Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ರ್ಯಾಮಿ ರೆಡ್ ಕಾರ್ಪೆಟ್​ನಲ್ಲಿ ಸಂಪೂರ್ಣ ಬೆತ್ತಲಾದ ಬಿಯಾಂಕಾ; ಬಂಧನಕ್ಕೆ ಆಗ್ರಹ

2025ನೇ ಸಾಲಿನ ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಸಂಗೀತ ಲೋಕದ ಸಾಧಕರಿಗೆ ಪ್ರಶಸ್ತಿ ನೀಡುವ ಈ ಸಮಾರಂಭದಲ್ಲಿ ಹಲವು ಸೆಲೆಬ್ರಿಟಿಗಳು ಭಾಗಿ ಆಗಿದ್ದಾರೆ. ಈ ಇವೆಂಟ್​ನಲ್ಲಿ ಅನಗತ್ಯವಾಗಿ ವಿವಾದ ಸೃಷ್ಟಿ ಮಾಡಿಕೊಂಡಿರುವುದು ಮಾಡೆಲ್ ಬಿಯಾಂಕಾ ಸೆನ್ಸೊರಿ. ನೂರಾರು ಕ್ಯಾಮೆರಾಗಳ ಎದುರಿನಲ್ಲಿ ಅವರು ಬೆತ್ತಲಾಗಿದ್ದಾರೆ.

ಗ್ರ್ಯಾಮಿ ರೆಡ್ ಕಾರ್ಪೆಟ್​ನಲ್ಲಿ ಸಂಪೂರ್ಣ ಬೆತ್ತಲಾದ ಬಿಯಾಂಕಾ; ಬಂಧನಕ್ಕೆ ಆಗ್ರಹ
Kanye West, Bianca Censori
Follow us
ಮದನ್​ ಕುಮಾರ್​
|

Updated on: Feb 03, 2025 | 4:34 PM

ಅಮೆರಿಕದ ಜನಪ್ರಿಯ ರ‍್ಯಾಪ್ ಗಾಯಕ ಕಾನ್ಯೇ ವೆಸ್ಟ್​ ಅವರು ಒಂದಷ್ಟು ವಿವಾದಗಳನ್ನು ಮಾಡಿಕೊಂಡಿದ್ದಾರೆ. ಆ ವಿವಾದಗಳ ಸಾಲಿಗೆ ಈಗ ಹೊಸದೊಂದು ಸೇರಿಕೊಂಡಿದೆ. ಫೆಬ್ರವರಿ 2ರಂದು ನಡೆದ ಗ್ರ್ಯಾಮಿ ಅವಾರ್ಡ್ ಸಮಾರಂಭದಲ್ಲಿ ಕಾನ್ಯೇ ವೆಸ್ಟ್​ ಅವರು ಪತ್ನಿ ಬಿಯಾಂಕಾ ಸೆನ್ಸೊರಿ ಜೊತೆ ಕಾಣಿಸಿಕೊಂಡರು. ಈ ವೇಳೆ ಬಿಯಾಂಕಾ ಅವರು ಸಂಪೂರ್ಣ ಬೆತ್ತಲಾದರು! ಈ ಘಟನೆಯಿಂದ ಅಲ್ಲಿದ್ದ ಅನೇಕರಿಗೆ ಮುಜುಗರ ಆಯಿತು. ಕೂಡಲೇ ಕಾನ್ಯೇ ವೆಸ್ಟ್​ ಮತ್ತು ಬಿಯಾಂಕಾ ಸೆನ್ಸೊರಿ ಅವರನ್ನು ಅಲ್ಲಿಂದ ಹೊರಗೆ ಕಳಿಸಲಾಯಿತು.

