‘ದೇವರ’ ಸಿನಿಮಾ ರಿಲೀಸ್ಗೆ ಉಳಿದಿರೋದು ಇನ್ನು ಕೆಲವು ದಿನಗಳು ಮಾತ್ರ. ಸೆಪ್ಟೆಂಬರ್ 27ರಂದು ಈ ಚಿತ್ರ ರಿಲೀಸ್ ಆಗಲಿದೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿನಿಮಾ ರಿಲೀಸ್ಗೂ ಮೊದಲೇ ಚಿತ್ರ ದಾಖಲೆ ಬರೆಯಲು ರೆಡಿ ಆಗಿದೆ. ಬೆಂಗಳೂರಲ್ಲಿ ಮುಂಜಾನೆಯಿಂದಲೇ ಶೋಗಳು ಆರಂಭ ಆಗಲಿವೆ. ಈ ಪೈಕಿ ಬಹುತೇಕ ಹೌಸ್ಫುಲ್ ಆಗಿವೆ. ಆ ಬಗ್ಗೆ ಇಲ್ಲಿದೆ ವಿವರ.
‘ದೇವರ’ ಸಿನಿಮಾದಲ್ಲಿ ಜೂನಿಯರ್ ಎನ್ಟಿಆರ್ ಅವರು ಹೀರೋ ಆಗಿ ನಟಿಸಿದರೆ, ಜಾನ್ವಿ ಕಪೂರ್ ನಾಯಕಿ ಪಾತ್ರ ಮಾಡಿದ್ದಾರೆ. ಸೈಫ್ ಅಲಿ ಖಾನ್ ಅವರದ್ದು ವಿಲನ್ ಪಾತ್ರ. ಈ ಚಿತ್ರವನ್ನು ಕೊರಟಾಲ ಶಿವ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಭರ್ಜರಿ ಹೈಪ್ ಸೃಷ್ಟಿ ಆಗಿದೆ. ಈ ಹೈಪ್ಗೆ ತಕ್ಕಂತೆ ಶೋಗಳನ್ನು ಇಡಲಾಗುತ್ತಿದೆ.
ಬೆಂಗಳೂರಲ್ಲಿ ಮುಂಜಾನೆ 4 ಗಂಟೆಯಿಂದ ಶೋ ಆಯೋಜನೆ ಮಾಡಲಾಗಿದೆ. ವಿಶೇಷ ಎಂದರೆ ಬೆಂಗಳೂರಿನ ಹೊರ ವಲಯದಲ್ಲಿರುವ ವಿಜಯಪುರದಲ್ಲಿ ಮುಂಜಾನೆ 3:30ಕ್ಕೆ ಶೋ ಪ್ರಾರಂಭ ಆಗುತ್ತಿದೆ. ಮುಂಜಾನೆಯ ಬಹುತೇಕ ಶೋಗಳು ಹೌಸ್ಫುಲ್ ಆಗಿವೆ ಅನ್ನೋದು ವಿಶೇಷ. ಜೂನಿಯರ್ ಎನ್ಟಿಆರ್ ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಬುಕ್ ಮಾಡುತ್ತಿದ್ದಾರೆ.
ಸದ್ಯ ಬೆಂಗಳೂರಲ್ಲಿ 350ಕ್ಕೂ ಹೆಚ್ಚು ಶೋಗಳನ್ನು ನೀಡಲಾಗಿದೆ. ಇವೆಲ್ಲವೂ ಸಿಂಗಲ್ಸ್ಕ್ರೀನ್ನ ಲೆಕ್ಕ. ಇನ್ನೂ ಪಿವಿಆರ್-ಐನಾಕ್ಸ್, ಗೋಪಾಲನ್ ಸಿನಿಮಾಸ್ ಸೇರಿ ಇತರೆ ಮಲ್ಟಿಪ್ಲೆಕ್ಸ್ಗಳಲ್ಲಿ ಶೋ ಬಿಟ್ಟಿಲ್ಲ. ಅವುಗಳ ಲೆಕ್ಕವೂ ಸೇರಿದರೆ ಶೋಗಳ ಸಂಖ್ಯೆ ಸಾವಿರದ ಗಡಿ ತಲುಪಿದರೂ ಅಚ್ಚರಿ ಏನಿಲ್ಲ ಎಂದು ಹೇಳಲಾಗುತ್ತಿದೆ. ಈ ವಿಚಾರ ಕೇಳಿ ಜೂನಿಯರ್ ಎನ್ಟಿಆರ್ ಫ್ಯಾನ್ಸ್ ಖುಷಿ ಆಗಿದೆ.
ಇದನ್ನೂ ಓದಿ: ಜೂನಿಯರ್ ಎನ್ಟಿಆರ್-ಪುನೀತ್ ಗೆಳೆತನ ಎಂಥದ್ದು? ಇಲ್ಲಿದೆ ವಿವರ
2018ರಲ್ಲಿ ಜೂನಿಯರ್ ಎನ್ಟಿಆರ್ ನಟನೆಯ ‘ಅರವಿಂದ ಸಮೇದ’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರ ಭರ್ಜರಿ ಹೈಪ್ ಸೃಷ್ಟಿ ಮಾಡಿತ್ತು. ಇದಾದ ಬಳಿಕ ಅವರು ನಟಿಸಿದ ಸಿನಿಮಾ ‘ಆರ್ಆರ್ಆರ್’. ಇದು ಮಲ್ಟಿ ಸ್ಟಾರರ್ ಚಿತ್ರ ಆಗಿತ್ತು. ಈಗ ‘ದೇವರ’ ಸಿನಿಮಾ ಬಿಡುಗಡೆ ಕಾಣುತ್ತಿದ್ದು, ಅವರು ಸೋಲೋ ಹೀರೋ ಆಗಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.