ಮಗನಿಗೆ ಸಿನಿಮಾ ಮಾಡಿ ಎಲ್ಲವನ್ನೂ ಮಾರಿಕೊಂಡಿದ್ದ ಜಗಪತಿ ಬಾಬುಗಾಗಿ ತಂದೆ
ಜಗಪತಿ ಬಾಬು ಅವರ ತಂದೆ ವಿ.ಬಿ. ರಾಜೇಂದ್ರ ಪ್ರಸಾದ್ ನಿರ್ಮಿಸಿದ ‘ಸಿಂಹ ಸ್ವಪ್ನಮ್’ ಚಿತ್ರದ ವೈಫಲ್ಯದಿಂದಾಗಿ ಆರ್ಥಿಕ ಸಂಕಷ್ಟ ಅನುಭವಿಸಿದರು. ಆದರೆ, ಈ ಸಂಕಷ್ಟವೇ ಜಗಪತಿ ಬಾಬು ಅವರಿಗೆ ಚಲನಚಿತ್ರ ರಂಗದಲ್ಲಿ ಯಶಸ್ವಿಯಾಗಲು ಪ್ರೇರಣೆಯಾಯಿತು. ಇಂದು ಅವರು ದಕ್ಷಿಣ ಭಾರತದ ಪ್ರಮುಖ ಖಳನಟರಾಗಿದ್ದಾರೆ. ಅವರ ಯಶಸ್ಸಿನ ಹಿಂದಿರುವ ಕಥೆ ಇಲ್ಲಿದೆ.

ಜಗಪತಿ ಬಾಬು ಎಂದಾಕ್ಷಣ ಅವರ ಗತ್ತು ನೆನಪಿಗೆ ಬರುತ್ತದೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿ ಗಮನ ಸೆಳೆದವರು. ಅವರು ಖಡಕ್ ವಿಲನ್ ಪಾತ್ರಗಳ ಮೂಲಕ ಭೇಷ್ ಎನಿಸಿಕೊಂಡಿದ್ದಾರೆ. ಮಗನಿಗಾಗಿ ಅವರ ತಂದೆ ಸಿನಿಮಾ ಮಾಡಿದರು. ಇದರಿಂದ ಸಖತ್ ನಷ್ಟ ಅನುಭವಿಸಿದರು. ಇದೆಲ್ಲ ತಿಳಿಯುವುದರೊಳಗೆ ಜಗಪತಿ ಬಾಬುಗೆ ಸಮಯ ಮೀರಿ ಹೋಗಿತ್ತು.
ವಿಬಿ ರಾಜೇಂದ್ರ ಪ್ರಸಾದ್ ಅವರು ಜಗಪತಿ ಬಾಬು ಅವರ ತಂದೆ. ಅವರು ಟಾಲಿವುಡ್ನ ಖ್ಯಾತ ನಿರ್ದೇಶಕರು, ನಿರ್ಮಾಪಕರು ಹಾಗೂ ಚಿತ್ರಕಥೆ ಬರಹಗಾರರು. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನಿಡಿದ್ದರು. 1971ರಲ್ಲಿ ರಿಲೀಸ್ ಆದ ಅವರ ನಿರ್ದೇಶನದ, ಅಕ್ಕಿನೇನಿ ನಾಗೇಶ್ವರ್ ರಾವ್ ನಟನೆಯ ‘ದಸರಾ ಬುಲ್ಲೊಡು’ ಚಿತ್ರ ಸೂಪರ್ ಹಿಟ್ ಆಗಿತ್ತು. ಆಗ ಜಗಪತಿ ಬಾಬುಗೆ 12 ವರ್ಷ. ಅವರಿಗೆ ಗೆಲುವು ಎಂದರೇನು ಎಂಬುದೆಲ್ಲ ಗೊತ್ತಿರಲಿಲ್ಲ.
ಆದರೆ, ಜಗಪತಿ ಬಾಬುನ ಪರಿಚಯಿಸಲು ರಾಜೇಂದ್ರ ಪ್ರಸಾದ್ ‘ಸಿಂಹ ಸ್ವಪ್ನಮ್’ ಹೆಸರಿನ ಸಿನಿಮಾ ಮಾಡಿದ್ದರು. ಈ ಚಿತ್ರ ಫ್ಲಾಪ್ ಆಯಿತು. ಇದಕ್ಕೆ ಬಂಡವಾಳ ಹಾಕಿ ರಾಜೇಂದ್ರ ಪ್ರಸಾದ್ ಸಾಕಷ್ಟು ನಷ್ಟ ಅನುಭವಿಸಿದರು. ಜಗಪತಿ ಬಾಬು ಹೇಳುವ ಪ್ರಕಾರ ಈ ಚಿತ್ರದ ಬಳಿಕ ಅವರು ಚೆನ್ನೈನಲ್ಲಿರುವ ಜಾಗವನ್ನು ಮಾರಿ ಹೈದರಾಬಾದ್ಗೆ ಶಿಫ್ಟ್ ಆದರು. ಆಗ ಅವರಿಗೆ ಕಷ್ಟದ ಅನುಭವ ಆಯಿತು.
ಆ ಬಳಿಕ ಪರಿಸ್ಥಿತಿ ಯಾವ ರೀತಿಯಲ್ಲಿ ಹದಗೆಟ್ಟಿತು ಎಂದರೆ ಅವರು ಕಾರುಗಳನ್ನು ಕೂಡ ಮಾರಿಕೊಳ್ಳಬೇಕಾಯಿತು. ಆ ಬಳಿಕ ರಾಜೇಂದ್ರ ಪ್ರಸಾದ್ ಅವರು ಕೆಲವೇ ಕೆಲವು ಸಿನಿಮಾ ಮಾಡಿದರು. ತಂದೆ ಎದುರಿಸಿದ ತೊಂದರೆಗಳನ್ನು ಹತ್ತಿರದಿಂದ ಕಂಡಿದ್ದರಿಂದ ಜಗಪತಿ ಬಾಬುಗೆ ಜೀವನದಲ್ಲಿ ಏನು ಮಾಡಬಾರದು ಎಂದು ತಿಳಿಯಿತು.
ಇದನ್ನೂ ಓದಿ: ಆ ರಿಯಲ್ ಎಸ್ಟೇಟ್ ಸಂಸ್ಥೆ ನನಗೆ ಮೋಸ ಮಾಡಿದೆ: ಜಗಪತಿ ಬಾಬು ಆರೋಪ
ಜಗಪತಿ ಬಾಬು ಈಗ ದಕ್ಷಿಣ ಭಾರತದ ಬೇಡಿಕೆಯ ವಿಲನ್ ಆಗಿದ್ದಾರೆ. ಅವರು ಖಡಕ್ ವಿಲನ್ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅವರು ಪ್ರತಿ ಚಿತ್ರಕ್ಕೆ ಕೋಟಿ ಕೋಟಿ ಚಾರ್ಜ್ ಮಾಡುತ್ತಾರೆ. ಅವರು ಕನ್ನಡದಲ್ಲೂ ನಟಿಸಿದ್ದಾರೆ ಅನ್ನೋದು ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.