AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Priyanka Chopra: ಶಸ್ತ್ರಚಿಕಿತ್ಸೆಯಿಂದ ಮುಖದ ಅಂದ ಹಾಳಾಗಿ, ಖಿನ್ನತೆಗೆ ಒಳಗಾಗಿದ್ದರು ಪ್ರಿಯಾಂಕಾ ಚೋಪ್ರಾ

Priyanka Chopra: ವೃತ್ತಿ ಬದುಕಿನ ಆರಂಭದ ಸಂದರ್ಭದಲ್ಲಿ ಮಾಡಿಸಿಕೊಂಡಿದ್ದ ಶಸ್ತ್ರಚಿಕಿತ್ಸೆಯಿಂದ ಅಂದ ಹಾಳಾಗಿ ನಟಿ ಪ್ರಿಯಾಂಕಾ ಚೋಪ್ರಾ ಖಿನ್ನತೆಗೆ ಒಳಗಾಗಿದ್ದರಂತೆ.

Priyanka Chopra: ಶಸ್ತ್ರಚಿಕಿತ್ಸೆಯಿಂದ ಮುಖದ ಅಂದ ಹಾಳಾಗಿ, ಖಿನ್ನತೆಗೆ ಒಳಗಾಗಿದ್ದರು ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ
Follow us
ಮಂಜುನಾಥ ಸಿ.
|

Updated on: May 04, 2023 | 4:37 PM

ಪ್ರಿಯಾಂಕಾ ಚೋಪ್ರಾ (Priyanka Chopra) ಈಗ ಹಾಲಿವುಡ್ (Hollywood) ತಾರೆ. ಸಿನಿಮಾ, ಹಾಡುಗಾರಿಕೆ, ಫ್ಯಾಷನ್, ಬ್ಯುಸಿನೆಸ್, ಟೆಡ್ ಟಾಕ್, ಸಂದರ್ಶನಗಳು ಯಾವುದೇ ಆಗಲಿ ಬಹಳ ಕಾನ್ಫಿಡೆಂಟ್​ನಿಂದ ಎದುರಿಸುತ್ತಾರೆ, ಪ್ರತಿಯೊಂದರಲ್ಲಿಯೂ ತಮ್ಮ ಗಟ್ಟಿತನ ಪ್ರದರ್ಶಿಸುತ್ತಾರೆ ಈ ನಟಿ. ಇಂಥಹಾ ಗಟ್ಟಿವ್ಯಕ್ತಿತ್ವದ ಪ್ರಿಯಾಂಕಾ ಸಹ ಒಬ್ಬ ತೀವ್ರವಾದ ಖಿನ್ನತೆಗೆ ಗುರಿಯಾಗಿದ್ದರಂತೆ. ವೃತ್ತಿ ಬದುಕಿನ ಆರಂಭದಲ್ಲಿ ಮಾಡಿಸಿಕೊಂಡಿದ್ದ ಶಸ್ತ್ರಚಿಕಿತ್ಸೆ ಸರಿಯಾಗಿ ಆಗದೆ ಮುಖದ ಅಂದಕೆಟ್ಟಿತ್ತು, ಇದರಿಂದಾಗಿ ತೀವ್ರ ಖಿನ್ನತೆಗೆ ಪ್ರಿಯಾಂಕಾ ಗುರಿಯಾಗಿದ್ದರಂತೆ.

ಇತ್ತೀಚೆಗೆ ರೇಡಿಯೋ ಶೋ ಒಂದರಲ್ಲಿ ಭಾಗವಹಿಸಿದ್ದ ನಟಿ ಪ್ರಿಯಾಂಕಾ ಚೋಪ್ರಾ, ”ನನ್ನ ನಟನಾ ವೃತ್ತಿಯ ಆರಂಭದ ಸಮಯದಲ್ಲಿ ಮೂಗಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. ಮೂಗಿನ ಒಳಗಿನ ದುರ್ಮಾಂಸವನ್ನು ತೆಗೆಸಲು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದೆ. ಆದರೆ ವೈದ್ಯರು ಅಜಾಗರೂಕತೆಯಿಂದ ಮೂಗಿನ ಹೊಳ್ಳೆಗಳ ನಡುವಿನ ಭಾಗವನ್ನು ಕತ್ತರಿಸಿಬಿಟ್ಟಿದ್ದರು, ಇದರಿಂದಾಗಿ ನನ್ನ ಮೂಗು ಆಕಾರ ಕಳೆದುಕೊಂಡು ನನ್ನ ಮುಖ ಕೆಟ್ಟದಾಗಿ ಕಾಣುತ್ತಿತ್ತು. ಇದು ನನ್ನನ್ನು ಬಹಳ ಆತಂಕಕ್ಕೆ ದೂಡಿತ್ತು. ನಟನಾ ವೃತ್ತಿ ಪ್ರಾರಂಭವಾಗುವುದಕ್ಕೆ ಮುನ್ನವೇ ಅಂತ್ಯವಾಯ್ತು ಎಂದು ನಿಶ್ಚಯಿಸಿದೆ. ಮನೆಯಿಂದ ಹೊರಗೆ ಹೋಗಲು ಸಹ ಹೆದರುತ್ತಿದ್ದೆ, ತೀವ್ರ ಖಿನ್ನತೆಗೆ ನಾನು ಒಳಗಾಗಿದ್ದೆ” ಎಂದಿದ್ದಾರೆ.

