Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ರಿಯಲ್ ಎಸ್ಟೇಟ್ ಸಂಸ್ಥೆ ನನಗೆ ಮೋಸ ಮಾಡಿದೆ: ಜಗಪತಿ ಬಾಬು ಆರೋಪ

ಜಗಪತಿ ಬಾಬು ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ತಮಗೆ ರಿಯಲ್ ಎಸ್ಟೇಟ್ ಸಂಸ್ಥೆಯೊಂದು ಮೋಸ ಮಾಡಿದೆ ಎಂದು ಹೇಳಿದ್ದಾರೆ. ಸಂಸ್ಥೆ ಯಾವುದು? ಯಾವ ರೀತಿ ಮೋಸ ಮಾಡಿದ್ದಾರೆ ಎಂಬಿತ್ಯಾದಿ ಮಾಹಿತಿಗಳನ್ನು ಮುಂದೆ ಹಂಚಿಕೊಳ್ಳುವುದಾಗಿ ಹೇಳಿದ್ದಾರೆ.

ಆ ರಿಯಲ್ ಎಸ್ಟೇಟ್ ಸಂಸ್ಥೆ ನನಗೆ ಮೋಸ ಮಾಡಿದೆ: ಜಗಪತಿ ಬಾಬು ಆರೋಪ
Follow us
ಮಂಜುನಾಥ ಸಿ.
|

Updated on: May 29, 2024 | 3:32 PM

ಜಗಪತಿ ಬಾಬು (Jagapathi Babu) ದಕ್ಷಿಣ ಭಾರತ ಚಿತ್ರರಂಗದ (South Movie Inddustry) ಅತ್ಯಂತ ಜನಪ್ರಿಯ ವಿಲನ್. ದಕ್ಷಿಣ ಭಾರತದ ಹಲವು ಸೂಪರ್ ಸ್ಟಾರ್ ನಟರ ಎದುರು ವಿಲನ್ ಆಗಿ ಜಗಪತಿ ಬಾಬು ನಟಿಸಿದ್ದಾರೆ. ಕ್ಲಾಸ್ ವಿಲನ್ ಇರಲಿ ಅಥವಾ ಮಾಸ್ ವಿಲನ್ ಪಾತ್ರವೇ ಇರಲಿ ಜಗಪತಿ ಬಾಬು ಆ ಪಾತ್ರಕ್ಕೆ ಜೀವ ತುಂಬುತ್ತಾರೆ. ಜಗಪತಿ ಬಾಬು ಯಾವ ಭಾಷೆಯಲ್ಲಿ ಸಿನಿಮಾ ಮಾಡುತ್ತಾರೋ ಆ ರಾಜ್ಯದಲ್ಲಿ ಒಂದು ಸೈಟು ತೆಗೆದುಕೊಂಡಿದ್ದರೆ ಈ ಹೊತ್ತಿಗೆಲ್ಲ ಸಾವಿರಾರು ಕೋಟಿ ಆಸ್ತಿಯ ಒಡೆಯರಾಗಿರುತ್ತಿದ್ದರು ಎಂದು ತೆಲುಗಿನ ನಟರೊಬ್ಬರು ಸಿನಿಮಾ ಕಾರ್ಯಕ್ರಮವೊಂದರಲ್ಲಿ ಹಾಸ್ಯ ಮಾಡಿದ್ದರು. ವಿಲನ್​ಗಳ ವಿಲನ್ ಎಂದು ಹೆಸರು ಮಾಡಿರುವ ಜಗಪತಿ ಬಾಬುಗೆ ಯಾರೋ ಮೋಸ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಜಗಪತಿ ಬಾಬು ಮಾತನಾಡಿದ್ದಾರೆ.

