ಲೋಕೇಶ್ ಕನಗರಾಜ್ ಸಿನಿಮಾಗೆ ಕನ್ನಡಿಗನ ಬಂಡವಾಳ; ಯಾವುದು ಈ ಚಿತ್ರ?

ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ನರ್ತನ್ ಒಟ್ಟಾಗಿ ಸಿನಿಮಾ ಮಾಡಬೇಕಿತ್ತು. ಆದರೆ, ಯಶ್​ಗೆ ಕಥೆ ಇಷ್ಟವಾಗಿಲ್ಲ. ಹೀಗಾಗಿ ನರ್ತನ್ ಸ್ಥಾನಕ್ಕೆ ಗೀತು ಮೋಹನ್​ದಾಸ್ ಅವರ ಆಗಮನ ಆಯಿತು. ಆ ಬಳಿಕ ಕೆವಿಎನ್ ಅವರು ರಾಮ್ ಚರಣ್​ಗೆ ಕಥೆ ಹೇಳುವಂತೆ ನರ್ತನ್​ಗೆ ಸೂಚಿಸಿದರು. ಇದು ಕೂಡ ಫೈನಲ್ ಆಗಿಲ್ಲ ಎನ್ನಲಾಗಿದೆ. ಈಗ ಲೋಕೇಶ್ ಕನಗರಾಜ್ ಅವರ ಹೆಸರು ನಿರ್ಮಾಣ ಸಂಸ್ಥೆ ಜೊತೆ ತಳುಕು ಹಾಕಿಕೊಂಡಿದೆ.

ಲೋಕೇಶ್ ಕನಗರಾಜ್ ಸಿನಿಮಾಗೆ ಕನ್ನಡಿಗನ ಬಂಡವಾಳ; ಯಾವುದು ಈ ಚಿತ್ರ?
ಲೋಕೇಶ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Mar 15, 2024 | 11:58 AM

ಕನ್ನಡದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಸಾಕಷ್ಟು ಸಿನಿಮಾಗಳನ್ನು ಹಂಚಿಕೆ ಮಾಡಿದೆ. ಸದ್ಯ ಯಶ್ ನಟನೆಯ ‘ಟಾಕ್ಸಿಕ್’ ಚಿತ್ರ (Toxic Movie) ಈ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಮೂಡಿಬರುತ್ತಿದೆ. ನಿರ್ಮಾಪಕ ವೆಂಕಟ್ ನಾರಾಯಣ್ ಅವರು ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಮಧ್ಯೆ ಲೋಕೇಶ್ ಕನಗರಾಜ್ ಬರ್ತ್​​ಡೇಗೆ ಕೆವಿಎನ್​ ಕಡೆಯಿಂದ ವಿಶೇಷ ವಿಶ್ ಬಂದಿದೆ. ಇದರಿಂದ ಇಬ್ಬರೂ ಸಿನಿಮಾ ಮಾಡೋದು ಪಕ್ಕಾ ಆಗಿದೆ. ಇದರ ಜೊತೆ ಸಾಕಷ್ಟು ವದಂತಿಗಳು ಹುಟ್ಟಿಕೊಂಡಿವೆ.

ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ನರ್ತನ್ ಒಟ್ಟಾಗಿ ಸಿನಿಮಾ ಮಾಡಬೇಕಿತ್ತು. ಇದಕ್ಕೆ ಯಶ್ ಹೀರೋ ಎಂದು ಹೇಳಲಾಗಿತ್ತು. ಆದರೆ, ಯಶ್​ಗೆ ಕಥೆ ಇಷ್ಟವಾಗಿಲ್ಲ. ಹೀಗಾಗಿ ನರ್ತನ್ ಸ್ಥಾನಕ್ಕೆ ಗೀತು ಮೋಹನ್​ದಾಸ್ ಅವರ ಆಗಮನ ಆಯಿತು. ಆ ಬಳಿಕ ಕೆವಿಎನ್ ಅವರು ರಾಮ್ ಚರಣ್​ಗೆ ಕಥೆ ಹೇಳುವಂತೆ ನರ್ತನ್​ಗೆ ಸೂಚಿಸಿದರು. ಇದು ಕೂಡ ಫೈನಲ್ ಆಗಿಲ್ಲ ಎನ್ನಲಾಗಿದೆ. ಈಗ ಲೋಕೇಶ್ ಕನಗರಾಜ್ ಅವರ ಹೆಸರು ನಿರ್ಮಾಣ ಸಂಸ್ಥೆ ಜೊತೆ ತಳುಕು ಹಾಕಿಕೊಂಡಿದೆ.