ಅವಾರ್ಡ್​ ಫಂಕ್ಷನ್ ಎಂದರೆ ರೆಡ್ ಕಾರ್ಪೆಟ್ ಇರಲೇಬೇಕು. ರೆಡ್​ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಪೋಸ್ ನೀಡುವ ಸೆಲೆಬ್ರಿಟಿಗಳು ಬಗೆಬಗೆಯ ಕಾಸ್ಟ್ಯೂಮ್ ಧರಿಸಿ ಬರುತ್ತಾರೆ. ಕೆಲವು ಸೆಲೆಬ್ರಿಟಿಗಳ ಬಟ್ಟೆಗಳು ತುಂಬ ಬೋಲ್ಡ್ ಆಗಿರುತ್ತವೆ. ಆದರೆ ಎಲ್ಲದಕ್ಕೂ ಇತಿ ಮಿತಿ ಇರಬೇಕು. ಕಾನ್ಯೇ ವೆಸ್ಟ್​ ಪತ್ನಿ ಬಿಯಾಂಕಾ ಸೆನ್ಸೊರಿ ಅವರು ಆ ಎಲ್ಲ ಮಿತಿಗಳನ್ನು ಮೀರಿದ್ದಾರೆ.

ಇದನ್ನೂ ಓದಿ: ನಟಿಯರನ್ನು ಬೆತ್ತಲಾಗಿ ನೋಡಲು ವ್ಯಾನಿಟಿ ವ್ಯಾನ್​ನಲ್ಲಿ ಇಡಲಾಗುತ್ತಿದೆ ಹಿಡನ್ ಕ್ಯಾಮೆರಾ

ಮೊದಲು ರೆಡ್ ಕಾರ್ಪೆಟ್​ಗೆ ಬರುವಾಗ ಬಿಯಾಂಕಾ ಸೆನ್ಸೊರಿ ಅವರು ದೊಡ್ಡದಾಗಿ ಕೋಟ್ ಧರಿಸಿದ್ದರು. ಮಾಧ್ಯಮಗಳ ಕ್ಯಾಮೆರಾ ಎದುರು ಬಂದು ನಿಂತ ಬಳಿಕ ಅವರು ಆ ಕೋಟ್​ ಬಿಚ್ಚಿದರು. ಆಗ ಎಲ್ಲರಿಗೂ ಶಾಕ್ ಆಯಿತು. ಯಾಕೆಂದರೆ, ಪ್ಲಾಸ್ಟಿಕ್ ರೀತಿಯ ಸಂಪೂರ್ಣ ಪಾರದರ್ಶಕವಾದ ಉಡುಗೆಯನ್ನು ಧರಿಸಿ ಅವರು ಕಾಣಿಸಿಕೊಂಡರು. ಅವರು ಒಳಉಡುಪು ಕೂಡ ಧರಿಸಿರಲಿಲ್ಲ!

ಪತ್ನಿಯ ಈ ಹುಚ್ಚಾಟಕ್ಕೆ ಕಾನ್ಯೇ ವೆಸ್ಟ್​ ಕೂಡ ಸಾಥ್ ನೀಡಿದರು. ಆದರೆ ಈ ದಂಪತಿಯ ಅತಿರೇಕವನ್ನು ಆಯೋಜಕರು ಸಹಿಸಲಿಲ್ಲ. ಕೂಡಲೇ ಅವರಿಬ್ಬರನ್ನು ಹೊರಗೆ ಕಳಿಸಲಾಯಿತು ಎಂದು ವರದಿ ಆಗಿದೆ.

