ನಟಿ ಇಲಿಯಾನಾ ಪ್ರೆಗ್ನೆಂಟ್​ ಆಗಿ ಗರ್ಭಪಾತ ಮಾಡಿಸಿಕೊಂಡಿದ್ದು ನಿಜವೇ? ಎಲ್ಲದಕ್ಕೂ ಸಿಕ್ತು ಈಗ ಉತ್ತರ

| Updated By: ರಾಜೇಶ್ ದುಗ್ಗುಮನೆ

Updated on: May 02, 2021 | 5:33 PM

2018ರ ಸಮಯದಲ್ಲಿ ಆಸ್ಟ್ರೇಲಿಯಾದ ಫೋಟೋಗ್ರಾಫರ್​ ಆ್ಯಂಡ್ರೀವ್​ ನೀಬೋನ್​ ಜೊತೆ ಇಲಿಯಾನಾ ಡೇಟಿಂಗ್​ ಮಾಡುತ್ತಿದ್ದರು. ಇಬ್ಬರು ಜೊತೆಯಾಗಿ ಕಾಣಿಸಿಕೊಂಡ ಹಲವು ಫೋಟೋಗಳು ಅವರ ಪ್ರೀತಿಗೆ ಸಾಕ್ಷಿ ಒದಗಿಸುತ್ತಿದ್ದವು.

ನಟಿ ಇಲಿಯಾನಾ ಪ್ರೆಗ್ನೆಂಟ್​ ಆಗಿ ಗರ್ಭಪಾತ ಮಾಡಿಸಿಕೊಂಡಿದ್ದು ನಿಜವೇ? ಎಲ್ಲದಕ್ಕೂ ಸಿಕ್ತು ಈಗ ಉತ್ತರ
ಇಲಿಯಾನಾ ಡಿಕ್ರೂಸ್
Follow us on

ಬಾಲಿವುಡ್​ನಲ್ಲಿ ನಟಿ ಇಲಿಯಾನಾ ಡಿಕ್ರೂಸ್​ ಸಖತ್​ ಫೇಮಸ್​. ಇತ್ತೀಚೆಗೆ ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ನಲ್ಲಿ ಬಿಡುಗಡೆ ಆದ ‘ದಿ ಬಿಗ್​ ಬುಲ್​’ ಚಿತ್ರದಲ್ಲಿ ಅವರು ನಟಿಸಿದ್ದಾರೆ. ಅವರ ಬದುಕಿನ ಬಗ್ಗೆ ಕೇಳಿಬಂದ ಗಾಸಿಪ್​ಗಳು ಒಂದೆರಡಲ್ಲ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಇಲಿಯಾನಾ ಆ ಎಲ್ಲಾ ಗಾಸಿಪ್​ಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಅಚ್ಚರಿ ಎಂದರೆ ಇಲಿಯಾನಾ ಪ್ರೆಗ್ನೆಂಟ್​ ಆಗಿ, ಬಳಿಕ ಗರ್ಭಪಾತ ಮಾಡಿಸಿಕೊಂಡಿದ್ದಾರೆ ಎಂಬ ಸುದ್ದಿ ಒಂದು ಕಾಲದಲ್ಲಿ ಹಬ್ಬಿತ್ತು. ಆಗ ಅವರು ಸೋಶಿಯಲ್​ ಮೀಡಿಯಾದಲ್ಲಿ ‘ಪ್ರೆಗ್ನೆಂಟ್​ ಆಗಿಲ್ಲ’ ಎಂದು ಪೋಸ್ಟ್​ ಮಾಡುವ ಮೂಲಕ ಎಲ್ಲರ ಬಾಯಿ ಮುಚ್ಚಿಸಿದ್ದರು. ಆದರೆ ಗಾಸಿಪ್​ಪ್ರಿಯರು ಅಷ್ಟಕ್ಕೇ ಸುಮ್ಮನಾಗಲಿಲ್ಲ. ಇಲಿಯಾನಾ ಆತ್ಮಹತ್ಯೆ ಮಾಡಿಕೊಂಡರು ಎಂಬ ಸುದ್ದಿಯನ್ನೂ ಹಬ್ಬಿಸಿದ್ದರು.

