Oscar Award 20223: ಆಸ್ಕರ್ ಅವಾರ್ಡ್ ನಡೆಯೋದು ಎಲ್ಲಿ, ಯಾವಾಗ, ಎಷ್ಟು ಗಂಟೆಗೆ? ಇಲ್ಲಿದೆ ವಿವರ
ಕಳೆದ ವರ್ಷ ಆಸ್ಕರ್ ಸಮಾರಂಭದಲ್ಲಿ ಪತ್ನಿಯ ಬಗ್ಗೆ ಜೋಕ್ ಮಾಡಿದ ಕಾಮಿಡಿ ನಟ ಕ್ರಿಸ್ ರಾಕ್ ಕೆನ್ನೆಗೆ ವಿಲ್ ಸ್ಮಿತ್ ಹೊಡೆದಿದ್ದರು. ಇದು ಸಾಕಷ್ಟು ವಿವಾದ ಹುಟ್ಟುಹಾಕಿತ್ತು. ಈ ಬಾರಿ ಆ ರೀತಿ ಆಗದಂತೆ ನೋಡಿಕೊಳ್ಳಲು ಎಚ್ಚರಿಕೆ ವಹಿಸಲಾಗುತ್ತಿದೆ.
95ನೇ ಆಸ್ಕರ್ ಅವಾರ್ಡ್ (Oscar Award) ಕಾರ್ಯಕ್ರಮಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಮಾರ್ಚ್ 12ರಂದು ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ಕಾರ್ಯಕ್ರಮ ನಡೆಯಲಿದೆ. ಪ್ರತಿವರ್ಷದಂತೆ ಈ ವರ್ಷವೂ ಅಕಾಡೆಮಿ ಪ್ರಶಸ್ತಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ. ಹಾಲಿವುಡ್ ಅನೇಕ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ಕಳೆದ ವರ್ಷ ಆಸ್ಕರ್ ಸಮಾರಂಭದಲ್ಲಿ ಪತ್ನಿಯ ಬಗ್ಗೆ ಜೋಕ್ ಮಾಡಿದ ಕಾಮಿಡಿ ನಟ ಕ್ರಿಸ್ ರಾಕ್ ಕೆನ್ನೆಗೆ ವಿಲ್ ಸ್ಮಿತ್ ಹೊಡೆದಿದ್ದರು. ಇದು ಸಾಕಷ್ಟು ವಿವಾದ ಹುಟ್ಟುಹಾಕಿತ್ತು. ಈ ಬಾರಿ ಆ ರೀತಿ ಆಗದಂತೆ ನೋಡಿಕೊಳ್ಳಲು ಎಚ್ಚರಿಕೆ ವಹಿಸಲಾಗುತ್ತಿದೆ.
ಎಲ್ಲಿ, ಯಾವಾಗ?
2023ನೇ ಸಾಲಿನ ಆಸ್ಕರ್ ಅವಾರ್ಡ್ ಕಾರ್ಯಕ್ರಮ ಮಾರ್ಚ್ 12ರಂದು ಲಾಸ್ ಏಂಜಲೀಸ್ನ ಡಾಲ್ಬಿ ಥಿಯೇಟರ್ನಲ್ಲಿ ನಡೆಯಲಿದೆ. ಅಮೆರಿಕದ ಕಾಲಮಾನ ರಾತ್ರಿ 8 ಗಂಟೆಗೆ ಕಾರ್ಯಕ್ರಮ ಆರಂಭ ಆಗಲಿದೆ. ಭಾರತೀಯ ಕಾಲಮಾನದ ಪ್ರಕಾರ ಮಾರ್ಚ್ 13ರ ಮುಂಜಾನೆ 5.30ಕ್ಕೆ ಕಾರ್ಯಕ್ರಮ ಪ್ರಾರಂಭ ಆಗಲಿದೆ. ಕೆಲವು ಗಂಟೆಗಳ ಕಾಲ ಈ ಕಾರ್ಯಮ ನಡೆಯಲಿದೆ.
ಆಸ್ಕರ್ ಕಾರ್ಯಕ್ರಮ ಎಲ್ಲಿ ಪ್ರಸಾರ ಕಾಣುತ್ತೆ?
