
ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ್ ವಿವಾಹ ಆಗಿದ್ದಾರೆ. ಈಗ ಅವರು ನವ ದಂಪತಿ. ಇತ್ತೀಚೆಗೆ ಹೈದರಾಬಾದ್ನಲ್ಲಿ ದೊಡ್ಡ ಮಟ್ಟದಲ್ಲಿ ಮದುವೆ ನಡೆದಿದೆ. ಈ ದಂಪತಿಗೆ ಎಲ್ಲರೂ ಶುಭ ಕೋರುತ್ತಿದ್ದಾರೆ. ಅನ್ನಪೂರ್ಣ ಸ್ಟುಡಿಯೋದಲ್ಲಿ ಗುರು-ಹಿರಿಯರ ಸಮ್ಮುಖದಲ್ಲಿ ಈ ಮದುವೆ ನಡೆದಿದೆ. ಇವರ ಲವ್ಸ್ಟೋರಿ ಬಗ್ಗೆ ಅನೇಕರಿಗೆ ತಿಳಿದಿರಲಿಲ್ಲ. ಈ ವಿಚಾರವನ್ನು ನಾಗ ಚೈತನ್ಯ ರಿವೀಲ್ ಮಾಡಿದ್ದಾರೆ. ನಾಗ ಚೈತನ್ಯ ಅವರು ಶೋಭಿತಾನ ಮುಂಬೈನಲ್ಲಿ ಡೇಟ್ಗೆ ಕರೆದುಕೊಂಡು ಹೋಗಿದ್ದರು.
ಶೋಭಿತಾ ಹಾಗೂ ನಾಗ ಚೈತನ್ಯ ಒಂದೇ ಸಿನಿಮಾದಲ್ಲಿ ನಟಿಸಿದವರಲ್ಲ. ಆದಾಗ್ಯೂ ಇಬ್ಬರಿಗೂ ಪರಿಚಯ ಬೆಳೆದಿದ್ದು ಹೇಗೆ ಎಂಬ ಅನುಮಾನ ಅನೇಕರಲ್ಲಿ ಮೂಡಿತ್ತು. ಈಗ ಈ ವಿಚಾರಕ್ಕೆ ಸ್ಪಷ್ಟನೆ ಸಿಕ್ಕಿದೆ. ಇವರು ಮೊದಲ ಬಾರಿಗೆ ಭೇಟಿ ಆಗಿದ್ದು ಎಲ್ಲಿ ಎಂಬ ವಿಚಾರಕ್ಕೆ ಉತ್ತರ ಸಿಕ್ಕಿದೆ.
2022ರ ಅಮೇಜಾನ್ ಪ್ರೈಮ್ ವಿಡಿಯೋದ ಈವೆಂಟ್ನಲ್ಲಿ ಇವರ ಭೇಟಿ ಆಗಿತ್ತು. ‘ನಾನು ಕೆಂಪು ಬಣ್ಣದ ಡ್ರೆಸ್ನಲ್ಲಿ ಇದೆ. ಅವರು ನೀಲಿ ಬಣ್ಣದ ಡ್ರೆಸ್ ಹಾಕಿದ್ದರು. ಆ ಬಳಿಕ ಆಗಿದ್ದು ಇತಿಹಾಸ’ ಎಂದಿದ್ದಾರೆ ಶೋಭಿತಾ. ಈವೆಂಟ್ನಲ್ಲಿ ಇವರ ಮೊದಲ ಭೇಟಿ ನಡೆದಿದೆ. ಆ ಸಂದರ್ಭದಲ್ಲಿ ಶೋಭಿತಾ ‘ಮೇಡ್ ಇನ್ ಹೆವನ್ ಸೀಸನ್ 2’ ಅನೌನ್ಸ್ ಮಾಡುತ್ತಿದ್ದರು. ನಾಗ ಚೈತನ್ಯ ‘ಧೂತ’ ರಿಲೀಸ್ಗಾಗಿ ಕಾದಿದ್ದರು. ಈ ಕಾರ್ಯಕ್ರಮ ಇವರ ಬಾಳನ್ನು ಬದಲಿಸಿತ್ತು.
ಇದನ್ನೂ ಓದಿ:ನಾಗ ಚೈತನ್ಯ ಮಾಸ್ ಸಿನಿಮಾಕ್ಕೆ ಶ್ರೀಲೀಲಾ ನಾಯಕಿ
ಇನ್ಸ್ಟಾಗ್ರಾಮ್ನಲ್ಲಿ ಇಬ್ಬರೂ ಪರಸ್ಪರ ಚ್ಯಾಟ್ ಮಾಡಿದ್ದರು. ಆ ಬಳಿಕ ಮುಂಬೈಗೆ ವಿಮಾನದಲ್ಲಿ ಬಂದ ನಾಗ ಚೈತನ್ಯ ಅವರು ಶೋಭಿತಾನ ಡೇಟ್ಗೆ ಕರೆದುಕೊಂಡು ಹೋಗಿದ್ದರು. ‘ನನಗೆ ಓಲ್ಡ್ ಸ್ಕೂಲ್ ಫೀಲ್ ಬರುತ್ತಿತ್ತು’ ಎಂದು ಶೋಭಿತಾ ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ನಾಗ ಚೈತನ್ಯ, ‘ನನಗೆ ಮೆಸೇಜ್ ಮಾಡೋದು ಇಷ್ಟ ಆಗಲ್ಲ.. ನಾನು ಸೋಶಿಯಲ್ ಮೀಡಿಯಾದಲ್ಲಿ ಮೆಸೇಜ್ ಮಾಡೋದಿಲ್ಲ’ ಎಂದಿದ್ದಾರೆ ಅವರು.
ಕರ್ನಾಟಕದ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ನಾಗ ಚೈತನ್ಯ ಅವರು ಶೋಭಿತಾ ಹಾಗೂ ಗೆಳೆಯರ ಜೊತೆ ಬಂದಿದ್ದರು. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇಬ್ಬರೂ ಒಟ್ಟಾಗಿ ಇರುವ ಅನುಮಾನ ಬಂದಿದ್ದು ಆಗಲೇ ಆಗಿತ್ತು. ಸದ್ಯ ಇವರು ಹಾಯಾಗಿ ಜೀವನ ನಡೆಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