ಹತ್ತು ಹಲವು ಕಾರಣಗಳಿಂದಾಗಿ ‘ಇಂಡಿಯನ್ ಐಡಲ್’ (Indian Idol 12) ರಿಯಾಲಿಟಿ ಶೋ ವಿವಾದಕ್ಕೆ ಒಳಗಾಗುತ್ತಿದೆ. ಇತ್ತೀಚೆಗೆ ನಡೆದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಗಾಯಕ ಆಶಿಷ್ ಕುಲಕರ್ಣಿ (Ashish Kulkarni) ಅವರನ್ನು ಎಲಿಮಿನೇಟ್ ಮಾಡಲಾಗಿದೆ. ಈ ಬಗ್ಗೆ ಪ್ರೇಕ್ಷಕರಿಗೆ ತೀವ್ರ ಬೇಸರ ಆಗಿದೆ. ಮತ್ತೋರ್ವ ಗಾಯಕಿ ಷಣ್ಮುಖಪ್ರಿಯಾ ಅವರು ಎಲಿಮಿನೇಷನ್ನಿಂದ ಬಜಾವ್ ಆಗಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ಇಂಡಿಯನ್ ಐಡಲ್ ಶೋನಲ್ಲಿ ಮೋಸದ ಎಲಿಮಿನೇಷನ್ ನಡೆದಿದೆ ಎಂದು ನೆಟ್ಟಿಗರು ಟ್ವೀಟ್ ಮಾಡುತ್ತಿದ್ದಾರೆ.
ಸ್ಪರ್ಧಿಗಳ ನಡುವೆ ಫೇಕ್ ಲವ್ ಸ್ಟೋರಿ ಸೃಷ್ಟಿಮಾಡಲಾಗಿದೆ, ಲೆಜೆಂಡರಿ ಗಾಯಕ ಕಿಶೋರ್ ಕುಮಾರ್ ಅವರ ಗೀತೆಗಳನ್ನು ಕೆಟ್ಟದಾಗಿ ಹಾಡಲಾಗಿದೆ, ಸ್ಪರ್ಧಿಗಳ ನಡುವೆ ಪಕ್ಷಪಾತ ಮಾಡಲಾಗಿದೆ, ಎಲ್ಲ ಎಪಿಸೋಡ್ಗಳು ಸ್ಕ್ರಿಪ್ಟೆಡ್ ಆಗಿವೆ ಎಂಬಿತ್ಯಾದಿ ಆರೋಪಗಳು ಇಂಡಿಯನ್ ಐಡಲ್ ಶೋ ಮೇಲಿದೆ. ಈಗ ಆಶಿಷ್ ಕುಲಕರ್ಣಿ ಎಲಿಮಿನೇಷನ್ ಬಳಿಕ ಒಂದು ವರ್ಗದ ಪ್ರೇಕ್ಷಕರು ಈ ಶೋ ವಿರುದ್ಧ ಗುಡುಗಿದ್ದಾರೆ.
ಇತ್ತೀಚಿನ ಎಪಿಸೋಡ್ನಲ್ಲಿ ಆಶಾ ಭೋಸ್ಲೆ ಕೂಡ ತೀರ್ಪುಗಾರರಾಗಿ ಭಾಗವಹಿಸಿದ್ದರು. ಎಲ್ಲ ಸ್ಪರ್ಧಿಗಳು ಭರ್ಜರಿ ಪೈಪೋಟಿ ನೀಡಿದರು. ಆಶಿಷ್ ಕುಲಕರ್ಣಿ ಮತ್ತು ಷಣ್ಮುಖಪ್ರಿಯಾ ಅವರು ಡೇಂಜರ್ ಝೋನ್ನಲ್ಲಿ ಇದ್ದರು. ‘ದಿಲ್ ದೇನಾ ಖೇಲ್ ಹೈ ದಿಲ್ದಾರ್ ಕಾ..’ ಹಾಡನ್ನು ಆಶಿಷ್ ಹಾಡಿದರು. ‘ದುನಿಯಾ ಮೇ ಲೋಗೋಂಕೋ..’ ಗೀತೆಯನ್ನು ಷಣ್ಮುಖಪ್ರಿಯಾ ಹಾಡಿದರು. ತೀರ್ಪುಗಾರರಿಗೆ ಇಬ್ಬರ ಗಾಯನ ಕೂಡ ಸಖತ್ ಇಷ್ಟ ಆಯಿತು. ಅಂತಿಮವಾಗಿ ಒಬ್ಬರು ಎಲಿಮಿನೇಟ್ ಆಗಲೇಬೇಕಿದ್ದರಿಂದ ಆಶಿಷ್ ಕುಲಕರ್ಣಿ ಅವರು ಶೋನಿಂದ ಹೊರಬೀಳುವಂತಾಯಿತು.
