AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಖುಷಿಯಿಂದ ಎಷ್ಟು ಕೊಡ್ತೀರೋ ಕೊಡಿ: ಹೂವು ಮಾರುವಾಕೆಯ ಮುಗ್ಧತೆಗೆ ಮನಸೋತ ಮಹಿಳೆ

ನೀವು ಖುಷಿಯಿಂದ ಎಷ್ಟು ಕೊಡ್ತೀರೋ ಕೊಡಿ: ಹೂವು ಮಾರುವಾಕೆಯ ಮುಗ್ಧತೆಗೆ ಮನಸೋತ ಮಹಿಳೆ

ಅಕ್ಷಯ್​ ಪಲ್ಲಮಜಲು​​
|

Updated on: Feb 11, 2026 | 1:40 PM

Share

ಈ ವಿಡಿಯೋದಲ್ಲಿ ಒಬ್ಬ ಮುಗ್ಧ ಹೂವು ಮಾರುವ ಮಹಿಳೆಯ ಸುಂದರ ನಗು ಮತ್ತು ಹಣಕ್ಕಿಂತ ಪ್ರೀತಿಗೆ, ಗೌರವಕ್ಕೆ ಬೆಲೆ ನೀಡುವ ಸ್ವಭಾವ ಜನರ ಮನಗೆದ್ದಿದೆ. ಆಕೆಯ ಆತ್ಮವಿಶ್ವಾಸ ಮತ್ತು "ಖುಷಿಯಿಂದ ಎಷ್ಟು ಕೊಡ್ತೀರೋ ಅಷ್ಟು ಕೊಡಿ" ಎಂಬ ಮಾತು, ವ್ಯಾಪಾರದಲ್ಲಿ ಮಾನವೀಯತೆ ಮುಖ್ಯ ಎಂಬುದನ್ನು ತೋರಿಸುತ್ತದೆ. ಈ ಹೃದಯಸ್ಪರ್ಶಿ ವಿಡಿಯೋ ವ್ಯಾಪಕವಾಗಿ ವೈರಲ್ ಆಗಿದ್ದು, ಆಕೆಯ ಸರಳತೆಗೆ ಎಲ್ಲರೂ ಮಾರುಹೋಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್​​ ಆಗಿದೆ. ಈ ವಿಡಿಯೋದಲ್ಲಿ ಒಬ್ಬ ಹೂವು ಮಾರುವ ಮಹಿಳೆಯ ಮುಗ್ಧತೆ ಮತ್ತು ಆಕೆಯ ಮುಖದಲ್ಲಿರುವ ಸುಂದರವಾದ ನಗು ಎಲ್ಲರ ಗಮನ ಸೆಳೆಯುತ್ತದೆ. ಆಕೆ ಹಣಕ್ಕಿಂತ ಹೆಚ್ಚಾಗಿ ಪ್ರೀತಿ ಮತ್ತು ಗೌರವಕ್ಕೆ ಬೆಲೆ ನೀಡುತ್ತಾಳೆ ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ. ಈ ವಿಡಿಯೋ ಇಷ್ಟೊಂದು ಜನರಿಗೆ ತಲುಪಲು ಮುಖ್ಯ ಕಾರಣ ಆ ಹೂವು ಮಾರುವ ಮಹಿಳೆಯ ಆತ್ಮವಿಶ್ವಾಸ ಮತ್ತು ಮುಗ್ಧತೆ ಕಾರಣ. ಸಾಮಾನ್ಯವಾಗಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರು ಗ್ರಾಹಕರೊಂದಿಗೆ ಚೌಕಾಶಿ ಮಾಡುವುದನ್ನು ನಾವು ನೋಡುತ್ತೇವೆ. ಆದರೆ ಇಲ್ಲಿ ಈಕೆ, ನೀವು ಖುಷಿಯಿಂದ ಎಷ್ಟು ಕೊಡ್ತೀರೋ ಅಷ್ಟೇ ಕೊಡಿ. ಎಂದು ಹೇಳುವ ಮೂಲಕ ಹಣಕ್ಕಿಂತ ಗೌರವ ಮತ್ತು ಸಂಬಂಧಕ್ಕೆ ಹೆಚ್ಚಿನ ಬೆಲೆ ನೀಡಿದ್ದಾಳೆ. ಈ ವಿಡಿಯೋದಲ್ಲಿ ನಡೆದ ಸಂಭಾಷಣೆ ಏನು? ಎಂಬುದು ಇಲ್ಲಿದೆ. ಹೂವು ಮಾರುವಾಕೆ ಅರೇ… ಇಲ್ಲ ಇಲ್ಲ ಇಲ್ಲ. ಇದು ನಿಮಗಾಗಿ, ಇದಕ್ಕೆ ಕಾರಿನಲ್ಲಿದ್ದವರು ಎಷ್ಟು ಇದರ ಬೆಲೆ? ಹೇಳಿ ಎಂದು ಕೇಳುತ್ತಾರೆ. ಇಟ್ಟುಕೊಳ್ಳಿ ದೀದಿ. ಪರವಾಗಿಲ್ಲ ಎಂದು ಹೂವು ಮಾರುವಾಕೆ ಹೇಳುತ್ತಾಳೆ. ಫ್ರೀ ಆದ್ರೆ ಬೇಡ, ನನಗೆ ಬೇಡ ಎಂದು ಕಾರಿನಲ್ಲಿದ್ದವರು ಹೇಳುತ್ತಾರೆ. ಮತ್ತೆ ಹೂವು ಮಾರುವ ಮಹಿಳೆ, ಇಲ್ಲ, ಇದು ನಿಮಗಾಗಿ ಎಂದು ಹೇಳುತ್ತಾಳೆ. ಇದರ ಬೆಲೆ ಎಷ್ಟು? ಬೇಗ ಹೇಳಿ ಎಂದು ಕಾರಿನಲ್ಲಿದ್ದವರು ಕೇಳುತ್ತಾರೆ. ನೀವು ಖುಷಿಯಿಂದ ಎಷ್ಟು ಕೊಡ್ತೀರೋ ಅಷ್ಟು ಕೊಡಿ ಎಂದು ಈ ಮಹಿಳೆ ಹೇಳುತ್ತಾಳೆ. ಥ್ಯಾಂಕ್ ಯು ಸರ್… ಬಾಯ್! ಎಂದು ಹೇಳುತ್ತಾಳೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