ಹೊಸ ಸಿನಿಮಾಗೆ ರಶ್ಮಿಕಾ ಮಂದಣ್ಣ ಬೇಕು ಅಂತ ಹಠ ಹಿಡಿದಿದ್ದಾರಾ ವಿಜಯ್ ದೇವರಕೊಂಡ?
ರಶ್ಮಿಕಾ ಮಂದಣ್ಣ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಅವರಿಗೆ ಹೊಸ ಹೊಸ ಅವಕಾಶಗಳು ಹರಿದು ಬರುತ್ತಿವೆ. ವಿಜಯ್ ದೇವರಕೊಂಡ ಜೊತೆ ಅವರು ಮತ್ತೊಮ್ಮೆ ನಟಿಸಬೇಕು ಎಂಬುದು ಅಭಿಮಾನಿಗಳ ಆಸೆ. ಇಂದು (ಮೇ 9) ವಿಜಯ್ ದೇವರಕೊಂಡ ಜನ್ಮದಿನದ ಪ್ರಯುಕ್ತ ಅನೌನ್ಸ್ ಆಗಿರುವ ಹೊಸ ಸಿನಿಮಾಗೂ ರಶ್ಮಿಕಾ ಮಂದಣ್ಣ ನಾಯಕಿ ಆಗುವ ನಿರೀಕ್ಷೆ ಇದೆ.
ಟಾಲಿವುಡ್ನಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅವರದ್ದು ಸೂಪರ್ ಹಿಟ್ ಜೋಡಿ. ‘ಗೀತ ಗೋವಿಂದಂ’ ಸಿನಿಮಾದಲ್ಲಿ ಅವರಿಬ್ಬರು ಮೋಡಿ ಮಾಡಿದ್ದರು. ಆ ಬಳಿಕ ‘ಡಿಯರ್ ಕಾಮ್ರೇಡ್’ ಸಿನಿಮಾದಲ್ಲೂ ಜೊತೆಯಾಗಿ ನಟಿಸಿದ್ದರು. ಅವರನ್ನು ಮತ್ತೆ ಜೋಡಿಯಾಗಿ ತೆರೆಮೇಲೆ ನೋಡಬೇಕು ಎಂಬುದು ಅಭಿಮಾನಿಗಳ ಆಸೆ. ವಿಜಯ್ ದೇವರಕೊಂಡ (Vijay Deverakonda) ಅವರ ಹೊಸ ಸಿನಿಮಾದಲ್ಲಿ (VD14) ಆ ಆಸೆ ನೆರವೇರುವ ಸಾಧ್ಯತೆ ಇದೆ.
ಇಂದು (ಮೇ 9) ವಿಜಯ್ ದೇವರಕೊಂಡ ಅವರ ಜನ್ಮದಿನ. ಆ ಪ್ರಯುಕ್ತ ಅವರ ಹೊಸ ಸಿನಿಮಾ ಅನೌನ್ಸ್ ಆಗಿದೆ. ಇದು ವಿಜಯ್ ದೇವರಕೊಂಡ ನಟನೆಯ 14ನೇ ಸಿನಿಮಾ. ‘ಟ್ಯಾಕ್ಸಿವಾಲಾ’ ಖ್ಯಾತಿಯ ನಿರ್ದೇಶಕ ರಾಹುಲ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಸದ್ಯಕ್ಕೆ ಇದಕ್ಕೆ ಶೀರ್ಷಿಕೆ ಅಂತಿಮವಾಗಿಲ್ಲ. ತಾತ್ಕಾಲಿಕವಾಗಿ ‘ವಿಡಿ14’ ಎಂದು ಕರೆಯಲಾಗುತ್ತಿದೆ.
ಇದನ್ನೂ ಓದಿ: ಪುನೀತ್-ರಶ್ಮಿಕಾ ಮಂದಣ್ಣ ನಟನೆಯ ‘ಅಂಜನಿಪುತ್ರ’ ಮೇ 10ಕ್ಕೆ ಮರು ಬಿಡುಗಡೆ
‘ವಿಡಿ 14’ ಸಿನಿಮಾಗೆ ನಾಯಕಿ ಯಾರು ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಆದರೆ ಕೆಲವು ಅಂತೆ-ಕಂತೆಗಳು ಹರಿದಾಡುತ್ತಿವೆ. ಈ ಸಿನಿಮಾಗೆ ರಶ್ಮಿಕಾ ಮಂದಣ್ಣ ಅವರನ್ನೇ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂದು ವಿಜಯ್ ದೇವರಕೊಂಡ ಶಿಫಾರಸು ಮಾಡುತ್ತಿದ್ದಾರೆ ಎಂದು ಟಾಲಿವುಡ್ ಅಂಗಳದಲ್ಲಿ ಸುದ್ದಿ ಹಬ್ಬಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಇದನ್ನೂ ಓದಿ: ರಶ್ಮಿಕಾಗೆ ಖುಲಾಯಿಸಿತು ಅದೃಷ್ಟ, ಬಾಲಿವುಡ್ ಖಾನ್ಗೆ ನಾಯಕಿ
ವಿಜಯ್ ದೇವರಕೊಂಡ ನಟಿಸಲಿರುವ ಈ ಸಿನಿಮಾಗೆ ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆ ಬಂಡವಾಳ ಹೂಡಲಿದೆ. ಇದರಲ್ಲಿ ಐತಿಹಾಸಿಕ ಕಹಾನಿ ಇರಲಿದೆ. 1854ರ ಕಾಲಘಟ್ಟದ ಕಥೆ ಇರಲಿದೆ ಎಂಬುದಕ್ಕೆ ಹೊಸ ಪೋಸ್ಟರ್ನಲ್ಲಿ ಸುಳಿವು ನೀಡಲಾಗಿದೆ. ವಿಜಯ್ ದೇವರಕೊಂಡ ಅವರು ಒಂದು ದೊಡ್ಡ ಗೆಲುವಿಗಾಗಿ ಕಾದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆ ಆದ ‘ಲೈಗರ್’, ‘ಖುಷಿ’, ‘ಫ್ಯಾಮಿಲಿ ಸ್ಟಾರ್’ ಸಿನಿಮಾಗಳಿಂದ ನಿರೀಕ್ಷಿತ ಮಟ್ಟದ ಗೆಲುವು ಸಿಕ್ಕಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.