‘ಅರ್ಜುನ್ ರೆಡ್ಡಿ’ ಚಿತ್ರದಲ್ಲಿ ನಟಿಸಬೇಕಿತ್ತು ಸಾಯಿ ಪಲ್ಲವಿ; ರಿಜೆಕ್ಟ್ ಆಗಲು ಕಾರಣ ಆಯ್ತು ಸ್ಲೀವ್​ಲೆಸ್ ಡ್ರೆಸ್ ವಿಚಾರ

ಸಾಯಿ ಪಲ್ಲವಿ ಅವರು 'ಅರ್ಜುನ್ ರೆಡ್ಡಿ' ಚಿತ್ರದಲ್ಲಿ ನಟಿಸಲು ನಿರಾಕರಿಸಿದ್ದಾರೆ ಎಂಬುದು ಈಗ ತಿಳಿದುಬಂದಿದೆ. ಚಿತ್ರದಲ್ಲಿರುವ ಬೋಲ್ಡ್ ದೃಶ್ಯಗಳನ್ನು ಮಾಡಲು ಅವರು ಇಷ್ಟಪಡದ ಕಾರಣ ಇದು ಸಾಧ್ಯವಾಗಿಲ್ಲ. ನಿರ್ದೇಶಕ ಸಂದೀಪ್ ರೆಡ್ಡಿ ವಂಗ್ ಅವರು ಈ ವಿಷಯವನ್ನು ಒಪ್ಪಿಕೊಂಡಿದ್ದಾರೆ. ಸಾಯಿ ಪಲ್ಲವಿ ಅವರ ನಟನೆಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರೂ, ಅವರ ನಿರ್ಧಾರವನ್ನು ಅವರು ಗೌರವಿಸಿದ್ದಾರೆ.

‘ಅರ್ಜುನ್ ರೆಡ್ಡಿ’ ಚಿತ್ರದಲ್ಲಿ ನಟಿಸಬೇಕಿತ್ತು ಸಾಯಿ ಪಲ್ಲವಿ; ರಿಜೆಕ್ಟ್ ಆಗಲು ಕಾರಣ ಆಯ್ತು ಸ್ಲೀವ್​ಲೆಸ್ ಡ್ರೆಸ್ ವಿಚಾರ
ಸಾಯಿ ಪಲ್ಲವಿ-ಸಂದೀಪ್ ರೆಡ್ಡಿ ವಂಗ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Feb 03, 2025 | 2:27 PM

ನಟಿ ಸಾಯಿ ಪಲ್ಲವಿ ಅವರು ಯಾವುದೇ ಸಿನಿಮಾ ಮಾಡಿದರೂ ಗಮನ ಸೆಳೆಯುತ್ತಾರೆ. ಅವರು ಒಪ್ಪಿಕೊಂಡು ಮಾಡುವ ಚಿತ್ರಗಳಿಗೆ ಫಿದಾ ಆಗದವರೇ ಇಲ್ಲ. ಅವರು ಗ್ಲಾಮರ್ ಲೋಕಕ್ಕೆ ಕಾಲಿಟ್ಟ ಹೊರತಾಗಿಯೂ ಹೆಚ್ಚು ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ಇಷ್ಟಪಡುವುದೇ ಇಲ್ಲ. ವಿಶೇಷ ಎಂದರೆ ಅವರು ‘ಅರ್ಜುನ್ ರೆಡ್ಡಿ’ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ, ಅವರ ಬಳಿ ಚರ್ಚೆ ಮಾಡಲೇ ಇಲ್ಲ ಸಂದೀಪ್ ರೆಡ್ಡಿ ವಂಗ. ಇದಕ್ಕೆ ಕಾರಣ ಇಲ್ಲಿದೆ.

‘ಅರ್ಜುನ್ ರೆಡ್ಡಿ’ ಸಿನಿಮಾ ನೋಡಿದವರಿಗೆ ಗೊತ್ತಿರುತ್ತದೆ. ಈ ಚಿತ್ರದಲ್ಲಿ ಹಲವು ಬೋಲ್ಡ್ ದೃಶ್ಯಗಳು ಇವೆ. ಈ ಚಿತ್ರದ ನಟಿ ಶಾಲಿನಿ ಪಾಂಡೆ ಹಾಗೂ ನಾಯಕ ವಿಜಯ್ ದೇವರಕೊಂಡ ಮಧ್ಯೆ ಲಿಪ್ ಲಾಕ್ ದೃಶ್ಯಗಳು ಕೂಡ ಇವೆ. ಈ ರೀತಿಯ ದೃಶ್ಯಗಳನ್ನು ಮಾಡಲು ಸಾಯಿ ಪಲ್ಲವಿ ಯಾವಾಗಲೂ ರೆಡಿ ಇಲ್ಲ. ಎಷ್ಟೇ ಕೋಟಿ ಕೊಡುತ್ತೇನೆ ಎಂದರೂ ಅವರು ಒಪ್ಪಲ್ಲ. ಇದು ಸಂದೀಪ್ ರೆಡ್ಡಿ ವಂಗಗೆ ಮನವರಿಕೆ ಆಗಿತ್ತು. ವೇದಿಕೆ ಮೇಲೆ ಈ ಬಗ್ಗೆ ಅವರು ಮಾತನಾಡಿದ್ದರು.

