‘ಈಗ ನಾನು ಪುನೀತ್​ ಮನೆಗೆ ಹೋಗುತ್ತಿಲ್ಲ’; ಕಾರಣ ಸಮೇತ ವಿವರಿಸಿದ ಅಲ್ಲು ಅರ್ಜುನ್

| Updated By: ರಾಜೇಶ್ ದುಗ್ಗುಮನೆ

Updated on: Dec 15, 2021 | 4:51 PM

‘ಪುಷ್ಪ’ ನೋಡೋಕೆ ಅಭಿಮಾನಿಗಳು ಕಾದು ಕೂತಿದ್ದಾರೆ. ಈ ಚಿತ್ರ ತೆಲುಗು ಮಾತ್ರವಲ್ಲದೆ, ಕನ್ನಡದಲ್ಲೂ ತೆರೆಗೆ ಬರುತ್ತಿದೆ. ಈ ಚಿತ್ರಕ್ಕೆ ಈಗಾಗಲೇ ಸಾಕಷ್ಟು ಪ್ರಚಾರ ನೀಡಲಾಗಿದೆ. ಹೈದರಾಬಾದ್​, ಚೆನ್ನೈ ಮೊದಲಾದ ಕಡೆಗಳಲ್ಲಿ ಚಿತ್ರದ ಪ್ರಚಾರ ಕಾರ್ಯ ನಡೆಯುತ್ತಿದೆ.

‘ಈಗ ನಾನು ಪುನೀತ್​ ಮನೆಗೆ ಹೋಗುತ್ತಿಲ್ಲ’; ಕಾರಣ ಸಮೇತ ವಿವರಿಸಿದ ಅಲ್ಲು ಅರ್ಜುನ್
ಅಲ್ಲು ಅರ್ಜುನ್​-ಪುನೀತ್​
Follow us on

ಪುನೀತ್​ ರಾಜ್​ಕುಮಾರ್ (Puneeth Rajkumar)​ ನಿಧನ ಹೊಂದಿರುವ ವಿಚಾರ ಕೋಟ್ಯಂತರ ಜನರಿಗೆ ಬೇಸರ ಮೂಡಿಸಿದೆ. ಪರಭಾಷೆಯ ಸ್ಟಾರ್​ಗಳು ಕೂಡ ಪುನೀತ್ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅಪ್ಪು ಅವರ ನಿವಾಸಕ್ಕೆ ಭೇಟಿ ನೀಡಿ ಸೆಲೆಬ್ರಿಟಿಗಳು ಸಂತಾಪ ಸೂಚಿಸುತ್ತಿದ್ದಾರೆ. ಅಲ್ಲು ಅರ್ಜುನ್ (Allu Arjun) ಅವರು ಮಾತ್ರ ಪುನೀತ್ ಮನೆಗೆ ತೆರಳಿಲ್ಲ. ಈ ಬಗ್ಗೆ ಅನೇಕರು ಪ್ರಶ್ನೆ ಮಾಡಿದ್ದರು. ಪುನೀತ್​ ನಿವಾಸಕ್ಕೆ ತೆರಳಿ ಎಂದು ಅಲ್ಲು ಅರ್ಜುನ್​ ಎದುರು ಬೇಡಿಕೆ ಇಟ್ಟಿದ್ದರು. ಈಗ ಅವರು ಈ ಬಗ್ಗೆ ಮಾತನಾಡಿದ್ದಾರೆ. ಎಲ್ಲ ವಿಚಾರಗಳಿಗೂ ಸ್ಪಷ್ಟನೆ ನೀಡಿದ್ದಾರೆ.

‘ಪುಷ್ಪ’ ನೋಡೋಕೆ ಅಭಿಮಾನಿಗಳು ಕಾದು ಕೂತಿದ್ದಾರೆ. ಈ ಚಿತ್ರ ತೆಲುಗು ಮಾತ್ರವಲ್ಲದೆ, ಕನ್ನಡದಲ್ಲೂ ತೆರೆಗೆ ಬರುತ್ತಿದೆ. ಈ ಚಿತ್ರಕ್ಕೆ ಈಗಾಗಲೇ ಸಾಕಷ್ಟು ಪ್ರಚಾರ ನೀಡಲಾಗಿದೆ. ಹೈದರಾಬಾದ್​, ಚೆನ್ನೈ ಮೊದಲಾದ ಕಡೆಗಳಲ್ಲಿ ಚಿತ್ರದ ಪ್ರಚಾರ ಕಾರ್ಯ ನಡೆಯುತ್ತಿದೆ. ಇಂದು (ಡಿಸೆಂಬರ್​ 15) ಬೆಂಗಳೂರಿಗೆ ಸಿನಿಮಾ ತಂಡ ಆಗಮಿಸಿತ್ತು. ಈ ವೇಳೆ ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದೆ. ಪುನೀತ್​ ಅವರನ್ನು ನೆನಪಿಸಿಕೊಳ್ಳುವ ಕಾರ್ಯ ಕೂಡ ನಡೆದಿದೆ.