ಮೂಗಿನ ಬ್ಯಾಂಡೇಜ್ ಅನ್ನು ಬಿಚ್ಚಿದಾಗ ನನ್ನ ಮುಖವನ್ನೇ ನನಗೆ ಗುರುತಿಸಲು ಆಗಿರಲಿಲ್ಲ. ನಾನು ಹಾಗೂ ನನ್ನ ತಾಯಿ ತೀವ್ರ ಶಾಕ್​ಗೆ ಒಳಗಾಗಿದ್ದೆವು. ಆ ಘಟನೆಯಿಂದ ನಾನು ಸುಮಾರು ಮೂರು ಸಿನಿಮಾಗಳನ್ನು ಕಳೆದುಕೊಂಡೆ. ಆ ಸಮಯದಲ್ಲಿ ನನ್ನ ಬೆಂಬಲಕ್ಕೆ ನಿಂತಿದ್ದು ನಿರ್ದೇಶಕ ಬಾಲಿವುಡ್ ಅನಿಲ್ ಶರ್ಮಾ, ಅವರ ಸಿನಿಮಾದಲ್ಲಿ ನನಗೆ ಅವಕಾಶ ಕೊಟ್ಟರು. ಅವರ ಸಿನಿಮಾದಲ್ಲಿ ನಾಯಕಿಯಾಗಿ ನಾನು ನಟಿಸಬೇಕಿತ್ತು ಕೊನೆಗೆ ಪೋಷಕ ಪಾತ್ರವನ್ನು ನನಗೆ ನೀಡಿ ಬೆಂಬಲ ನೀಡಿದರು” ಎಂದು ಪ್ರಿಯಾಂಕಾ ಚೋಪ್ರಾ ನೆನಪು ಮಾಡಿಕೊಂಡಿದ್ದಾರೆ.

ನಾನು ಖಿನ್ನತೆಗೆ ಒಳಗಾಗಿದ್ದ ಸಮಯದಲ್ಲಿ ನನ್ನ ತಂದೆ ನನ್ನನ್ನು ಪಾರು ಮಾಡಿದರು. ಅವರು, ಧೈರ್ಯ ತುಂಬಿ ಸರಿಯಾಗಿ ಮತ್ತೊಮ್ಮೆ ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಹೇಳಿದರು. ಸ್ವತಃ ವೈದ್ಯರಾಗಿರುವ ಅವರ ಮಾತಿನಿಂದಲೂ ನನಗೆ ಧೈರ್ಯ ಬರಲಿಲ್ಲ. ಆಗ ನಾನೇ ಶಸ್ತ್ರಚಿಕಿತ್ಸೆ ಕೋಣೆಯ ಒಳಗೆ ಇರುತ್ತೇನೆ ಎಂದು ಧೈರ್ಯ ತುಂಬಿದ ಬಳಿಕವಷ್ಟೆ ನಾನು ಶಸ್ತ್ರಚಿಕಿತ್ಸೆಗೆ ಒಳಗಾದೆ, ಕೋಣೆಯ ಒಳಗೂ ನಾನು ಅಪ್ಪನ ಕೈ ಹಿಡಿದುಕೊಂಡೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡೆ ಎಂದು ನೆನಪು ಮಾಡಿಕೊಂಡಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ.

ಪ್ರಿಯಾಂಕಾ ಚೋಪ್ರಾ ಈಗ ಹಾಲಿವುಡ್​ನ ಸ್ಟಾರ್ ನಟಿಯರಲ್ಲಿ ಒಬ್ಬರು. ಹಾಲಿವುಡ್​ನ ಹಲವು ಸಿನಿಮಾ, ವೆಬ್ ಸರಣಿಗಳಲ್ಲಿ ಪ್ರಿಯಾಂಕಾ ಬ್ಯುಸಿಯಾಗಿದ್ದಾರೆ. ಪ್ರಿಯಾಂಕಾ ಚೋಪ್ರಾ ನಟಿಸಿರುವ ಸಿಟಾಡೆಲ್ ಹೆಸರಿನ ಹಾಲಿವುಡ್ ವೆಬ್ ಸರಣಿ ಇತ್ತೀಚೆಗಷ್ಟೆ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ. ಇದರ ಬಳಿಕ ಲವ್ ಅಗೇನ್ ಹೆಸರಿನ ಇಂಗ್ಲೀಷ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇವುಗಳ ಬಳಿಕ ಬಾಲಿವುಡ್​ನ ಸಿನಿಮಾ ಒಂದರಲ್ಲಿ ಪ್ರಿಯಾಂಕಾ ನಟಿಸಲಿದ್ದು ಆ ಸಿನಿಮಾದಲ್ಲಿ ಆಲಿಯಾ ಭಟ್, ಕರೀನಾ ಕಪೂರ್ ಸಹ ಇರಲಿದ್ದಾರೆ. ಸಿನಿಮಾವನ್ನು ಜೋಯಾ ಅಖ್ತರ್ ನಿರ್ದೇಶನ ಮಾಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