AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮಂತಾ ಬಳಿಕ ಹಾಲಿವುಡ್​ ಸಿನಿಮಾದಿಂದ ಹೊರಬಂದ ಶ್ರುತಿ ಹಾಸನ್​

‘ಸಲಾರ್​’ ನಟಿ ಶ್ರುತಿ ಹಾಸನ್​ ಅವರು ‘ಚೆನ್ನೈ ಸ್ಟೋರಿ’ ಸಿನಿಮಾದ ಚಿತ್ರೀಕರಣ ಆರಂಭಿಸಿದ್ದರು. ಆದರೆ ವರದಿಗಳ ಪ್ರಕಾರ, ಈ ಚಿತ್ರದಿಂದ ಅವರು ಹೊರಬಂದಿದ್ದಾರೆ. ಅವರ ಈ ನಿರ್ಧಾರಕ್ಕೆ ಕಾರಣ ಏನೆಂಬುದು ಬಹಿರಂಗವಾಗಿಲ್ಲ. ಈ ಮೊದಲು ಸಮಂತಾ ರುತ್​ ಪ್ರಭು ಅವರು ಸಹ ಈ ಹಾಲಿವುಡ್​ ಪ್ರಾಜೆಕ್ಟ್​ನಿಂದ ಹೊರಬಂದಿದ್ದು ಸುದ್ದಿ ಆಗಿತ್ತು.

ಸಮಂತಾ ಬಳಿಕ ಹಾಲಿವುಡ್​ ಸಿನಿಮಾದಿಂದ ಹೊರಬಂದ ಶ್ರುತಿ ಹಾಸನ್​
ಶ್ರುತಿ ಹಾಸನ್​
ಮದನ್​ ಕುಮಾರ್​
|

Updated on: Apr 09, 2024 | 8:15 PM

Share

ಭಾರತದ ಅನೇಕ ಕಲಾವಿದರು ಹಾಲಿವುಡ್ (Hollywood)​ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಐಶ್ವರ್ಯಾ ರೈ ಬಚ್ಚನ್​, ಇರ್ಫಾನ್​ ಖಾನ್​ ಸೇರಿದಂತೆ ಹಲವರು ಇಂಗ್ಲಿಷ್​ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಈಗ ನಟಿ ಶ್ರುತಿ ಹಾಸನ್​ (Shruti Haasan) ಕೂಡ ಹಾಲಿವುಡ್​ನ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಸುದ್ದಿ ಹೊರಬಿದ್ದಿತ್ತು. ಆದರೆ ಆ ಚಿತ್ರದಿಂದ ಶ್ರುತಿ ಹಾಸನ್​ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೂ ಮುನ್ನ, ಸಮಂತಾ ರುತ್​ ಪ್ರಭು (Samantha Ruth Prabhu) ಕೂಡ ಇದೇ ಸಿನಿಮಾದಿಂದ ಹೊರಬಂದಿದ್ದರು. ಆ ಬಗ್ಗೆ ಇಲ್ಲಿದೆ ಮಾಹಿತಿ..

ಹಾಲಿವುಡ್​ ನಿರ್ದೇಶಕ ಫಿಲಿಪ್​ ಜಾನ್​ ಅವರು ‘ಚೆನ್ನೈ ಸ್ಟೋರಿ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ‘ಅರೇಂಜ್​ಮೆಂಟ್ಸ್​ ಆಫ್​ ಲವ್​’ ಕಾದಂಬರಿಯನ್ನು ಆಧರಿಸಿ ಈ ಸಿನಿಮಾ ಮೂಡಿಬರುತ್ತಿದೆ. ಹಾಲಿವುಡ್​ನ ಈ ಸಿನಿಮಾಗೆ ನಾಯಕಿಯಾಗಿ ಮೊದಲು ಆಯ್ಕೆ ಆಗಿದ್ದು ಸಮಂತಾ ರುತ್​ ಪ್ರಭು. ನಿರ್ದೇಶಕರ ಜೊತೆ ಅವರ ಫೋಟೋ ಕೂಡ ವೈರಲ್​ ಆಗಿತ್ತು. ಆದರೆ ಆ ಪ್ರಾಜೆಕ್ಟ್​ನಿಂದ ಸಮಂತಾ ಆಚೆ ಬಂದರು. ನಂತರ ಶ್ರುತಿ ಹಾಸನ್​ ಆಯ್ಕೆ ಆಗಿದ್ದರು.

