ಕ್ರಿಸ್​ಮಸ್​ ಹಬ್ಬದ ದಿನ 22 ಕೋಟಿ ರೂಪಾಯಿ ಗಳಿಸಿದ ‘ಡಂಕಿ’; ಒಟ್ಟು ಕಲೆಕ್ಷನ್​ ಎಷ್ಟಾಯಿತು?

ಡಿಸೆಂಬರ್​ 25ರಂದು ಕ್ರಿಸ್​ಮಸ್​ ಹಬ್ಬದ ಪ್ರಯುಕ್ತ ರಜೆ ಇತ್ತು. ಅಂದು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರದತ್ತ ಬರಬಹುದು ಎಂಬುದು ಚಿತ್ರತಂಡದ ಊಹೆ ಆಗಿತ್ತು. ಆದರೆ ಅಂದುಕೊಂಡ ರೀತಿಯಲ್ಲಿ ಹೌಸ್​ಫುಲ್​ ಆಗಿಲ್ಲ. ಡಿ.25ರಂದು ‘ಡಂಕಿ’ ಸಿನಿಮಾ ಗಳಿಸಿರುವುದು 22 ಕೋಟಿ ರೂಪಾಯಿ ಮಾತ್ರ.

ಕ್ರಿಸ್​ಮಸ್​ ಹಬ್ಬದ ದಿನ 22 ಕೋಟಿ ರೂಪಾಯಿ ಗಳಿಸಿದ ‘ಡಂಕಿ’; ಒಟ್ಟು ಕಲೆಕ್ಷನ್​ ಎಷ್ಟಾಯಿತು?
ಡಂಕಿ ಸಿನಿಮಾ
Follow us
ಮದನ್​ ಕುಮಾರ್​
|

Updated on: Dec 26, 2023 | 11:58 AM

ಶಾರುಖ್​ ಖಾನ್​ ಮತ್ತು ತಾಪ್ಸಿ ಪನ್ನು ಜೋಡಿಯಾಗಿ ನಟಿಸಿರುವ ‘ಡಂಕಿ’ (Dunki) ಸಿನಿಮಾಗೆ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಆಗಿಲ್ಲ. ಹಾಗಿದ್ದರೂ ಕೂಡ ನಿಧಾನವಾಗಿ ಈ ಸಿನಿಮಾ ಗಳಿಕೆ ಮಾಡುತ್ತಿದೆ. ಶಾರುಖ್​ ಖಾನ್​ (Shah Rukh Khan) ಅವರ ಅಭಿಮಾನಿಗಳು ಈ ಚಿತ್ರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ವೀಕೆಂಡ್​ ಮತ್ತು ರಜೆಯ ದಿನಗಳಲ್ಲಿ ಬಹುಕೋಟಿ ರೂಪಾಯಿ ಆದಾಯ ಹರಿದು ಬರುತ್ತಿದೆ. ಭಾರತದ ಗಲ್ಲಾ ಪೆಟ್ಟಿಗೆಯಲ್ಲಿ ಒಟ್ಟು 5 ದಿನಗಳಲ್ಲಿ ‘ಡಂಕಿ’ ಸಿನಿಮಾದ ಕಲೆಕ್ಷನ್​ (Dunki Box Office Collection) 123 ಕೋಟಿ ರೂಪಾಯಿ ದಾಟಿದೆ. ಮುಂದಿನ ದಿನಗಳಲ್ಲಿ ಚಿತ್ರದ ಕಲೆಕ್ಷನ್​ ಕುಸಿಯುವ ಸಾಧ್ಯತೆ ದಟ್ಟವಾಗಿದೆ.

ಡಿಸೆಂಬರ್​ 25ರಂದು ಕ್ರಿಸ್​ಮಸ್​ ಹಬ್ಬದ ಪ್ರಯುಕ್ತ ರಜೆ ಇತ್ತು. ಅಂದು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರದತ್ತ ಬರಬಹುದು ಎಂಬುದು ಚಿತ್ರತಂಡದ ಊಹೆ ಆಗಿತ್ತು. ಆದರೆ ಅಂದುಕೊಂಡ ರೀತಿಯಲ್ಲಿ ಹೌಸ್​ಫುಲ್​ ಆಗಿಲ್ಲ. ಡಿ.25ರಂದು ‘ಡಂಕಿ’ ಸಿನಿಮಾ ಗಳಿಸಿರುವುದು 22 ಕೋಟಿ ರೂಪಾಯಿ ಮಾತ್ರ. ಮಂಗಳವಾರದಿಂದ (ಡಿ.26) ಚಿತ್ರದ ಕಲೆಕ್ಷನ್​ ಕಡಿಮೆ ಆಗಲಿದೆ.

ಇದನ್ನೂ ಓದಿ: ‘ವೈಲೆನ್ಸ್​ ಬೇಡ, ಒಳ್ಳೆಯ ಸಿನಿಮಾ ಬೇಕಾದರೆ ಡಂಕಿ ನೋಡಿ’: ಫಸ್ಟ್​ ಶೋ ವೀಕ್ಷಿಸಿದ ಫ್ಯಾನ್ಸ್​ ಪ್ರತಿಕ್ರಿಯೆ

ಮೊದಲ ದಿನ ಅಂದರೆ, ಡಿಸೆಂಬರ್​ 21ರಂದು ‘ಡಂಕಿ’ 28 ಕೋಟಿ ರೂಪಾಯಿ ಗಳಿಸಿತ್ತು. 2ನೇ ದಿನ 20 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತು. 3ನೇ ದಿನವಾದ ಶನಿವಾರ (ಡಿ.23) 24.50 ಕೋಟಿ ರೂಪಾಯಿ ಆದಾಯ ಬಂತು. 4ನೇ ದಿನ 29 ಕೋಟಿ ರೂಪಾಯಿ ಬಾಚಿಕೊಳ್ಳುವಲ್ಲಿ ‘ಡಂಕಿ’ ಸಿನಿಮಾ ಯಶಸ್ವಿ ಆಯಿತು. 5ನೇ ದಿನ 22 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ.

ಇದನ್ನೂ ಓದಿ: Dunki Movie Review: ನಗಿಸಿ, ಅಳಿಸಿ, ಸಂದೇಶ ನೀಡುವ ಟಿಪಿಕಲ್​ ರಾಜ್​ಕುಮಾರ್ ಹಿರಾನಿ ಸಿನಿಮಾ ‘ಡಂಕಿ’

ರಾಜ್​ಕುಮಾರ್​ ಹಿರಾನಿ ಅವರು ‘ಡಂಕಿ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಗೌರಿ ಖಾನ್​ ಮತ್ತು ರಾಜ್​ಕುಮಾರ್​ ಹಿರಾನಿ ಅವರು ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಬೊಮನ್​ ಇರಾನಿ, ಅನಿಲ್​ ಗ್ರೋವರ್​, ವಿಕ್ರಂ ಕೊಚ್ಚರ್​ ಮುಂತಾದ ಕಲಾವಿದರು ನಟಿಸಿದ್ದಾರೆ. ವಿಕ್ಕಿ ಕೌಶಲ್​ ಅವರು ಒಂದು ಮುಖ್ಯ ಪಾತ್ರ ಮಾಡಿದ್ದಾರೆ. ಅನುಮತಿ ಇಲ್ಲದೇ ಅಕ್ರಮವಾಗಿ ದೇಶಗಳ ಗಡಿ ದಾಟುವ ಜನರ ಬಗ್ಗೆ ಈ ಸಿನಿಮಾದಲ್ಲಿ ತೋರಿಸಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.