ನಟಿ ಶ್ರುತಿ ಹಾಸನ್ ಜೊತೆ ಸಖತ್ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡ ನಿರ್ದೇಶಕ
ಲೋಕೇಶ್ ಕನಗರಾಜ್ ಅವರು ನಿರ್ದೇಶನದಲ್ಲಿ ಪಳಗಿದ್ದಾರೆ. ಹಲವು ಕಲಾವಿದರಿಗೆ ಅವರು ನಟನೆ ಹೇಳಿಕೊಟ್ಟಿದ್ದಾರೆ. ಈಗ ಅವರಿಗೆ ತಾವೂ ಆ್ಯಕ್ಟ್ ಮಾಡಬಹುದು ಎಂದು ಅನಿಸಿದೆ. ಈ ಕಾರಣಕ್ಕೆ ಅವರು ‘ಇನಿಮೇಲ್’ ಹಾಡಿನಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಲೋಕೇಶ್ ಕನಗರಾಜ್ (Lokesh Kanagaraj) ಅವರು ಸಾಕಷ್ಟು ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ‘ಕೈದಿ’, ‘ಲಿಯೋ’ ಸಿನಿಮಾಗಳು ಯಶಸ್ಸು ಕಂಡಿವೆ. ಅವರನ್ನು ನಂಬಿ ದೊಡ್ಡ ದೊಡ್ಡ ನಿರ್ಮಾಕರು ಹಣ ಹೂಡುತ್ತಿದ್ದಾರೆ. ಸ್ಟಾರ್ ಹೀರೋಗಳು ಮರು ಯೋಚಿಸದೇ ಕಾಲ್ಶೀಟ್ ನೀಡುತ್ತಿದ್ದಾರೆ. ಈ ಮಧ್ಯೆ ಅವರು ಹೀರೋ ಆಗಿ ಬದಲಾಗಿದ್ದಾರೆ. ಕಮಲ್ ಹಾಸನ್ ಮಗಳು ಶ್ರುತಿ ಹಾಸನ್ ಜೊತೆ ಸಖತ್ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಇದರ ಪ್ರೋಮೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
‘ಇನಿಮೇಲ್’ ಹೆಸರಿನ ವಿಡಿಯೋ ಸಾಂಗ್ನ ತರಲಾಗುತ್ತಿದೆ. ಇದಕ್ಕಾಗಿ ಲೋಕೇಶ್ ಕನರಾಜ್ ಅವರು ನಟನಾಗಿದ್ದಾರೆ. ಕಮಲ್ ಹಾಸನ್ ಅವರು ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಮತ್ತೊಂದು ವಿಶೇಷ ಏನೆಂದರೆ ಶ್ರುತಿ ಹಾಸನ್ ಅವರು ಈ ಹಾಡಿಗೆ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಈ ಹಾಡಿನ ಪ್ರೋಮೋ ರಿಲೀಸ್ ಆಗಿದ್ದು, ಸಂಪೂರ್ಣ ವಿಡಿಯೋ ಮಾರ್ಚ್ 25ರಂದು ರಿಲೀಸ್ ಆಗಲಿದೆ.
ಇದನ್ನೂ ಓದಿ: ಲೋಕೇಶ್ ಕನಗರಾಜ್ ಸಿನಿಮಾಗೆ ಕನ್ನಡಿಗನ ಬಂಡವಾಳ; ಯಾವುದು ಈ ಚಿತ್ರ?
ಲೋಕೇಶ್ ಕನಗರಾಜ್ ಅವರು ನಿರ್ದೇಶನದಲ್ಲಿ ಪಳಗಿದ್ದಾರೆ. ಹಲವು ಕಲಾವಿದರಿಗೆ ಅವರು ನಟನೆ ಹೇಳಿಕೊಟ್ಟಿದ್ದಾರೆ. ಈಗ ಅವರಿಗೆ ತಾವೂ ಆ್ಯಕ್ಟ್ ಮಾಡಬಹುದು ಎಂದು ಅನಿಸಿದೆ. ಈ ಕಾರಣಕ್ಕೆ ಅವರು ‘ಇನಿಮೇಲ್’ ಹಾಡಿನಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪ್ರೋಮೋ ಗಮನ ಸೆಳೆಯುತ್ತಿದೆ. ಲೋಕೇಶ್ ಹಾಗೂ ಶ್ರುತಿ ಹಾಸನ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಇವರ ಕೊಲಾಬರೇಷನ್ ಬಗ್ಗೆ ಘೋಷಣೆ ಮಾಡಲಾಗಿತ್ತು. ಇವರು ಒಟ್ಟಾಗಿ ಸಿನಿಮಾ ಮಾಡುತ್ತಾರೆ ಎಂದು ಅನೇಕರು ಭಾವಿಸಿದ್ದರು.
#Inimel the game begins from 25th March. Mark the Moment! Streaming exclusively on https://t.co/UXpv3RSFt6#Ulaganayagan #KamalHaasan #InimelIdhuvey #Inimelat25th@ikamalhaasan @Dir_Lokesh @shrutihaasan #Mahendran @RKFI @turmericmediaTM @IamDwarkesh @bhuvangowda84 @philoedit… pic.twitter.com/LCAju1D2eq
— Raaj Kamal Films International (@RKFI) March 21, 2024
#Inimel Role Reverse is the New Verse#Ulaganayagan #KamalHaasan #InimelIdhuvey@ikamalhaasan #Mahendran @Dir_Lokesh @shrutihaasan @RKFI @turmericmediaTM @IamDwarkesh @bhuvangowda84 @philoedit #SriramIyengar @yanchanmusic @SowndarNallasa1 @gopiprasannaa @Pallavi_offl… pic.twitter.com/oP5rz9E9kq
— Turmeric Media (@turmericmediaTM) March 19, 2024
ಶ್ರುತಿ ಹಾಸನ್ ಅವರು ಸದ್ಯ ‘ಸಲಾರ್’ ಸಿನಿಮಾ ಗೆಲುವಿನ ಖುಷಿಯಲ್ಲಿ ಇದ್ದಾರೆ. ಈ ಸಿನಿಮಾ ಕಳೆದ ವರ್ಷಾಂತ್ಯಕ್ಕೆ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಲೋಕೇಶ್ ಕನರಾಜ್ ನಿರ್ದೇಶನದ ‘ಲಿಯೋ’ ಸಿನಿಮಾ ಕಳೆದ ವರ್ಷ ರಿಲೀಸ್ ಆಯಿತು. ಈ ಸಿನಿಮಾ ವಿಮರ್ಶೆ ವಿಚಾರದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡದೇ ಇದ್ದರೂ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ಮಾಡಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