ಇದನ್ನೂ ಓದಿ: ‘ಸಲಾರ್​’ ನಟಿ ಶ್ರುತಿ ಹಾಸನ್​ ಗುಟ್ಟಾಗಿ ಮದುವೆ ಆಗಿದ್ದಾರಾ? ಸ್ಪಷ್ಟನೆ ನೀಡಿದ ಕಮಲ್​ ಪುತ್ರಿ

ಶ್ರುತಿ ಹಾಸನ್​ ಅವರು ‘ಚೆನ್ನೈ ಸ್ಟೋರಿ’ ಸಿನಿಮಾಗೆ ಚಿತ್ರೀಕರಣ ಕೂಡ ಪ್ರಾರಂಭಿಸಿದ್ದರು. ವರದಿಗಳ ಪ್ರಕಾರ, ಈ ಸಿನಿಮಾದಿಂದ ಶ್ರುತಿ ಹಾಸನ್​ ಹೊರಬಂದಿದ್ದಾರೆ. ಆದರೆ ಅವರ ಈ ನಿರ್ಧಾರಕ್ಕೆ ಕಾರಣ ಏನು ಎಂಬುದು ಬಹಿರಂಗ ಆಗಿಲ್ಲ. ಇಬ್ಬರು ನಟಿಯರು ಕೂಡ ಈ ರೀತಿ ಅರ್ಧಕ್ಕೆ ಬಿಟ್ಟು ಬಂದಿರುವುದು ಯಾಕೆ ಎಂಬ ಪ್ರಶ್ನೆ ಸಿನಿಪ್ರಿಯರ ಮನದಲ್ಲಿ ಮೂಡಿದೆ.

ಇದನ್ನೂ ಓದಿ: ಮಗಳ ಸಿನಿಮಾಗೆ ಅಪ್ಪನದ್ದೇ ಬಂಡವಾಳ; ಶ್ರುತಿ ಹಾಸನ್​ಗೆ ಸಿಕ್ತು ದೊಡ್ಡ ಆಫರ್

2023ರಲ್ಲಿ ಶ್ರುತಿ ಹಾಸನ್​ ಅವರಿಗೆ ‘ಸಲಾರ್​’ ಸಿನಿಮಾದಿಂದ ದೊಡ್ಡ ಗೆಲುವು ಸಿಕ್ಕಿತು. ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ ಬಾಲಿವುಡ್​ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಕಳೆದ ವರ್ಷ ಇಂಗ್ಲಿಷ್​ನ ‘ದಿ ಐ’ ಸಿನಿಮಾದಲ್ಲಿ ಅವರು ನಟಿಸಿದ್ದರು. ಆ ಬಳಿಕ ಅವರು ಒಪ್ಪಿಕೊಂಡ ಎರಡನೇ ಹಾಲಿವುಡ್​ ಸಿನಿಮಾ ‘ಚೆನ್ನೈ ಸ್ಟೋರಿ’. ಆದರೆ ಆ ಪ್ರಾಜೆಕ್ಟ್​ಗೆ ಅವರು ಗುಡ್​ ಬೈ ಹೇಳಿದ್ದಾರೆ ಎಂದು ಸುದ್ದಿ ಹಬ್ಬಿದೆ. ಈ ಬಗ್ಗೆ ಶ್ರುತಿ ಹಾಸನ್​ ಅವರೇ ಪ್ರತಿಕ್ರಿಯೆ ನೀಡಬೇಕಿದೆ. ಕಮಲ್​ ಹಾಸನ್​ ಪುತ್ರಿ ಎಂಬ ಕಾರಣಕ್ಕೆ ಶ್ರುತಿ ಹಾಸನ್​ ಅವರಿಗೆ ಸಾಕಷ್ಟು ಜನಪ್ರಿಯತೆ ಇದೆ. ಬ್ಯಾಕ್​ ಟು ಬ್ಯಾಕ್​ ಅವಕಾಶಗಳು ಅವರಿಗೆ ಸಿಗುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್