ಸಾವಿರಾರು ಕೋಟಿ ರೂಪಾಯಿ ಒಡೆಯ ಸಲ್ಮಾನ್ ಖಾನ್; ಹೇಗೆಲ್ಲ ಬರುತ್ತೆ ಸಂಭಾವನೆ?

ಸಲ್ಮಾನ್ ಖಾನ್ ಅವರು ಹಲವು ಬ್ರ್ಯಾಂಡ್​ಗಳಿಗೆ ರಾಯಭಾರಿ ಆಗಿದ್ದಾರೆ. ಸಿನಿಮಾದಿಂದ ಮಾತ್ರವಲ್ಲದೆ ಬ್ರ್ಯಾಂಡ್​ಗಳ ಪ್ರಚಾರದಿಂದಲೂ ಹಣ ಬರುತ್ತಿದೆ.

ಸಾವಿರಾರು ಕೋಟಿ ರೂಪಾಯಿ ಒಡೆಯ ಸಲ್ಮಾನ್ ಖಾನ್; ಹೇಗೆಲ್ಲ ಬರುತ್ತೆ ಸಂಭಾವನೆ?
ಸಲ್ಮಾನ್ ಖಾನ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Dec 26, 2023 | 10:22 AM

ನಟ ಸಲ್ಮಾನ್ ಖಾನ್ (Salman Khan)​ ಅವರಿಗೆ ಬಾಲಿವುಡ್​ನಲ್ಲಿ ಸಖತ್ ಬೇಡಿಕೆ ಇದೆ. ಅವರಿಗೆ ಬುಧವಾರ (ಡಿಸೆಂಬರ್ 27) ಜನ್ಮದಿನದ ಸಂಭ್ರಮ. ಅವರು 58ನೇ ವಯಸ್ಸಿಗೆ ಕಾಲಿಡುತ್ತಿದ್ದಾರೆ. ಬಾಲಿವುಡ್​ನಲ್ಲಿ ಸಲ್ಲು ಭಾಯ್ ಎಂದೇ ಅವರು ಜನಪ್ರಿಯತೆ ಪಡೆದಿದ್ದಾರೆ. ಈ ಕಾರಣಕ್ಕೋ ಏನೋ ಅವರಿಗೆ ಇಲ್ಲಿಯವರೆಗೆ ವಿವಾಹ ಆಗಿಲ್ಲ. ಬಾಲಿವುಡ್​ನ ಮೋಸ್ಟ್​ ಎಲಿಜಿಬಲ್ ಬ್ಯಾಚುಲರ್ ಎನ್ನುವ ಖ್ಯಾತಿ ಪಡೆದಿದ್ದಾರೆ. ಪ್ರತಿ ಚಿತ್ರಕ್ಕೆ ಅವರು ನೂರಾರು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ನೆಗೆಟಿವ್ ವಿಮರ್ಶೆ ಸಿಕ್ಕ ಹೊರತಾಗಿಯೂ ಸಲ್ಲು ಚಿತ್ರ 100 ಕೋಟಿ ರೂಪಾಯಿ ಕ್ಲಬ್ ಸೇರಿದ ಹಲವು ಉದಾಹರಣೆ ಇದೆ. ಇತ್ತೀಚೆಗೆ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿಲ್ಲ. ಹಾಗಂತ ಅವರಿಗೆ ಬೇಡಿಕೆ ಕಡಿಮೆ ಆಗಿಲ್ಲ. ಅವರ ಆಸ್ತಿ ಬಗ್ಗೆ ಇಲ್ಲಿದೆ ವಿವರ.

ಸಂಭಾವನೆ

ಸಲ್ಮಾನ್ ಖಾನ್ ಅವರು ಬಾಲಿವುಡ್​ನಲ್ಲಿ ನೆಲೆ ಕಂಡುಕೊಳ್ಳಲು ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಅವರು ಆರಂಭದಲ್ಲಿ ಅವಕಾಶ ಪಡೆಯಲು ಪೇಪರ್​ನವರಿಗೆ ದುಡ್ಡು ಕೊಟ್ಟು ಸುಳ್ಳು ಸುದ್ದಿ ಬರೆಸಿಕೊಂಡಿದ್ದರು. ಈಗ ಅವರು ಪ್ರತಿ ಸಿನಿಮಾಗೆ ನೂರು ಕೋಟಿ ರೂಪಾಯಿಗೂ ಅಧಿಕ ಸಂಭಾವನೆ ಪಡೆಯುತ್ತಾರೆ. 2016ರಲ್ಲಿ ರಿಲೀಸ್ ಆದ ‘ಸುಲ್ತಾನ್​’ ಚಿತ್ರಕ್ಕೆ ಅವರು ಪಡೆದ ಸಂಭಾವನೆ 100 ಕೋಟಿ ರೂಪಾಯಿ. ‘ಟೈಗರ್ ಜಿಂದಾ ಹೈ’ ಚಿತ್ರಕ್ಕಾಗಿ 130 ಕೋಟಿ ರೂಪಾಯಿ ಪಡೆದಿದ್ದರು. ಇತ್ತೀಚೆಗೆ ರಿಲೀಸ್ ಆದ ‘ಟೈಗರ್ 3’ ಚಿತ್ರಕ್ಕೂ ದೊಡ್ಡ ಮೊತ್ತದ ಹಣ ಪಡೆದಿದ್ದಾರೆ.

