AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದ ಎನ್​ಬಿಎ ಗೇಮ್​ನಲ್ಲಿ ಮಹೇಶ್ ಬಾಬು ಸಾಂಗ್; ಹೆಚ್ಚಿತು ಫ್ಯಾನ್ಸ್ ಹೆಮ್ಮೆ

ಅಮೆರಿಕದ ಹೌಸ್ಟನ್​ ಟೊಯೊಟಾ ಸೆಂಟರ್​​ನಲ್ಲಿ ಎನ್​ಬಿಎ ಗೇಮ್ ನಡೆಯುತ್ತಿತ್ತು. ಅಲ್ಲಿ ‘ಗುಂಟೂರು ಖಾರಂ’ ಸಿನಿಮಾದ ಹಾಡನ್ನು ಪ್ಲೇ ಮಾಡಲಾಗಿದೆ. ಈ ಸಿನಿಮಾದ ಅಧಿಕೃತ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಇದರಿಂದ ಮಹೇಶ್ ಬಾಬು ಖ್ಯಾತಿ ಹೆಚ್ಚುವಂತೆ ಆಗಿದೆ.

ಅಮೆರಿಕದ ಎನ್​ಬಿಎ ಗೇಮ್​ನಲ್ಲಿ ಮಹೇಶ್ ಬಾಬು ಸಾಂಗ್; ಹೆಚ್ಚಿತು ಫ್ಯಾನ್ಸ್ ಹೆಮ್ಮೆ
ಮಹೇಶ್-ಶ್ರೀಲೀಲಾ
ರಾಜೇಶ್ ದುಗ್ಗುಮನೆ
|

Updated on: Apr 02, 2024 | 2:57 PM

Share

ತೆಲುಗು ಸೂಪರ್​ಸ್ಟಾರ್ ಮಹೇಶ್ ಬಾಬು (Mahesh Babu) ಹಾಗೂ ಕನ್ನಡದ ನಟಿ ಶ್ರೀಲೀಲಾ ಅಭಿನಯದ ‘ಗುಂಟೂರು ಖಾರಂ’ ಸಿನಿಮಾ ಈ ವರ್ಷದ ಆರಂಭದಲ್ಲಿ ರಿಲೀಸ್ ಆಗಿ ಸಾಧಾರಣ ಹಿಟ್ ಎನಿಸಿಕೊಂಡಿತು. ಈ ಚಿತ್ರಕ್ಕೆ ಎಸ್​. ಥಮನ್ ಅವರು ಸಂಗೀತ ಸಂಯೋಜನೆ ಮಾಡಿದ್ದರು. ‘ಕುರ್ಚಿ ಮಾಡತಾ ಪೆಟ್ಟಿ..’ ಹಾಡು ಸಖತ್ ಫೇಮಸ್ ಆಗಿದೆ. ಈ ಹಾಡನ್ನು ಎನ್​ಬಿಎ ಗೇಮ್​ನಲ್ಲಿ ಪ್ಲೇ ಮಾಡಲಾಗಿದೆ. ಈ ಮೂಲಕ ತೆಲುಗು ಹಾಡಿನ ಕಂಪು ಅಮೆರಿಕದಲ್ಲೂ ಹರಡಿದೆ.

ಅಮೆರಿಕದ ಹೌಸ್ಟನ್​ ಟೊಯೊಟಾ ಸೆಂಟರ್​​ನಲ್ಲಿ ಎನ್​ಬಿಎ ಗೇಮ್ ನಡೆಯುತ್ತಿತ್ತು. ಅಲ್ಲಿ ‘ಗುಂಟೂರು ಖಾರಂ’ ಸಿನಿಮಾದ ಹಾಡನ್ನು ಪ್ಲೇ ಮಾಡಲಾಗಿದೆ. ಈ ಸಿನಿಮಾದ ಅಧಿಕೃತ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಇದರಿಂದ ಮಹೇಶ್ ಬಾಬು ಖ್ಯಾತಿ ಹೆಚ್ಚುವಂತೆ ಆಗಿದೆ. ವಿದೇಶದಲ್ಲಿ ಮಹೇಶ್ ಬಾಬು ಹಾಡು ಸದ್ದು ಮಾಡುತ್ತಿರುವುದಕ್ಕೆ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

‘ಕುರ್ಚಿ ಮಡತಾ ಪೆಟ್ಟಿ’ ಹಾಡಿಗೆ ಎಸ್​​ಎಸ್​ ಥಮನ್ ಸಂಗೀತ ಸಂಯೋಜನೆ ಮಾಡಿದ್ದರು. ಅವರ ಹಾಡು ಗಮನ ಸೆಳೆದಿದೆ. ತ್ರಿವಿಕ್ರಂ ಶ್ರೀನಿವಾಸ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಯೂಟ್ಯೂಬ್​ನಲ್ಲಿ ಈ ಹಾಡು 15 ಕೋಟಿಗೂ ಅಧಿಕ ಜನರು ಈ ಹಾಡನ್ನು ವೀಕ್ಷಣೆ ಮಾಡಿದ್ದಾರೆ.

‘ಗುಂಟೂರು ಖಾರಂ’ ಸಿನಿಮಾ 2024ರ ಜನವರಿ 12ರಂದು ಥಿಯೇಟರ್​ನಲ್ಲಿ ರಿಲೀಸ್ ಆಗಿದೆ. ಈ ಸಿನಿಮಾ ಅಂದುಕೊಂಡಷ್ಟು ಗಳಿಕೆ ಮಾಡಿಲ್ಲ. ಈ ಸಿನಿಮಾ ಸಾಧಾರಣ ಹಿಟ್ ಎನಿಸಿಕೊಂಡಿದೆ. ಈ ಹಾಡಿನಲ್ಲಿ ಮಹೇಶ್ ಬಾಬು ಹಾಗೂ ಶ್ರೀಲೀಲಾ ಭರ್ಜರಿಯಾಗಿ ಸ್ಟೆಪ್ ಹಾಕಿದ್ದರು. ಈ ಸಿನಿಮಾದಲ್ಲಿ ರಮ್ಯಾ ಕೃಷ್ಣನ್, ಜಗಪತಿ ಬಾಬು, ಪ್ರಕಾಶ್ ರಾಜ್, ಜಯರಾಮ್ ಮತ್ತು ಮೀನಾಕ್ಷಿ ಚೌಧರಿ ಈ ಸಿನಿಮಾದಲ್ಲಿ ನಟಿಸಿದ್ದರು.

ಇದನ್ನೂ ಓದಿ: ತಾವು ನಟಿಸಿದ ಸಿನಿಮಾಗಳಲ್ಲಿ ಈ ಮೂರು ಸಿನಿಮಾಗಳು ಬಹಳ ವಿಶೇಷವಂತೆ ಮಹೇಶ್ ಬಾಬುಗೆ

ಮಹೇಶ್ ಬಾಬು ಅವರು ರಾಜಮೌಳಿ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕಾಗಿ ಅವರು ಭರ್ಜರಿ ಟ್ರೇನಿಂಗ್ ಪಡೆಯುತ್ತಿದ್ದಾರೆ. ಈ ಸಿನಿಮಾಗಾಗಿ ಅವರು ದೇಹದ ತೂಕ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅವರು ಹೆಚ್ಚಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