ಬಹುಭಾಷೆಯಲ್ಲಿ ಇಂದ್ರಜಿತ್ ಲಂಕೇಶ್ ಸಿನಿಮಾ ‘ಜೈ ಹಿಂದ್ ಜೈ ಸಿಂಧ್: ಎ ಲವ್ ಸ್ಟೋರಿ’

ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಬಹುಭಾಷೆಯಲ್ಲಿ ಹೊಸ ಸಿನಿಮಾ ಮಾಡುತ್ತಿದ್ದಾರೆ. ‘ಜೈ ಹಿಂದ್ ಜೈ ಸಿಂಧ್: ಎ ಲವ್ ಸ್ಟೋರಿ’ ಎಂದು ಈ ಚಿತ್ರಕ್ಕೆ ಶೀರ್ಷಿಕೆ ಇಡಲಾಗಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಮುಂತಾದ ಭಾಷೆಗಳಲ್ಲಿ ಈ ಚಿತ್ರ ರಿಲೀಸ್ ಆಗಲಿದೆ.

ಬಹುಭಾಷೆಯಲ್ಲಿ ಇಂದ್ರಜಿತ್ ಲಂಕೇಶ್ ಸಿನಿಮಾ ‘ಜೈ ಹಿಂದ್ ಜೈ ಸಿಂಧ್: ಎ ಲವ್ ಸ್ಟೋರಿ’
Indrajit Lankesh

Updated on: Sep 22, 2026 | 3:07 PM

ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಇಂದ್ರಜಿತ್ ಲಂಕೇಶ್ ಅವರು ನಿರ್ದೇಶಕನಾಗಿ, ನಿರ್ಮಾಪಕನಾಗಿ ಬ್ಯುಸಿ ಆಗಿದ್ದಾರೆ. ದೀಪಿಕಾ ಪಡುಕೋಣೆ ಸೇರಿದಂತೆ ಹಲವು ಪ್ರತಿಭೆಗಳಿಗೆ ಅವಕಾಶ ಕೊಟ್ಟ ಅವರೀಗ ಚಿತ್ರರಂಗದಲ್ಲಿ 25 ವರ್ಷಗಳ ಪಯಣವನ್ನು ಪೂರ್ಣಗೊಳಿಸಿದ್ದಾರೆ. ವಿಭಿನ್ನ ಕಥಾಹಂದರ, ಸಮಕಾಲೀನ ನಿರೂಪಣೆ ಮೂಲಕ ಗುರುತಿಸಿಕೊಂಡಿರುವ ಇಂದ್ರಜಿತ್ ಲಂಕೇಶ್ ಅವರ ಹೊಸ ಸಿನಿಮಾದ ಬಗ್ಗೆ ಮಾಹಿತಿ ಇಲ್ಲಿದೆ..

‘ಜೈ ಹಿಂದ್ ಜೈ ಸಿಂಧ್: ಎ ಲವ್ ಸ್ಟೋರಿ’ ಸಿನಿಮಾವನ್ನು ಇಂದ್ರಜಿತ್ ಲಂಕೇಶ್ ಅವರು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರವನ್ನು ಅವರು ಬಹುಭಾಷೆಯಲ್ಲಿ ತೆರೆಗೆ ತರಲಿದ್ದಾರೆ ಎಂಬುದು ವಿಶೇಷ. ಆ ಮೂಲಕ ಅವರು ತಮ್ಮ ವೃತ್ತಿ ಜೀವನದ ಮತ್ತೊಂದು ಹಂತಕ್ಕೆ ಕಾಲಿಡುತ್ತಿದ್ದಾರೆ. ಈ ಸಿನಿಮಾ ಹೇಗಿರಲಿದೆ ಎಂಬುದನ್ನು ತಿಳಿಯಲು ಸಿನಿಪ್ರಿಯರು ಕಾದಿದ್ದಾರೆ.

ಇಂದ್ರಜಿತ್ ಲಂಕೇಶ್ ಅವರು ‘ತುಂಟಾಟ’ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಬಳಿಕ ‘ಮೊನಾಲಿಸಾ’, ‘ಐಶ್ವರ್ಯಾ’, ‘ಹುಡುಗ ಹುಡುಗಿ’, ‘ಲವ್ ಯೂ ಆಲಿಯಾ’, ‘ಶಕೀಲಾ’ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಈ ಎಲ್ಲ ಸಿನಿಮಾಗಳ ಬಳಿಕ ಅವರು ‘ಜೈ ಹಿಂದ್ ಜೈ ಸಿಂಧ್: ಎ ಲವ್ ಸ್ಟೋರಿ’ ಸಿನಿಮಾವನ್ನು ಬಹುಭಾಷೆಯಲ್ಲಿ ತರುತ್ತಿದ್ದಾರೆ.

ಇಂದು (ಸೆಪ್ಟೆಂಬರ್ 22) ಇಂದ್ರಜಿತ್ ಲಂಕೇಶ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. 50ನೇ ವಸಂತಕ್ಕೆ ಕಾಲಿಟ್ಟಿರುವ ಅವರು ಚಿತ್ರರಂಗದಲ್ಲೇ 25 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಈ 25 ವರ್ಷಗಳ ಪಯಣದಲ್ಲಿ ಹೊಸ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಅವಕಾಶ ನೀಡಿದ್ದು ಅವರ ಹೆಚ್ಚುಗಾರಿಕೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ‘ಐಶ್ವರ್ಯಾ’ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಪಾದಾರ್ಪಣೆ ಮಾಡಿದ್ದರು. ಭೂಮಿಕಾ ಚಾವ್ಲಾ, ಛಾಯಾ ಸಿಂಗ್, ವಸುಂಧರಾ ದಾಸ್ ಕೂಡ ಇಂದ್ರಜಿತ್ ಲಂಕೇಶ್ ಅವರ ಸಿನಿಮಾಗಳಲ್ಲಿ ನಟಿಸಿದರು.

ಇದನ್ನೂ ಓದಿ: ಕರಣ್ ಜೋಹರ್​ ನಿರ್ಮಾಣದ ಸಿನಿಮಾದಲ್ಲಿ ಇಂದ್ರಜಿತ್​ ಲಂಕೇಶ್​ ಪುತ್ರ ಸಮರ್ಜಿತ್

ಈಗ ಇಂದ್ರಜಿತ್ ಲಂಕೇಶ್ ಅವರ ‘ಜೈ ಹಿಂದ್ ಜೈ ಸಿಂಧ್: ಎ ಲವ್ ಸ್ಟೋರಿ’ ಸಿನಿಮಾದ ಮೇಲೆ ನಿರೀಕ್ಷೆ ಇದೆ. ದೇಶ ವಿಭಜನೆಯ ಕಾಲದ ಕಥೆಯನ್ನು ಅವರು ಈ ಸಿನಿಮಾ ಮೂಲಕ ಹೇಳಲಿದ್ದಾರೆ. ಹಿಂದಿ ಚಿತ್ರರಂಗದ ಪ್ರತಿಭಾವಂತ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಿಂದಿ, ಕನ್ನಡ, ತೆಲುಗು, ತಮಿಳು ಮುಂತಾದ ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us