RRR ಸಿನಿಮಾ ನೋಡಿಲ್ಲವೆಂದ ನಟಿ ಪ್ರಿಯಾಂಕಾ ಚೋಪ್ರಾ, ರಾಮ್ ಚರಣ್ ಬಗ್ಗೆ ಹೇಳಿದ್ದು ಹೀಗೆ

Priyanka Chopra: ವಿಶ್ವವೇ ಮೆಚ್ಚಿರುವ ದಕ್ಷಿಣ ಭಾರತದ ಸಿನಿಮಾ ಆರ್​ಆರ್​ಆರ್ ಅನ್ನು ಪ್ರಿಯಾಂಕಾ ಚೋಪ್ರಾ ಇನ್ನೂ ನೋಡಿಲ್ಲವಂತೆ. ಯಾಕೆ ಸಿನಿಮಾ ನೋಡಿಲ್ಲ ಎಂಬುದಕ್ಕೆ ಕಾರಣ ನೀಡಿದ್ದಾರೆ.

RRR ಸಿನಿಮಾ ನೋಡಿಲ್ಲವೆಂದ ನಟಿ ಪ್ರಿಯಾಂಕಾ ಚೋಪ್ರಾ, ರಾಮ್ ಚರಣ್ ಬಗ್ಗೆ ಹೇಳಿದ್ದು ಹೀಗೆ
ಪ್ರಿಯಾಂಕಾ ಚೋಪ್ರಾ

Updated on: May 16, 2023 | 2:46 PM

ಆಸ್ಕರ್ (Oscars), ಗೋಲ್ಡನ್ ಗ್ಲೋಬ್ (Golden Globe) ಗೆಲ್ಲುವ ಮೂಲಕ ವಿಶ್ವದಾದ್ಯಂತ ಭಾರತ ಚಿತ್ರರಂಗದ ಹಿರಿಮೆ ಸಾರಿರುವ ಆರ್​ಆರ್​ಆರ್ ಸಿನಿಮಾ ನೋಡದ ಭಾರತೀಯರು ಕಡಿಮೆ. ಸಿನಿಮಾ ಸೆಲೆಬ್ರಿಟಿಗಳಂತೂ ಮುಗಿಬಿದ್ದು ಈ ಸಿನಿಮಾ ನೋಡಿದ್ದಾರೆ ಮೆಚ್ಚುಕೊಂಡಿದ್ದಾರೆ. ಇಂಥಹಾ ಸಿನಿಮಾದ ಭಾಗವಾಗಬೇಕೆಂಬ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಆದರೆ ಬಾಲಿವುಡ್​ನಿಂದ ಹಾಲಿವುಡ್​ಗೆ ಪ್ರಯಾಣ ಬೆಳೆಸಿ ಈಗ ಅಲ್ಲಿಯೇ ನೆಲೆಗೊಂಡಿರುವ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ತಾವು ಆರ್​ಆರ್​ಆರ್ (RRR) ಸಿನಿಮಾ ನೋಡಿಲ್ಲ ಎಂದಿದ್ದಾರೆ.

ವ್ಯಾನಿಟಿ ಫೇರ್​ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ನಟಿ ಪ್ರಿಯಾಂಕಾ ಚೋಪ್ರಾ, ”ನಾನಿನ್ನೂ ಆರ್​ಆರ್​ಆರ್​ ಸಿನಿಮಾ ನೋಡಿಲ್ಲ. ನನಗೆ ಇನ್ನೂ ಸಮಯವಾಗಿಲ್ಲ” ಎಂದಿದ್ದಾರೆ. ಮುಂದುವರೆದು, ನಾನು ಹೆಚ್ಚು ಸಿನಿಮಾಗಳನ್ನು ನೋಡುವುದಿಲ್ಲ ಆದರೆ ಟಿವಿ ಶೋಗಳನ್ನು ನೋಡುತ್ತೇನೆ ಇತ್ತೇಚೆಗೆ ದುಬೈ ಬ್ಲಿಂಗ್ ನೋಡಿದೆ” ಎಂದಿದ್ದಾರೆ.

ರಾಮ್ ಚರಣ್ ಅನ್ನು ಭಾರತದ ಬ್ರಾಡ್ ಪಿಟ್​ಗೆ ಸಂದರ್ಶಕ ಹೋಲಿಸಿದ ಬಗ್ಗೆ ಮಾತನಾಡಿದ ಪ್ರಿಯಾಂಕಾ, ”ಖಂಡಿತ, ರಾಮ್ ಚರಣ್​ಗೆ ಅದ್ಭುತವಾದ ಚಾರ್ಮ್​ ಇದೆ. ಬ್ರಾಡ್​ ಪಿಟ್​ ವಿನಯಂತ, ಒಳ್ಳೆಯ ವ್ಯಕ್ತಿಯೋ ಇಲ್ಲವೋ ನನಗೆ ಗೊತ್ತಿಲ್ಲ ಆದರೆ ರಾಮ್ ಚರಣ್ ಬಹಳ ವಿನೀತ ವ್ಯಕ್ತಿತ್ವವುಳ್ಳವರು” ಎಂದಿದ್ದಾರೆ ಪ್ರಿಯಾಂಕಾ ಚೋಪ್ರಾ.

