ಈ ಹಿಂದಿನ ಬಾಯ್​ಫ್ರೆಂಡ್​ಗಳು ಕೆಟ್ಟದಾಗಿ ನಡೆಸಿಕೊಂಡಿದ್ದರು: ಪ್ರಿಯಾಂಕಾ ಚೋಪ್ರಾ

Priyanka Chopra: ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಮಾಜಿ ಬಾಯ್​ಫ್ರೆಂಡ್​ಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮನ್ನು ಕಾಲೊರೆಸುವ ಬಟ್ಟೆಯಂತೆ ಬಳಸಿಕೊಳ್ಳಲಾಗಿತ್ತು ಎಂದಿದ್ದಾರೆ ಪ್ರಿಯಾಂಕಾ.

ಈ ಹಿಂದಿನ ಬಾಯ್​ಫ್ರೆಂಡ್​ಗಳು ಕೆಟ್ಟದಾಗಿ ನಡೆಸಿಕೊಂಡಿದ್ದರು: ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ
Follow us
ಮಂಜುನಾಥ ಸಿ.
|

Updated on: May 11, 2023 | 4:22 PM

ಪ್ರಿಯಾಂಕಾ ಚೋಪ್ರಾ (Priyanka Chopra) ಸಖತ್ ಬಿಂದಾಸ್ ನಟಿ. ತುಳಿಯಲು ಯತ್ನಿಸಿದವರನ್ನೇ ಹಿಂದಿಕ್ಕಿ ಜೀವನವನ್ನು ತಮ್ಮಿಷ್ಟದಂತೆ ಬದುಕುತ್ತಿರುವವರಲ್ಲಿ ಒಬ್ಬರು ಪ್ರಿಯಾಂಕಾ. ಬಾಲಿವುಡ್​ನಿಂದ (Bollywood) ಬಹುತೇಕ ದೂರಾಗಿ ಹಾಲಿವುಡ್​ ನಲ್ಲಿ (Hollywood) ಅದ್ಭುತವಾಗಿ ಬದುಕು ಕಟ್ಟಿಕೊಂಡಿರುವ ನಟಿ ಪ್ರಿಯಾಂಕಾ, ತಮ್ಮ ಸಿನಿಮಾ ಪಯಣ, ಜೀವನ ಇನ್ನಿತರೆಗಳ ಬಗ್ಗೆ ಬಿಂದಾಸ್ ಆಗಿ ಮಾತನಾಡುತ್ತಾ ಬಂದಿದ್ದಾರೆ. ಇತ್ತೀಚೆಗಷ್ಟೆ ಪ್ರಿಯಾಂಕಾ ಚೋಪ್ರಾ ನಟಿಸಿರುವ ಸಿಟಾಡೆಲ್ ಹೆಸರಿನ ಹಾಲಿವುಡ್ ವೆಬ್ ಸರಣಿ ಬಿಡುಗಡೆ ಆಗಿದ್ದು, ಇದರ ಪ್ರಯುಕ್ತ ಸರಣಿ ಸಂದರ್ಶನಗಳನ್ನು ನಟಿ ನೀಡುತ್ತಿದ್ದಾರೆ. ಇತ್ತೀಚೆಗೆ ನೀಡಿರುವ ಸಂದರ್ಶನವೊಂದರಲ್ಲಿ ತಮ್ಮ ಖಾಸಗಿ ಬದುಕಿನ ಬಗ್ಗೆ ಮಾತನಾಡಿರುವ ಪ್ರಿಯಾಂಕಾ ಚೋಪ್ರಾ, ತಮ್ಮ ಈ ಹಿಂದಿನ ಬಾಯ್​ಫ್ರೆಂಡ್​ಗಳ ಬಗ್ಗೆಯೂ ಮಾತನಾಡಿದ್ದಾರೆ.

ಈ ಹಿಂದಿನ ತಮ್ಮ ಸಂಬಂಧಗಳ ಬಗ್ಗೆ ಮಾತನಾಡಿರುವ ನಟಿ ಪ್ರಿಯಾಂಕಾ ಚೋಪ್ರಾ, ಈ ಹಿಂದಿನ ನನ್ನ ರಿಲೇಶನ್​ಶಿಪ್​ನಲ್ಲಿ ನನ್ನನ್ನು ಕಾಲು ಒರೆಸುವ ಬಟ್ಟೆಯಂತೆ ಬಳಸಿಕೊಳ್ಳಲಾಗಿತ್ತು” ಎಂದಿದ್ದಾರೆ. ”ಈ ಹಿಂದಿನ ರಿಲೇಶನ್​ಷಿಪ್​ಗಳಲ್ಲಿ ನಾನು ಕೇರ್​ಟೇಕರ್ ರೀತಿ ವರ್ತಿಸುತ್ತಿದ್ದೆ. ನನ್ನ ಬಾಯ್​ಫ್ರೆಂಡ್​ ಬಗ್ಗೆ ಅತಿಯಾಗಿ ಕಾಳಜಿ ಮಾಡುವುದು, ಅವನು ಸದಾ ಕಂಪರ್ಟ್​ನಲ್ಲಿರುವಂತೆ ನೋಡಿಕೊಳ್ಳುವುದು. ಅವನ ಇಚ್ಛೆಗೆ ಅನುಸಾರವಾಗಿ ನಡೆದುಕೊಳ್ಳುವುದು ಮಾಡುತ್ತಿದ್ದೆ. ಇದರಿಂದಾಗಿ ನಾನು ನನ್ನತನವನ್ನೇ ಕಳೆದುಕೊಂಡಿದ್ದೆ. ಹಲವು ಅವಕಾಶಗಳನ್ನು ಕೈಬಿಟ್ಟೆ, ನನ್ನ ಮೇಲಿನ ಅಧಿಕಾರವನ್ನು ನಾನು ಅವನಿಗೆ ಕೊಟ್ಟುಬಿಟ್ಟಿದ್ದೆ” ಎಂದಿದ್ದಾರೆ ಪ್ರಿಯಾಂಕಾ ಚೋಪ್ರಾ.

