ಅಮಿತಾಭ್ ಬಚ್ಚನ್ ಅವರಿಗೆ ಈಗ 81 ವರ್ಷ ವಯಸ್ಸು. ಅಕ್ಟೋಬರ್ನಲ್ಲಿ ಅವರಿಗೆ 82 ವರ್ಷ ತುಂಬಲಿದೆ. ಅವರಿಗೆ ಅನೇಕ ಕಾಯಿಲೆಗಳು ಇವೆ. ಆದರೆ, ಅವರು ಸಿನಿಮಾ ಕೃಷಿ ನಿಲ್ಲಿಸಿಲ್ಲ. ಮೃತಪಟ್ಟ ಬಳಿಕ ತಮ್ಮ ಆಸ್ತಿ ಯಾರಿಗೆ ಸೇರಬೇಕು ಎನ್ನವು ಬಗ್ಗೆ ಅವರು ವಿಲ್ ಕೂಡ ಬರೆದಿಟ್ಟಿದ್ದಾರೆ. ಈ ಮೊದಲು ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದರು. ಇಬ್ಬರು ಮಕ್ಕಳಿಗೆ ಸರಿಯಾಗಿ ಆಸ್ತಿ ಹಂಚಿಕೆ ಮಾಡೋದಾಗಿ ಅವರು ಹೇಳಿದ್ದರು.
ಅಮಿತಾಭ್ ಹಾಗೂ ಜಯಾ ಬಚ್ಚನ್ ದಂಪತಿಗೆ ಶ್ವೇತಾ ಹಾಗೂ ಅಭಿಷೇಕ್ ಹೆಸರಿನ ಮಕ್ಕಳಿದ್ದಾರೆ. ಮಗಳು ಮದುವೆ ಆಗಿ ಬೇರೆ ಕುಟುಂಬಕ್ಕೆ ಹೋಗುತ್ತಾರೆ ಎನ್ನುವ ಕಾರಣಕ್ಕೆ ಆಸ್ತಿಯನ್ನು ಮಗನ ಹೆಸರಿಗೆ ಬರೆಯೋ ಪದ್ಧತಿ ಇದೆ. ಆದರೆ, ಅಮಿತಾಭ್ ಅವರಿಗೆ ಈ ಆಲೋಚನೆ ಇಲ್ಲ. ‘ನಾನು ಒಂದು ವಿಚಾರ ನಿರ್ಧರಿಸಿದ್ದೇನೆ. ಮಕ್ಕಳ ಮಧ್ಯೆ ನಾನು ವ್ಯತ್ಯಾಸ ಮಾಡುವುದಿಲ್ಲ’ ಎಂದು ಅಮಿತಾಭ್ ಬಚ್ಚನ್ ಅವರು ಹೇಳಿದ್ದರು. ಈ ಸಂಬಂಧ ಅವರು ವಿಲ್ ಕೂಡ ಬರೆದಿದ್ದಾರೆ ಎನ್ನಲಾಗಿದೆ.
‘ನಾನು ಮೃತಪಟ್ಟ ಬಳಿಕ ನಾನು ಏನೇ ಹೊಂದಿದ್ದರೂ ಅದನ್ನು ನನ್ನ ಮಗಳು ಹಾಗೂ ಮಗನಿಗೆ ಸರಿಯಾಗಿ ಹಂಚುತ್ತೇನೆ. ಅದರಲ್ಲಿ ಯಾವುದೇ ವ್ಯತ್ಯಾಸ ಮಾಡುವುದಿಲ್ಲ. ಇದನ್ನು ನಾನು ಹಾಗೂ ಜಯಾ ಈ ಮೊದಲೇ ನಿರ್ಧಾರ ಮಾಡಿದ್ದೆವು. ಮದುವೆ ಆದ ಬಳಿಕ ಮಗಳು ಬೇರೆಯವರ ಮನೆಗೆ ಹೋಗುತ್ತಾರೆ. ಆದರೆ, ನಮ್ಮ ದೃಷ್ಟಿಯಲ್ಲಿ ಅವರು ಮಗಳೇ. ಅಭಿಷೇಕ್ಗೆ ಇರುವಷ್ಟೇ ಹಕ್ಕು ಶ್ವೇತಾಗೂ ಇದೆ’ ಎಂದಿದ್ದರು ಅವರು.
ಇದನ್ನೂ ಓದಿ: ದುಬೈನಲ್ಲಿ ಒಟ್ಟಾಗಿ ಸುತ್ತಾಡಿದ್ರಾ ಐಶ್ವರ್ಯಾ-ಅಭಿಷೇಕ್? ವೈರಲ್ ಆಯ್ತು ವಿಡಿಯೋ
ಕಳೆದ ವರ್ಷ ಅಭಿಷೇಕ್ ಬಚ್ಚನ್ ಅವರು ತಮ್ಮ ಬಂಗಲೆಯನ್ನು ಶ್ವೇತಾಗೆ ಗಿಫ್ಟ್ ಮಾಡಿದ್ದರು. 50 ಕೋಟಿ ರೂಪಾಯಿ ಬೆಲೆ ಬಾಳುವ ಆಸ್ತಿ ಇದಾಗಿತ್ತು. ಆ ಸಂದರ್ಭದಲ್ಲಿ ಬಚ್ಚನ್ ಹಾಗೂ ಐಶ್ವರ್ಯಾ ಮಧ್ಯೆ ಎಲ್ಲವೂ ಸರಿಯೇ ಇತ್ತು. ಆದಾಗ್ಯೂ ಅವರು ಸೊಸೆಗೆ ಏನನ್ನಾದರೂ ನೀಡುವ ಬಗ್ಗೆ ಮಾತನಾಡಿರಲಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:55 am, Thu, 5 September 24