
ದಕ್ಷಿಣ ಭಾರತದ ಚಿತ್ರರಂಗ (South Film Industry) ಹಿರಿದಾಗುತ್ತಿದೆ. ಇಲ್ಲಿನ ಸಿನಿಮಾಗಳು ಬಾಲಿವುಡ್ ಅಂಗಳದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಈ ಬೆನ್ನಲ್ಲೇ, ಇಲ್ಲಿನ ಸ್ಟಾರ್ಗಳಿಗೆ ಬಾಲಿವುಡ್ ಆಫರ್ಗಳು ಬರುತ್ತಿವೆ. ಬಾಲಿವುಡ್ನಿಂದ ಆಫರ್ ಸಿಕ್ಕರೆ ಅದಕ್ಕೆ ನೋ ಎಂದು ಹೇಳೋಕೆ ಅನೇಕರಿಗೆ ಮನಸ್ಸು ಬರುವುದಿಲ್ಲ. ಇದಕ್ಕೆ ಕಾರಣವೂ ಇದೆ. ಬಾಲಿವುಡ್ನಲ್ಲಿ ನಟಿಸಿದರೆ ಸಂಭಾವನೆ ಹೆಚ್ಚು ಸಿಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಜನಪ್ರಿಯತೆ ಮತ್ತಷ್ಟು ಹೆಚ್ಚುತ್ತದೆ. ಈ ಕಾರಣಕ್ಕೆ ದಕ್ಷಿಣದ ಅನೇಕ ಸ್ಟಾರ್ಗಳು ಬಾಲಿವುಡ್ಗೆ ಕಾಲಿಡೋಕೆ ಪ್ರಯತ್ನಿಸುತ್ತಿದ್ದಾರೆ. ರಾಮ್ ಚರಣ್ (Ram Charan) ಅವರು ಬಾಲಿವುಡ್ಗೆ ಕಾಲಿಟ್ಟು ಬಂದಿದ್ದಾರೆ. ವಿಜಯ್ ದೇವರಕೊಂಡ (Vijay Devarakonda) ಹಿಂದಿಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಉಳಿದ ಸ್ಟಾರ್ಗಳಿಗೂ ಇದೇ ಮಾದರಿಯ ಪ್ರಶ್ನೆ ಎದುರಾಗುತ್ತಿದೆ. ಮಹೇಶ್ ಬಾಬು ಅವರಿಗೂ ಇದೇ ಪ್ರಶ್ನೆ ಎದುರಾಯಿತು. ಅವರು ಇದಕ್ಕೆ ಕಡ್ಡಿ ಮುರಿದಂತೆ ಉತ್ತರ ನೀಡಿದ್ದಾರೆ.
‘ಸರ್ಕಾರು ವಾರಿ ಪಾಟ’ ಸಿನಿಮಾ ಮೇ 12ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಸಿನಿಮಾದಲ್ಲಿ ಮಹೇಶ್ ಬಾಬು ಭಿನ್ನ ಗೆಟಪ್ ತಾಳಿದ್ದಾರೆ. ಈ ಚಿತ್ರದ ಬಗ್ಗೆ ಅವರ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈಗಾಗಲೇ ಸಿನಿಮಾದ ಹಾಡುಗಳು ಹಿಟ್ ಆಗಿವೆ. ಅವರು ಸಿನಿಮಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಈ ವೇಳೆ ಅವರಿಗೆ ಬಾಲಿವುಡ್ಗೆ ಕಾಲಿಡೋದು ಯಾವಾಗ ಎನ್ನುವ ಪ್ರಶ್ನೆ ಕೇಳಲಾಗಿದೆ.
‘ನನಗೆ ಹಿಂದಿ ಸಿನಿಮಾ ಮಾಡುವ ಅಗತ್ಯವಿಲ್ಲ. ನಾನು ಕೇವಲ ತೆಲುಗು ಸಿನಿಮಾಗಳನ್ನು ಮಾತ್ರ ಮಾಡಬಲ್ಲೆ. ಅದು ಪ್ರಪಂಚದಾದ್ಯಂತ ಕಾಣಿಸುತ್ತದೆ. ಈಗ ಅದೇ ನಡೆಯುತ್ತಿದೆ’ ಎಂದು ಹೇಳಿದ್ದಾರೆ ಮಹೇಶ್ ಬಾಬು. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
Mahesh Babu Reply To Media About His Bollywood Entry. pic.twitter.com/T8iJlJ1487
— Naveen MB Vizag ? (@NaveenMBVizag) April 6, 2022
‘ಆರ್ಆರ್ಆರ್’ ಚಿತ್ರದ ನಿರ್ದೇಶಕ ಎಸ್.ಎಸ್. ರಾಜಮೌಳಿ ಹಾಗೂ ಮಹೇಶ್ ಬಾಬು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ‘ಆರ್ಆರ್ಆರ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆದ ಕಾರಣ ರಾಜಮೌಳಿ ಮುಂದಿನ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಇದು ಯಾವ ಶೈಲಿಯಲ್ಲಿ ಮೂಡಿಬರಲಿದೆ ಎಂಬ ಬಗ್ಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ: ‘ಕಲಾವತಿ..’ ಹಾಡಿಗೆ ತಲೆದೂಗಿದ ಅಭಿಮಾನಿಗಳು; ಮಹೇಶ್ ಬಾಬು ಡ್ಯಾನ್ಸ್ಗೆ ಕೋಟಿಕೋಟಿ ವೀಕ್ಷಣೆ
‘ಆರ್ಆರ್ಆರ್’ ಚಿತ್ರದಲ್ಲಿ ಮಲ್ಲಿ ಅಮ್ಮನಾಗಿ ಕಾಣಿಸಿಕೊಂಡವರು ಇವರೇ ನೋಡಿ
Published On - 6:00 am, Sat, 9 April 22