‘ಜನ ನಾಯಗನ್’ ಈ ಸ್ಥಿತಿಗೆ ಕಾರಣ ಯಾರು? ಸಿಕ್ಕಿತು ಉತ್ತರ

‘ಜನ ನಾಯಗನ್’ ಸಿನಿಮಾದ ದೃಶ್ಯಗಳು ಬಿಡುಗಡೆಗೂ ಮುನ್ನವೇ ಲೀಕ್ ಆಗಿದ್ದು, ಇದಕ್ಕೆ ಸೆನ್ಸಾರ್ ಮಂಡಳಿಯ ವಿಳಂಬವೇ ಕಾರಣ ಎಂದು ಕಮಲ್ ಹಾಸನ್ ಗಂಭೀರ ಆರೋಪ ಮಾಡಿದ್ದಾರೆ. ಸೆನ್ಸಾರ್ ಪ್ರಕ್ರಿಯೆಯಲ್ಲಿನ ಅತಿ ವಿಳಂಬವು ಕಾನೂನುಬಾಹಿರ ಚಟುವಟಿಕೆಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಅವರು ವ್ಯವಸ್ಥೆಯ ವೈಫಲ್ಯವನ್ನು ಖಂಡಿಸಿದ್ದಾರೆ.

‘ಜನ ನಾಯಗನ್’ ಈ ಸ್ಥಿತಿಗೆ ಕಾರಣ ಯಾರು? ಸಿಕ್ಕಿತು ಉತ್ತರ
ವಿಜಯ್-ಕಮಲ್

Updated on: Apr 11, 2026 | 12:10 PM

ಇಷ್ಟು ದಿನ ರಿಲೀಸ್ ಆದ ಸಿನಿಮಾಗಳಿಗೆ ಪೈರಸಿ ಆಗುತ್ತಿದೆ ಎಂದು ನಿರ್ಮಾಪಕರು ಒದ್ದಾಡುತ್ತಿದ್ದರು. ಆದರೆ, ಕೆವಿಎನ್ ಸಂಸ್ಥೆ ನಿರ್ಮಾಣದ ‘ಜನ ನಾಯಗನ್’ ಚಿತ್ರಕ್ಕೆ ರಿಲೀಸ್​​ಗೂ ಮೊದಲೇ ಪೈರಸಿ ಕಾಟ ತಟ್ಟಿದೆ. ಈ ಸಿನಿಮಾದ ಥಿಯೇಟರ್​ ರಿಲೀಸ್ ನಾನಾ ಕಾರಣಗಳಿಂದ ವಿಳಂಬ ಆಗುತ್ತಿದೆ. ಈ ಮಧ್ಯೆ ‘ಜನ ನಾಯಗನ್’ ಸಿನಿಮಾದ ದೃಶ್ಯಗಳು ಲೀಕ್ ಆಗಿರುವುದು ಕೇವಲ ತಂಡ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗದ ಕೋಪಕ್ಕೆ ಕಾರಣ ಆಗಿದೆ. ಎಲ್ಲರೂ ವಿಜಯ್ ಬೆಂಬಲಕ್ಕೆ ನಿಂತಿದ್ದಾರೆ. ಈ ಎಲ್ಲಾ ಬೆಳವಣಿಗೆಗೆ ಸೆನ್ಸಾರ್ ಮಂಡಳಿ ಕಾರಣ ಎಂದು ಕಮಲ್ ಹಾಸನ್ ಅವರು ಆರೋಪಿಸಿದ್ದಾರೆ.

‘ಜನ ನಾಯಗನ್’ ಸಿನಿಮಾ ಜನವರಿಯಲ್ಲೇ ರಿಲೀಸ್ ಆಗಬೇಕಿತ್ತು. ಆದರೆ, ಸೆನ್ಸಾರ್ ಮಂಡಳಿ ಪ್ರಮಾಣ ಪತ್ರ ನೀಡಲು ನಿರಾಕರಿಸಿತು. ಸಿನಿಮಾದಲ್ಲಿನ ಕೆಲ ವಿಷಯಗಳಿಗೆ ಅಪಸ್ವರ ತೆಗೆಯಿತು. ಇದನ್ನು ಮುಂಬೈನ ಪುನರ್ ಪರಿಶೀಲನಾ ಸಮಿತಿಗೆ ಸಲ್ಲಿಕೆ ಮಾಡುವ ಸೂಚನೆ ನೀಡಿತು. ಈ ವೇಳೆ ತಂಡ ಕೋರ್ಟ್ ಮೆಟ್ಟಿಲೇರಿತು. ಒಂದು ತಿಂಗಳಾದರೂ ಕೋರ್ಟ್​​ನಲ್ಲಿ ಪ್ರಕರಣ ಇತ್ಯರ್ಥ ಆಗದ ಕಾರಣ ಸಿನಿಮಾ ತಂಡದವರು ಪ್ರಕರಣ ಹಿಂಪಡೆದು ಪುನರ್ ಪರಿಶೀಲನಾ ಸಮಿತಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇಲ್ಲಿ ಸಿನಿಮಾನ ಇನ್ನಷ್ಟೇ ವೀಕ್ಷಿಸಬೇಕಿದೆ.

ಹೀಗಿರುವಾಗಲೇ ‘ಜನ ನಾಯಗನ್’ ದೃಶ್ಯ ಲೀಕ್ ಆಗಿದೆ. ಇದನ್ನು ಕಮಲ್ ಹಾಸನ್ ಖಂಡಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗೆ ಸೆನ್ಸಾರ್ ಮಂಡಳಿ ಕಾರಣ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ‘ಜನ ನಾಯಗನ್’ ಲೀಕ್ ಬಗ್ಗೆ ಪ್ರಶ್ನೆ ಮಾಡಿದರೆ ಉತ್ತರಿಸದೆ ಹೋದ ದಳಪತಿ ವಿಜಯ್

‘ಜನ ನಾಯಗನ್ ಅಚಾನಕ್ಕಾಗಿ ಲೀಕ್ ಆಗಿದ್ದಲ್ಲ. ಇದು ನಮ್ಮ ವ್ಯವಸ್ಥೆಯ ವೈಫಲ್ಯದಿಂದ ಆಗಿದೆ. ಒಂದೊಮ್ಮೆ ಎಲ್ಲಾ ಪ್ರಕ್ರಿಯೆಗಳು (ಸೆನ್ಸಾರ್ ಪ್ರಕ್ರಿಯೆ) ನಡೆದರೆ ನಾವು ಇಂದು ಇಲ್ಲಿ ಇರುತ್ತಿರಲಿಲ್ಲ. ಸೆನ್ಸಾರ್ ಪ್ರಮಾಣಪತ್ರ ಪ್ರಕ್ರಿಯೆಗೆ ಅತಿಯಾದ ವಿಳಂಬ ಮಾಡಿದ್ದು ಇದಕ್ಕೆಲ್ಲ ಕಾರಣ. ಕಾನೂನು ತನ್ನ ಕೆಲಸ ನಿಲ್ಲಿಸಿದಾಗ ಕಾನೂನುಬಾಹಿರ ಚಟುವಟಿಕೆಗಳು ಮೇಲುಗೈ ಸಾಧಿಸುತ್ತವೆ’ ಎಂದಿದ್ದಾರೆ ಕಮಲ್ ಹಾಸನ್. ಈ ಮೂಲಕ ಸೆನ್ಸಾರ್ ಮಂಡಳಿ ವಿರುದ್ಧ ಗುಡುಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us