ಆಸ್ಕರ್ 2026 ಸಮಾರಂಭ: ಎಲ್ಲಿ ವೀಕ್ಷಿಸಬಹುದು? ಭಾರತದಲ್ಲಿ ಟೆಲಿಕಾಸ್ಟ್ ಯಾವಾಗ?

Oscars 2026 award ceremony: ಈ ವರ್ಷದ ಆಸ್ಕರ್ಸ್ (Oscars 2026) ಪ್ರದಾನ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಹಾಲಿವುಡ್‌ನ ಲಾಸ್ ಏಂಜಲ್ಸ್​​ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿರುವ ಈ ವರ್ಣರಂಜಿತ ಕಾರ್ಯಕ್ರಮವನ್ನು ಕಣ್ಣುಂಬಿಕೊಳ್ಳಲು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ಭಾರತೀಯ ಸಿನಿಮಾ ಪ್ರೇಮಿಗಳಿಗೂ ಸಹ ಆಸ್ಕರ್​ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಆಸ್ಕರ್ಸ್ ಅನ್ನು ಭಾರತೀಯರು ಎಲ್ಲಿ ನೋಡಬಹುದು? ಯಾವ ಸಮಯಕ್ಕೆ ನೋಡಬಹುದು? ಮಾಹಿತಿ ಇಲ್ಲಿದೆ...

ಆಸ್ಕರ್ 2026 ಸಮಾರಂಭ: ಎಲ್ಲಿ ವೀಕ್ಷಿಸಬಹುದು? ಭಾರತದಲ್ಲಿ ಟೆಲಿಕಾಸ್ಟ್ ಯಾವಾಗ?
The Oscars

Updated on: Mar 15, 2026 | 7:18 PM

ಸಿನಿಮಾ (Cinema) ಲೋಕದ ಅತ್ಯುನ್ನತ ಪ್ರಶಸ್ತಿ ಎಂದೇ ಪರಿಗಣಿಸಲ್ಪಡುವುದು ಆಸ್ಕರ್ ಅಥವಾ ಅಕಾಡೆಮಿ ಪ್ರಶಸ್ತಿ. ಈ ವರ್ಷದ ಆಸ್ಕರ್ಸ್ (Oscars 2026) ಪ್ರದಾನ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಹಾಲಿವುಡ್‌ನ ಲಾಸ್ ಏಂಜಲ್ಸ್​​ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿರುವ ಈ ವರ್ಣರಂಜಿತ ಕಾರ್ಯಕ್ರಮವನ್ನು ಕಣ್ಣುಂಬಿಕೊಳ್ಳಲು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ಭಾರತೀಯ ಸಿನಿಮಾ ಪ್ರೇಮಿಗಳಿಗೂ ಸಹ ಆಸ್ಕರ್​ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಆಸ್ಕರ್ಸ್ ಅನ್ನು ಭಾರತೀಯರು ಎಲ್ಲಿ ನೋಡಬಹುದು? ಯಾವ ಸಮಯಕ್ಕೆ ನೋಡಬಹುದು? ಮಾಹಿತಿ ಇಲ್ಲಿದೆ…

ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಮಾರ್ಚ್ 15ರ ಸಂಜೆ ಈ ಸಮಾರಂಭ ನಡೆಯಲಿದೆ. ಆದರೆ ಭಾರತ ಮತ್ತು ಅಮೆರಿಕದ ನಡುವಿನ ಸಮಯದ ವ್ಯತ್ಯಾಸದಿಂದಾಗಿ, ಭಾರತೀಯ ಪ್ರೇಕ್ಷಕರು ಮಾರ್ಚ್ 16ರ ಸೋಮವಾರ ಮುಂಜಾನೆ ಈ ಕಾರ್ಯಕ್ರಮವನ್ನು ವೀಕ್ಷಿಸಬೇಕಾಗುತ್ತದೆ. ಮಾರ್ಚ್ 16ರ ಸೋಮವಾರ ಮುಂಜಾನೆ ಭಾರತೀಯ ಕಾಲಮಾನ 5:30ಕ್ಕೆ ರೆಡ್ ಕಾರ್ಪೆಟ್ ಸಂಭ್ರಮ ಆರಂಭವಾಗಲಿದ್ದು, 6:30ರಿಂದ ಅಧಿಕೃತ ಪ್ರಶಸ್ತಿ ಪ್ರದಾನ ಸಮಾರಂಭ ಶುರುವಾಗಲಿದೆ.

ಭಾರತದಲ್ಲಿ ಆಸ್ಕರ್ ಪ್ರಸಾರದ ಅಧಿಕೃತ ಹಕ್ಕನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ (Disney+ Hotstar) ಹೊಂದಿದೆ. ಹಾಟ್‌ಸ್ಟಾರ್ ಚಂದಾದಾರರು ಮೊಬೈಲ್ ಅಥವಾ ಸ್ಮಾರ್ಟ್ ಟಿವಿಯಲ್ಲಿ ನೇರ ಪ್ರಸಾರವನ್ನು ವೀಕ್ಷಿಸಬಹುದು.
ಸ್ಟಾರ್ ನೆಟ್‌ವರ್ಕ್‌ನ ಇಂಗ್ಲಿಷ್ ಎಂಟರ್‌ಟೈನ್‌ಮೆಂಟ್ ಚಾನೆಲ್‌ಗಳಾದ ಸ್ಟಾರ್ ವರ್ಲ್ಡ್ ಅಥವಾ ಸ್ಟಾರ್ ಮೂವೀಸ್ ನಲ್ಲಿ ಈ ಕಾರ್ಯಕ್ರಮ ಪ್ರಸಾರವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ:’ಜನ ನಾಗಯನ್‘ ಸಿನಿಮಾ: ಯಶಸ್ವಿಯಾಯ್ತು ವಿಜಯ್ ರಾಜಕೀಯ ವಿರೋಧಿಗಳ ಪ್ಲ್ಯಾನ್

ಈ ಬಾರಿಯ ಆಸ್ಕರ್ ವೇದಿಕೆಯನ್ನು ಜನಪ್ರಿಯ ಹಾಸ್ಯನಟ ಮತ್ತು ಟಾಕ್ ಶೋ ನಿರೂಪಕ ಕೋನನ್ ಒ’ಬ್ರಿಯಾನ್ ನಿರೂಪಣೆ ಮಾಡಲಿದ್ದಾರೆ. ಭಾರತದ ಯಾವುದೇ ಸಿನಿಮಾಗಳು ಈ ಬಾರಿ ಆಸ್ಕರ್​ಸ್ ರೇಸಿನಲ್ಲಿ ಇಲ್ಲವಾದರೂ ನಟಿ ಪ್ರಿಯಾಂಕಾ ಚೋಪ್ರಾ ಅವರು ಈ ಬಾರಿ ಪ್ರಶಸ್ತಿ ಪ್ರದಾನ ಮಾಡಲಿರುವುದು ವಿಶೇಷ. ಈ ವರ್ಷ ‘ಒನ್ ಬ್ಯಾಟಲ್ ಆಫ್ಟರ್ ಅನದರ್’, ‘ಸಿನ್ನರ್ಸ್’ ಇನ್ನೂ ಕೆಲವು ದೊಡ್ಡ ಸಿನಿಮಾಗಳು ಈ ಬಾರಿ ಸ್ಪರ್ಧೆಯಲ್ಲಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:04 pm, Sun, 15 March 26

Follow Us