ಮೈಖಲ್ ಜಾಕ್ಸನ್ ಅಪಹರಣಕ್ಕೆ ನಡೆದಿತ್ತು ಸಂಚು: ಯತ್ನಿಸಿದವರು ಯಾರು ಗೊತ್ತೆ?

Michael Jackson life: ಮೈಖಲ್ ಜಾಕ್ಸನ್, ವಿಶ್ವದ ಅತ್ಯುತ್ತಮ ಎಂಟರ್ಟೈನರ್​. ಇಂದಿನ ಹಾಲಿವುಡ್​ ಪಾಪ್ ಸ್ಟಾರ್​​ಗಳಾದ ಟೈಲರ್ ಸ್ವಿಫ್ಟ್, ಕಾನ್ಯೆ, ಜಸ್ಟಿನ್ ಬೀಬರ್ ಇನ್ನೂ ಹಲವರ ಒಟ್ಟು ಅಭಿಮಾನಿಗಳು, ಜನಪ್ರಿಯತೆಯನ್ನು ಒಟ್ಟು ಮಾಡಿದರೂ ಸಹ ಮೈಖಲ್ ಜಾಕ್ಸನ್ ಅವರ ಜನಪ್ರಿಯತೆ ಹೆಚ್ಚು ತೂಗುತ್ತದೆ. ಮೈಖಲ್ ಯಾವುದಾದರೂ ನಗರಕ್ಕೆ ಹೋದರೆಂದರೆ ಆ ನಗರವೇ ಬಂದ್ ಆಗಿಬಿಡುತ್ತಿತ್ತು. ಮೈಖಲ್ ಅನ್ನು ನೊಡಲು ಜನ ಊಟ, ನಿದ್ದೆ ಬಿಟ್ಟು ಕಾಯುತ್ತಿದ್ದರು. ವಿಶ್ವದ ಅತ್ಯಂತ ಜನಪ್ರಿಯ ವ್ಯಕ್ತಿ ಆಗಿದ್ದರು ಮೈಖಲ್. ಇಂಥಹಾ ಮೈಖಲ್ ಜಾಕ್ಸನ್ ಅನ್ನು ಅಪಹರಣ ಮಾಡಲು ಪ್ರಯತ್ನವೊಂದು ನಡೆದಿತ್ತು.

ಮೈಖಲ್ ಜಾಕ್ಸನ್ ಅಪಹರಣಕ್ಕೆ ನಡೆದಿತ್ತು ಸಂಚು: ಯತ್ನಿಸಿದವರು ಯಾರು ಗೊತ್ತೆ?
Michael Jackson

Updated on: May 02, 2026 | 10:20 PM

ಮೈಖಲ್ ಜಾಕ್ಸನ್ (Michael Jackson), ವಿಶ್ವದ ಅತ್ಯುತ್ತಮ ಎಂಟರ್ಟೈನರ್​. ಇಂದಿನ ಹಾಲಿವುಡ್​ ಪಾಪ್ ಸ್ಟಾರ್​​ಗಳಾದ ಟೈಲರ್ ಸ್ವಿಫ್ಟ್, ಕಾನ್ಯೆ, ಜಸ್ಟಿನ್ ಬೀಬರ್ ಇನ್ನೂ ಹಲವರ ಒಟ್ಟು ಅಭಿಮಾನಿಗಳು, ಜನಪ್ರಿಯತೆಯನ್ನು ಒಟ್ಟು ಮಾಡಿದರೂ ಸಹ ಮೈಖಲ್ ಜಾಕ್ಸನ್ ಅವರ ಜನಪ್ರಿಯತೆ ಹೆಚ್ಚು ತೂಗುತ್ತದೆ. ಮೈಖಲ್ ಯಾವುದಾದರೂ ನಗರಕ್ಕೆ ಹೋದರೆಂದರೆ ಆ ನಗರವೇ ಬಂದ್ ಆಗಿಬಿಡುತ್ತಿತ್ತು. ಮೈಖಲ್ ಅನ್ನು ನೊಡಲು ಜನ ಊಟ, ನಿದ್ದೆ ಬಿಟ್ಟು ಕಾಯುತ್ತಿದ್ದರು. ವಿಶ್ವದ ಅತ್ಯಂತ ಜನಪ್ರಿಯ ವ್ಯಕ್ತಿ ಆಗಿದ್ದರು ಮೈಖಲ್. ಇಂಥಹಾ ಮೈಖಲ್ ಜಾಕ್ಸನ್ ಅನ್ನು ಅಪಹರಣ ಮಾಡಲು ಪ್ರಯತ್ನವೊಂದು ನಡೆದಿತ್ತು.

ಪಾಬ್ಲೊ ಎಸ್ಕೊಬಾರ್, ವಿಶ್ವದ ಕುಖ್ಯಾತ ಪಾತಕಿ. ಕೊಲಂಬಿಯಾದ ಈ ಪಾತಕಿ, ವಿಶ್ವದಾದ್ಯಂತ ಮಾದಕ ವಸ್ತು ಜಾಲವನ್ನು ಹೊಂದಿದ್ದ. ಮಾದಕ ವಸ್ತು ಮಾರಾಟ ಮಾಡಿ ಲಕ್ಷಾಂತರ ಕೋಟಿ ಹಣ ಗಳಿಸಿದ್ದ. ಅದು ಮಾತ್ರವೆಂಬಂತೆ ಹಲವಾರು ಕೊಲೆ, ಸುಲಿಗೆಗಳನ್ನು ಸಹ ಮಾಡಿದ್ದ. ಕೊಲಂಬಿಯಾದ ಸರ್ಕಾರವನ್ನೇ ಖರೀದಿ ಮಾಡಲು ಸಹ ಮುಂದಾಗಿದ್ದ. ಇಂಥಹಾ ನಟೋರಿಯಸ್ ವ್ಯಕ್ತಿಗೆ ಮೈಖಲ್ ಜಾಕ್ಸನ್ ಅನ್ನು ಅಪಹರಿಸುವ ಐಡಿಯಾ ಬಂದಿತ್ತು.