”ಹೀಗೆ ಅವನಿಗಾಗಿ ನಾನು ಸಂತೋಶಗಳನ್ನು ತ್ಯಾಗ ಮಾಡುವುದು ಕರಿಯರ್ ತ್ಯಾಗ ಮಾಡುವುದು, ಸ್ವಂತ ಇಚ್ಛೆಯನ್ನು ಕೊಂದು ಅವನ ಇಚ್ಛೆಯಂತೆ ಬದುಕುವುದು ತೀರ ಸಾಮಾನ್ಯ, ನನ್ನ ಕರ್ತವ್ಯ ಎಂದೆಲ್ಲ ನನಗೆ ನಾನೇ ನಿರ್ಧರಿಸಿಬಿಟ್ಟಿದ್ದೆ. ಅದು ತಪ್ಪು ಎಂದು ನನಗೆ ಅನಿಸುತ್ತಲೇ ಇರಲಿಲ್ಲ. ನನ್ನ ಮೇಲಿನ ನಿಯಂತ್ರಣವನ್ನು ಬೇರೆ ವ್ಯಕ್ತಿಗೆ ನೀಡಿದಾಗ ಆತ ನನ್ನನ್ನು ಅವನಿಷ್ಟದಂತೆ ಬಳಸಿಕೊಳ್ಳಲು ಪ್ರಾರಂಭಿಸಿದ. ನನ್ನನ್ನು ಡೋರ್​ಮ್ಯಾಟ್ (ಬಾಗಿಲ ಮುಂದೆ ಹಾಸಲಾಗಿರುವ ಕಾಲೊರೆಸುವ ಬಟ್ಟೆ)ಯಂತೆ ಬಳಸಿಕೊಳ್ಳಲಾಯಿತು. ಮಹಿಳೆಯರಿಗೆ ಇದನ್ನೇ ಹೇಳಿಕೊಟ್ಟಿರುವುದಲ್ಲವೆ, ಕುಟುಂಬಕ್ಕಾಗಿ ತ್ಯಾಗ ಮಾಡಬೇಕು, ಪತಿ ಹೊರಗಿನಿಂದ ಬಂದಾಗ ಅವನನ್ನು ಸಂತೈಸಬೇಕು, ಅವನು ಕಂಫರ್ಟ್​ ಆಗಿರುವಂತೆ ನೋಡಿಕೊಳ್ಳಬೇಕು ಎಂದೆಲ್ಲ” ಎಂದಿದ್ದಾರೆ.

ಮುಂದುವರೆದು, ”ಒಂದು ಸಮಯದಲ್ಲಿ ನಾನು ಒಂದು ರಿಲೇಶನ್​ಷಿಪ್​ನಿಂದ ಮತ್ತೊಂದು ರಿಲೇಶನ್​ಷಿಪ್​ ಅದರ ಬಳಿಕ ಮತ್ತೊಂದು ಹೀಗೆ ಹಾರುತ್ತಲೇ ಇದ್ದೆ. ನನಗಾಗಿ ನಾನು ಸಮಯವನ್ನೂ ಕೊಟ್ಟುಕೊಳ್ಳುತ್ತಿರಲಿಲ್ಲ. ನಾನು ಜೊತೆಯಾಗಿ ನಟಿಸಿದ ನಟರನ್ನು ಪ್ರೀತಿಸಲು ಶುರು ಮಾಡಿದ್ದೆ. ಒಂದು ಒಳ್ಳೆಯ ಪ್ರೇಮ ಸಂಬಂಧ ಹೇಗಿರಬೇಕೆಂದು ಅರ್ಥ ಮಾಡಿಸುವ ಪ್ರಯತ್ನದಲ್ಲಿಯೇ ಸಂಬಂಧದಲ್ಲಿ ಬಿರುಕು ಉಂಟಾಗಿಬಿಡುತ್ತಿತ್ತು. ಸಂಬಂಧದಲ್ಲಿದ್ದಾಗ ನೀವು ಯಾರು ಎಂಬುದನ್ನು ನೀವು ಮರೆತುಬಿಡುತ್ತೀರ, ನಿಮ್ಮ ಜೀವನ ಏನು? ನಿಮ್ಮ ಗುರಿ ಏನು ಎಂಬುದನ್ನು ಮರೆತುಬಿಡುತ್ತೀರ. ನನಗೂ ಸಹ ಕಳೆದು ಹೋದ ಅನುಭವ ಆಗಲು ಪ್ರಾರಂಭವಾಗಿತ್ತು. ನಿಮ್ಮನ್ನು ನೀವು ಮರೆತಿರೆಂದರೆ ಅಲ್ಲಿಗೆ ನೀವು ಕಳೆದು ಹೋದಿರಿ ಎಂದರ್ಥ ಅಂಥಹಾ ಸಂಬಂಧದಲ್ಲಿ ಮುಂದುವರೆಯುವುದು ಅಪರಾಧ” ಎಂದಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್