‘ನಿಮ್ಮ ನಟನೆ ನನಗೆ ಇಷ್ಟ. ಪ್ರೇಮಮ್ ಚಿತ್ರದಿಂದ ನೀವು ಇಷ್ಟ. ನಾನು ಅರ್ಜುನ್ ರೆಡ್ಡಿಗೆ ನಟಿ ಹುಡುಕುತ್ತಿದ್ದೆ. ಕೇರಳದ ಒಬ್ಬರು ನನ್ನ ಸಿನಿಮಾ ಕಾಸ್ಟಿಂಗ್​ಗೆ ಕೋ ಆರ್ಡಿನೇಟರ್ ಆಗಿ ಸಿಕ್ಕರು. ಅವರು ನನ್ನ ಬಳಿ ಕಥೆ ಕೇಳಿದರು. ಪ್ರೀತಿಯಲ್ಲಿ ನಾಶವಾದ ವ್ಯಕ್ತಿಯ ಬಗ್ಗೆ ಸಿನಿಮಾ ಮಾಡುತ್ತಿದ್ದೇನೆ. ಇದು ಸಖತ್ ರೊಮ್ಯಾಂಟಿಕ್ ಸಿನಿಮಾ ಕೂಡ ಹೌದು. ರೊಮ್ಯಾಂಟಿಕ್ ದೃಶ್ಯವನ್ನು ಒಂದು ಹಂತ ಮೇಲೆ ತೋರಿಸುತ್ತೇವೆ ಎಂದು ಕೋ ಆರ್ಡಿನೇಟರ್​ಗೆ ಹೇಳಿದೆ’ ಎಂದಿದ್ದಾರೆ ಸಂದೀಪ್.

‘ಸಾಯಿ ಪಲ್ಲವಿ ಅವರನ್ನು ಈ ಚಿತ್ರಕ್ಕೆ ನಾಯಕಿ ಆಗಿ ಆಯ್ಕೆ ಮಾಡಬೇಕು ಎಂದುಕೊಂಡಿದ್ದೇನೆ ಎಂದೆ. ಇದಕ್ಕೆ ಕೋ ಆರ್ಡಿನೇಟರ್​ ಪ್ರತಿಕ್ರಿಯಿಸಿದರು. ನೀವು ಅವರನ್ನು ಮರೆತುಬಿಡಿ, ಅವರು ಸ್ಲೀವ್​ಲೆಸ್ ಕೂಡ ಹಾಕಲ್ಲ ಎಂದರು. ಅವಕಾಶಗಳು ಬಂದಂತೆ ಸಾಯಿ ಪಲ್ಲವಿ ಕೂಡ ಬದಲಾಗುತ್ತಾರೆ ಅಂತ ನಾನು ಆಗ ಅಂದುಕೊಂಡಿದ್ದೆ. ಆದರೆ, ಸಾಯಿ ಪಲ್ಲವಿ ಈಗಲೂ ಬದಲಾಗಿಲ್ಲ’ ಎಂದು ಸಂದೀಪ್ ರೆಡ್ಡಿ ವಂಗ ಅವರು ಹೆಮ್ಮೆಯಿಂದ ಮಾತನಾಡಿದರು. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಇತ್ತೀಚೆಗೆ ‘ತಾಂಡೇಲ್’ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ಹೈದರಾಬಾದ್​ನಲ್ಲಿ ನಡೆದಿತ್ತು. ಇದರಲ್ಲಿ ಸಂದೀಪ್ ಕೂಡ ಭಾಗಿ ಆಗಿದ್ದರು. ಈ ಸಂದರ್ಭದಲ್ಲಿ ಆಡಿದ ಮಾತು ಇದು ಎನ್ನಲಾಗಿದೆ. ಈ ಮಾತನ್ನು ಅನೇಕರು ಒಪ್ಪಿಕೊಂಡಿದ್ದಾರೆ.