‘ಪುನೀತ್​ ರಾಜ್​ಕುಮಾರ್​ ಕುಟುಂಬಕ್ಕೆ ನನ್ನ ಸಂತಾಪ ಇದೆ. ‘ಪುಷ್ಪ’ ಸಿನಿಮಾ ಕೆಲಸಗಳಿಂದ ಬೆಂಗಳೂರಿಗೆ ಬರೋಕೆ ಆಗಿಲ್ಲ. ಈಗ ‘ಪುಷ್ಪ’ ಸಿನಿಮಾ ಪ್ರಮೋಷನ್​ಗೆ ಬೆಂಗಳೂರಿಗೆ ಬಂದಿದ್ದೇನೆ. ಈ ಸಂದರ್ಭದಲ್ಲಿ ನಾನು ಅಲ್ಲಿಗೆ ಹೋಗೋಕೆ ಇಷ್ಟಪಡುವುದಿಲ್ಲ. ‘ಪುಷ್ಪ’ ರಿಲೀಸ್​ ಆದ ನಂತರ ಮತ್ತೊಮ್ಮೆ ಬೆಂಗಳೂರಿಗೆ ಬರುತ್ತೇನೆ. ಬಂದು ಇಡೀ ಕುಟುಂಬವನ್ನು ಭೇಟಿ ಆಗುತ್ತೇನೆ. ಇದು ಸೂಪರ್​ ಎಂದು ಹೇಳುವಂತಹ ವಿಚಾರ ಅಲ್ಲ. ಅದು ನನ್ನ ಕರ್ತವ್ಯ’ ಎಂದರು ಅಲ್ಲು ಅರ್ಜುನ್​.

‘ಪುಷ್ಪ’ ಸಿನಿಮಾದ ಬುಕಿಂಗ್​ ಈಗಾಗಲೇ ಆರಂಭಗೊಂಡಿದೆ. ಸಿನಿಮಾಗೆ ಅದ್ದೂರಿಯಾಗಿ ಓಪನಿಂಗ್​ ಸಿಗುವ ಸಾಧ್ಯತೆ ಇದೆ. ಬಹುತೇಕ ಶೋಗಳು ಈಗಾಗಲೇ ಹೌಸ್​ಫುಲ್​ ಆಗುತ್ತಿದೆ. ‘ಪುಷ್ಪ’ ಚಿತ್ರಕ್ಕೆ ಸುಕುಮಾರ್​ ಅವರ ನಿರ್ದೇಶನವಿದೆ. ಡಾಲಿ ಧನಂಜಯ್​, ಫಹಾದ್​ ಫಾಸಿಲ್​, ಜಗಪತಿ ಬಾಬು ಪ್ರಕಾಶ್​ ರಾಜ್​ ಮುಂತಾದ ಸ್ಟಾರ್​ ಕಲಾವಿದರು ಕೂಡ ‘ಪುಷ್ಪ’ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಎರಡು ಪಾರ್ಟ್​ಗಳಲ್ಲಿ ಈ ಚಿತ್ರ ತಯಾರಾಗಿದ್ದು, ಡಿ.17ರಂದು ಮೊದಲ ಪಾರ್ಟ್​ ಮಾತ್ರ ಬಿಡುಗಡೆ ಆಗುತ್ತಿದೆ.

ಇದನ್ನೂ ಓದಿ: ಯಾರು ಹೇಳಿದ್ದು ರಶ್ಮಿಕಾ ಮಂದಣ್ಣಗೆ ಕನ್ನಡ ಮರೆತುಹೋಗಿದೆ ಅಂತ, ಅವರು ಕನ್ನಡದಲ್ಲಿ ಚೆನ್ನಾಗಿ ಮಾತಾಡುತ್ತಾರೆ!

ಪುನೀತ್​ ರಾಜ್​ಕುಮಾರ್ ಸಾಧನೆಗಳನ್ನು ಸದನದಲ್ಲಿ ಸಾರಿ ಸಾರಿ ಹೇಳಿದ ಸ್ಪೀಕರ್​ ಕಾಗೇರಿ