‘ಜೈಲರ್ 2’ ಚಿತ್ರಕ್ಕೆ ‘ಹುಕುಂ’ ಶೀರ್ಷಿಕೆ? 250 ಕೋಟಿ ರೂ. ಸಂಭಾವನೆಗೆ ಬೇಡಿಕೆ ಇಟ್ಟ ರಜನಿಕಾಂತ್

‘ಜೈಲರ್ 2’ ಚಿತ್ರಕ್ಕೆ ‘ಹುಕುಂ’ ಎನ್ನುವ ಶೀರ್ಷಿಕೆ ಇಡಲಾಗಿದೆಯಂತೆ. ಈ ವರ್ಷ ಜೂನ್​ ತಿಂಗಳಲ್ಲಿ ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸಗಳು ಆರಂಭ ಆಗಲಿವೆ ಎಂದು ವರದಿ ಆಗಿದೆ. ಸದ್ಯ ಸ್ಕ್ರಿಪ್ಟ್​ನ ಡ್ರಾಫ್ಟ್ ರೆಡಿ ಆಗಿದ್ದು, ನೆಲ್ಸನ್ ಅವರ ಐಡಿಯಾ ಇಷ್ಟ ಆಗಿದೆ.

‘ಜೈಲರ್ 2’ ಚಿತ್ರಕ್ಕೆ ‘ಹುಕುಂ’ ಶೀರ್ಷಿಕೆ? 250 ಕೋಟಿ ರೂ. ಸಂಭಾವನೆಗೆ ಬೇಡಿಕೆ ಇಟ್ಟ ರಜನಿಕಾಂತ್
ಜೈಲರ್
Edited By:

Updated on: Apr 13, 2024 | 9:49 AM

ರಜನಿಕಾಂತ್ (Rajinikanth) ನಟನೆಯ ‘ಜೈಲರ್’ ಸಿನಿಮಾ ಸೂಪರ್ ಹಿಟ್ ಆಯಿತು. 2023ರಲ್ಲಿ ರಿಲೀಸ್ ಆದ ನೆಲ್ಸನ್ ದಿಲೀಪ್​ಕುಮಾರ್ ನಿರ್ದೇಶನದ ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಗಳಿಕೆ ಮಾಡಿತ್ತು. ಈಗ ಈ ಚಿತ್ರದ ಸೀಕ್ವೆಲ್ ಬಗ್ಗೆ ಸುದ್ದಿ ಒಂದು ಹರಿದಾಡಿದೆ. ‘ಜೈಲರ್ 2’ ಮಾಡೋಕೆ ನೆಲ್ಸನ್ ಅವರು ಸಿದ್ಧತೆ ಮಾಡಿಕೊಂಡಿದ್ದಾರೆ. ರಜನಿಕಾಂತ್ ಅವರೇ ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಲಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ರಜನಿಕಾಂತ್ ಅವರ ಆ್ಯಕ್ಷನ್ ಸಿನಿಮಾಗಳನ್ನು ಪ್ರೇಕ್ಷಕರು ಸಖತ್ ಇಷ್ಟಪಡುತ್ತಾರೆ. ಪಂಚ್ ಡೈಲಾಗ್ ಇದ್ದರೆ ಸಿನಿಮಾದ ತೂಕ ಮತ್ತಷ್ಟು ಹೆಚ್ಚಾಗುತ್ತದೆ. ‘ಜೈಲರ್’ ಚಿತ್ರದಲ್ಲಿ ರಜನಿಕಾಂತ್ ಅವರು ಮಾಸ್ ಆಗಿ ಕಾಣಿಸಿಕೊಂಡಿದ್ದರು. ಇದರ ಜೊತೆಗೆ ಶಿವರಾಜ್​ಕುಮಾರ್ ಹಾಗೂ ಮೋಹನ್​ಲಾಲ್ ಅತಿಥಿ ಪಾತ್ರ ಗಮನ ಸೆಳೆಯಿತು. ವಿಲನ್ ಪಾತ್ರದಲ್ಲಿ ಮಲಯಾಳಂನ ವಿನಾಯಕನ್ ಅವರು ಭರ್ಜರಿ ಅಂಕ ಗಿಟ್ಟಿಸಿಕೊಂಡರು. ದೊಡ್ಡ ಮಟ್ಟದಲ್ಲಿ ಗೆದ್ದ ಈ ಚಿತ್ರಕ್ಕೆ ಸೀಕ್ವೆಲ್ ಮಾಡಲು ನೆಲ್ಸನ್ ಸಿದ್ಧತೆ ಮಾಡಿಕೊಂಡಿದ್ದಾರೆ.

