AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದೃಶ್ಯಂ 3 ಥ್ರಿಲ್ಲರ್ ಚಿತ್ರವಲ್ಲ, ಇದು ಸೋತರೂ ನನಗೆ ಬೇಸರವಿಲ್ಲ’; ನಿರ್ದೇಶಕನ ನೇರ ಮಾತು

ಮಲಯಾಳಂನ ‘ದೃಶ್ಯಂ’ ಸರಣಿಯ ಮೂರನೇ ಭಾಗವಾದ ‘ದೃಶ್ಯಂ 3’ ಅನ್ನು ನಿರ್ದೇಶಕ ಜೀತು ಜೋಸೆಫ್ ಅವರು ಅನೌನ್ಸ್ ಮಾಡಿದ್ದಾರೆ. ಆದರೆ, ಇದು ಥ್ರಿಲ್ಲರ್ ಶೈಲಿಯಲ್ಲಿ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಚಿತ್ರದ ಕಥಾವಸ್ತು ಒಂದು ಹೊಸ ತಿರುವನ್ನು ಪಡೆದಿದೆ. ಈ ಚಿತ್ರ ಹಿಂದಿ ಮತ್ತು ಕನ್ನಡ ಭಾಷೆಗಳಲ್ಲೂ ಒಟ್ಟಿಗೆ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

‘ದೃಶ್ಯಂ 3 ಥ್ರಿಲ್ಲರ್ ಚಿತ್ರವಲ್ಲ, ಇದು ಸೋತರೂ ನನಗೆ ಬೇಸರವಿಲ್ಲ’; ನಿರ್ದೇಶಕನ ನೇರ ಮಾತು
ಮೋಹನ್​ಲಾಲ್
ರಾಜೇಶ್ ದುಗ್ಗುಮನೆ
|

Updated on: Aug 26, 2025 | 8:51 AM

Share

ಮಲಯಾಳಂನ ‘ದೃಶ್ಯಂ’ ಹಾಗೂ ‘ದೃಶ್ಯಂ 2’ ಸಿನಿಮಾಗಳು ಕನ್ನಡದಲ್ಲೂ ರಿಲೀಸ್ ಆಗಿ ಮೆಚ್ಚುಗೆ ಪಡೆದಿವೆ. ಮೂಲ ಚಿತ್ರದಲ್ಲಿ ಮೋಹನ್​ಲಾಲ್ ಹೀರೋ ಆದರೆ, ರಿಮೇಕ್​ನಲ್ಲಿ ರವಿಚಂದ್ರನ್ ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈಗ ಮಲಯಾಳಂ ನಿರ್ದೇಶಕ ಜೀತು ಜೊಸೆಫ್ ಅವರು ‘ದೃಶ್ಯಂ 3’ (Drishyam 3) ಅನೌನ್ಸ್ ಮಾಡಿದ್ದಾರೆ. ಆದರೆ, ಇದು ಸಸ್ಪೆನ್ಸ್ ಥ್ರಿಲ್ಲರ್ ಆಗಿರೋದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಸಿನಿಮಾ ನೋಡಿದ ಬಳಿಕ ಅದು ಯಾಕೆ ಎಂಬ ವಿಚಾರ ಗೊತ್ತಾಗಲಿದೆ ಎಂದು ನಿರ್ದೇಶಕರು ಹೇಳಿದ್ದಾರೆ.

‘ದೃಶ್ಯಂ’ ಹಾಗೂ ‘ದೃಶ್ಯಂ 2’ ಚಿತ್ರಗಳು ಪ್ರತಿ ಹಂತದಲ್ಲೂ ಟ್ವಿಸ್ಟ್​ಗಳನ್ನು ಹೊಂದಿತ್ತು. ಎರಡನೇ ಪಾರ್ಟ್ ಕೊನೆಯಲ್ಲಿ ಮೂರನೇ ಪಾರ್ಟ್​ಗೆ ಕನೆಕ್ಷನ್ ನೀಡಲಾಗಿತ್ತು. ಈ ಸಿನಿಮಾದಲ್ಲೂ ಥ್ರಿಲ್ಲರ್ ಇರಲಿದೆ ಎಂದು ಅನೇಕರು ಊಹಿಸಿದ್ದರು. ಆದರೆ, ‘ಇದು ಥ್ರಿಲ್ಲರ್ ಅಲ್ಲ ಎಂದು ನಾನು ಭಾವಿಸುತ್ತೇನೆ. ಸಿನಿಮಾ ನೋಡಿದ ನಂತರ ಏಕೆ ಎಂದು ನಿಮಗೆ ತಿಳಿಯುತ್ತದೆ’ ಎಂದಿದ್ದಾರೆ ಅವರು.

