ಭಾರತದ ಬಾಕ್ಸ್​ ಆಫೀಸ್​ನಲ್ಲಿ ಮೊದಲ ವಾರ 100 ಕೋಟಿ ರೂಪಾಯಿ ಗಳಿಸಿದ ‘ಸ್ಪೈಡರ್​ ಮ್ಯಾನ್​’  

| Updated By: ರಾಜೇಶ್ ದುಗ್ಗುಮನೆ

Updated on: Dec 20, 2021 | 9:53 PM

‘ಸ್ಪೈಡರ್​ ಮ್ಯಾನ್: ನೋ ವೇ ಹೋಮ್​’ ಚಿತ್ರ ಈ ಸರಣಿಯ ಫೇವರಿಟ್​ ಸಿನಿಮಾ ಎಂದು ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ. ಹೀಗಾಗಿ, ಈ ಸಿನಿಮಾ ನಾಲ್ಕು ದಿನದಲ್ಲಿ 108 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ವರದಿ ಆಗಿದೆ.

ಭಾರತದ ಬಾಕ್ಸ್​ ಆಫೀಸ್​ನಲ್ಲಿ ಮೊದಲ ವಾರ 100 ಕೋಟಿ ರೂಪಾಯಿ ಗಳಿಸಿದ ‘ಸ್ಪೈಡರ್​ ಮ್ಯಾನ್​’  
ಸ್ಪೈಡರ್​ ಮ್ಯಾನ್​
Follow us on

ಟಾಮ್ ಹಾಲೆಂಡ್ (Tom Holland)​ ನಟನೆಯ ‘ಸ್ಪೈಡರ್​ ಮ್ಯಾನ್​’ (Spider Man) ಸರಣಿಯ ಹೊಸ ಸಿನಿಮಾ ‘ಸ್ಪೈಡರ್​ ಮ್ಯಾನ್: ನೋ ವೇ ಹೋಮ್​’ (Spider-Man: No Way Home) ಡಿಸೆಂಬರ್​ 16ರಂದು ಬಿಡುಗಡೆಯಾಗಿ ಬಾಕ್ಸ್​ಆಫೀಸ್​ ಉಡೀಸ್​ ಮಾಡಿದೆ. ಸಿನಿಮಾ ಭಾರತದಲ್ಲಿ ಸಾಕಷ್ಟು ಮೆಚ್ಚುಗೆ ಪಡೆದುಕೊಂಡ ಕಾರಣ ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಕಲೆಕ್ಷನ್​ ಮಾಡಿದೆ. ಈ ಸಿನಿಮಾದ ನಾಲ್ಕು ದಿನಗಳ ಗಳಿಕೆ ನೂರು ಕೋಟಿ ದಾಟಿದೆ. ಹಾಗಾದರೆ ಹಾಲಿವುಡ್​ನ ಈ ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದೆಷ್ಟು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

‘ಸ್ಪೈಡರ್​ ಮ್ಯಾನ್: ನೋ ವೇ ಹೋಮ್​’ ಚಿತ್ರ ಈ ಸರಣಿಯ ಫೇವರಿಟ್​ ಸಿನಿಮಾ ಎಂದು ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ. ಹೀಗಾಗಿ, ಈ ಸಿನಿಮಾ ನಾಲ್ಕು ದಿನದಲ್ಲಿ 108 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ವರದಿ ಆಗಿದೆ. ಈ ಮೂಲಕ ಮೊದಲ ವಾರದ ಕಲೆಕ್ಷನ್​ ವಿಚಾರದಲ್ಲಿ ಬಾಲಿವುಡ್​ನ ಸೂರ್ಯವಂಶಿ ಸಿನಿಮಾವನ್ನು ‘ಸ್ಪೈಡರ್​ ಮ್ಯಾನ್: ನೋ ವೇ ಹೋಮ್​’ ಹಿಂದಿಕ್ಕಿದೆ.

‘ಸ್ಪೈಡರ್​ ಮ್ಯಾನ್: ನೋ ವೇ ಹೋಮ್​’ ಸಿನಿಮಾ 2ಡಿ, 3ಡಿ, ಐಮ್ಯಾಕ್ಸ್​ 3ಡಿ ಸೇರಿ ಸಾಕಷ್ಟು ವಿಧದಲ್ಲಿ ಪ್ರೇಕ್ಷಕರಿಗೆ ಲಭ್ಯವಿದೆ. ಈ ಮೂಲಕ ನಾನಾ ರೀತಿಯ ಅನುಭವ ಹೊಂದುವ ಅವಕಾಶ ಇದೆ. ಭಾರತೀಯ ಪ್ರೇಕ್ಷಕರು ಸಿನಿಮಾವನ್ನು ಸಾಕಷ್ಟು ಇಷ್ಟಪಟ್ಟಿದ್ದಾರೆ. ಶನಿವಾರ, ಭಾನುವಾರ ಸಿನಿಮಾದ ಕಲೆಕ್ಷನ್​ ಹೆಚ್ಚಿದೆ. ವಿಶ್ವಾದ್ಯಂತ ಈ ಸಿನಿಮಾ ಡಿಸೆಂಬರ್​ 17 ರಂದು ರಿಲೀಸ್​ ಆಗಿದೆ. ಕ್ರಿಸ್​ಮಸ್​ಗೆ ಒಳ್ಳೆಯ ಗಿಫ್ಟ್​ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಟಾಮ್ ಹಾಲೆಂಡ್ ನಟಿಸಿರುವ ಈ ಚಿತ್ರದ ಟ್ರೇಲರ್ ಹವಾ ಸೃಷ್ಟಿ ಮಾಡಿತ್ತು. ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಡಿ.17ರಂದು ‘ಸ್ಪೈಡರ್ ಮ್ಯಾನ್: ನೋ ವೇ ಹೋಮ್’ ಚಿತ್ರ ಬಿಡುಗಡೆ ಆಗುತ್ತಿದೆ. ವಿಶೇಷ ಎಂದರೆ ಭಾರತದಲ್ಲಿ ಒಂದು ದಿನ ಮೊದಲು ಅಂದರೆ ಡಿಸೆಂಬರ್ 16ರಂದು ರಿಲೀಸ್ ಆಗಿದ್ದು, ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ‘ನಿಮ್ಮ ಬುದ್ಧಿ ಶುದ್ಧವಿಲ್ಲ’ ಎನಿಸಿಕೊಂಡ್ರೂ ಕೇಕೆ ಹಾಕಿ ಕುಣಿದ ಗಂಡಸರನ್ನು ನೋಡಿ ಸಮಂತಾ ಹೇಳಿದ್ದೇನು? 

‘ಈಗ’ ನಟಿಗೆ ಸ್ತನ ಕ್ಯಾನ್ಸರ್​; ಹೊಸ ಫೋಟೋ ನೋಡಿ ಶಾಕ್​ ಆದ ಅಭಿಮಾನಿಗಳು

 

Published On - 7:30 pm, Mon, 20 December 21