‘ಜೈಲರ್ 2’ ಚಿತ್ರಕ್ಕೆ ‘ಹುಕುಂ’ ಎನ್ನುವ ಶೀರ್ಷಿಕೆ ಇಡಲಾಗಿದೆಯಂತೆ. ಈ ವರ್ಷ ಜೂನ್​ ತಿಂಗಳಲ್ಲಿ ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸಗಳು ಆರಂಭ ಆಗಲಿವೆ ಎಂದು ವರದಿ ಆಗಿದೆ. ಸದ್ಯ ಸ್ಕ್ರಿಪ್ಟ್​ನ ಡ್ರಾಫ್ಟ್ ರೆಡಿ ಆಗಿದ್ದು, ನೆಲ್ಸನ್ ಅವರ ಐಡಿಯಾ ಇಷ್ಟ ಆಗಿದೆ. ‘ಜೈಲರ್’ ಚಿತ್ರದ ಕ್ಲೈಮ್ಯಾಕ್ಸ್​ನಲ್ಲಿ ವಿಲನ್​ನ ಕೊಲೆ ಮಾಡಿ, ತಪ್ಪು ಮಾಡಿದ ಮಗನನ್ನೇ ಕೊಲ್ಲುವ ದೃಶ್ಯ ಇತ್ತು. ಈ ಕಥೆಯನ್ನು ಪರ್ಫೆಕ್ಟ್ ಆಗಿ ಮುಂದುವರಿಸೋಕೆ ನೆಲ್ಸನ್​ಗೆ ಐಡಿಯಾ ಹೊಳೆದಿದೆ. ಈ ಕಥೆಗೆ ರಜನಿಕಾಂತ್ ಹಾಗೂ ಸನ್​ ಪಿಕ್ಚರ್ಸ್​ ಕಡೆಯಿಂದ ಒಪ್ಪಿಗೆ ಸಿಕ್ಕಿದೆ. ಶಿವಣ್ಣ ಹಾಗೂ ಮೋಹನ್​ಲಾಲ್ ಕೂಡ ಸಿನಿಮಾದಲ್ಲಿ ಇರುತ್ತಾರಾ ಅನ್ನೋದು ಸದ್ಯದ ಪ್ರಶ್ನೆ.

ರಜನಿಕಾಂತ್ ನಟನೆಯ ‘ವೆಟ್ಟೈಯನ್’ ಸಿನಿಮಾ ಅಕ್ಟೋಬರ್​ನಲ್ಲಿ ರಿಲೀಸ್ ಆಗಲಿದೆ. ಈ ಚಿತ್ರದ ಬಳಿಕ ರಜನಿಕಾಂತ್ ಅವರು ಲೋಕೇಶ್ ಕನಗರಾಜ್ ನಿರ್ದೇಶನದ ‘ಥಲೈವರ್ 171’ (ತಾತ್ಕಾಲಿಕ ಶೀರ್ಷಿಕೆ) ಸಿನಿಮಾದಲ್ಲಿ  ತೊಡಗಿಕೊಳ್ಳಲಿದ್ದಾರೆ. ಇದಾದ ಬಳಿಕ ‘ಜೈಲರ್ 2’ ಸಿನಿಮಾ ಸೆಟ್ಟೇರಲಿದೆ. ಈ ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ರಜನಿಕಾಂತ್ ಅವರು ಈ ಚಿತ್ರಕ್ಕಾಗಿ 250 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಿದ್ದಾರೆ ಎಂದು ವರದಿ ಆಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ರಜನಿಕಾಂತ್​ಗೆ ಈಗ 73 ವರ್ಷ ವಯಸ್ಸು. ಈಗಲೂ ಅವರು ಆ್ಯಕ್ಷನ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಹೀಗಾಗಿ ಅವರು ಹೆಚ್ಚಿನ ಮೊತ್ತ ಚಾರ್ಜ್ ಮಾಡುತ್ತಿದ್ದಾರೆ. ಒಂದೊಮ್ಮೆ ಈ ವಿಚಾರ ನಿಜವಾಗಿದ್ದೇ ಹೌದಾದಲ್ಲಿ ಏಷ್ಯಾದಲ್ಲೇ ಅತಿ ದೊಡ್ಡ ಸಂಭಾವನೆ ಪಡೆದ ಹೀರೋ ಎನ್ನುವ ಖ್ಯಾತಿಗೆ ಅವರು ಭಾಜನರಾಗಲಿದ್ದಾರೆ.

ಇದನ್ನೂ ಓದಿ: ಮತ್ತೆ ಬರ್ತಿದೆ ‘ಜೈಲರ್’, ಎಂಟ್ರಿ ಕೊಡಲಿದ್ದಾರಾ ಶಿವಣ್ಣ?

‘ಥಲೈವರ್ 171’ ಬಗ್ಗೆ ಹೇಳಬೇಕು ಎಂದರೆ ಈ ಚಿತ್ರದಲ್ಲಿ ರಜನಿಕಾಂತ್ ಜೊತೆ ಪೃಥ್ವಿರಾಜ್ ಸುಕುಮಾರನ್, ರಣವೀರ್ ಸಿಂಗ್, ಪಾರ್ವತಿ ನಟಿಸುತ್ತಿದ್ದಾರೆ. ಈ ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us