ಇದನ್ನೂ ಓದಿ:  ಭಾರತ ಮೂಲದ ಅಮೆರಿಕ ಉದ್ಯಮಿ ಚಂದ್ರಿಕಾ ಟಂಡನ್​ಗೆ ಗ್ರ್ಯಾಮಿ ಅವಾರ್ಡ್​

ಸೋಶಿಯಲ್ ಮೀಡಿಯಾದಲ್ಲಿ ಬಿಯಾಂಕಾ ಅವರ ವಿರುದ್ಧ ಖಂಡನೆ ವ್ಯಕ್ತವಾಗುತ್ತಿದೆ. ಅವರನ್ನು ಬಂಧಿಸಬೇಕು ಎಂದು ಕೂಡ ನೆಟ್ಟಿಗರು ಒತ್ತಾಯಿಸಿದ್ದಾರೆ. ರೆಡ್​ ಕಾರ್ಪೆಟ್​ನಲ್ಲಿ ಬಿಯಾಂಕಾ ಬೆತ್ತಲಾದ ವಿಡಿಯೋ ವೈರಲ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್ ವೇ: ಕಾರಿನ ಮೇಲೆ ಹತ್ತಿದ ಮತ್ತೊಂದು ಕಾರು!
ಬೆಂಗಳೂರು ಮೈಸೂರು ಎಕ್ಸ್​ಪ್ರೆಸ್ ವೇ: ಕಾರಿನ ಮೇಲೆ ಹತ್ತಿದ ಮತ್ತೊಂದು ಕಾರು!
ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಗ್ನಿ ಅವಘಡ
ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಗ್ನಿ ಅವಘಡ
Video: ತ್ರಿವೇಣಿ ಸಂಗಮದಲ್ಲಿ ತಾನು ಮುಳುಗೇಳುವ ಬದಲು ಮೊಬೈಲ್ ಮುಳುಗಿಸಿದ ಯು
Video: ತ್ರಿವೇಣಿ ಸಂಗಮದಲ್ಲಿ ತಾನು ಮುಳುಗೇಳುವ ಬದಲು ಮೊಬೈಲ್ ಮುಳುಗಿಸಿದ ಯು
ಹಾವೇರಿ: ದನದ ಕೊಟ್ಟಿಗೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ವಸತಿ ನಿಲಯ
ಹಾವೇರಿ: ದನದ ಕೊಟ್ಟಿಗೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ವಸತಿ ನಿಲಯ
ಮದುವೆ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟ ಡಾಲಿ ಧನಂಜಯ
ಮದುವೆ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟ ಡಾಲಿ ಧನಂಜಯ
Video: ಮದುವೆ ಮನೆಗೆ ಕುದುರೆ ಮೇಲೆ ಬಂದ ವರ, ಅಲ್ಲೇ ಕುಸಿದು ಸಾವು
Video: ಮದುವೆ ಮನೆಗೆ ಕುದುರೆ ಮೇಲೆ ಬಂದ ವರ, ಅಲ್ಲೇ ಕುಸಿದು ಸಾವು
ಬಿಮ್ಸ್​​ನ ಟ್ರಾಮಾ ಕೇರ್ ಸೆಂಟರ್​ನಲ್ಲಿ ಮೊಬೈಲ್ ಟಾರ್ಚ್​ನಲ್ಲಿ ಚಿಕಿತ್ಸೆ
ಬಿಮ್ಸ್​​ನ ಟ್ರಾಮಾ ಕೇರ್ ಸೆಂಟರ್​ನಲ್ಲಿ ಮೊಬೈಲ್ ಟಾರ್ಚ್​ನಲ್ಲಿ ಚಿಕಿತ್ಸೆ
ದೆಹಲಿ ರೈಲ್ವೆ ನಿಲ್ದಾಣದಲ್ಲಾದ ಕಾಲ್ತುಳಿತದ ಬಳಿಕ ಅಲ್ಲಿನ ಅವಸ್ಥೆ ಹೇಗಿದೆ?
ದೆಹಲಿ ರೈಲ್ವೆ ನಿಲ್ದಾಣದಲ್ಲಾದ ಕಾಲ್ತುಳಿತದ ಬಳಿಕ ಅಲ್ಲಿನ ಅವಸ್ಥೆ ಹೇಗಿದೆ?
ಧನಂಜಯ ಕಟ್ಟಿದ ತಾಳಿ ಕಣ್ಣಿಗೆ ಒತ್ತಿಕೊಂಡ ಧನ್ಯತಾ; ಇದು ಭಾವುಕ ಕ್ಷಣ
ಧನಂಜಯ ಕಟ್ಟಿದ ತಾಳಿ ಕಣ್ಣಿಗೆ ಒತ್ತಿಕೊಂಡ ಧನ್ಯತಾ; ಇದು ಭಾವುಕ ಕ್ಷಣ
ಮೆರಿಕದಿಂದ ಅಮೃತಸರಕ್ಕೆ ಬಂದಿಳಿದ 116 ಅಕ್ರಮ ವಲಸಿಗರನ್ನು ಹೊತ್ತ ವಿಮಾನ
ಮೆರಿಕದಿಂದ ಅಮೃತಸರಕ್ಕೆ ಬಂದಿಳಿದ 116 ಅಕ್ರಮ ವಲಸಿಗರನ್ನು ಹೊತ್ತ ವಿಮಾನ