‘ನಾವು ಮದುವೆ ಆಗಬಹುದು ಎಂದುಕೊಂಡಿದ್ದೆ, ಆದರೆ..’; ಪ್ರಿಯಾಂಕಾ ಪತಿ ಮಾಡಿದ ಮೋಸ ನೆನೆದ ಮಾಡೆಲ್

| Updated By: ರಾಜೇಶ್ ದುಗ್ಗುಮನೆ

Updated on: Nov 08, 2022 | 4:19 PM

ಸಂದರ್ಶನ ಒಂದರಲ್ಲಿ ಒಲಿವಿಯಾಗೆ ಈ ಬಗ್ಗೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ಅವರು ಆರಂಭದಲ್ಲಿ ಉತ್ತರಿಸೋಕೆ ಹಿಂಜರಿದರು. ‘ಆ ಬಗ್ಗೆ ನಾನು ಮಾತನಾಡಬೇಕಾ’ ಎಂದು ಪ್ರಶ್ನೆ ಮಾಡಿದ ಅವರು ನಂತರ ಒಂದು ಗ್ಯಾಪ್ ತೆಗೆದುಕೊಂಡು ಈ ಬಗ್ಗೆ ಮಾತನಾಡುತ್ತಾ ಹೋದರು. ‘

‘ನಾವು ಮದುವೆ ಆಗಬಹುದು ಎಂದುಕೊಂಡಿದ್ದೆ, ಆದರೆ..’; ಪ್ರಿಯಾಂಕಾ ಪತಿ ಮಾಡಿದ ಮೋಸ ನೆನೆದ ಮಾಡೆಲ್
ನಿಕ್-ಒಲಿವಿಯಾ, ಪ್ರಿಯಾಂಕಾ-ನಿಕ್
Follow us on

ನಿಕ್ ಜೋನಸ್ (Nick Jonas) ಹಾಗೂ ಪ್ರಿಯಾಂಕಾ ಚೋಪ್ರಾ ಅವರು ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ. ನಿಕ್​ಗಿಂತ ಪ್ರಿಯಾಂಕಾ ವಯಸ್ಸಿನಲ್ಲಿ ದೊಡ್ಡವರು. ಆದರೆ, ಇವರ ಪ್ರೀತಿಗೆ ವಯಸ್ಸಿನ ಅಂತರ ಅಡ್ಡಿ ಆಗಲಿಲ್ಲ. ಪ್ರಿಯಾಂಕಾ ಚೋಪ್ರಾ (Priyanka Chopra) ಅವರನ್ನು ಮದುವೆ ಆಗುವುದಕ್ಕೂ ಮೊದಲು ನಿಕ್ ಅವರು 2012 ಮಿಸ್ ಯುನಿವರ್ಸ್ ವಿನ್ನರ್ ಒಲಿವಿಯಾ ಕುಲ್ಪೋ ಜತೆ ರಿಲೇಶನ್​ಶಿಪ್​ನಲ್ಲಿದ್ದರು. 2013-2015ರ ಅವಧಿಯಲ್ಲಿ ಇಬ್ಬರೂ ಸುತ್ತಾಟ ನಡೆಸಿದ್ದರು. ಇವರ ಬ್ರೇಕಪ್ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿ ಆಗಿತ್ತು. ಈಗ ಬ್ರೇಕಪ್ ವಿಚಾರದ ಬಗ್ಗೆ ಅವರು ಮಾತನಾಡಿದ್ದಾರೆ.

ಸಂದರ್ಶನ ಒಂದರಲ್ಲಿ ಒಲಿವಿಯಾಗೆ ಈ ಬಗ್ಗೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ಅವರು ಆರಂಭದಲ್ಲಿ ಉತ್ತರಿಸೋಕೆ ಹಿಂಜರಿದರು. ‘ಆ ಬಗ್ಗೆ ನಾನು ಮಾತನಾಡಬೇಕಾ’ ಎಂದು ಪ್ರಶ್ನೆ ಮಾಡಿದ ಅವರು ನಂತರ ಒಂದು ಗ್ಯಾಪ್ ತೆಗೆದುಕೊಂಡು ಈ ಬಗ್ಗೆ ಮಾತನಾಡುತ್ತಾ ಹೋದರು. ‘ನಾನು ನಿಕ್ ಜತೆ ಡೇಟ್ ಮಾಡಿದ್ದು ನಿಜ. ಅದೊಂದು ಸುಂದರ ಅನುಭವ. ನಾನು ಲಾಸ್ ಏಂಜಲಿಸ್​ಗೆ ನಿಕ್​ ಜತೆ ತೆರಳಿದ್ದೆ. ನಾನು ಆಗ ಬ್ರ್ಯಾಂಡ್ ಆಗಿರಲಿಲ್ಲ. ಕೈಯಲ್ಲಿ ಹಣ ಇರಲಿಲ್ಲ. ನಾನು ಪ್ರೀತಿಯಲ್ಲಿದ್ದೆ. ಅದು ನಿಜಕ್ಕೂ ಖುಷಿಯ ವಿಚಾರ. ನನ್ನ ಜತೆ ಅವರು ಬ್ರೇಕಪ್ ಮಾಡಿಕೊಂಡಾಗ ನನಗೆ ಗುರುತೇ ಇಲ್ಲ ಅನಿಸಿತು’ ಎಂದಿದ್ದಾರೆ ಅವರು.

