ಸೋತ ಅಜಿತ್ ಚಿತ್ರಕ್ಕೆ ಶಾಕ್ ಕೊಟ್ಟ ಇಳಯರಾಜ; ಕ್ಷಮೆಯ ಜೊತೆ 5 ಕೋಟಿ ರೂಪಾಯಿಗೆ ಡಿಮ್ಯಾಂಡ್

ಇಳಯರಾಜ ಅವರು ಅಜಿತ್ ನಟನೆಯ ‘ಗುಡ್ ಬ್ಯಾಡ್ ಅಗ್ಲಿ’ ಚಿತ್ರದಲ್ಲಿ ಅನುಮತಿಯಿಲ್ಲದೆ ತಮ್ಮ ಸಂಗೀತವನ್ನು ಬಳಸಲಾಗಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ 5 ಕೋಟಿ ರೂಪಾಯಿ ಪರಿಹಾರ ಮತ್ತು ಸಾರ್ವಜನಿಕ ಕ್ಷಮೆಯಾಚನೆಗೆ ಒತ್ತಾಯಿಸಿದ್ದಾರೆ. ಚಿತ್ರ ನಿರ್ಮಾಪಕರು ಸಂಗೀತ ಹಕ್ಕುಗಳನ್ನು ಖರೀದಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ಈ ವಿವಾದ ಕೋರ್ಟ್‌ಗೆ ಹೋಗುವ ಸಾಧ್ಯತೆಯಿದೆ.

ಸೋತ ಅಜಿತ್ ಚಿತ್ರಕ್ಕೆ ಶಾಕ್ ಕೊಟ್ಟ ಇಳಯರಾಜ; ಕ್ಷಮೆಯ ಜೊತೆ 5 ಕೋಟಿ ರೂಪಾಯಿಗೆ ಡಿಮ್ಯಾಂಡ್
ಇಳಯರಾಜ

Updated on: Apr 16, 2025 | 7:33 AM

ಸಂಗೀತ ಸಂಯೋಜಕ ಇಳಯರಾಜ (Ilaiyaraaja) ಅವರು ಕೇಸ್ ಹಾಕುವುದರಲ್ಲಿ ಸದಾ ಮುಂದು.. ಯಾವುದೇ ಸಿನಿಮಾ ರಿಲೀಸ್ ಆಗಿ, ಅದರಲ್ಲಿ ತಮ್ಮ ಸಿನಿಮಾದ ಹಾಡುಗಳು ಇದ್ದರೆ ಅದಕ್ಕೆ ರಾಯಲ್ಟಿ ನೀಡಬೇಕು ಎಂದು ಒತ್ತಾಯಿಸಿ ಕೇಸ್ ಹಾಕುತ್ತಾರೆ. ‘ಮಂಜುಮ್ಮೇಲ್ ಬಾಯ್ಸ್’ ವಿರುದ್ಧ ಅವರು ಕೇಸ್ ಹಾಕಿ ಗೆದ್ದರು. ರಜನಿಕಾಂತ್ ನಟನೆಯ ‘ಕೂಲಿ’ ಸಿನಿಮಾ ವಿರುದ್ಧವೂ ಅವರು ಅಪಸ್ವರ ತೆಗೆದಿದ್ದರು. ಈಗ ‘ಗುಡ್ ಬ್ಯಾಡ್ ಅಗ್ಲಿ’ ಚಿತ್ರದ ಮೇಲೆ ಅವರ ದೃಷ್ಟಿ ಹೋಗಿದೆ.

ಅಧಿಕ್ ರವಿಚಂದ್ರನ್ ನಿರ್ದೇಶನದ ‘ಗುಡ್ ಬ್ಯಾಡ್ ಅಗ್ಲಿ’ ಸಿನಿಮಾದಲ್ಲಿ ಅಜಿತ್ ಹೀರೋ. ಈ ಚಿತ್ರ ಏಪ್ರಿಲ್ 10ರಂದು ರಿಲೀಸ್ ಆಯಿತು. ಸಿನಿಮಾಗೆ ಒಳ್ಳೆಯ ವಿಮರ್ಶೆ ಸಿಕ್ಕಿಲ್ಲ. ಈ ಚಿತ್ರವನ್ನು ನಿರ್ಮಾಣ ಮಾಡಿದ ಮೈತ್ರಿ ಮೂವೀ ಮೇಕರ್ಸ್ ಅವರಿಗೆ ಈ ಬಗ್ಗೆ ಚಿಂತೆ ಉಂಟಾಗಿದೆ. ಹೀಗಿರುವಾಗಲೇ ಇಳಯರಾಜ ಅವರು ಕ್ಯಾತೆ ತೆಗೆದಿದ್ದಾರೆ.

‘ನನ್ನ ಮೂರು ಕಂಪೋಸೀಷನ್​ಗಳು ಸಿನಿಮಾದಲ್ಲಿ ಬಳಕೆ ಆಗಿವೆ. ಇದಕ್ಕೆ ಯಾವುದೇ ಒಪ್ಪಿಗೆ ಪಡೆದಿಲ್ಲ ಅಥವಾ ರಾಯಲ್ಟಿ ನೀಡಿಲ್ಲ’ ಎಂದು ಇಳಯರಾಜ ದೂರಿದ್ದಾರೆ. ಈ ಬಗ್ಗೆ ಚಿತ್ರದ ನಿರ್ಮಾಪಕ ನವೀನ್ ಅವರು ಪ್ರತಿಕ್ರಿಯಿಸಿದ್ದಾರೆ. ‘ನಾವು ಯಾವುದೇ ತಪ್ಪು ಮಾಡಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಇದನ್ನೂ ಓದಿ
ಸೋತು ಸುಣ್ಣವಾದ ‘ಅಪ್ಪು’ ನಿರ್ದೇಶಕನಿಗೆ ವಿಜಯ್ ಅವಕಾಶ ಕೊಟ್ಟಿದ್ದೇಕೆ?
ಮಗನನ್ನು ಫ್ಯಾಷನ್ ಶೋಗೆ ಕರೆದುಕೊಂಡು ಹೋಗಿ ಟ್ರೋಲ್ ಆದ ನತಾಶಾ
‘ಮುದ್ದು ಸೊಸೆ’ ಧಾರಾವಾಹಿ: ತ್ರಿವಿಕ್ರಂ-ಪ್ರತಿಮಾ ವಯಸ್ಸಿನ ಅಂತರ ಇಷ್ಟೊಂದಾ?
ಸೋಲು ಮರೆತು ವರ್ಕೌಟ್ ಶುರು ಮಾಡಿದ ಸಲ್ಮಾನ್ ಖಾನ್; ಈ ವಯಸ್ಸಲ್ಲೂ ಎಂಥಾ ಬಾಡಿ

ಇದನ್ನೂ ಓದಿ: ‘ಮಂಜುಮ್ಮೇಲ್ ಬಾಯ್ಸ್’ ವಿರುದ್ಧ ಹಾಕಿದ ಕೇಸ್​ನಲ್ಲಿ ಗೆದ್ದ ಇಳಯರಾಜ; ಕೊಟ್ಟ ಪರಿಹಾರ ಮೊತ್ತ ಎಷ್ಟು?

‘ನಾವು ಮ್ಯೂಸಿಕ್ ಕಂಪನಿಗಳಿಂದ ಅಗತ್ಯ ಒಪ್ಪಿಗೆ ಪಡೆದಿದ್ದೇವೆ. ಈ ಮ್ಯೂಸಿಕ್ ಕಂಪನಿಗಳೇ ಹಕ್ಕನ್ನು ಹೊಂದಿವೆ. ನಾವು ಕಾನೂನು ಪ್ರಕಾರವೇ ಅದನ್ನು ಮಾಡಿದ್ದೇವೆ’ ಎಂದು ನವೀನ್ ಹೇಳಿದ್ದಾರೆ.

ದೊಡ್ಡ ಬೇಡಿಕೆ ಇಟ್ಟ ಇಳಯರಾಜ

ಇಳಯರಾಜ ಅವರು ಈಗ ಮೈತ್ರಿ ಮೂವೀ ಮೇಕರ್ಸ್ ಬಳಿ ದೊಡ್ಡ ಬೇಡಿಕೆ ಒಂದನ್ನು ಇಟ್ಟಿದ್ದಾರೆ. ಅವರು ಬಹಿರಂಗ ಕ್ಷಮೆ ಕೇಳಬೇಕು ಮತ್ತು 5 ಕೋಟಿ ರೂಪಾಯಿ ನೀಡಬೇಕು. ಇಷ್ಟೇ ಅಲ್ಲ ಹಾಡುಗಳನ್ನು ಸಿನಿಮಾದಂದ ತೆಗೆಯುಬೇಕು ಎಂದು ಆಗ್ರಹಿಸಿದ್ದಾರೆ. ಈ ಪ್ರಕರಣ ಶೀಘ್ರವೇ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.