ಪಾಬ್ಲೊ ಎಸ್ಕೋಬಾರ್​​ಗೆ ಐಶಾರಾಮಿ ಜೀವನದ ಗೀಳಿತ್ತು. ಕೊಲಂಬಿಯಾನಲ್ಲಿ ನೂರಾರು ಎಕರೆ ಭೂಪ್ರದೇಶದಲ್ಲಿ ಅತ್ಯಂತ ಐಶಾರಾಮಿ ಮನೆ ಹೊಂದಿದ್ದ. ತನ್ನದೇ ಖಾಸಗಿ ಮೃಗಾಲಯ ಸಹ ಹೊಂದಿದ್ದ. ಹಾಲಿವುಡ್​​ನಿಂದ ಸ್ಟಾರ್​​ಗಳನ್ನು ಕರೆಸಿ ಪಾರ್ಟಿಗಳನ್ನು ಮಾಡುತ್ತಿದ್ದ. ಪಾಬ್ಲೊ ಎಸ್ಕೋಬಾರ್ ಮಗ, ಮೈಖಲ್ ಜಾಕ್ಸನ್​​ನ ದೊಡ್ಡ ಅಭಿಮಾನಿ ಆಗಿದ್ದ. ಒಮ್ಮೆ ತಂದೆ ಪಾಬ್ಲೊ ಬಳಿ ನನ್ನ ಹುಟ್ಟುಹಬ್ಬಕ್ಕೆ ಮೈಖಲ್ ಜಾಕ್ಸನ್ ಅನ್ನು ಕರೆಸುವಂತೆ ಕೇಳಿದ್ದ.

ಇದನ್ನೂ ಓದಿ:ಹೊಸ ಸಿನಿಮಾ ಘೋಷಿಸಿದ ವಿಜಯ್ ದೇವರಕೊಂಡ; ಇದರಲ್ಲಿದ್ದಾರೆ ಹಾಲಿವುಡ್ ತಂತ್ರಜ್ಞರು

ಅದಕ್ಕೆ ಪಾಬ್ಲೊ, ಇದು ಒಳ್ಳೆಯ ಐಡಿಯಾ, ಕಾನ್ಸರ್ಟ್​ ಮಾಡಲೆಂದು ಮೈಖಲ್ ಅನ್ನು ಕರೆಯುತ್ತೇನೆ. ಆತ ಕಾನ್ಸರ್ಟ್ ಮಾಡಲು ಬಂದಾಗ ಆತನನ್ನು ಅಪಹರಣ ಮಾಡಿ, ಅಮೆರಿಕದಿಂದ ಒಂದು ಬಿಲಿಯನ್ ಡಾಲರ್ (ಈಗಿನ ಒಂದು ಲಕ್ಷ ಕೋಟಿಗೆ ಸಮ) ಹಣ ಕೇಳುತ್ತೇನೆ’ ಎಂದಿದ್ದನಂತೆ. ಈ ವಿಷಯವನ್ನು ಸ್ವತಃ ಪಾಬ್ಲೊ ಎಸ್ಕೋಬಾರ್ ಪುತ್ರನೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಆದರೆ ತಂದೆಯ ಮಾತು ನನಗೆ ಇಷ್ಟ ಆಗಲಿಲ್ಲ. ನನಗೆ ಮೈಖಲ್ ಜಾಕ್ಸನ್ ಎಂದರೆ ಅಚ್ಚು ಮೆಚ್ಚು, ನಾನು ಆತನನ್ನು ಆರಾಧಿಸುತ್ತಿದ್ದೆ, ಆತನಿಗೆ ನೋವು ಮಾಡುವ ಮಾತುಗಳನ್ನು ನನ್ನ ತಂದೆ ಆಡಿದಾಗ ನನಗೆ ಆಘಾತವಾಗಿತ್ತು. ಮತ್ತೆಂದೂ ನಾನು ತಂದೆಯ ಬಳಿ ಮೈಖಲ್ ಅನ್ನು ಕರೆಸುವ ಬಗ್ಗೆ ಮಾತನಾಡಲಿಲ್ಲ ಎಂದಿದ್ದಾರೆ.

ಇದೀಗ ಮೈಖಲ್ ಜಾಕ್ಸನ್ ಜೀವನ ಕುರಿತ ‘ಮೈಖಲ್’ ಸಿನಿಮಾ ಬಿಡುಗಡೆ ಆಗಿದೆ. ಮೈಖಲ್ ಜಾಕ್ಸನ್ ಅವರ ಸಹೋದರ ಪುತ್ರ ಜಫಾರ್ ಜಾಕ್ಸನ್ ಅವರೇ ಮೈಖಲ್ ಜಾಕ್ಸನ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಬಿಡುಗಡೆ ಒಂದು ವಾರವಾಗಿತ್ತು. ಈಗಲೇ ಸುಮಾರು 2600 ಕೋಟಿಗೂ ಹೆಚ್ಚು ಮೊತ್ತವನ್ನು ವಿಶ್ವ ಬಾಕ್ಸ್ ಆಫೀಸ್​ನಲ್ಲಿ ಗಳಿಕೆ ಮಾಡಿದೆ. ಭಾರತದಲ್ಲಿ ಒಂದು ವಾರಕ್ಕೆ 32 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us