‘ನನ್ನ ಗುರುತೆಲ್ಲ ನಿಕ್ ಆಗಿದ್ದರು. ನಾವಿಬ್ಬರು ಮದುವೆ ಆಗಬಹುದು ಎಂದು ಭಾವಿಸಿದ್ದೆ. ಆದರೆ, ಹಾಗಾಗಿಲ್ಲ. ಬ್ರೇಕಪ್ ಆದ ನಂತರ ನಾನು ಎಲ್ಲ ವಿಚಾರಗಳನ್ನು ಯೋಚಿಸುತ್ತಾ ರಾತ್ರಿ ಕಳೆಯುತ್ತಿದ್ದೆ. ನನ್ನ ಅಪಾರ್ಟ್​ಮೆಂಟ್​ನ ಬಾಡಿಗೆ ಕಟ್ಟಲೂ ನನ್ನ ಬಳಿ ಹಣ ಇರಲಿಲ್ಲ. ದಿನಸಿ ತರಲೂ ನನ್ನ ಬಳಿ ಹಣ ಇರಲಿಲ್ಲ’ ಎಂದು ನಿಕ್ ಅರ್ಧದಾರಿಯಲ್ಲಿ ಬಿಟ್ಟು ಹೋದ ವಿಚಾರ ಮಾತನಾಡಿದ್ದಾರೆ ಅವರು.

ಇದನ್ನೂ ಓದಿ
Priyanka Chopra: ಫ್ಯಾನ್ಸ್​ ವಾವ್​ ಎನ್ನುವಂತೆ ಗ್ಲಾಮರ್​ ವೇಷ ಧರಿಸಿದ ಪ್ರಿಯಾಂಕಾ ಚೋಪ್ರಾ; ಇಲ್ಲಿವೆ ಫೋಟೋಗಳು
ಶಾಕಿಂಗ್​ ಸತ್ಯದ ಜತೆ ಮೊದಲ ಬಾರಿ ಮಗು ಫೋಟೋ ತೋರಿಸಿದ ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಸ್​
ಪ್ರಿಯಾಂಕಾ ಚೋಪ್ರಾ ಮಗಳ ಹೆಸರು ಮಾಲ್ತಿ ಮೇರಿ ಚೋಪ್ರಾ ಜೋನಸ್​; ಏನು ಇದರ ಅರ್ಥ?
ಕಪ್ಪು ಸೀರೆ ಧರಿಸಿ ‘ಪ್ರೀ ಆಸ್ಕರ್​ ಪಾರ್ಟಿ’ಯಲ್ಲಿ ಮಿಂಚಿದ ‘ದೇಸಿ ಗರ್ಲ್​’ ಪ್ರಿಯಾಂಕಾ ಚೋಪ್ರಾ

ಇದನ್ನೂ ಓದಿ: Priyanka Chopra: ‘ಪ್ರಿಯಾಂಕಾ ಚೋಪ್ರಾ ವಿಶ್ವ ಸುಂದರಿ ಆಗಿದ್ದು ಮೋಸದಿಂದ’; 22 ವರ್ಷಗಳ ಬಳಿಕ ಗಂಭೀರ ಆರೋಪ

‘ಬ್ರೇಕಪ್ ಆದ ನಂತರ ಮೊದಲ ಕಷ್ಟವಾಯಿತು. ಆ ಬಳಿಕ ನಾನು ಸ್ಟ್ರಾಂಗ್​ ಆದೆ’ ಎಂದಿದ್ದಾರೆ ಒಲಿವಿಯಾ. ಮಾಡೆಲ್ ಆಗಿ, ನಟಿಯಾಗಿ ಒಲಿವಿಯಾ ಗುರುತಿಸಿಕೊಂಡಿದ್ದಾರೆ. 2018ರಲ್ಲಿ ನಿಕ್ ಹಾಗೂ ಪ್ರಿಯಾಂಕಾ ಚೋಪ್ರಾ ಮದುವೆ ಆದರು. ಇಬ್ಬರೂ ಪರಸ್ಪರ ಪ್ರಿತಿಸುತ್ತಿದ್ದರು. ಮದುವೆ ಆದ ಬಳಿಕ ಪ್ರಿಯಾಂಕಾ ಚೋಪ್ರಾ ಅಮೆರಿಕದಲ್ಲಿ ಸೆಟಲ್ ಆಗಿದ್ದಾರೆ. ಇತ್ತೀಚೆಗೆ ಅವರು ಕಾರ್ಯಕ್ರಮದಲ್ಲಿ ಭಾಗಿ ಆಗಲು ಭಾರಕ್ಕೆ ಬಂದಿದ್ದಾರೆ.

Published On - 4:16 pm, Tue, 8 November 22