ಸಲ್ಮಾನ್ ಖಾನ್ ಅವರು ಹಲವು ಬ್ರ್ಯಾಂಡ್​ಗಳಿಗೆ ರಾಯಭಾರಿ ಆಗಿದ್ದಾರೆ. ಸಿನಿಮಾದಿಂದ ಮಾತ್ರವಲ್ಲದೆ ಬ್ರ್ಯಾಂಡ್​ಗಳ ಪ್ರಚಾರದಿಂದಲೂ ಹಣ ಬರುತ್ತದೆ. ಸಲ್ಲು ಒಟ್ಟೂ ಆಸ್ತಿ 2,225 ಕೋಟಿ ರೂಪಾಯಿಗೂ ಅಧಿಕವಾಗಿದೆ ಎನ್ನಲಾಗಿದೆ. ವರ್ಷದಿಂದ ವರ್ಷಕ್ಕೆ ಅವರ ಆಸ್ತಿಯಲ್ಲಿ ಏರಿಕೆ ಕಾಣುತ್ತಲೇ ಇದೆ.

ಹಲವು ಪ್ರಾಪರ್ಟಿ

ಸಲ್ಮಾನ್ ಖಾನ್ ಅವರು ಮೊದಲಿನಿಂದಲೂ ಮುಂಬೈನಲ್ಲೇ ಇದ್ದಾರೆ. ಹೀಗಾಗಿ ಅವರು ಹಲವು ಕಡೆ ಪ್ರಾಪರ್ಟಿ ಖರೀದಿಸಿದ್ದಾರೆ. ಮುಂಬೈನ ಬಾಂದ್ರಾದಲ್ಲಿ ದೊಡ್ಡ ಅಪಾರ್ಟ್​ಮೆಂಟ್ ಹೊಂದಿದ್ದಾರೆ. ಇನ್ನು ಪನ್ವೇಲ್​ನಲ್ಲಿ ಫಾರ್ಮ್​ಹೌಸ್ ಹೊಂದಿದ್ದಾರೆ. ಇದರ ಬೆಲೆ ನೂರಾರು ಕೋಟಿ ರೂಪಾಯಿಗೂ ಅಧಿಕವಾಗಿದೆ. ಆಗಾಗ ಅವರು ಅಲ್ಲಿಗೆ ಭೇಟಿ ನೀಡುತ್ತಾರೆ. ಇದಲ್ಲದೆ ದುಬೈ ಸೇರಿ ಅನೇಕ ಕಡೆಗಳಲ್ಲಿ ಸಲ್ಮಾನ್ ಆಸ್ತಿ ಹೊಂದಿದ್ದಾರೆ.

ಪ್ರತಿ ತಿಂಗಳು ಪಡೆಯೋದೆಷ್ಟು?

ಸಲ್ಮಾನ್ ಖಾನ್ ಅವರು ಪ್ರತಿ ತಿಂಗಳು ಕೋಟಿ ಕೋಟಿ ರೂಪಾಯಿ ಸಂಭಾವನೆ ಎಣಿಸುತ್ತಾರೆ. ಒಂದು ಲೆಕ್ಕಾಚಾರದ ಪ್ರಕಾರ ಅವರಿಗೆ ಪ್ರತಿ ತಿಂಗಳು 16 ಕೋಟಿ ರೂಪಾಯಿ ವೇತನ ಬರುತ್ತದೆ. ಬ್ರ್ಯಾಂಡ್ ಪ್ರಚಾರ, ಹೂಡಿಕೆ ಎಲ್ಲವೂ ಇದರಲ್ಲಿ ಸೇರಿದೆ.

ಇದನ್ನೂ ಓದಿ: ಎರಡನೇ ಮದುವೆ ಆದ ಸಲ್ಮಾನ್ ಖಾನ್ ಸಹೋದರ ಅರ್ಬಾಜ್; ಹಾರೈಸಿದ ಮಲೈಕಾ ಪುತ್ರ

ಕೈಯಲ್ಲಿ ಇಲ್ಲ ಸಿನಿಮಾ

ಸಲ್ಮಾನ್ ಕೈಯಲ್ಲಿ ಯಾವುದೇ ಹೊಸ ಸಿನಿಮಾ ಇಲ್ಲ. ‘ಟೈಗರ್ 3’ ಸಿನಿಮಾ ಅಂದುಕೊಂಡ ರೀತಿಯಲ್ಲಿ ಕಮಾಲ್ ಮಾಡಿಲ್ಲ. ಬರ್ತ್​ಡೇ ದಿನ ಅವರ ಹೊಸ ಸಿನಿಮಾ ಘೋಷಣೆ ಆಗೋ ಸಾಧ್ಯತೆ ಇದೆ. ಈ ವರ್ಷ ರಿಲೀಸ್ ಆದ ಶಾರುಖ್​ ನಟನೆಯ ‘ಪಠಾಣ್​’ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಇದಕ್ಕಾಗಿ ಅವರು ಸಂಭಾವನೆ ಪಡೆದಿಲ್ಲ. ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸೋತಿದೆ. ‘ಟೈಗರ್ 3’ ಅಂದುಕೊಂಡಷ್ಟು ಗಳಿಕೆ ಮಾಡಿಲ್ಲ.

ಬಿಗ್ ಬಾಸ್

ಕಳೆದ ಕೆಲವು ವರ್ಷಗಳಿಂದ ಹಿಂದಿ ಬಿಗ್ ಬಾಸ್​ನ ನಡೆಸಿಕೊಡುತ್ತಿದ್ದಾರೆ ಸಲ್ಮಾನ್ ಖಾನ್. ಅವರು ಇದಕ್ಕೂ ಭರ್ಜರಿ ಸಂಭಾವನೆ ಪಡೆಯುತ್ತಿದ್ದಾರೆ. ಇದಕ್ಕೂ ಅವರು ನೂರಾರು ಕೋಟಿ ರೂಪಾಯಿ ಚಾರ್ಜ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ, ಈ ವಿಚಾರದಲ್ಲಿ ಪಕ್ಕಾ ಮಾಹಿತಿ ಸಿಕ್ಕಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