ರಾಮ್ ಚರಣ್ ಅಥವಾ ಬ್ರಾಡ್ ಪಿಟ್ ಯಾರು ಹೆಚ್ಚು ಹ್ಯಾಂಡ್ಸಮ್ ಎಂಬ ಪ್ರಶ್ನೆಗೆ ಉತ್ತರಿಸಿರುವ ನಟಿ ಪ್ರಿಯಾಂಕಾ ಚೋಪ್ರಾ, ”ಸಣ್ಣವಳ್ಳಿದ್ದಾಗಿಂದಲೂ ನನಗೆ ಬ್ರಾಡ್ ಪಿಟ್​ ಮೇಲೆ ಕ್ರಶ್ ಇದೆ. ಹೀಗಿರುವಾಗ ನೀವು ನನಗೆ ಈ ಪ್ರಶ್ನೆಯನ್ನು ಕೇಳುವುದು ರಾಮ್ ಚರಣ್​ಗೆ ನ್ಯಾಯ ಎನಿಸುವುದಿಲ್ಲ” ಎಂದು ಪ್ರಿಯಾಂಕಾ ನಕ್ಕಿದ್ದಾರೆ.

ರಾಮ್ ಚರಣ್ ಹಾಗೂ ಪ್ರಿಯಾಂಕಾ ಚೋಪ್ರಾ 2013 ರಲ್ಲಿ ಹಿಂದಿ ಸಿನಿಮಾ ಜಂಜೀರ್​ನಲ್ಲಿ ನಟಿಸಿದ್ದರು. ಅದೇ ಹೆಸರಿನ ಹಳೆಯ ಸಿನಿಮಾದ ರೀಮೇಕ್ ಆಗಿತ್ತು ಈ ಸಿನಿಮಾ. ಆದರೆ ಬಾಕ್ಸ್ ಆಫೀಸ್​ನಲ್ಲಿ ಸಿನಿಮಾ ನೆಲಕಚ್ಚಿತು. ಇತ್ತೀಚೆಗೆ ಆರ್​ಆರ್​ಆರ್ ಸಿನಿಮಾ ಆಸ್ಕರ್​ಗೆ ಹೋದಾಗ ಪ್ರಿಯಾಂಕಾ ಚೋಪ್ರಾ ರಾಮ್ ಚರಣ್ ಹಾಗೂ ಕುಟುಂಬಕ್ಕೆ ತಮ್ಮ ನಿವಾಸದಲ್ಲಿಯೇ ಪಾರ್ಟಿ ನೀಡಿದ್ದರು. ರಾಮ್ ಚರಣ್, ಉಪಾಸನಾ ಹಾಗೂ ಪ್ರಿಯಾಂಕಾ ಚೋಪ್ರಾ ಒಟ್ಟಿಗಿರುವ ಚಿತ್ರಗಳು ಸಖತ್ ಸದ್ದಾಗಿದ್ದವು.

ಇದನ್ನೂ ಓದಿ:ಈ ಹಿಂದಿನ ಬಾಯ್​ಫ್ರೆಂಡ್​ಗಳು ಕೆಟ್ಟದಾಗಿ ನಡೆಸಿಕೊಂಡಿದ್ದರು: ಪ್ರಿಯಾಂಕಾ ಚೋಪ್ರಾ

ನಟಿ ಪ್ರಿಯಾಂಕಾ ಚೋಪ್ರಾ, ಭಾರತದಿಂದ ಆಸ್ಕರ್​ಗೆ ಅಧಿಕೃತವಾಗಿ ನಾಮಿನೇಟ್ ಆಗಿದ್ದ ಚೆಲ್ಲಾ ಶೋ ಸಿನಿಮಾದ ವಿಶೇಷ ಶೋ ಅನ್ನು ತಮ್ಮ ನಿವಾಸದಲ್ಲಿ ಆಯೋಸಿಸಿ ಹಲವು ಆಸ್ಕರ್ ಮತದಾರರನ್ನು ಶೋಗೆ ಆಹ್ವಾನಿಸಿದ್ದರು. ಅವರಿಗೆಲ್ಲ ಸಿನಿಮಾ ತೋರಿಸಿ ಸಿನಿಮಾಕ್ಕೆ ಬೆಂಬಲಿಸುವಂತೆ ಮನವಿ ಮಾಡಿದ್ದರು.

ಪ್ರಿಯಾಂಕಾ ಚೋಪ್ರಾ ಬಹುತೇಕ ಹಾಲಿವುಡ್​ನಲ್ಲಿಯೇ ಸೆಟಲ್ ಆಗಿದ್ದಾರೆ. ಅವರ ನಟನೆಯ ಸಿಟಾಡೆಲ್ ವೆಬ್ ಸರಣಿ ಕೆಲವು ದಿನಗಳ ಹಿಂದೆ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ. ಇದೀಗ ಲವ್ ಅಗೇನ್ ಹೆಸರಿನ ಹಾಲಿವುಡ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದರ ಬಳಿಕ ಹಿಂದಿಯ ಹೊಸ ಸಿನಿಮಾವೊಂದರಲ್ಲಿ ಆಲಿಯಾ ಭಟ್, ಕರೀನಾ ಕಪೂರ್ ಜೊತೆ ಪ್ರಿಯಾಂಕಾ ನಟಿಸಲಿದ್ದಾರೆ. ಸಿನಿಮಾವನ್ನು ಝೋಯಾ ಅಖ್ತರ್ ನಿರ್ದೇಶನ ಮಾಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