ಭಾರತ ಮೂಲದ ಅಮೆರಿಕ ಉದ್ಯಮಿ ಚಂದ್ರಿಕಾ ಟಂಡನ್​ಗೆ ಗ್ರ್ಯಾಮಿ ಅವಾರ್ಡ್​

ಭಾರತ ಮೂಲದ ಅಮೆರಿಕ ಪ್ರಜೆ ಚಂದ್ರಿಕಾ ಟಂಡನ್ ಅವರು ತಮ್ಮ 'ತ್ರಿವೇಣಿ' ಆಲ್ಬಮ್‌ಗೆ 67ನೇ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಭಾರತೀಯ ಶಾಸ್ತ್ರೀಯ ಸಂಗೀತ, ವೈದಿಕ ಪಠಣ ಮತ್ತು ಅಂತರರಾಷ್ಟ್ರೀಯ ಸಂಪ್ರದಾಯಗಳನ್ನು ಒಳಗೊಂಡ ಈ ಆಲ್ಬಮ್ 'ಬೆಸ್ಟ್ ನ್ಯೂ ಏಜ್' ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ. ಚಂದ್ರಿಕಾ ಅವರ ಸಾಧನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಸುರಿಮಳೆಯಾಗಿದೆ.

ಭಾರತ ಮೂಲದ ಅಮೆರಿಕ ಉದ್ಯಮಿ ಚಂದ್ರಿಕಾ ಟಂಡನ್​ಗೆ ಗ್ರ್ಯಾಮಿ ಅವಾರ್ಡ್​
ಚಂದ್ರಿಕಾ ಟಂಡನ್
Updated By: ರಾಜೇಶ್ ದುಗ್ಗುಮನೆ

Updated on: Feb 03, 2025 | 11:53 AM

ಭಾರತ ಮೂಲದ ಅಮೆರಿಕ ಪ್ರಜೆ ಹಾಗೂ ಉದ್ಯಮಿ ಚಂದ್ರಿಕಾ ಟಂಡನ್ ಅವರು 67ನೇ ಸಾಲಿನ ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದು ಸಾಧನೆ ಮಾಡಿದ್ದಾರೆ. ಅವರು ಸಿದ್ಧಪಡಿಸಿದ ‘ತ್ರಿವೇಣಿ’ ಆಲ್ಬಮ್​ಗೆ ‘ಬೆಸ್ಟ್ ನ್ಯೂ ಏಜ್’  ವಿಭಾಗದಲ್ಲಿ ಪ್ರಶಸ್ತಿ ದೊರೆತಿದೆ. ಸ್ಪರ್ಧೆಯಲ್ಲಿ ಇದ್ದ ಭಾರತದ ರಿಕ್ಕಿ ಕೇಜ್ ಮೊದಲಾದವರನ್ನು ಅವರು ಹಿಂದಿಕ್ಕಿದ್ದಾರೆ.

ಲಾಸ್ ಏಂಜಲೀಸ್​​ನಲ್ಲಿ ಭಾನುವಾರ (ಫೆಬ್ರವರಿ 2) ಅವಾರ್ಡ್​ ಕಾರ್ಯಕ್ರಮ ನಡೆದಿದೆ. ದಕ್ಷಿಣ ಆಫ್ರಿಕಾದ ಫ್ಲೌಟಿಸ್ಟ್ ವೂಟರ್ ಕೆಲ್ಲರ್‌ಮ್ಯಾನ್ ಮತ್ತು ಜಪಾನಿನ ಸೆಲಿಸ್ಟ್ ಎರು ಮಾಟ್ಸುಮೊಟೊ ಅವರ ಜೊತೆ ಸೇರಿ ಚಂದ್ರಿಕಾ ಅವರು ‘ತ್ರಿವೇಣಿ’ ಆಲ್ಬಂ ಮಾಡಿದ್ದರು. ‘ನನಗೆ ಖುಷಿ ಆಗುತ್ತಿದೆ’ ಎಂದು ಚಂದ್ರಿಕಾ ಅವರು ಹೇಳಿಕೊಂಡಿದ್ದಾರೆ. ಈ ರೇಸ್​ನಲ್ಲಿ  , ಅನೌಷ್ಕಾ ಶಂಕರ್, ರಾಧಿಕಾ ವೆಕಾರಿಯಾ ಕೂಡ ಇದ್ದರು.

‘ತ್ರಿವೇಣಿ’ ಆಲ್ಬಂ ಭಾರತೀಯ ಶಾಸ್ತ್ರೀಯ ಸಂಗೀತ, ವೈದಿಕ ಪಠಣಗಳು ಮತ್ತು ಅಂತರಾಷ್ಟ್ರೀಯ ಸಂಪ್ರದಾಯಗಳನ್ನು ಒಳಗೊಂಡಿದೆ. ಇದು ಕೇಳುಗರನ್ನು ಧ್ಯಾನಸ್ಥ ಮಾಡುವ ತಾಕತ್ತು ಹೊಂದಿದೆ. ಈ ಕಾರಣಕ್ಕೆ ಇದಕ್ಕೆ ಅವಾರ್ಡ್ ಸಿಕ್ಕಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ

ಚಂದ್ರಿಕಾ ಟಂಡನ್ ಯಾರು?

ಚಂದ್ರಿಕಾ ಅವರು ಉದ್ಯಮ ಹಾಗೂ ಸಂಗೀತ ಲೋಕಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಚಂದ್ರಿಕಾ ಹುಟ್ಟಿ ಬೆಳೆದಿದ್ದು ಚೆನ್ನೈನಲ್ಲಿ. ‘ಸೋಲ್ ಚಾಂಟ್ಸ್ ಮ್ಯೂಸಿಕ್’ ಹೆಸರಿನ ನಾನ್​ ಪ್ರಾಫಿಟೆಬಲ್ ಮ್ಯೂಸಿಕ್ ಲೇಬಲ್​​ನ 2005ರಲ್ಲಿ ಆರಂಭಿಸಿದರು. ಅವರು ವರ್ಷ ಕಳೆದಂತೆ ಹಲವು ಆಲ್ಬಂಗಳನ್ನು ಇದರ ಅಡಿಯಲ್ಲಿ ರಿಲೀಸ್ ಮಾಡಿದರು.  ಅವರು ಶಿಕ್ಷಣ ಕ್ರೇತ್ರದಲ್ಲೂ ಸಾಧನೆ ಮಾಡಿದ್ದಾರೆ. ಉನ್ನತ ಶಿಕ್ಷಣ ಕ್ಷೇತ್ರದ ಕಲ್ಯಾಣಕ್ಕೆ ಅವರು ಶ್ರಮಿಸಿದ್ದಾರೆ. ನ್ಯೂಯಾರ್ಕ್​ನ ಹಿಂದೂ ದೇವಾಲಯಕ್ಕೆ ಅವರು ಸಾಕಷ್ಟು ದಾನ ಮಾಡಿದ್ದಾರೆ.  ಮಹಿಳಾ ಕಲ್ಯಾಣದತ್ತವೂ ಅವರು ಗಮನ ಹರಿಸಿದ್ದಾರೆ. ಚಂದ್ರಿಕಾ ಅವರ ಸಹೋದರಿ ಇಂದ್ರಾ ನೂಯಿ ‘ಪೆಪ್ಸಿಕೋ’ನ ಸಿಇಒ ಆಗಿದ್ದಾರೆ.

ಇದನ್ನೂ ಓದಿ: ಗ್ರ್ಯಾಮಿ ವಿಜೇತ ಸಂಗೀತಗಾರ ರಿಕ್ಕಿ ಕೇಜ್​ಗೆ ದೆಹಲಿ ಏರ್​ಪೋರ್ಟ್​ನಲ್ಲಿ ಬೆದರಿಕೆ

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚಂದ್ರಿಕಾ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಾ ಇದ್ದಾರೆ. ದೇಶ-ವಿದೇಶದವರು ಸೋಶಿಯಲ್ ಮೀಡಿಯಾ ಮೂಲಕ ಅವರಿಗೆ ಶುಭಾಶಯ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.