ಖಾಸಗಿ ಅಂಗ ಜೂಮ್ ಹಾಕೋದಕ್ಕೆ ಜಾನ್ವಿ ಖಂಡನೆ; ಕನ್ನಡದ ಬಳಿಕ ಬಾಲಿವುಡ್​​ನಲ್ಲೂ ಆಂದೋಲನ

ನಟಿ ಸಪ್ತಮಿ ಗೌಡ ಆರಂಭಿಸಿದ ಪಾಪರಾಜಿಗಳ ವಿರುದ್ಧದ ಆಂದೋಲನವನ್ನು ಜಾನ್ವಿ ಕಪೂರ್ ಸಹ ಬೆಂಬಲಿಸಿದ್ದಾರೆ. ಒಪ್ಪಿಗೆ ಇಲ್ಲದೆ ನಟಿಯರ ವಿಡಿಯೋ ಮಾಡಿ, ದೇಹದ ಭಾಗಗಳನ್ನು ಜೂಮ್ ಮಾಡಿ ವೈರಲ್ ಮಾಡುವುದನ್ನು ಇಬ್ಬರೂ ಖಂಡಿಸಿದ್ದಾರೆ. ನಟಿಯರ ಗೌರವ ಮತ್ತು ಖಾಸಗಿತನವನ್ನು ರಕ್ಷಿಸಲು ಮಾಧ್ಯಮ ನೀತಿ ಮತ್ತು ಸಮ್ಮತಿಯ ಮಹತ್ವವನ್ನು ಇದು ಎತ್ತಿ ತೋರಿಸುತ್ತದೆ.

ಖಾಸಗಿ ಅಂಗ ಜೂಮ್ ಹಾಕೋದಕ್ಕೆ ಜಾನ್ವಿ ಖಂಡನೆ; ಕನ್ನಡದ ಬಳಿಕ ಬಾಲಿವುಡ್​​ನಲ್ಲೂ ಆಂದೋಲನ
ಜಾನ್ವಿ

Updated on: Apr 06, 2026 | 8:18 AM

ನಟಿ ಸಪ್ತಮಿ ಗೌಡ ಅವರು ಇತ್ತೀಚೆಗೆ ಒಂದು ಆಂದೋಲನ ಆರಂಭಿಸಿದ್ದರು. ಪಾರಾಜಿಗಳು ಒಪ್ಪಿಗೆ ಇಲ್ಲದೆ ಬೇಕಾಬಿಟ್ಟಿ ವಿಡಿಯೋ ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ವೈರಲ್ ಮಾಡುತ್ತಿದ್ದರು. ಇದನ್ನು ಸಪ್ತಮಿ ಗೌಡ ಅವರು ಖಂಡಿಸಿದ್ದರು. ಇದಕ್ಕೆ ಅನೇಕ ನಟಿಯರು ಬೆಂಬಲ ಸೂಚಿಸಿದ್ದರು. ಈಗ ಬಾಲಿವುಡ್​​ ಅಲ್ಲೂ ಇದೇ ರೀತಿ ಆಂದೋಲನ ಶುರುವಾಗುವ ಸೂಚನೆ ಸಿಕ್ಕಿದೆ.

ಕನ್ನಡಕ್ಕಿಂತ ಹಿಂದಿಯಲ್ಲಿ ಪಾಪರಾಜಿ ಸಂಸ್ಕೃತಿ ಮೊದಲು ಬಂದಿದೆ. ಅಲ್ಲಿನ ನಟಿಯರು ಅನೇಕ ಬಾರಿ ಈ ಬಗ್ಗೆ ತಕರಾರರು ತೆಗೆದಿದ್ದಾರೆ. ಈಗ ಜಾನ್ವಿ ಕಪುರ್ ಅವರು ಈ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ. ದೇಹದ ಕೆಲವು ಭಾಗಗಳನ್ನು ಜೂಮ್ ಮಾಡೋದು ಸರಿ ಅಲ್ಲ ಎಂದು ಅವರು ನೇರವಾಗಿ ಹೇಳಿದ್ದಾರೆ.

