‘ಗುಂಟೂರು ಖಾರಂ ಶೂಟ್ ಮುಗಿಸೋದೆ ಕಷ್ಟವಾಯ್ತು, ಸಿನಿಮಾ ನನಗೆ ಇಷ್ಟ ಆಗಿಲ್ಲ’; ಜಗಪತಿ ಬಾಬು
ಜಗಪತಿ ಬಾಬು ‘ಗುಂಟೂರು ಖಾರಂ’ ಸೋಲಿನ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಸಿನಿಮಾ ಇಷ್ಟವಾಗಿಲ್ಲ ಎಂದು ನೇರವಾಗಿ ಹೇಳಿರುವ ಅವರು, ಸಿನಿಮಾ ಶೂಟ್ ಮಾಡೋದು ಕೂಡ ಕಷ್ಟವಾಯ್ತು ಎಂದು ವಿವರಿಸಿದ್ದಾರೆ.

ಮಹೇಶ್ ಬಾಬು (Mahesh Babu) ಹಾಗೂ ತ್ರಿವಿಕ್ರಂ ಶ್ರೀನಿವಾಸ್ ಅವರದ್ದು ಗ್ರೇಟ್ ಕಾಂಬಿನೇಷನ್. ಇವರ ಕಾಂಬಿನೇಷನ್ನಲ್ಲಿ ಈ ಮೊದಲು ಮೂಡಿ ಬಂದ ‘ಅಥಡು’ ಹಾಗೂ ‘ಖಲೇಜಾ’ ಸಿನಿಮಾಗಳು ಸೂಪರ್ ಹಿಟ್ ಆದವು. ಈ ಕಾರಣದಿಂದಲೇ ‘ಗುಂಟೂರು ಖಾರಂ’ ಸಿನಿಮಾ ಮೇಲೆ ನಿರೀಕ್ಷೆ ಇತ್ತು. ಆದರೆ, ನಿರೀಕ್ಷೆ ಹುಸಿ ಆಗಿದೆ. ಸಿನಿಮಾ ಅಂದುಕೊಂಡ ರೀತಿಯಲ್ಲಿ ಕಮಾಲ್ ಮಾಡಿಲ್ಲ. ಈ ಚಿತ್ರದ ವಿಫಲತೆಯನ್ನು ಯಾರೊಬ್ಬರೂ ನೇರವಾಗಿ ಹೇಳಿಲ್ಲ. ಆದರೆ, ಈ ಚಿತ್ರದ ವಿಲನ್ ಜಗಪತಿ ಬಾಬು ನೇರವಾಗಿ ಸಿನಿಮಾ ಬಗ್ಗೆ ಮಾತನಾಡಿದ್ದಾರೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.
ಜಗಪತಿ ಬಾಬು ಹಲವು ಸಿನಿಮಾಗಳಲ್ಲಿ ವಿಲನ್ ಪಾತ್ರ ಮಾಡಿದ್ದಾರೆ. ಅವರು ಎಲ್ಲಾ ವಿಚಾರಗಳನ್ನು ನೇರವಾಗಿ ಹೇಳಿಕೊಳ್ಳುತ್ತಾರೆ. ಅವರು ‘ಗುಂಟೂರು ಖಾರಂ’ ಸೋಲಿನ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಸಿನಿಮಾ ಇಷ್ಟವಾಗಿಲ್ಲ ಎಂದು ನೇರವಾಗಿ ಹೇಳಿರುವ ಅವರು, ಸಿನಿಮಾ ಶೂಟ್ ಮಾಡೋದು ಕೂಡ ಕಷ್ಟವಾಯ್ತು ಎಂದು ವಿವರಿಸಿದ್ದಾರೆ.
‘ನನಗೆ ಮಹೇಶ್ ಬಾಬು ಜೊತೆ ಕೆಲಸ ಮಾಡೋದು ಎಂದರೆ ಇಷ್ಟ. ಆದರೆ, ಗುಂಟೂರು ಖಾರಂ ನನಗೆ ಖುಷಿ ನೀಡಿಲ್ಲ. ಆರಂಭದಲ್ಲಿ ಪಾತ್ರಗಳು ಸ್ಟ್ರಾಂಗ್ ಎನಿಸಿದ್ದವು. ಆದರೆ, ಬರುಬರುತ್ತಾ ಎಲ್ಲವೂ ಕಲಸುಮೇಲೋಗರ ಆಯಿತು. ಕೊನೆಯಲ್ಲಿ ಸಿನಿಮಾ ಶೂಟಿಂಗ್ ಮುಗಿಸೋದೆ ಕಷ್ಟ ಆಯಿತು. ನಾನು ಏನು ಮಾಡಬೇಕೋ ಅದೆಲ್ಲವನ್ನೂ ಮಾಡಿದ್ದೇನೆ. ಈ ರೀತಿಯ ಸಿನಿಮಾಗಳಲ್ಲಿ ಇಂಥ ಅದ್ಭುತ ಕಾಂಬಿನೇಷನ್ ಮಿಸ್ ಮಾಡಿಕೊಳ್ಳಲು ನನಗೆ ಇಷ್ಟ ಇರಲಿಲ್ಲ’ ಎಂದಿದ್ದಾರೆ ಅವರು.
ಇದನ್ನೂ ಓದಿ: ಅಮೆರಿಕದ ಎನ್ಬಿಎ ಗೇಮ್ನಲ್ಲಿ ಮಹೇಶ್ ಬಾಬು ಸಾಂಗ್; ಹೆಚ್ಚಿತು ಫ್ಯಾನ್ಸ್ ಹೆಮ್ಮೆ
ಸದಾ ರಗಡ್ ವಿಲನ್ ಆಗಿ ಕಾಣಿಸಿಕೊಳ್ಳುತ್ತಾರೆ ಜಗಪತಿ ಬಾಬು. ಆದರೆ, ಈ ಸಿನಿಮಾದಲ್ಲಿ ಅವರು ಅತೀ ಗಂಭೀರ ವಿಲನ್ ಆಗಿಯೇನು ಇರಲಿಲ್ಲ. ಅವರ ಪಾತ್ರ ಕೂಡ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಿಲ್ಲ. ಸಿನಿಮಾ ರಿಲೀಸ್ ಆದ ಕೆಲವೇ ದಿನಗಳಲ್ಲಿ ಈ ಚಿತ್ರ ಒಟಿಟಿಗೆ ಕಾಲಿಟ್ಟಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