Paris Fashion Week: ದೇಹದ ಮೇಲೆ 30 ಸಾವಿರ ಹರಳುಗಳನ್ನು ಅಂಟಿಸಿಕೊಂಡು ಬಂದ ಗಾಯಕಿ; ಎಲ್ಲರೂ ಶಾಕ್

ಪ್ಯಾರಿಸ್ ಫ್ಯಾಷನ್​ ವೀಕ್​​ನಲ್ಲಿ ಗಾಯಕಿ ಡೋಜಾ ಕ್ಯಾಟ್ ಅವರು ರೆಡ್ ಕಾರ್ಪೆಟ್​ ಮೇಲೆ ನಡೆದಿದ್ದಾರೆ. ಅವರು ಕೆಂಪು ಬಣ್ಣದ ಬಟ್ಟೆ ಧರಿಸಿದ್ದರು.

Paris Fashion Week: ದೇಹದ ಮೇಲೆ 30 ಸಾವಿರ ಹರಳುಗಳನ್ನು ಅಂಟಿಸಿಕೊಂಡು ಬಂದ ಗಾಯಕಿ; ಎಲ್ಲರೂ ಶಾಕ್
ಡೋಜಾ ಕ್ಯಾಟ್
Edited By:

Updated on: Jan 24, 2023 | 11:12 AM

ಫ್ಯಾಷನ್​ ಶೋಗಳಲ್ಲಿ ಕೆಲವರು ಹಾಕಿ ಬರುವ ಡ್ರೆಸ್ ಸಾಕಷ್ಟು ಗಮನ ಸೆಳೆಯುತ್ತದೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಅವರು ಹಾಕುವ ವಿಚಿತ್ರ ಬಟ್ಟೆ ಟ್ರೋಲ್ ಆಗುತ್ತದೆ. ಆದರೂ ಈ ರೀತಿಯ ಉಡುಗೆ ಹಾಕೋದನ್ನು ನಿಲ್ಲಿಸುವುದಿಲ್ಲ. ಈ ಬಾರಿ ಅಮೆರಿಕದ ರ್ಯಾಪರ್ ಹಾಗೂ ಗಾಯಕಿ ಡೋಜಾ ಕ್ಯಾಟ್ (Doja Cat) ಸರದಿ. 27 ವರ್ಷದ ಈ ಗಾಯಕಿ ಪ್ಯಾರಿಸ್​ ಫ್ಯಾಷನ್ ವೀಕ್​ನಲ್ಲಿ (Paris Fashion Week) ಭಾಗವಹಿಸಿದ್ದಾರೆ. ಅವರ ದೇಹದ ಮೇಲೆ 30 ಸಾವಿರ ಹರಳುಗಳು ಇದ್ದವು! ಈ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಫೋಟೋ ನೋಡಿ ಅನೇಕರು ಅಚ್ಚರಿಗೊಂಡಿದ್ದಾರೆ.

ಪ್ಯಾರಿಸ್ ಫ್ಯಾಷನ್​ ವೀಕ್​​ನಲ್ಲಿ ಗಾಯಕಿ ಡೋಜಾ ಕ್ಯಾಟ್ ಅವರು ರೆಡ್ ಕಾರ್ಪೆಟ್​ ಮೇಲೆ ನಡೆದಿದ್ದಾರೆ. ಅವರು ಕೆಂಪು ಬಣ್ಣದ ಬಟ್ಟೆ ಧರಿಸಿದ್ದರು. ತಲೆ, ಎದೆ ಭಾಗ, ಕತ್ತು ಸೇರಿದಂತೆ ಸಂಪೂರ್ಣ ದೇಹದ ಮೇಲೆ ಅವರು ಹರಳುಗಳನ್ನು ಅಂಟಿಸಿಕೊಂಡಿದ್ದರು. ಅವರ ದೇಹದ ಮೇಲೆ ಬರೋಬ್ಬರಿ 30 ಸಾವಿರ ಹರಳುಗಳು ಇದ್ದವು.

ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್​ ಪ್ಯಾಟ್ ಮೆಕ್​ಗ್ರಾಥ್ ಅವರು ಡೋಜಾ ದೇಹದ ಮೇಲೆ 30 ಸಾವಿರ ಹರಳುಗಳನ್ನು ಅಂಟಿಸಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಇದನ್ನು ಮಾಡಲು ಅವರಿಗೆ 5 ಗಂಟೆ ಸಮಯ ಹಿಡಿದಿದೆ ಎಂದು ಹೇಳಿಕೊಂಡಿದ್ದಾರೆ.

‘ಡೋಜಾ ಅವರ ಜತೆ ಕೆಲಸ ಮಾಡಿದ್ದು ಖುಷಿ ನೀಡಿದೆ. ಈ ಲುಕ್​ಗಾಗಿ ಐದು ಗಂಟೆ ವ್ಯಯಿಸಿದ್ದೇವೆ. ನಾವು ಇದಕ್ಕಾಗಿ 30 ಸಾವಿರ ಹರಳುಗಳನ್ನು ಬಳಸಿದ್ದೇವೆ. ಇದರ ಫಲಿತಾಂಶ ಖುಷಿ ನೀಡಿದೆ’ ಎಂದು ಪ್ಯಾಟ್ ಮೆಕ್​ಗ್ರಾಥ್ ಅವರು ಹೇಳಿದ್ದಾರೆ.

ಇದನ್ನೂ ಓದಿ: ಪುನೀತ್ ರಾಜ್​ಕುಮಾರ್ ಹುಟ್ಟುಹಬ್ಬದ ದಿನವೇ ಉಪೇಂದ್ರ-ಸುದೀಪ್​ ನಟನೆಯ ‘ಕಬ್ಜ’ ಸಿನಿಮಾ ರಿಲೀಸ್

ಕೆಲವರು ಇದಕ್ಕೆ ನೆಗೆಟಿವ್ ಕಮೆಂಟ್ ಮಾಡಿದ್ದಾರೆ. ‘ಡೋಜಾ ಅವರು ಅತೀ ಕೆಟ್ಟದಾಗಿ ಕಾಣುತ್ತಿದ್ದಾರೆ’ ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಗಾಯಕಿಯನ್ನು ಹೊಗಳಿದ್ದಾರೆ. ನಟಿಯ ಲುಕ್ ಅದ್ಭುತವಾಗಿ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