ನಿಮ್ಮ ಬಗ್ಗೆ ನೀವು ಕೇಳಿದ ವಿಚಿತ್ರವಾದ ಗಾಸಿಪ್​ ಯಾವುದು ಎಂಬ ಪ್ರಶ್ನೆಗೆ ಉತ್ತರಿಸುವಾಗ ಆ ಘಟನೆಯನ್ನು ಇಲಿಯಾನಾ ನೆನಪು ಮಾಡಿಕೊಂಡಿದ್ದಾರೆ. ‘ನಾನು ಆತ್ಮಹತ್ಯೆ ಮಾಡಿಕೊಂಡಿದ್ದೇನೆ. ಅದನ್ನು ಮೊದಲು ನನ್ನ ಮನೆ ಕೆಲಸದವಳು ನೋಡಿದಳಂತೆ ಎಂದು ಗಾಸಿಪ್​ ಹಬ್ಬಿತ್ತು. ಮೊದಲನೆಯಾಗಿ ನಾನು ಮನೆಯಲ್ಲಿ ಕೆಲಸದವಳನ್ನೇ ನೇಮಿಸಿಕೊಂಡಿಲ್ಲ. ಇಂಥದ್ದನ್ನೆಲ್ಲ ಬರೆಯುವವರಿಗೆ ವಿಷಯ ಎಲ್ಲಿಂದ ಸಿಗತ್ತೋ ಗೊತ್ತಿಲ್ಲ’ ಎಂದು ಎಲ್ಲವನ್ನೂ ಅವರು ತಳ್ಳಿ ಹಾಕಿದ್ದಾರೆ.

2018ರ ಸಮಯದಲ್ಲಿ ಆಸ್ಟ್ರೇಲಿಯಾದ ಫೋಟೋಗ್ರಾಫರ್​ ಆ್ಯಂಡ್ರೀವ್​ ನೀಬೋನ್​ ಜೊತೆ ಇಲಿಯಾನಾ ಡೇಟಿಂಗ್​ ಮಾಡುತ್ತಿದ್ದರು. ಇಬ್ಬರು ಜೊತೆಯಾಗಿ ಕಾಣಿಸಿಕೊಂಡ ಹಲವು ಫೋಟೋಗಳು ಅವರ ಪ್ರೀತಿಗೆ ಸಾಕ್ಷಿ ಒದಗಿಸುತ್ತಿದ್ದವು. ಆ ಸಮಯದಲ್ಲಿಯೇ ಇಲಿಯಾನಾ ಅವರ ಪ್ರೆಗ್ನೆನ್ಸಿ ಮತ್ತು ಗರ್ಭಪಾತದ ಗಾಸಿಪ್​ ಕೇಳಿಬಂದಿತ್ತು. 2019ರಲ್ಲಿ ಆ್ಯಂಡ್ರೀವ್​ ನೀಬೋನ್ ಮತ್ತು ಇಲಿಯಾನಾ ಬ್ರೇಕಪ್​ ಮಾಡಿಕೊಂಡರು.

2006ರಲ್ಲಿ ‘ದೇವದಾಸು’ ತೆಲುಗು ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಇಲಿಯಾನಾ ನಂತರ 2012ರಲ್ಲಿ ಬರ್ಫಿ ಸಿನಿಮಾದಿಂದ ಬಾಲಿವುಡ್​ಗೆ ಎಂಟ್ರಿ ಪಡೆದರು. ಆ ಬಳಿಕ ಅವರ ಸ್ಟಾರ್​ಗಿರಿ ಹೆಚ್ಚಿತು. ರುಸ್ತುಂ, ಮುಬಾರಕಾ, ಬಾದ್​ಷಾಹೋ, ರೇಡ್​ ಮುಂತಾದ ಚಿತ್ರಗಳ ಮೂಲಕ ಅವರು ಪ್ರೇಕ್ಷಕರಿಗೆ ಹತ್ತಿರ ಆಗಿದ್ದಾರೆ.

ಇದನ್ನೂ ಓದಿ:

ನಟಿ ಇಲಿಯಾನ‌ ಪತಿ ಆ್ಯಂಡ್ಯೂ ನೀಬೋನ್ ಬ್ರೇಕಪ್ ಆಗಿದ್ಯಾಕೆ?

ಸ್ಟಾರ್ ನಟಿಗೆ ಮೋಸ; ಲಾಕ್​​ಡೌನ್ ವೇಳೆ ಹೊರಬಿತ್ತು ಎರಡನೇ ಗಂಡನ ಅನೈತಿಕ ಸಂಬಂಧ