‘ಕಲಾವತಿ..’ ಹಾಡಿಗೆ ತಲೆದೂಗಿದ ಅಭಿಮಾನಿಗಳು; ಮಹೇಶ್ ಬಾಬು ಡ್ಯಾನ್ಸ್​ಗೆ ಕೋಟಿಕೋಟಿ ವೀಕ್ಷಣೆ

ಮಹೇಶ್​ ಬಾಬು ಹಾಗೂ ಕೀರ್ತಿ ಸುರೇಶ್​ ಇದೇ ಮೊದಲ ಬಾರಿಗೆ ಒಂದಾಗಿದ್ದಾರೆ. ಈ ಕಾರಣದಿಂದಲೂ ‘ಸರ್ಕಾರು ವಾರಿ ಪಾಟ’ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಈ ಚಿತ್ರದಲ್ಲಿ ಮಹೇಶ್ ಬಾಬು ಅವರು ಹಿಂದೆಂದೂ ಕಾಣಿಸಿಕೊಳ್ಳದ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ.

‘ಕಲಾವತಿ..’ ಹಾಡಿಗೆ ತಲೆದೂಗಿದ ಅಭಿಮಾನಿಗಳು; ಮಹೇಶ್ ಬಾಬು ಡ್ಯಾನ್ಸ್​ಗೆ ಕೋಟಿಕೋಟಿ ವೀಕ್ಷಣೆ
ಮಹೇಶ್​ ಬಾಬು-ಕೀರ್ತಿ ಸುರೇಶ್​
TV9kannada Web Team

| Edited By: Rajesh Duggumane

Feb 14, 2022 | 4:55 PM


ಮಹೇಶ್​ ಬಾಬು (Mahesh Babu)  ಸಿನಿಮಾಗಳು ದೊಡ್ಡ ಬಜೆಟ್​ನಲ್ಲಿ ಸಿದ್ಧಗೊಳ್ಳುತ್ತವೆ. ಈ ಕಾರಣಕ್ಕೆ ಅವರ ಚಿತ್ರಗಳು ತುಂಬಾನೇ ರಿಚ್​ ಆಗಿ ಮೂಡಿ ಬರುತ್ತವೆ. ಅವರ ಪ್ರತಿ ಸಿನಿಮಾದಲ್ಲೂ ಹಾಡಿಗೆ ತುಂಬಾನೇ ಪ್ರಾಮುಖ್ಯತೆ ನೀಡಲಾಗುತ್ತದೆ. ಈಗ ಅವರ ನಟನೆಯ ‘ಸರ್ಕಾರು ವಾರಿ ಪಾಟ’ ಚಿತ್ರದ (Sarkaru Vaari Paata Movie) ‘ಕಲಾವತಿ..’  (Kalaavathi Music Song) ಹಾಡು ರಿಲೀಸ್ ಆಗಿದೆ. ಈ ಸಾಂಗ್​ನಲ್ಲಿ ಮಹೇಶ್ ಬಾಬು ಹಾಗೂ ಕೀರ್ತಿ ಸುರೇಶ್ ಕಾಂಬಿನೇಷನ್​ ಪ್ರೇಕ್ಷಕರಿಗೆ ಸಖತ್​ ಇಷ್ಟವಾಗಿದೆ. ಈ ಹಾಡು ಈಗ ಕೋಟಿಕೋಟಿ ವೀಕ್ಷಣೆ ಕಾಣುತ್ತಿದೆ. ಅಭಿಮಾನಿಗಳು ವಿಡಿಯೋ ಸಾಂಗ್​ ನೋಡಿ ಸಖತ್​ ಖುಷಿಪಟ್ಟಿದ್ದಾರೆ.

ಮಹೇಶ್​ ಬಾಬು ಹಾಗೂ ಕೀರ್ತಿ ಸುರೇಶ್​ ಇದೇ ಮೊದಲ ಬಾರಿಗೆ ಒಂದಾಗಿದ್ದಾರೆ. ಈ ಕಾರಣದಿಂದಲೂ ‘ಸರ್ಕಾರು ವಾರಿ ಪಾಟ’ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಈ ಚಿತ್ರದಲ್ಲಿ ಮಹೇಶ್ ಬಾಬು ಅವರು ಹಿಂದೆಂದೂ ಕಾಣಿಸಿಕೊಳ್ಳದ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಚಿತ್ರದ ‘ಕಲಾವತಿ..’ ಹಾಡು ಸಖತ್​ ಟ್ರೆಂಡ್​ ಆಗುತ್ತಿದೆ. ಯೂಟ್ಯೂಬ್​ನ ಮ್ಯೂಸಿಕ್​ ವಿಭಾಗದ ಟ್ರೆಂಡಿಂಗ್​ನಲ್ಲಿ ಈ ಹಾಡು ನಂಬರ್​ ಒನ್ ಸ್ಥಾನದಲ್ಲಿದೆ.