Published On - 2:26 pm, Mon, 3 February 25

ದೆಹಲಿಯ ಬಿಜೆಪಿ ಸರ್ಕಾರ ಪ್ರಧಾನಿ ಮೋದಿಯವರ ವಿಶನ್ ಸಾಕಾರಗೊಳಿಸಲಿದೆ: ವರ್ಮಾ
ದೆಹಲಿಯ ಬಿಜೆಪಿ ಸರ್ಕಾರ ಪ್ರಧಾನಿ ಮೋದಿಯವರ ವಿಶನ್ ಸಾಕಾರಗೊಳಿಸಲಿದೆ: ವರ್ಮಾ
ಎಎಪಿ ಸೋಲಿನ ಬಗ್ಗೆ ಅರವಿಂದ ಕೇಜ್ರಿವಾಲ್ ಮೊದಲ ಪ್ರತಿಕ್ರಿಯೆ ಹೀಗಿದೆ ನೋಡಿ
ಎಎಪಿ ಸೋಲಿನ ಬಗ್ಗೆ ಅರವಿಂದ ಕೇಜ್ರಿವಾಲ್ ಮೊದಲ ಪ್ರತಿಕ್ರಿಯೆ ಹೀಗಿದೆ ನೋಡಿ
ರಾಜಕೀಯ ಪಂಡಿತ ರಾಹುಲ್​ ಗಾಂಧಿ EVM​ ಬಗ್ಗೆ ಮಾತನಾಡುತ್ತಾರೆ: ಜೋಶಿ ವ್ಯಂಗ್ಯ
ರಾಜಕೀಯ ಪಂಡಿತ ರಾಹುಲ್​ ಗಾಂಧಿ EVM​ ಬಗ್ಗೆ ಮಾತನಾಡುತ್ತಾರೆ: ಜೋಶಿ ವ್ಯಂಗ್ಯ
ನಾವು ಜನರೊಂದಿಗೆ ಪುನಃ ಸಂಪರ್ಕ ಸಾಧಿಸಬೇಕಿದೆ, ಸವಾಲು ದೊಡ್ಡದು: ಪ್ರಿಯಾಂಕಾ
ನಾವು ಜನರೊಂದಿಗೆ ಪುನಃ ಸಂಪರ್ಕ ಸಾಧಿಸಬೇಕಿದೆ, ಸವಾಲು ದೊಡ್ಡದು: ಪ್ರಿಯಾಂಕಾ
ಸಂಭ್ರಮಾಚರಣೆಯಲ್ಲಿ ದಣಿಯದೆ ಕುಣಿದು ಕುಪ್ಪಳಿಸಿದ ಹಿರಿಯ ಕಾರ್ಯಕರ್ತ
ಸಂಭ್ರಮಾಚರಣೆಯಲ್ಲಿ ದಣಿಯದೆ ಕುಣಿದು ಕುಪ್ಪಳಿಸಿದ ಹಿರಿಯ ಕಾರ್ಯಕರ್ತ
ಹಣ, ಅಧಿಕಾರ ಕೇಜ್ರಿವಾಲ್​ರನ್ನು ಬದಲಿಸಿತೇ? ಅಣ್ಣಾ ಹಜಾರೆ ಹೇಳಿದ್ದೇನು ನೋಡಿ
ಹಣ, ಅಧಿಕಾರ ಕೇಜ್ರಿವಾಲ್​ರನ್ನು ಬದಲಿಸಿತೇ? ಅಣ್ಣಾ ಹಜಾರೆ ಹೇಳಿದ್ದೇನು ನೋಡಿ
ಯಾದಗಿರಿಯಲ್ಲಿ ಸಾರಿಗೆ ಬಸ್​ ಪಲ್ಟಿ: 15 ಮಂದಿಗೆ ಗಾಯ
ಯಾದಗಿರಿಯಲ್ಲಿ ಸಾರಿಗೆ ಬಸ್​ ಪಲ್ಟಿ: 15 ಮಂದಿಗೆ ಗಾಯ
ದೆಹಲಿ ಚುನಾವಣಾ ಫಲಿತಾಂಶ ಬೇರೆ ರಾಜ್ಯಗಳ ಮೇಲೆ ಪರಿಣಾಮ ಬೀರಲ್ಲ; ಸಚಿವ
ದೆಹಲಿ ಚುನಾವಣಾ ಫಲಿತಾಂಶ ಬೇರೆ ರಾಜ್ಯಗಳ ಮೇಲೆ ಪರಿಣಾಮ ಬೀರಲ್ಲ; ಸಚಿವ
ಧಾರವಾಡ: ಶ್ರಮಿಕರ, ಕಾರ್ಮಿಕರ ಬಡಾವಣೆಗಳಲ್ಲಿ ಪೇಜಾವರ ಶ್ರೀಗಳ ಪಾದಯಾತ್ರೆ
ಧಾರವಾಡ: ಶ್ರಮಿಕರ, ಕಾರ್ಮಿಕರ ಬಡಾವಣೆಗಳಲ್ಲಿ ಪೇಜಾವರ ಶ್ರೀಗಳ ಪಾದಯಾತ್ರೆ
ಬಿಜೆಪಿ 50 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೂ ಅತಿಶಿ ಆಶಾಭಾವನೆ!
ಬಿಜೆಪಿ 50 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೂ ಅತಿಶಿ ಆಶಾಭಾವನೆ!