‘ಪಾಪರಾಜಿ ಜೊತೆ ಇತ್ತೀಚೆಗೆ ನಾನು ಮಾತನಾಡಿದೆ. ನಾವು ಒಂದು ನಿರ್ದಿಷ್ಟ ರೀತಿಯಲ್ಲಿ ಉಡುಗೆ ತೊಟ್ಟಿರುತ್ತೇವೆ. ಹಾಗಂದ ಮಾತ್ರಕ್ಕೆ ಅವರು ನಿರ್ದಿಷ್ಟ ದೇಹದ ಭಾಗಗಳನ್ನು ಮಾತ್ರ ಜೂಮ್ ಮಾಡಬೇಕೆಂದು ನಾವು ನಿರೀಕ್ಷಿಸುವುದಿಲ್ಲ. ಅವರು ಹಣ ಮಾಡಿಕೊಳ್ಳಲು, ವೀವ್ಸ್ ಪಡೆದುಕೊಳ್ಳಲು ಮಹಿಳೆಯ ದೇಹವನ್ನು ಮಾರಾಟ ಮಾಡುತ್ತಿದ್ದಾರೆ’ ಎಂದು ಜಾನ್ವಿ ಆಕ್ರೋಶ ಹೊರಹಾಕಿದ್ದಾರೆ.

‘ಗ್ರಾಹಕರಂತೆ ಕಾಣುತ್ತಿತ್ತು, ಆದರೆ ವಿಷಯವು ದೊಡ್ಡದಾಗಿದೆ – ಇದು ಬಳಕೆಯ ಬಗ್ಗೆ. ಜಾಗತಿಕವಾಗಿ, ಮಹಿಳೆಯರನ್ನು ವಸ್ತುನಿಷ್ಠವಾಗಿ ಚಿತ್ರಿಸುವ ವಿಷಯವು ಹೆಚ್ಚು ಬಳಕೆಯಲ್ಲಿದೆ. ಅದಕ್ಕಾಗಿಯೇ ಅದು ನಿರಂತರವಾಗಿ ಪ್ರಸಾರವಾಗುತ್ತಿದೆ. ನೀವು ಗ್ಲಾಮರ್‌ನಲ್ಲಿ ಸಾರ್ವಜನಿಕ ವ್ಯಕ್ತಿಯಾಗಿರುವುದರಿಂದ, ಅದು ನಿಮಗೆ ಹೆಚ್ಚು ಸಂಭವಿಸುತ್ತದೆ’ ಎಂದಿದ್ದಾರೆ.

‘ಮಹಿಳೆಯರನ್ನು ಕೆಟ್ಟದಾಗಿ ತೋರಿಸೋದು ವಿಶ್ವ ಮಟ್ಟದಲ್ಲಿ ನಡೆಯುತ್ತಿದೆ. ಇದನ್ನು ನೋಡುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಅದು ಪ್ರಸಾರ ಆಗುತ್ತಲೇ ಇರುತ್ತದೆ. ಅದರಲ್ಲೂ ಸೆಲೆಬ್ರಿಟಿ ಆದರೆ, ಈ ರೀತಿಯ ತೊಂದರೆ ಹೆಚ್ಚು’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಟ್ರೈಲರ್ ಬಿಡುಗಡೆಗೆ ಆಹ್ವಾನಿಸಿದ ಸಪ್ತಮಿ ಗೌಡ, ನೀನಾಸಂ ಸತೀಶ್

‘ನಾನು ಯಾವುದಕ್ಕೆ ಒಪ್ಪಿಗೆ ನೀಡಿದ್ದೇನೆ ಎಂಬುದನ್ನು ಪ್ರತಿ ಹಂತದಲ್ಲೂ ನೀವು ಕೇಳಬೇಕು. ನಾನು ‘ಭೀಗಿ ಸಾದಿ’ ಎಂಬ ಹಾಡನ್ನು ಮಾಡಿದ್ದೇನೆ. ಅಲ್ಲಿ ನಾನು ಒದ್ದೆಯಾದ ಸೀರೆಯಲ್ಲಿ ಡ್ಯಾನ್ಸ್ ಮಾಡಿದ್ದೇನೆ. ಯಾರಾದರೂ ಅದನ್ನು ಆಕರ್ಷಕ ಎಂದುಕೊಂಡರೆ ನನಗೆ ತೊಂದರೆ ಇಲ್ಲ. ಆದರೆ ಸಮ್ಮತಿಯಿಲ್ಲದೆ ಯಾರನ್ನಾದರೂ ತಪ್ಪಾಗಿ ತೋರಿಸುವುದು ಸರಿ ಅಲ್ಲ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us