‘ನಾನು ಹೈದರಾಬಾದ್ ಫಾರ್ಮ್​​ಹೌಸ್​ನಲ್ಲಿದ್ದೇನೆ’; ರೇವ್ ಪಾರ್ಟಿ ಬಗ್ಗೆ ಹೇಮಾ ಸ್ಪಷ್ಟನೆ

ಬರ್ತ್​ಡೇ ಹೆಸರಲ್ಲಿ ಇಲ್ಲಿ ಪಾರ್ಟಿ ನಡೆಯುತ್ತಿತ್ತು. ರಾತ್ರಿ 2 ಗಂಟೆಯಾದರೂ ಪಾರ್ಟಿ ಮುಗಿದಿರಲಿಲ್ಲ. ಆ ಬಳಿಕ ಸಿಸಿಬಿ ಅಧಿಕಾರಿಗಳಿಗೆ ಕೆಲವು ಅನುಮಾನ ಬಂದ ಕಾರಣ ಅವರು ದಾಳಿ ಮಾಡಿದ್ದಾರೆ. ಈ ಪಾರ್ಟಿಯಲ್ಲಿ ಹೇಮಾ ಕೂಡ ಇದ್ದರು ಎನ್ನಲಾಗಿದೆ. ಈಗ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

‘ನಾನು ಹೈದರಾಬಾದ್ ಫಾರ್ಮ್​​ಹೌಸ್​ನಲ್ಲಿದ್ದೇನೆ’; ರೇವ್ ಪಾರ್ಟಿ ಬಗ್ಗೆ ಹೇಮಾ ಸ್ಪಷ್ಟನೆ
ಹೇಮಾ
Follow us
Shivaprasad
| Updated By: ರಾಜೇಶ್ ದುಗ್ಗುಮನೆ

Updated on: May 20, 2024 | 12:58 PM

ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿ ಬಳಿ ಇರುವ ಜಿಆರ್​ ಫಾರ್ಮ್​​ಹೌಸ್​ನಲ್ಲಿ ರೇವ್ ಪಾರ್ಟಿ ನಡೆಯುತ್ತಿರುವ ಮಾಹಿತಿ ಆಧಾರದ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇಂದು (ಮೇ 20) ಮುಂಜಾನೆ ಈ ದಾಳಿ ನಡೆದಿದೆ. ಈ ವೇಳೆ ಟಾಲಿವುಡ್​ ನಟಿ ಹೇಮಾ ಕೂಡ ಇದ್ದರು ಎನ್ನುವ ಸುದ್ದಿ ಹರಿದಾಡಿತ್ತು. ಇದಕ್ಕೆ ನಟಿ ಹೇಮಾ (Actress Hema) ಸ್ಪಷ್ಟನೆ ನೀಡಿದ್ದಾರೆ. ‘ನಾನು ಹೈದರಾಬಾದ್ ಫಾರ್ಮ್​ಹೌಸ್​ನಲ್ಲಿ ಆರಾಮಾಗಿ ಇದ್ದೇನೆ’ ಎಂದಿದ್ದಾರೆ. ಈ ಮೂಲಕ ಹರಿದಾಡುತ್ತಿರುವ ವದಂತಿಗೆ ತೆರೆ ಎಳೆದಿದ್ದಾರೆ.

ಜಿಆರ್​ ಫಾರ್ಮ್​ಹೌಸ್​ ‘ಕಾನ್ ಕಾರ್ಡ್’ ಮಾಲೀಕ ಗೋಪಾಲ ರೆಡ್ಡಿ ಎಂಬುವವರ ಹೆಸರಲ್ಲಿ ಇದೆ. ಬರ್ತ್​ಡೇ ಹೆಸರಲ್ಲಿ ಇಲ್ಲಿ ಪಾರ್ಟಿ ನಡೆಯುತ್ತಿತ್ತು. ರಾತ್ರಿ 2 ಗಂಟೆಯಾದರೂ ಪಾರ್ಟಿ ಮುಗಿದಿರಲಿಲ್ಲ. ಆ ಬಳಿಕ ಸಿಸಿಬಿ ಅಧಿಕಾರಿಗಳಿಗೆ ಕೆಲವು ಅನುಮಾನ ಬಂದ ಕಾರಣ ಅವರು ದಾಳಿ ಮಾಡಿದ್ದಾರೆ. ದಾಳಿ ವೇಳೆ ಡ್ರಗ್ಸ್ ಪತ್ತೆ ಆಗಿದೆ. ಹೈದರಾಬಾದ್ ಮೂಲದ ವಾಸು ಎಂಬುವವರು ಪಾರ್ಟಿ ಆಯೋಜನೆ ಮಾಡಿದ್ದರು. ಪಾರ್ಟಿಯಲ್ಲಿ ಕೆಲವು ತೆಲುಗು ನಟಿಯರೂ ಇದ್ದರು ಎನ್ನಲಾಗಿದೆ. ಈ ವೇಳೆ ನಟಿ ಹೇಮಾ ಹೆಸರು ಕೂಡ ಕೇಳಿ ಬಂದಿತ್ತು.

ಈಗ ಹೇಮಾ ಅವರು ತಮ್ಮ ಬಗ್ಗೆ ಕೇಳಿ ಬಂದ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ. ‘ನಾನು ಹೈದರಾಬಾದ್ ಫಾರ್ಮ್​ಹೌಸ್​ನಲ್ಲಿ ಆರಾಮಾಗಿ ಇದ್ದೇನೆ. ನನ್ನ ಬಗ್ಗೆ ಕೇಳಿ ಬಂದಿರೋದು ಫೇಕಸ್ ನ್ಯೂಸ್’ ಎಂದು ಹೇಳಿದ್ದಾರೆ. ಈ ಮೂಲಕ ದಾಳಿ ನಡೆದ ಜಾಗದಲ್ಲಿ ನಾನು ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ತೆಲುಗು ನಟಿಯರು ಭಾಗಿಯಾಗಿದ್ದ ರೇವ್​​ಪಾರ್ಟಿ ಮೇಲೆ ಸಿಸಿಬಿ ದಾಳಿ; ಡ್ರಗ್ಸ್, ಕೊಕೇನ್ ಪತ್ತೆ

ದಾಳಿ ವೇಳೆ ಸಿಕ್ಕಿದ್ದೇನು?

ದಾಳಿಯ ವೇಳೆ 17 ಎಂಡಿಎಂಎ ಮಾತ್ರೆ, ಕೊಕೇನ್ ಪತ್ತೆಯಾಗಿದೆ. ಹಲವು ಐಷಾರಾಮಿ ಕಾರುಗಳು ಕೂಡ ಇದ್ದವು. ಈ ಪಾರ್ಟಿಯಲ್ಲಿ ಮಾಡೆಲ್​​ಗಳು ಹಾಗೂ ಟೆಕ್ಕಿಗಳು ಭಾಗಿಯಾಗಿದ್ದರು ಎನ್ನಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ. 100ಕ್ಕೂ ಹೆಚ್ಚು ಜನರು ಇದರಲ್ಲಿ ಭಾಗಿ ಆಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.