ಲೋಕೇಶ್ ಅವರು ಪ್ರಭಾಸ್ ಅಥವಾ ಜೂನಿಯರ್​ ಎನ್​ಟಿಆರ್ ಜೊತೆ ಕೆಲಸ ಮಾಡಲಿದ್ದಾರೆ ಎಂದು ಸುದ್ದಿ ಹರಡಿದೆ. ಆದರೆ, ಇದರಲ್ಲಿ ಯಾವುದೇ ನಿಜ ಇಲ್ಲ ಎಂದು ಹೇಳಲಾಗುತ್ತಿದೆ. ಕೆವಿಎನ್ ನಿರ್ಮಾಣ ಸಂಸ್ಥೆ ‘ಖೈದಿ 2’ ಚಿತ್ರವನ್ನು ನಿರ್ಮಾಣ ಮಾಡಲಿದೆಯಂತೆ. ಈ ಸಿನಿಮಾ ‘ಲೋಕೇಶ್ ಕನಗರಾಜ್ ಯೂನಿವರ್ಸ್’ ಅಡಿಯಲ್ಲಿ ಮೂಡಿ ಬರುತ್ತಿದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಸಿಗಬೇಕಿದೆ.

ಲೋಕೇಶ್ ಕನಗರಾಜ್ ಅವರು ಸದ್ಯ ರಜನಿಕಾಂತ್ ಅವರ ‘ತಲೈವರ್ 171’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದು ಕೂಡ ಸಿನಿಮ್ಯಾಟಿಕ್ ಯೂನಿವರ್ಸ್​ ಅಡಿಯಲ್ಲಿ ಸಿದ್ಧವಾಗುತ್ತಿದೆ ಎಂದು ವರದಿ ಆಗಿದೆ. ಈ ವಿಚಾರ ಕೇಳಿ ಕುತೂಹಲ ಹೆಚ್ಚಿದೆ. ಈಗಾಗಲೇ ಅವರು ನಿರ್ದೇಶನ ಮಾಡಿದ ‘ಖೈದಿ’, ‘ವಿಕ್ರಮ್’ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ‘ಲಿಯೋ’ ಸಾಧಾರಣ ಗೆಲುವು ಕಂಡಿದೆ. ಎಲ್ಲಾ ಸಿನಿಮಾಗಳಿಗೆ ಒಂದು ಕನೆಕ್ಷನ್ ಇದೆ.

ಇದನ್ನೂ ಓದಿ: ‘ಖೈದಿ 2’ ಚಿತ್ರಕ್ಕೆ ಶೂಟಿಂಗ್ ಆರಂಭ ಆಗೋದು ಯಾವಾಗ? ಉತ್ತರ ಕೊಟ್ಟ ಕಾರ್ತಿ

‘ಖೈದಿ’ ಸಿನಿಮಾದಲ್ಲಿ ಕಾರ್ತಿ ನಟಿಸಿದ್ದಾರೆ. ಜೈಲಿನಿಂದ ಪೆರೋಲ್​ ಮೇಲೆ ಹೊರ ಬರುವ ಖೈದಿಯ ಕಥೆಯನ್ನು ಈ ಸಿನಿಮಾ ಹೊಂದಿತ್ತು. ಕಥಾ ನಾಯಕ ಜೈಲಿಗೆ ಹೋಗಿದ್ದು ಏಕೆ? ಹಿಂದೆ ಏನಾಗಿತ್ತು ಎಂಬುದರ ಕಥೆನ್ನು ‘ಖೈದಿ 2’ ಚಿತ್ರದಲ್ಲಿ ತೋರಿಸಲಾಗುತ್ತಿದೆ. ಇದು ‘ಖೈದಿ’ ಚಿತ್ರದ ಪ್ರೀಕ್ವೆಲ್ ಅನ್ನೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