‘ದೃಶ್ಯಂ 2 ನೋಡಿದ ನಂತರ, ಮೋಹನ್​ಲಾಲ್ ಮೂರನೇ ಭಾಗ ಬರುತ್ತದೆಯೇ ಎಂದು ಕೇಳಿದರು. ನನಗೆ ಗೊತ್ತಿಲ್ಲ ಎಂದು ಹೇಳಿದೆ. ಸಿನಿಮಾ ಸಂಭವಿಸಿದರೆ ಕ್ಲೈಮ್ಯಾಕ್ಸ್ ಈ ರೀತಿ ಇರಬೇಕು ಎಂದು ನಾನು ಅವರಿಗೆ ಹೇಳಿದೆ. ನನಗೆ ಸ್ಟೋರಿ ಮಾಡುವಂತೆ ಅವರು ಕೇಳಿದರು. ಇದಕ್ಕೆ ನನಗೆ ಸ್ವಲ್ಪ ಸಮಯ ಹಿಡಿಯಿತು’ ಎಂದಿದ್ದಾರೆ ಜೋಸೆಫ್.

‘ನಾನು ಇದನ್ನು ಹಣಕ್ಕಾಗಿ ಮಾಡುತ್ತಿಲ್ಲ ಎಂಬುದನ್ನು ನಿರ್ಮಾಪಕರಿಗೂ ಹೇಳಿದ್ದೇನೆ. ಇದು ಥ್ರಿಲ್ಲರ್ ಸಿನಿಮಾ ಅಲ್ಲ. ಜಾರ್ಜ್​ಕುಟ್ಟಿ ಮತ್ತು ಕುಟುಂಬದವರಿಗೆ ಏನಾಯಿತು ಎಂಬುದಷ್ಟೇ ಚಿತ್ರದಲ್ಲಿ ಇರಲಿದೆ. ಇದನ್ನು ನಾನು ನಿರ್ಮಾಪಕರಿಗೆ ಮನದಟ್ಟು ಮಾಡಿಕೊಟ್ಟಿದ್ದೇನೆ. ಇದರಲ್ಲಿ ರಿಸ್ಕ್ ಇದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ದೃಶ್ಯಂ 3’ ವಿವಾದ: ಅಜಯ್ ದೇವಗನ್ ಮೇಲೆ ಕೇಸು, ನಿರ್ದೇಶಕ ಹೇಳಿದ್ದೇನು?

‘ನಾನು ಥ್ರಿಲ್ಲರ್‌ಗಳಿಂದ ಬೇಸತ್ತಿದ್ದೇನೆ. ನಾನು ಹೊಸದನ್ನು ಪ್ರಯತ್ನಿಸಲು ಬಯಸುತ್ತೇನೆ. ಅದು ವಿಫಲವಾದರೂ ಸಹ’ ಎಂದು ಅವರು ಹೇಳಿದ್ದಾರೆ. ಅಕ್ಟೋಬರ್​ನಲ್ಲಿ ‘ದೃಶ್ಯಂ 3’ ಸಿನಿಮಾ ಶೂಟ್ ಶುರುವಾಗಲಿದೆ ಎನ್ನಲಾಗಿದೆ. ಈ ಸಿನಿಮಾನ ಹಿಂದಿ ಹಾಗೂ ಕನ್ನಡದಲ್ಲಿಯೂ ಒಟ್ಟಿಗೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಅಂದರೆ, ಈ ಮೂರು ಭಾಷೆಯಲ್ಲಿ ಸಿನಿಮಾನ ಒಟ್ಟಿಗೆ ರಿಲೀಸ್ ಮಾಡುವ ಪ್ಲ್ಯಾನ್ ನಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್​ಗಳು ಭಸ್ಮ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