ಥಮನ್​ ಎಸ್​. ಅವರು ‘ಸರ್ಕಾರು ವಾರಿ ಪಾಟ’ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಹಾಡಿನ ಸಂಗೀತ ಅನೇಕರಿಗೆ ಇಷ್ಟವಾಗಿದೆ. ಸಿದ್​​ ಶ್ರೀರಾಮ್​ ಅವರು ಈ ಹಾಡನ್ನು ಹಾಡಿದ್ದಾರೆ. ಮಹೇಶ್ ಬಾಬು ಡ್ಯಾನ್ಸ್ ಸ್ಟೆಪ್​ ಎಲ್ಲರಿಗೂ ಇಷ್ಟವಾಗಿದೆ. ಮಹೇಶ್​ ಬಾಬು ಹಾಗೂ ಕೀರ್ತಿ ಕೆಮಿಸ್ಟ್ರಿ​ ಪ್ರೇಕ್ಷಕರಿಗೆ ಇಷ್ಟವಾಗಿದೆ. ಈ ಚಿತ್ರದ ಹಾಡು ರಿಲೀಸ್ ಆದ ಒಂದೇ ದಿನಕ್ಕೆ 1.4 ಕೋಟಿ ಬಾರಿ ವೀಕ್ಷಣೆ ಕಂಡಿದೆ. 80 ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋ ಲೈಕ್​ ಮಾಡಿದ್ದಾರೆ. ಈ ಹಾಡಿಗೆ ಬರೋಬ್ಬರಿ 90 ಸಾವಿರ ಕಮೆಂಟ್​ಗಳು ಬಂದಿರೋದು ವಿಶೇಷ. ಕೀರ್ತಿ ಸುರೇಶ್​ ಅವರು ‘ಮಹಾನಟಿ’ ಚಿತ್ರದ ಮೂಲಕ ಸಾಕಷ್ಟು ಖ್ಯಾತಿ ಗಳಿಸಿಕೊಂಡವರು. ಆದರೆ, ಆ ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿದರೂ ಯಶಸ್ಸು ಸಿಗಲಿಲ್ಲ. ಈಗ ಈ ಸಿನಿಮಾ ಮೂಲಕ ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿ ಅವರಿದ್ದಾರೆ.

ಹಾಡಿನ ಮೂಲಕ ಸಿನಿಮಾ ಹಿಟ್​ ಆದ ಉದಾಹರಣೆ ಸಾಕಷ್ಟಿದೆ. ಈಗ ‘ಕಲಾವತಿ..’ಹಾಡಿನಿಂದ ‘ಸರ್ಕಾರು ವಾರಿ ಪಾಟ’ ಚಿತ್ರದ ಮೈಲೇಜ್​ ಹೆಚ್ಚಿದರೂ ಅಚ್ಚರಿ ಏನಿಲ್ಲ. ಮೇ 12ರಂದು ಈ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಮಹೇಶ್ ಬಾಬು ಅಭಿಮಾನಿಗಳು ಈ ಚಿತ್ರದ ಬಿಡುಗಡೆಗಾಗಿ ಕಾದು ಕೂತಿದ್ದಾರೆ. ಇದರ ಜತೆಗೆ ತ್ರಿವಿಕ್ರಂ ಶ್ರೀನಿವಾಸ್​ ನಿರ್ದೇಶನ ಮಾಡುತ್ತಿರುವ ಹೊಸ ಚಿತ್ರದಲ್ಲೂ ಮಹೇಶ್ ಬಾಬು ನಟಿಸುತ್ತಿದ್ದಾರೆ. ಈ ಸಿನಿಮಾದ ಸ್ಕ್ರಿಪ್ಟ್​ ಕೆಲಸಗಳು ನಡೆಯುತ್ತಿದ್ದು, ಶೀಘ್ರವೇ ಸೆಟ್ಟೇರುವ ಸಾಧ್ಯತೆ ಇದೆ.

ಇದನ್ನೂ ಓದಿ: ಮಹೇಶ್​ ಬಾಬು ಹಾಗೂ ‘ದಳಪತಿ’ ವಿಜಯ್ ಫ್ಯಾನ್ಸ್​ ಮಧ್ಯೆ ವಾರ್​; ಕಾರಣ ಕೇಳಿದ್ರೆ ನಗ್ತೀರಾ

ಮಹೇಶ್​ ಬಾಬು ದಿನವನ್ನು ಹಾಳು ಮಾಡಿದ ಮಗಳು ಸಿತಾರಾ; ವೈರಲ್​ ಆಯ್ತು ಫೋಟೋ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada