AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಂಜುಮ್ಮೇಲ್ ಬಾಯ್ಸ್’ ವಿರುದ್ಧ ಹಾಕಿದ ಕೇಸ್​ನಲ್ಲಿ ಗೆದ್ದ ಇಳಯರಾಜ; ಕೊಟ್ಟ ಪರಿಹಾರ ಮೊತ್ತ ಎಷ್ಟು?

‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಸುಮಾರು 250 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನಲಾಗಿದೆ. ಈ ಚಿತ್ರದ ನಿರ್ಮಾಪಕರು ಈಗ ತೊಂದರೆ ಎದುರಾಗಿತ್ತು. ಈ ಸಿನಿಮಾ ತಂಡದ ವಿರುದ್ಧ ಇಳಯರಾಜ ಅವರು ಕೇಸ್ ಹಾಕಿದ್ದರು. ಈ ಕೇಸ್​ನಲ್ಲಿ ಅವರಿಗೆ ಜಯ ಆಗಿದೆ.

‘ಮಂಜುಮ್ಮೇಲ್ ಬಾಯ್ಸ್’ ವಿರುದ್ಧ ಹಾಕಿದ ಕೇಸ್​ನಲ್ಲಿ ಗೆದ್ದ ಇಳಯರಾಜ; ಕೊಟ್ಟ ಪರಿಹಾರ ಮೊತ್ತ ಎಷ್ಟು?
ಮಂಜುಮ್ಮೇಲ್ ಬಾಯ್ಸ್
ರಾಜೇಶ್ ದುಗ್ಗುಮನೆ
|

Updated on:Aug 05, 2024 | 2:05 PM

Share

ಈ ವರ್ಷ ರಿಲೀಸ್ ಆದ ಮಲಯಾಳಂನ ಸೂಪರ್ ಹಿಟ್ ಸಿನಿಮಾ ‘ಮಂಜುಮ್ಮೇಲ್ ಬಾಯ್ಸ್’ ವಿರುದ್ಧ ಇಳಯರಾಜ ಕೇಸ್ ಹಾಕಿದ್ದರು. ಈ ಸಿನಿಮಾದಲ್ಲಿ ಬಳಕೆ ಆದ ‘ಕಣ್ಮಣಿ..’ ಹಾಡಿನ ಹಕ್ಕು ನಮ್ಮದು ಎಂದು ವಾದಿಸಿದ್ದರು. ಕೋರ್ಟ್​ನಲ್ಲಿ ಇಳಯರಾಜ ಅವರಿಗೆ ಜಯ ಆಗಿದೆ. ವರದಿಗಳ ಪ್ರಕಾರ ಇಳಯರಾಜ ಅವರಿಗೆ ಸಿನಿಮಾ ತಂಡ 60 ಲಕ್ಷ ರೂಪಾಯಿ ಕೊಟ್ಟಿದೆ ಎಂದು ವರದಿ ಆಗಿದೆ.

‘ಮಂಜುಮ್ಮೇಲ್ ಬಾಯ್ಸ್’ ಕಥೆ ಸಾಗೋದು ಗುಣ ಗುಹೆಯಲ್ಲಿ. ಹೀಗಾಗಿ, ‘ಗುಣ’ ಚಿತ್ರದಲ್ಲಿ ಬಳಕೆ ಆದ ‘ಕಣ್ಮಣಿ..’ ಸಾಂಗ್​ನ ತಂಡದವರು ಬಳಕೆ ಮಾಡಿಕೊಂಡಿದ್ದರು. ಇದಕ್ಕೆ ಮ್ಯೂಸಿಕ್ ಕಂಪನಿಯಿಂದ ಒಪ್ಪಿಗೆ ಕೂಡ ಪಡೆದಿದ್ದರು. ಆದರೆ, ಇವರು ಇಳಯರಾಜ ಅವರ ಒಪ್ಪಿಗೆ ಪಡೆದಿರಲಿಲ್ಲ. ಈ ಕಾರಣದಿಂದಲೇ ಇಳಯರಾಜ ಅವರು ಕೋರ್ಟ್​ನಲ್ಲಿ ಕೇಸ್ ಹಾಕಿ, ತಂಡದವರು ಎರಡು ಕೋಟಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ತಮಗೆ 2 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಇಳಯರಾಜ ಕೋರಿದ್ದರು. ಈಗ ‘ಮಂಜುಮ್ಮೇಲ್ ಬಾಯ್ಸ್’ ತಂಡದವರು 60 ಲಕ್ಷ ರೂಪಾಯಿ ಕೊಡಲು ಒಪ್ಪಿದ್ದಾರೆ.

‘ಮಂಜುಮ್ಮೇಲ್ ಬಾಯ್ಸ್’ ತಂಡದವರು ಕೋರ್ಟ್​ನಲ್ಲಿ ಸಾಂಗ್ ಹಕ್ಕು ಪಡೆದಿದ್ದಾಗಿ ವಾದ ಮುಂದಿಟ್ಟಿದ್ದಾರೆ. ‘ನಾವು ಮ್ಯೂಸಿಕ್ ಕಂಪನಿಯಿಂದ ಈ ಹಾಡಿನ ಬಳಕೆಗೆ ಹಕ್ಕನ್ನು ಪಡೆದಿದ್ದೇವೆ’ ಎಂದು ಸಿನಿಮಾ ತಂಡದ ಪರ ವಕೀಲರು ಹೇಳಿದರು. ಇದಕ್ಕೆ ಪ್ರತಿವಾದ ಮಂಡಿಸಿದ ಇಳಯರಾಜ ಪರ ವಕೀಲರು, ‘ಇಳಯರಾಜ ಅವರು ಮಾಡಿದ ಕೆಲಸಗಳಿಗೆ ಅವರು ಕೂಡ ಹಕ್ಕನ್ನು ಹೊಂದಿದ್ದಾರೆ’ ಎಂದರು. ಹೀಗಾಗಿ, ಇಳಯರಾಜ ಅವರು ಈ ಹಾಡನ್ನು ಬಳಸಲು ‘ಮಂಜುಮ್ಮೇಲ್ ಬಾಯ್ಸ್’ ತಂಡಕ್ಕೆ ಯಾವುದೇ ಒಪ್ಪಿಗೆ ನೀಡಿರಲಿಲ್ಲ. ಈಗ ರಾಯಲ್ಟಿ ರೂಪದಲ್ಲಿ ಇಳಯರಾಜ ಅವರಿಗೆ 60 ಲಕ್ಷ ರೂಪಾಯಿ ಅನ್ನು ‘ಮಂಜುಮ್ಮೇಲ್ ಬಾಯ್ಸ್’ ತಂಡ ನೀಡಿದೆ.

ಇದನ್ನೂ ಓದಿ:  ‘ಮಂಜುಮ್ಮೇಲ್ ಬಾಯ್ಸ್’ ನಿರ್ಮಾಪಕರಿಂದ ಮೋಸ; ಬಂತು ಜಾರಿ ನಿರ್ದೇಶನಾಲಯದ ನೋಟಿಸ್

ಈ ಮೊದಲು ‘ಕೂಲಿ’ ಸಿನಿಮಾ ತಂಡದ ವಿರುದ್ಧ ಇಳಯರಾಜ ಕೇಸ್ ಹಾಕಿದ್ದರು. ‘ವಾ ವಾ ಪಕ್ಕಮ್ ವಾ..’ ಹಾಡಿನ ಹಕ್ಕು ತಮ್ಮದು ಎಂದಿದ್ದರು. ಆದರೆ, ಈ ಸಾಂಗ್​ನ ಹಕ್ಕು ಸೋನಿ ಬಳಿ ಇದೆ ಎಂಬುದು ಆ ಬಳಿಕ ತಿಳಿದಿತ್ತು. ಈ ಮೊದಲು ಕೂಡ ಇಳಯರಾಜ ಈ ರೀತಿಯ ಅನೇಕ ಕೇಸ್​ಗಳನ್ನು ಹಾಕಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:23 pm, Mon, 5 August 24

ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಭೀಕರ ಅವಘಡದಿಂದ ಆಟಗಾರರು ಕೂದಲೆಳೆಯ ಅಂತರದಲ್ಲಿ ಪಾರು..!
ಭೀಕರ ಅವಘಡದಿಂದ ಆಟಗಾರರು ಕೂದಲೆಳೆಯ ಅಂತರದಲ್ಲಿ ಪಾರು..!
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