‘ಯೋಗದ ಮಹತ್ವವನ್ನು ವಿಶ್ವಕ್ಕೆ ಪರಿಚಯಿಸಿದ ಖ್ಯಾತಿ ಪ್ರಧಾನಿ ಮೋದಿಗೆ ಸಲ್ಲುತ್ತದೆ’; ಪವನ್ ಕಲ್ಯಾಣ್

ಜೂನ್ 21ರಂದು ಆಂಧ್ರಪ್ರದೇಶದಲ್ಲಿ ವಿಶ್ವ ಯೋಗ ದಿನವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ವಿಶಾಖಪಟ್ಟಣಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಯೋಗದ ಮಹತ್ವ ಮತ್ತು ಮೋದಿ ಅವರ ಕೊಡುಗೆಯನ್ನು ಶ್ಲಾಘಿಸಿದರು. ಲಕ್ಷಾಂತರ ಜನರು ಯೋಗದಲ್ಲಿ ಭಾಗವಹಿಸಿದ್ದರು.

‘ಯೋಗದ ಮಹತ್ವವನ್ನು ವಿಶ್ವಕ್ಕೆ ಪರಿಚಯಿಸಿದ ಖ್ಯಾತಿ ಪ್ರಧಾನಿ ಮೋದಿಗೆ ಸಲ್ಲುತ್ತದೆ’; ಪವನ್ ಕಲ್ಯಾಣ್
ಪವನ್-ಮೋದಿ

Updated on: Jun 21, 2025 | 7:34 AM

ಇಂದು (ಜೂನ್ 21) ವಿಶ್ವ ಯೋಗ ದಿನಾಚರಣೆ (Yoga Day). ದೇಶಾದ್ಯಂತ ಯೋಗವನ್ನು ಮಾಡುವ ಮೂಲಕ ಈ ದಿನವನ್ನು ಆಚರಿಸಲಾಗುತ್ತಿದೆ. ಆಂಧ್ರದಲ್ಲಿ ನಡೆದ ಯೋಗ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವಿಶಾಖಪಟ್ಟಣಂನ ಐಎನ್ಎಸ್ ಚೋಳದಿಂದ ಆರ್​ಕೆ ಬೀಚ್​ಗೆ ಆಗಮಿಸಿದ ಮೋದಿ ಅವರಿಗೆ ಸಿಎಂ ಚಂದ್ರಬಾಬು ನಾಯ್ಡು, ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತು ಸಚಿವರು ಭವ್ಯ ಸ್ವಾಗತ ಕೋರಿದರು. ಆ ಬಳಿಕ ಪವನ್ ಕಲ್ಯಾಣ್  ಅವರು  ಯೋಗ ದಿನಾಚರಣೆ ಬಗ್ಗೆ ಮಾತನಾಡಿದರು. ಮತ್ತು ಯೋಗ ದಿನಾಚರಣೆಗೆ ಕಾರಣವಾದ ಮೋದಿಯನ್ನು ಶ್ಲಾಘಿಸಿದರು.

‘ದೇಶಾದ್ಯಂತ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ.  ಯೋಗದ ಮಹತ್ವವನ್ನು ವಿಶ್ವಕ್ಕೆ ಪರಿಚಯಿಸಿದ ಖ್ಯಾತಿ ಪ್ರಧಾನಿ ಮೋದಿಗೆ ಸಲ್ಲುತ್ತದೆ. ವಿಶ್ವಸಂಸ್ಥೆಯಲ್ಲಿ ಯೋಗದ ಮಹತ್ವದ ಬಗ್ಗೆ ಮನವರಿಕೆ ಮಾಡಿದರು. ಇದರಿಂದಾಗಿ ಈ ದಿನವನ್ನು ವಿಶ್ವ ಯೋಗ ದಿನವನ್ನಾಗಿ ಆಚರಿಸಲು ಸಾಧ್ಯವಾಗಿದೆ’ ಎಂದು ಪವನ್ ಕಲ್ಯಾಣ್ ಅವರು ಹೇಳಿದರು.

ಇದನ್ನೂ ಓದಿ: ಪವನ್ ಕಲ್ಯಾಣ್​ಗೆ ಸಿನಿಮಾ ನಿರ್ದೇಶನ ಮಾಡುವ ಆಸೆ ಹೊರಹಾಕಿದ ಧನುಷ್

ಆರ್‌ಕೆ ಬೀಚ್‌ನಲ್ಲಿ ನಡೆಯಲಿರುವ ಯೋಗ ಕಾರ್ಯಕ್ರಮದಲ್ಲಿ ಸಾಕಷ್ಟು ವ್ಯವಸ್ಥೆ ಮಾಡಲಾಗಿತ್ತು. ಪ್ರಧಾನಿ ಮೋದಿ ಜೊತೆಗೆ ಲಕ್ಷಾಂತರ ಮಂದಿ ಯೋಗ ಮಾಡಿದ್ದಾರೆ.

ಸಿನಿಮಾಗಳಲ್ಲೂ ಬ್ಯುಸಿ

ಪವನ್ ಕಲ್ಯಾಣ್ ಅವರು ಸಿನಿಮಾ ರಂಗದಲ್ಲೂ ಬ್ಯುಸಿ ಇದ್ದಾರೆ. ರಾಜಕೀಯ ಕೆಲಸಗಳ ಜೊತೆಗೆ ಸಿನಿಮಾಗಳನ್ನು ಕೂಡ ಅವರು ಮಾಡುತ್ತಿದ್ದಾರೆ. ಪವನ್ ಕಲ್ಯಾಣ್ ಬಳಿ ಈಗ ಮೂರು ಚಿತ್ರಗಳು ಇವೆ. ‘ಹರಿ ಹರ ವೀರ ಮಲ್ಲು’, ‘ಒಜಿ’ ಹಾಗೂ ‘ಉಸ್ತಾದ್ ಭಗತ್ ಸಿಂಗ್’ ಚಿತ್ರಗಳಲ್ಲಿ ಅವರು ಬ್ಯುಸಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.