ಅಲ್ಲು ಅರ್ಜುನ್ (Allu Arjun) ಅವರು ಇತ್ತೀಚೆಗೆ ಸಖತ್ ಸುದ್ದಿ ಆಗಿದ್ದರು. ಬರೋಬ್ಬರಿ 66.5 ಕೋಟಿ ಹಿಂಬಾಲಕರು ಇರುವ ಇನ್ಸ್ಟಾಗ್ರಾಮ್ ಅಧಿಕೃತ ಖಾತೆಯು ಅಲ್ಲು ಅರ್ಜುನ್ ಅವರ ಕೊಲಾಬರೇಟ್ ಮಾಡಿಕೊಂಡಿತ್ತು. ಮುಂಜಾನೆಯಿಂದ ಸಂಜೆಯವರೆಗೆ ತಮ್ಮ ದಿನಚರಿ ಹೇಗೆ ಇರುತ್ತದೆ ಎಂಬುದನ್ನು ಅಲ್ಲು ಅರ್ಜುನ್ ವಿಡಿಯೋದಲ್ಲಿ ವಿವರಿಸಿದ್ದರು. ಈ ವಿಡಿಯೋನ ಇನ್ಸ್ಟಾಗ್ರಾಮ್ ತನ್ನ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿತ್ತು. ಆ ಸಂದರ್ಭದಲ್ಲಿ ಅಲ್ಲು ಅರ್ಜುನ್ ಅವರನ್ನು ಇನ್ಸ್ಟಾಗ್ರಾಮ್ ಫಾಲೋ ಮಾಡಲು ಆರಂಭಿಸಿತ್ತು. ಜೊತೆಗೆ ಆಲಿಯಾ ಭಟ್ ಅವರನ್ನೂ ಇನ್ಸ್ಟಾಗ್ರಾಮ್ ಫಾಲೋ ಮಾಡುತ್ತಿತ್ತು. ಈಗ ಅವರನ್ನು ಅನ್ಫಾಲೋ ಮಾಡಿದೆ.
ಅಲ್ಲು ಅರ್ಜುನ್ ಅವರಿಗೆ ದೊಡ್ಡ ಮಟ್ಟದ ಬೇಡಿಕೆ ಇದೆ. ಅವರು ‘ಪುಷ್ಪ’ ಸಿನಿಮಾದಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಈಗ ಅವರು ‘ಪುಷ್ಪ 2’ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಅಲ್ಲು ಅರ್ಜುನ್ ಜೊತೆ ಇನ್ಸ್ಟಾಗ್ರಾಮ್ ಕೊಲಾಬರೇಟ್ ಮಾಡಿಕೊಂಡಿದ್ದು ಸಾಕಷ್ಟು ಚರ್ಚೆ ಆಗಿತ್ತು. ಈಗ ಏಕಾಏಕಿ ಇನ್ಸ್ಟಾಗ್ರಾಮ್ ಅಲ್ಲು ಅರ್ಜುನ್ ಅವರನ್ನು ಅನ್ಫಾಲೋ ಮಾಡಿದೆ. ಇದರ ಒಳಾರ್ಥ ಏನು ಎಂಬುದು ಫ್ಯಾನ್ಸ್ಗೆ ತಿಳಿಯುತ್ತಿಲ್ಲ. ಕೆಲವು ವರದಿಗಳ ಪ್ರಕಾರ ಇನ್ಸ್ಟಾಗ್ರಾಮ್ ಸುದ್ದಿಯಲ್ಲಿರುವ ಸೆಲೆಬ್ರಿಟಿಗಳನ್ನು ಫಾಲೋ ಮಾಡುತ್ತದೆ. ಆ ಬಳಿಕ ಅವರನ್ನು ಅನ್ಫಾಲೋ ಮಾಡುತ್ತದೆ. ಇದು ಮೊದಲಿನಿಂದಲೂ ನಡೆದುಕೊಂಡು ಬಂದ ಪದ್ಧತಿ ಎನ್ನಲಾಗಿದೆ.
ಅಲ್ಲು ಅರ್ಜುನ್ ಅವರನ್ನು ಬರೋಬ್ಬರಿ 2.4 ಕೋಟಿ ಜನರು ಹಿಂಬಾಲಿಸುತ್ತಿದ್ದಾರೆ. ಅವರ ಹಿಂಬಾಲಕರ ಸಂಖ್ಯೆ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಅಲ್ಲು ಅರ್ಜುನ್ ಅವರು ಅಭಿಮಾನಿಗಳಿಗೋಸ್ಕರ ಕುಟುಂಬದ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಮಗಳ ಜೊತೆಗಿನ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾ ಇರುತ್ತಾರೆ.
ಇದನ್ನೂ ಓದಿ: ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡ್ತಾರಾ ಅಟ್ಲಿ? ‘ಜವಾನ್’ ನಿರ್ದೇಶಕನಿಗೆ ಡಿಮ್ಯಾಂಡ್
ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದರ ಜೊತೆಗೆ ಇನ್ನೂ ಎರಡು ಸಿನಿಮಾಗಳನ್ನು ಅವರು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆಯೂ ಆಗಿದೆ. ತಮಿಳು ನಿರ್ದೇಶಕ ಅಟ್ಲಿ ಜೊತೆಗೂ ಅಲ್ಲು ಅರ್ಜುನ್ ಅವರು ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಇನ್ನಷ್ಟೇ ಮಾಹಿತಿ ಅಧಿಕೃತವಾಗಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