವರ ದೇಹದಲ್ಲಿ ಅಧಿಕವಾಗಿತ್ತು. ಹೀಗಾಗಿ ಅವರು ನೀರಿನಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡರು ಮತ್ತು ಮೇಲೆದ್ದು ಬರಲು ಅವರ ಬಳಿ ಸಾಧ್ಯವಾಗಲೇ ಇಲ್ಲ. ಇದರಿಂದ ಮ್ಯಾಥ್ಯೂ ಮೃತಪಟ್ಟರು.
ಇದನ್ನೂ ಓದಿ: Matthew Perry: ಮ್ಯಾಥ್ಯು ಪೆರ್ರಿ ಸಾವಿಗೆ ಮರಣೋತ್ತರ ಪರೀಕ್ಷೆಯಲ್ಲಿ ಕಾರಣ ತಿಳಿಯಲಿಲ್ಲವೇ?
10 ಸೀಸನ್ಗಳಲ್ಲಿ ‘ಫ್ರೆಂಡ್ಸ್’ ಸೀರಿಸ್ ಪ್ರಸಾರ ಕಂಡಿತ್ತು. ಅದರಲ್ಲಿ ಮ್ಯಾಥ್ಯು ಪೆರ್ರಿ ಅವರು ಚಾಂಡ್ಲರ್ ಬೇಂಗ್ ಹೆಸರಿನ ಪಾತ್ರ ಮಾಡಿದ್ದರು. ಇದು ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಈ ಮೂಲಕ ವಿಶ್ವಾದ್ಯಂತ ಅವರು ಜನಪ್ರಿಯತೆ ಪಡೆದಿದ್ದರು. ಕಿರುತೆರೆ ಮಾತ್ರವಲ್ಲದೇ ಸಿನಿಮಾಗಳಲ್ಲೂ ಅವರು ಅಭಿನಯಿಸಿದ್ದರು. ‘ಫೂಲ್ಸ್ ರಶ್ ಇನ್’, ‘ದಿ ಹೋಲ್ ನೈನ್ ಯಾರ್ಡ್ಸ್’ ಸೇರಿದಂತೆ ಒಂದಷ್ಟು ಹಾಲಿವುಡ್ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಭಾರತದಲ್ಲೂ ಅವರಿಗೆ ಅಭಿಮಾನಿಗಳು ಇದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