ಆಸ್ಕರ್ ಕಾರ್ಯಕ್ರಮವನ್ನು ವಿವಿಧ ಕಡೆಗಳಲ್ಲಿ ನೋಡಲು ಅವಕಾಶ ಇದೆ. ಹುಲು ಲೈವ್ ಟಿವಿನಲ್ಲಿ ಇದನ್ನು ವೀಕ್ಷಿಸಬಹುದು. ಯೂಟ್ಯೂಬ್ ಟಿವಿಯಲ್ಲೂ ನೀವು ಇದನ್ನು ಉಚಿತವಾಗಿ ವೀಕ್ಷಿಸಬಹುದು. ಎಟಿ ಆ್ಯಂಡ್ ಟಿ ಟಿವಿ ಹಾಗೂ ಫುಬೋ ಟಿವಿಯಲ್ಲಿ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಇದೆ. ಎಬಿಸಿ ವೆಬ್ಸೈಟ್ನಲ್ಲಿ ಆಸ್ಕರ್ ಕಾರ್ಯಕ್ರಮ ಉಚಿತವಾಗಿ ವೀಕ್ಷಿಸಬಹುದು.
Presenting this year’s Best Picture nominees… #Oscars95
All Quiet on the Western Front, Avatar: The Way of Water, The Banshees of Inisherin, Elvis, Everything Everywhere All at Once, The Fabelmans, Tár, Top Gun: Maverick, Triangle of Sadness, Women Talking pic.twitter.com/TqAX1gyhwA
— The Academy (@TheAcademy) March 10, 2023
ಹೋಸ್ಟ್ ಮಾಡೋದು ಯಾರು?
ಪ್ರತಿ ವರ್ಷ ಆಸ್ಕರ್ ಕಾರ್ಯಕ್ರಮ ಸಾಕಷ್ಟು ಅದ್ದೂರಿಯಾಗಿರುತ್ತದೆ. ಈ ಪ್ರತಿಷ್ಠಿತ ಕಾರ್ಯಕ್ರಮವನ್ನು ನಡೆಸಿಕೊಡೋಕೆ ಅನುಭವಿಗಳನ್ನೇ ಆಯ್ಕೆ ಮಾಡಲಾಗುತ್ತದೆ. ಈ ವರ್ಷ ಜಿಮ್ಮಿ ಕಿಮ್ಮೆಲ್ ಅವರು ಕಾರ್ಯಕ್ರಮವನ್ನು ಹೋಸ್ಟ್ ಮಾಡಲಿದ್ದಾರೆ. 2018ರಿಂದ ಈಚೆಗೆ ಅವರು ಎರಡು ಬಾರಿ ಆಸ್ಕರ್ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ದೀಪಿಕಾ ಪಡುಕೋಣೆ ಅವರು ಪ್ರಶಸ್ತಿ ನೀಡಲಿದ್ದಾರೆ.
ಇದನ್ನೂ ಓದಿ: Jr NTR: ಆಸ್ಕರ್ ಸಮಾರಂಭದ ಆರಂಭಕ್ಕೂ ಮುನ್ನವೇ ಬೇಸರದ ಸುದ್ದಿ ನೀಡಿದ ಜೂನಿಯರ್ ಎನ್ಟಿಆರ್
ಈ ಬಾರಿ ಭಾರತಕ್ಕೆ ವಿಶೇಷ ಏಕೆ?
‘ಆರ್ಆರ್ಆರ್’ ಚಿತ್ರದ ‘ನಾಟು ನಾಟು..’ ಹಾಡು ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ನಾಮಿನೇಟ್ ಆಗಿದೆ. ಭಾರತದ ‘ಆಲ್ ದಟ್ ಬ್ರೀಥ್ಸ್’, ‘ದಿ ಎಲಿಫೆಂಟ್ ವಿಸ್ಪರರ್ಸ್’ ಕಿರುಚಿತ್ರಗಳು ಕೂಡ ನಾಮಿನೇಟ್ ಆಗಿದ್ದು, ಭಾರತಕ್ಕೆ ಈ ಬಾರಿ ಆಸ್ಕರ್ ಗೆಲ್ಲುವ ಚಾನ್ಸ್ ದಟ್ಟವಾಗಿದೆ. ಅಲಿಸನ್ ವಿಲಿಯಮ್ಸ್ ಮತ್ತು ರಿಝ್ ಅಹ್ಮದ್ ಅವರು ಈ ಬಾರಿಯ ಆಸ್ಕರ್ ನಾಮಿನೇಷನ್ ಲಿಸ್ಟ್ ಪ್ರಕಟಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