ಜಗಪತಿ ಬಾಬು ಸಿನಿಮಾಗಳಲ್ಲಿ ಮಾತ್ರವೇ ಅಲ್ಲದೆ ಜಾಹೀರಾತುಗಳಲ್ಲಿಯೂ ನಟಿಸುತ್ತಾರೆ. ಇತ್ತೀಚೆಗೆ ಜಗಪತಿ ಬಾಬು ರಿಯಲ್ ಎಸ್ಟೇಟ್ ಸಂಬಂಧಿಸಿದ ಜಾಹೀರಾತೊಂದರಲ್ಲಿ ನಟಿಸಿದ್ದರು. ಆದರೆ ಆ ರಿಯಲ್ ಎಸ್ಟೇಟ್ ಸಂಸ್ಥೆಯವರು ತಮಗೆ ಮೋಸ ಮಾಡಿದ್ದಾರೆ ಎಂದು ಜಗಪತಿ ಬಾಬು ಹೇಳಿದ್ದಾರೆ. ವಿಡಿಯೋ ಒಂದನ್ನು ಬಿಡುಗಡೆ ಮಾಡಿರುವ ಜಗಪತಿ ಬಾಬು, ‘ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸಾಕಷ್ಟು ಮೋಸ ನಡೆಯುತ್ತಿರುತ್ತದೆ. ಈ ಬಗ್ಗೆ ಸಿಎಂ ರೇವಂತ್ ರೆಡ್ಡಿ (ತೆಲಂಗಾಣ) ಸಹ ಮಾತನಾಡಿದ್ದಾರೆ. ನನಗೂ ಸಹ ಮೋಸ ಆಗಿದೆ. ಇತ್ತೀಚೆಗೆ ನಾನು ಒಂದು ರಿಯಲ್ ಎಸ್ಟೇಟ್ ಜಾಹೀರಾತಿನಲ್ಲಿ ನಟಿಸಿದ್ದೆ, ಆದರೆ ಆ ಸಂಸ್ಥೆಯವರು ನನಗೆ ಮೋಸ ಮಾಡಿದ್ದಾರೆ. ಆದಷ್ಟು ಬೇಗ ಆ ವಿವರಗಳನ್ನು ನಿಮ್ಮ ಮುಂದೆ ಇಡಲಿದ್ದೇನೆ. ಯಾವುದೇ ಸೈಟ್ ಅಥವಾ ಜಮೀನು ಕೊಳ್ಳುವ ಮುಂಚೆ ರೇರಾ ನಿಬಂಧನೆಗಳನ್ನು ತಿಳಿದುಕೊಂಡು ವ್ಯವಹಾರ ನಡೆಸಿ’ ಎಂದಿದ್ದಾರೆ ಜಗಪತಿ ಬಾಬು.

ಇದನ್ನೂ ಓದಿ:Kisi Ka Bhai Kisi Ki Jaan: ‘ವಯಸ್ಸಾದವರ ಮೇಲೆ ಸಲ್ಮಾನ್​ ಖಾನ್​ ಕೈ ಎತ್ತಲ್ಲ’: ಜಗಪತಿ ಬಾಬು

ಜಗಪತಿ ಬಾಬು, ರಿಯಲ್ ಎಸ್ಟೇಟ್​ನಲ್ಲಿ ಆಗಾಗ್ಗೆ ಹೂಡಿಕೆ ಮಾಡುತ್ತಿರುತ್ತಾರೆ. ಹಿಂದೊಮ್ಮೆ ಸಂದರ್ಶನದಲ್ಲಿ ಮಾತನಾಡಿದ್ದ ಜಗಪತಿ ಬಾಬು ‘ನನಗೆ ಸಾಕಷ್ಟು ಮಂದಿ ಮೋಸ ಮಾಡಿದ್ದಾರೆ, ಅವರಿಗೆ ಮೋಸ ಮಾಡಲು ಅವಕಾಶ ಮಾಡಿಕೊಟ್ಟಿದ್ದು ನನ್ನ ದಡ್ಡತನ. ಇಷ್ಟು ವರ್ಷಗಳ ಕರಿಯರ್ ಕಂಡಿರುವ ನಾನು ಕೆಲವು ಕೋಟಿಗಳ ಆಸ್ತಿಯಾದರೂ ಮಾಡಬೇಕಿತ್ತು ಆದರೆ ಮಾಡಲಿಲ್ಲ. ಆದರೆ 2022 ರ ವೇಳೆಗೆ ನನ್ನ ಬಳಿ 30 ಕೋಟಿ ರೂಪಾಯಿ ಹಣ ಬಂತು. ನಾನು ಅದನ್ನು ಸರಿಯಾಗಿ ಹೂಡಿಕೆ ಮಾಡುತ್ತಿದ್ದೇನೆ’ ಎಂದಿದ್ದರು. ಹೂಡಿಕೆ ಮಾಡುವ ನಿರ್ಧಾರ ತಳೆದ ಬಳಿಕ ಜಗಪತಿ ಬಾಬುಗೆ ಈಗ ಮತ್ತೆ ಮೋಸವಾಗಿದೆ. ಮತ್ತೆ ಹಣ ಕಳೆದುಕೊಂಡಿದ್ದಾರೆ.

ಜಗಪತಿ ಬಾಬು ನಾಯಕ ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟವರು. 90ರ ದಶಕದಲ್ಲಿ ಜನಪ್ರಿಯ ನಾಯಕರಾಗಿದ್ದ ಜಗಪತಿ ಬಾಬು ಕೌಟುಂಬಿಕ ಕತೆಗಳಿಗೆ ನಿರ್ದೇಶಕರ ನೆಚ್ಚಿನ ಆಯ್ಕೆ ಆಗಿದ್ದರು. ಹೊಸ ನಾಯಕ ನಟರ ಎಂಟ್ರಿ ಆಗಿ, ಸಿನಿಮಾಗಳು ಹೆಚ್ಚು ಕಮರ್ಶಿಯಲ್, ಮಾಸ್ ಆಗುತ್ತಲೂ ಜಗಪತಿ ಬಾಬುಗೆ ಅವಕಾಶಗಳು ಕಡಿಮೆಯಾದವು. ಬಳಿಕ ಅವರು ವಿಲನ್ ಪಾತ್ರಗಳಲ್ಲಿ ನಟಿಸಲು ಆರಂಭಿಸಿದರು. ವಿಲನ್ ಆಗಿ ರೀ ಎಂಟ್ರಿ ಕೊಟ್ಟ ಜಗಪತಿ ಬಾಬು ಸೂಪರ್ ಹಿಟ್ ವಿಲನ್ ಆಗಿಬಿಟ್ಟರು. ಹೀರೋ ಆಗಿ ಗಳಿಸಿದ್ದಕ್ಕಿಂತಲೂ ಹೆಚ್ಚಿನ ಹಣ ಹಾಗೂ ಜನಪ್ರಿಯತೆಯನ್ನು ವಿಲನ್ ಆಗಿ ಗಳಿಸುತ್ತಿದ್ದಾರೆ ಜಗಪತಿ ಬಾಬು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ಯುವತಿಯ ಖಾಸಗಿ ಅಂಗ ಸ್ಪರ್ಶ ಕೇಸ್: ಉಡಾಫೆ ಉತ್ತರ ಕೊಟ್ಟ ಗೃಹ ಸಚಿವ
ಯುವತಿಯ ಖಾಸಗಿ ಅಂಗ ಸ್ಪರ್ಶ ಕೇಸ್: ಉಡಾಫೆ ಉತ್ತರ ಕೊಟ್ಟ ಗೃಹ ಸಚಿವ
ಪೊಲೀಸ್ ಭದ್ರತೆ ಮಧ್ಯೆ ಪ್ರವೀಣ್ ನೆಟ್ಟರು ಹಂತಕನಿಗೆ ಮುತ್ತಿಕ್ಕಿದ ಯುವಕ!
ಪೊಲೀಸ್ ಭದ್ರತೆ ಮಧ್ಯೆ ಪ್ರವೀಣ್ ನೆಟ್ಟರು ಹಂತಕನಿಗೆ ಮುತ್ತಿಕ್ಕಿದ ಯುವಕ!
ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಡುವೆ ಅಸಮಾಧಾನಗಳಿವೆಯಾ?
ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಡುವೆ ಅಸಮಾಧಾನಗಳಿವೆಯಾ?
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೆಟ್ಟ ಐಸಿಯು ಎಸಿ: ರೋಗಿಗಳು ಬೇರೆಡೆ ಶಿಫ್ಟ್
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೆಟ್ಟ ಐಸಿಯು ಎಸಿ: ರೋಗಿಗಳು ಬೇರೆಡೆ ಶಿಫ್ಟ್
ಬ್ಯಾಗ್ ಕದಿಯಲು ಬಂದವಗೆ ಒಳ್ಳೆ ರಿಪ್ಲೇ ಕೊಟ್ಟ ಯುವತಿ
ಬ್ಯಾಗ್ ಕದಿಯಲು ಬಂದವಗೆ ಒಳ್ಳೆ ರಿಪ್ಲೇ ಕೊಟ್ಟ ಯುವತಿ
ರಾಣಿ ಚೆನ್ನಮ್ಮ ಹೆಸರಲ್ಲೂ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಲಿ: ಸ್ವಾಮೀಜಿ
ರಾಣಿ ಚೆನ್ನಮ್ಮ ಹೆಸರಲ್ಲೂ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಲಿ: ಸ್ವಾಮೀಜಿ
ಚ್ಯಾನೆಲ್​ಗಳಲ್ಲಿ ವರದಿ ಬಿತ್ತರವಾದಾಗ ಮಾತ್ರ ಅಧಿಕಾರಿಗಳು ಬಂದು ಹೋಗುತ್ತಾರೆ
ಚ್ಯಾನೆಲ್​ಗಳಲ್ಲಿ ವರದಿ ಬಿತ್ತರವಾದಾಗ ಮಾತ್ರ ಅಧಿಕಾರಿಗಳು ಬಂದು ಹೋಗುತ್ತಾರೆ