#AshishKulkarni is way better than #ShanmukhaPriya but still zombies are voting for her…. For me he supposed to be in top 3… #indianidol12
— Rajesh Subba (@RajeshS96488898) July 12, 2021
ಆಶಿಷ್ ಕುಲಕರ್ಣಿ ಅವರ ಎಲಿಮಿನೇಷನ್ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿರುವ ಅನೇಕರು ಇಂಡಿಯಲ್ ಐಡಲ್ ವಿರುದ್ಧ ಟ್ವೀಟ್ ಮಾಡುತ್ತಿದ್ದಾರೆ. ‘ಷಣ್ಮುಖಪ್ರಿಯಾ ಅವರಿಗಿಂತ ಆಶಿಷ್ ಕುಲಕರ್ಣಿ ಚೆನ್ನಾಗಿ ಹಾಡುತ್ತಾರೆ. ಆದರೂ ಕೂಡ ಷಣ್ಮುಖಪ್ರಿಯಾಗೆ ಝೋಂಬಿಗಳು ವೋಟ್ ಮಾಡುತ್ತಿದ್ದಾವೆ. ನನ್ನ ಪ್ರಕಾರ ಆಶಿಷ್ ಅವರು ಟಾಪ್ 3 ಸ್ಪರ್ಧಿಗಳಲ್ಲಿ ಒಬ್ಬರಾಗಿರಬೇಕಿತ್ತು’ ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.
#IndianIdol2020 @SonyTV @fremantle_india
This show is just getting worst and is full of partiality…its really a great disappointment to know about elimination of Ashish Kulkarni…instead there are other 3 participants who should be eliminated.— Priyanka Mohidekar (@PRMohidekar) July 11, 2021
‘ದಿನದಿಂದ ದಿನಕ್ಕೆ ಈ ಶೋ ಹದಗೆಡುತ್ತಿದೆ. ಪಕ್ಷಪಾತವೇ ತುಂಬಿಹೋಗುತ್ತಿದೆ. ಆಶಿಷ್ ಕುಲಕರ್ಣಿ ಅವರ ಎಲಿಮಿನೇಷನ್ನಿಂದ ತೀವ್ರ ನಿರಾಸೆ ಆಗಿದೆ. ಅವರ ಬದಲು ಇನ್ನುಳಿದ ಮೂವರಲ್ಲಿ ಯಾರಾದರೂ ಎಲಿಮಿನೇಟ್ ಆಗಬಹುದಿತ್ತು’ ಎಂದು ಕೆಲವರು ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ‘ಈ ಶೋ ಆಯೋಜಕರು ಮತ್ತು ತೀರ್ಪುಗಾರರು ಕಿವುಡರಾಗಿದ್ದಾರಾ? ಕುರುಡರಾಗಿದ್ದಾರಾ’ ಎಂಬ ಕಮೆಂಟ್ ಕೂಡ ಬಂದಿದೆ.
ಇದನ್ನೂ ಓದಿ:
ಕೆಟ್ಟ ಗಾಯನ ಕೇಳಿ ಇಂಡಿಯನ್ ಐಡಲ್ ಶೋನಲ್ಲಿ ಕೆನ್ನೆಗೆ ಹೊಡೆದುಕೊಂಡಿದ್ದ ಜಡ್ಜ್
ಬಡತನ, ಫೇಕ್ ಲವ್ ಸ್ಟೋರಿಗಳೇ ರಿಯಾಲಿಟಿ ಶೋಗಳ ಬಂಡವಾಳ; ಇಂಡಿಯನ್ ಐಡಲ್ ವಿನ್ನರ್ ಆರೋಪ